ಕೆಲವೊಮ್ಮೆ ನಮ್ಮ ತಪ್ಪಿಲ್ಲದೆ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತುಶಾಸ್ತ್ರದ ದೋಷವನ್ನು ಹೊಂದಿದವರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ವಾಸ್ತುಶಾಸ್ತ್ರದ ದೋಷಗಳಿಗೆ ಪರಿಹಾರವಿದೆ. ಈ ಲೇಖನದ ಮೂಲಕ ವಾಸ್ತುಶಾಸ್ತ್ರದ ದೋಷಗಳಿಗೆ ಪರಿಹಾರವನ್ನು ತಿಳಿದುಕೊಳ್ಳೋಣ.
ಪೂಜೆಯಲ್ಲಿ ಬಳಸಲಾಗುವ ಕರ್ಪೂರದಿಂದ ಹಲವು ಉಪಯೋಗಗಳಿವೆ. ಈ ಕರ್ಪೂರದ ಸಣ್ಣ ತುಂಡು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಪ್ರಯೋಜನಕಾರಿಯಾಗಿದೆ ಎಂದು ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಕರ್ಪೂರವು ಅನೇಕ ವಾಸ್ತು ದೋಷಗಳನ್ನು ನಿವಾರಿಸಿ ಮನೆಯಲ್ಲಿ ಸಂತೋಷವನ್ನು ತರಬಲ್ಲದು ಅಲ್ಲದೆ ಕರ್ಪೂರವು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಹಾಗಾದರೆ ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ಹೇಗೆ ಹೋಗಲಾಡಿಸುವುದು ಎನ್ನುವುದನ್ನು ತಿಳಿಯಬೇಕು.
ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಲು ಬಯಸಿದರೆ ಅಡುಗೆ ಕೆಲಸಗಳನ್ನು ಮುಗಿಸಿದ ನಂತರ ಒಂದು ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಡಬೇಕು ಹೀಗೆ ಮಾಡುವುದರಿಂದ ಕುಟುಂಬದ ಸದಸ್ಯರು ಪ್ರಗತಿ ಹೊಂದಲು ಪ್ರಾರಂಭಿಸುತ್ತಾರೆ ಮತ್ತು ಹೊಸ ಕೆಲಸದ ಅವಕಾಶಗಳನ್ನು ಪಡೆಯುತ್ತಾರೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಮತ್ತು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ ಅಥವಾ ಹೆಚ್ಚು ಸಾಲವನ್ನು ಹೊಂದಿದ್ದರೆ ಮನೆಯ ಅಡುಗೆಮನೆಯಲ್ಲಿ ವಾಸ್ತು ದೋಷವಿರಬಹುದು
ಇದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ಅಡುಗೆಮನೆಯಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ಸ್ವಲ್ಪ ಕರ್ಪೂರ ಮತ್ತು ಲವಂಗವನ್ನು ಸುಟ್ಟು ಹಾಕಬೇಕು. ಪ್ರತಿನಿತ್ಯ ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದವು ಕುಟುಂಬದ ಮೇಲಿರುತ್ತದೆ ಮತ್ತು ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ ಸ್ಥಗಿತಗೊಂಡ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ ಎನ್ನಲಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಕರ್ಪೂರವನ್ನು ಪ್ರತಿದಿನ ಉರಿಸುವುದರಿಂದ ಆರ್ಥಿಕ ಸಮೃದ್ಧಿಯಾಗುತ್ತದೆ. ಅನೇಕ ಬಾರಿ ಕುಟುಂಬದವರ ನಡುವೆ ಉತ್ತಮ ಹೊಂದಾಣಿಕೆ ಇದ್ದರೂ ಸದಸ್ಯರ ನಡುವೆ ವೈಮನಸ್ಸು ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕರ್ಪೂರವನ್ನು ದೇಸಿ ತುಪ್ಪದಲ್ಲಿ ನೆನೆಸಿ ಅದನ್ನು ಪ್ರತಿದಿನ ಉರಿಸಿ ಮನೆಯ ಒಂದು ಸ್ಥಳದಲ್ಲಿ ಇಟ್ಟು ಅದರ ಪರಿಮಳ ಮನೆಯತುಂಬ ಹರಡುವಂತಿರಬೇಕು.
ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಅಷ್ಟೆ ಅಲ್ಲದೆ ಕುಟುಂಬದ ಸದಸ್ಯರು ಭಿನ್ನಾಭಿಪ್ರಾಯಗಳಿಂದ ಮುಕ್ತರಾಗುತ್ತಾರೆ. ಪತಿ-ಪತ್ನಿಯರ ನಡುವೆ ವೈಮನಸ್ಸು ಹೆಚ್ಚಿದ್ದರೆ ರಾತ್ರಿ ವೇಳೆ ಕರ್ಪೂರವನ್ನು ಗಂಡನ ದಿಂಬಿನ ಕೆಳಗೆ ಇಡಬೇಕು ಹಾಗೂ ಮರುದಿನ ಬೆಳಗ್ಗೆ ಯಾರಿಗೂ ತಿಳಿಯದಂತೆ ಅದನ್ನು ಸುಡಬೇಕು. ಹೀಗೆ ಮಾಡುವುದರಿಂದ ಪರಸ್ಪರರ ನಡುವೆ ಶಾಂತಿ ನೆಲೆಸುತ್ತದೆ ಮತ್ತು ಇಬ್ಬರ ನಡುವೆ ಪ್ರೀತಿಯೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ರಾಹುವಿನ ದುಷ್ಪರಿಣಾಮವೂ ದೂರವಾಗುತ್ತದೆ.
ಮನೆಯಲ್ಲಿ ವಾಸ್ತು ದೋಷವಿದ್ದರೆ ಪ್ರತಿ ಕೋಣೆಯಲ್ಲಿಯೂ ಒಂದಿಷ್ಟು ಕರ್ಪೂರದ ತುಂಡುಗಳನ್ನು ಕರಗಿದ ನಂತರ ಅದರ ಜಾಗದಲ್ಲಿ ಇನ್ನೊಂದು ಕರ್ಪೂರ ಇಡಬೇಕು ಹೀಗೆ ಮಾಡುವುದರಿಂದ ಮನೆಯ ಸದಸ್ಯರ ಮೇಲೆ ವಾಸ್ತುದೋಷದ ಪರಿಣಾಮ ಕಡಿಮೆಯಾಗುತ್ತದೆ. ಇದರೊಂದಿಗೆ ಮನೆಯ ವಾಸ್ತು ದೋಷ ಕ್ರಮೇಣ ನಿವಾರಣೆಯಾಗತೊಡಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ವಾಸ್ತುಶಾಸ್ತ್ರದ ದೋಷದಿಂದ ಸಮಸ್ಯೆಗಳನ್ನು ಅನುಭವಿಸುವವರು ಈ ಲೇಖನವನ್ನು ತಪ್ಪದೆ ಓದಲೆಬೇಕು.