ಜೀವನದಲ್ಲಿ ಏರುಪೇರು ಸಾಮಾನ್ಯ, ಇದು ಮನುಷ್ಯನ ಕರ್ಮ ಹಾಗೂ ಅದೃಷ್ಟವನ್ನು ಅವಲಂಬಿಸಿದೆ, ಅದೃಷ್ಟ ಒಳಿದಾಗ ಸಂಪತ್ತು, ಪ್ರಗತಿ, ಸಂತೋಷ ಪ್ರಾಪ್ತಿಯಗುತ್ತದೆ. ಅದೃಷ್ಟ ಕೈ ಕೊಟ್ಟಾಗ ಸಮಸ್ಯೆ, ಅನಾರೋಗ್ಯ ಕಾಡಲು ಶುರುವಾಗುತ್ತದೆ. ಮನೆಗೆ ಲಕ್ಷ್ಮೀ ಪ್ರವೇಶ ಮಾಡುವ ಮೊದಲು ಕೆಲವು ಸಂಕೇತಗಳನ್ನು ನೀಡ್ತಾಳೆ.
ಗೂಬೆಯನ್ನು ಅಪಶಕುನ ಅನ್ನುತ್ತಾರೆ ಹಾಗೆ ಅದನ್ನ ನೋಡಿದರೆ ಕೂಡ ಅಪಶಕುನ ಅಂತೀವಿ, ಆದ್ರೆ ಮನೆಯೊಳಗೇ ಗೂಬೆಯನ್ನ ನೋಡಿದರೆ ಅದು ಅಪಶಕುನವೇ. ಆದರೆ ಮನೆ ಹೊರಗೆ ಗೂಬೆ ನೋಡಿದರೆ ಅದು ಶುಭ ಸಂಕೇತವಾಗಿದೆ.ಯಾಕೆಂದ್ರೆ ಗೂಬೆ ಲಕ್ಷ್ಮೀಯ ವಾಹನವೆಂದೆ ಹೇಳಬಹುದು ಹಾಗಾಗಿ ಗೂಬೆ ಏನಾದ್ರು ನಿಮಗೆ ಹೊರಗೆ ಕಾಣಿಸಿ ಕೊಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಸಿಗುವ ಸಾಧ್ಯತೆ ಇದೆ.
ನಿಮ್ಮ ಕನಸಿನಲ್ಲಿ ಅಕ್ಕ ಪಕ್ಕಾ ಹಸಿರು ಮರ ಗಿಡಗಳು ಇರುವಂತೆ ಕಾಣಿಸ್ತು ಅಂದ್ರೆ ಅದು ಕೂಡ ಮುಂದೆ ನಿಮಗೆ ಧನಲಾಭ ಆಗುವಂತಹ ಸೂಚನೆಯಾಗಿದೆ.ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ಅಥವಾ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗಬೇಕಾದ್ರೆ ಯಾರಾದ್ರೂ ಕಸ ಗುಡಿಸುತ್ತಿರುವದನ್ನ ನೋಡಿದರು ಕೂಡ ಇದು ಕೂಡ ನಿಮಗೆ ಶುಭ ಸೂಚನೆ.ಯಾಕಂದ್ರೆ ಹಿಡಿ ಮತ್ತು ಪೊರಕೆಯನ್ನು ಲಕ್ಷ್ಮೀಯ ಸ್ವರೂಪ ಅಂತ ಹೇಳುತ್ತಾರೆ, ಅದನ್ನು ಕಾಲಿನಿಂದ ಒದಿಯಬಾರದೆಂದು ಕೂಡ ಹೇಳುತ್ತಾರೆ. ಆದ್ದರಿಂದ ಇದು ಕೂಡ ಒಂದು ಧನಲಾಭದ ಸೂಚನೆ.
ನೀವು ಬೆಳಿಗ್ಗೆ ಏಳುವಂತಹ ಸಮಯದಲ್ಲಿ ಶಂಖನಾದ ಅಂದರೆ ಯಾರಾದರೂ ಶಂಖ ಉದುತ್ತಿರುವ ಸದ್ದು ನಿಮ್ಮ ಕಿವಿಗೆ ಬಿತ್ತು ಅಂದ್ರೆ ಇದು ಕೂಡ ಒಂದು ಶುಭ ಸೂಚನೆಯಾಗಿದೆ. ಮುಂದೆ ಆಗೋದರಂತಹ ಧನಲಾಭ ಅಥವಾ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗುವ ಮುನ್ಸೂಚನೆ ಆಗಿದೆ. ಕಬ್ಬು ನಿಮಗೆ ಬೆಳಿಗ್ಗೆ ಎದ್ದ ತಕ್ಷಣ ಕಣ್ಣಿಗೆ ಕಾಣಿಸಿದರೆ ಇದು ಕೂಡ ಸಾಕಷ್ಟು ಅದೃಷ್ಟದ ಸಂಕೇತವೇ ಆಗಿದೆ.