ಸಾಮಾನ್ಯವಾಗಿ ಮೇಷ ರಾಶಿಯ ಸಂಜಾತರು ತಮ್ಮ ಮೂಗಿನ ನೆರಕ್ಕೆ ಮಾತನಾಡುವವರಾಗಿದ್ದು ತಮ್ಮ ಸುತ್ತ ಮುತ್ತಲಿನವರೂ ಕೂಡಾ ಹಾಗೆಯೇ ಇರಬೇಕೆಂದು ಬಯಸುವವರಾಗಿದ್ದಾರೆ ಅಲ್ಲದೇ ಇವರು ಸದೃಡರು ಧೈರ್ಯವಂತರು ಮತ್ತು ತಮ್ಮದೇ ಆದಂತಹ ಹಾದಿಯನ್ನು ನಿರ್ಮಾಣ ಮಾಡಿಕೊಂಡು ಅದರೊಟ್ಟಿಗೆ ಸಾಗುವಂತಹ ಚಾಕಚಕ್ಯತೆ ಉಳ್ಳವಾರಾಗಿರುತ್ತಾರೆ, ಪಾದ ರಸದಂತಹ ವ್ಯಕ್ತಿತ್ವ ಮೇಷರಾಶಿಯವರದ್ದಾಗಿದ್ದು ಯಾವುದೇ ಕೆಲಸವನ್ನಾಗಲಿ ಬಹಳಷ್ಟು ವೇಗವಾಗಿ ಮತ್ತು ಚುರುಕಾಗಿ ಮಾಡಿ ಮುಗಿಸುವಂತಹ ವ್ಯಕ್ತಿಗಳಾಗಿರುತ್ತಾರೆ.
ಅಷ್ಟೇ ಅಲ್ಲದೇ ಮೇಷ ರಾಶಿಯವರು ಯಾರೋ ಇನ್ನೊಬ್ಬರ ಹಂಗಿನಲ್ಲಿ ಜೀವನ ನಡೆಸುವುದನ್ನು ಎಂದಿಗೂ ಕೂಡಾ ಒಪ್ಪಲಾರರು ಅಲ್ಲದೇ ಯಾರ ಮುಲಾಜಿಗೂ ಒಳಪಡದೇ ಬದುಕುವ ಇಚ್ಛೆಯನ್ನು ಹೊಂದಿದವರಾಗಿರುತ್ತಾರೆ, ಆದರೂ ಇವರ ಲಗ್ನಾದೀಪತಿಯು ಕುಜನಾದ್ದರಿಂದ ಕುಜನು ಸ್ವತಃ ಅಷ್ಟಮಾಧಿಪತಿಯಾಗಿರುವ ಕಾರಣ ಉಷ್ಣಕ್ಕೆ ಸಂಬಂಧಿಸಿದ ರೋಗಗಳು ಗುಪ್ತ ಸಮಸ್ಯೆಗಳು ಅಷ್ಟೇ ಅಲ್ಲದೇ ಜಲದೋಷಗಳು ಇವರ ಜೀವನದುದ್ದಕ್ಕೂ ಕಾಡುವವು ಇಷ್ಟು ಬಿಟ್ಟರೆ ಇನ್ಯಾವುದೇ ಸಮಸ್ಯೆಗಳು ಆರೋಗ್ಯದ ದೃಷ್ಟಿಯಿಂದ ನೀವು ಎದುರುನೋಡಬೇಕಾದದ್ದಿಲ್ಲ.
ಎಲ್ಲಕ್ಕೂ ಮಿಗಿಲಾಗಿ ಮೇಷ ರಾಶಿಯ ಸಂಜಾತರು ಅತೀ ಕೋಪಿಷ್ಠ ವ್ಯಕ್ತಿಗಳಾಗಿದ್ದು ಇವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡದ್ದೇ ಆದಲ್ಲಿ ಕಳೆದುಕೊಳ್ಳಬಹುದಾದ ಅದೆಷ್ಟೋ ಸಂಬಂಧಗಳನ್ನು ತಾವು ಉಳಿಸಿಕೊಳ್ಳಬಹುದಾಗಿದೆ, ಅಲ್ಲದೇ ನೀವು ವೃತ್ತಿಪರವಾಗಿ ಬಹಳಷ್ಟು ಅದೃಷ್ಟವಂತರಾಗಿದ್ದರೂ ಉನ್ನತ ಪದವಿಯನ್ನು ಪಡೆಯಲು ಬಹು ದೊಡ್ಡ ಹೋರಾಟವನ್ನೇ ಮಾಡಬೇಕಾದಂತಹ ಪರಿಸ್ಥಿತಿಯನ್ನು ನಿಮ್ಮ ಜೀವನದಲ್ಲೊಮ್ಮೆ ಎದುರು ನೋಡಬೇಕಾಗುತ್ತದೆ.
ಇನ್ನೂ ಇವರ ಜೀವನದಲ್ಲಿ ಇವರ ಸಂಗಾತಿಯು ಮತ್ತು ಇವರಿಗೆ ಬಹಳಷ್ಟು ಹತ್ತಿರವಾದಂತಹ ಪ್ರೀತಿ ಪಾತ್ರರು ಬಹು ಮುಖ್ಯ ಪಾತ್ರವಹಿಸುತ್ತಾರಲ್ಲದೇ ಮೇಷ ರಾಶಿಯವರ ಭಾಗ್ಯಾಧಿಪತಿ ಗುರುವಾದ್ದರಿಂದ ತಂದೆಯ ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಅಥವಾ ತಂದೆಯಿಂದ ದೂರ ಇರಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ
ನಿಮ್ಮ ಕೌಟುಂಬಿಕ ಜೀವನಕ್ಕಿಂತ ನಿಮಗೆ ನಿಮ್ಮ ವ್ಯಾವಹಾರಿಕ ಜೀವನವೇ ನಿಮಗೆ ಅತ್ಯಂತ ತೃಪ್ತಿಕರವಾದದ್ದು.
1 2 3 7 ಮತ್ತು 9 ಸಂಖ್ಯೆಗಳು ನಿಮ್ಮ ಅದೃಷ್ಟದ ಸಂಖ್ಯೆಗಳಾಗಿದ್ದು ನೀವು ಯಾವುದಾದರೂ ಹೊಸ ವ್ಯವಹಾರಗಳನ್ನು ಆರಂಭಿಸಬೇಕಾದಲ್ಲಿ ಅಥವಾ ಯಾವುದೇ ಮುಖ್ಯ ಕಾಗದ ಪತ್ರಗಳಿಗೆ ಸಹಿ ಹಾಕಬೇಕಾದಲ್ಲಿ ಇಂತಹ ಕಾರ್ಯಗಳನ್ನು ಭಾನುವಾರ ಸೋಮವಾರ ಮತ್ತು ಗುರುವಾರದ ದಿನಗಳಲ್ಲಿ ಮಾಡುವುದರಿಂದ ಆ ಕೆಲಸ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಕಾಣಬಹುದಾಗಿದೆ, ಅಲ್ಲದೇ ಮುತ್ತು ಹಾಗೂ ಹವಳದ ಉಂಗುರಗಳನ್ನು ನೀವು ನಿಮ್ಮ ಬಲಗೈ ನ ಬೆರಳುಗಳಿಗೆ ಧಾರಣೆ ಮಾಡುವುದರಿಂದ ಮತ್ತಷ್ಟು ಉತ್ತಮ ಫಲಗಳನ್ನು ನೀವು ನಿರೀಕ್ಷಿಸಬಹುದಾಗಿದೆ.
.