WhatsApp Group Join Now
Telegram Group Join Now

ನಮ್ಮಲ್ಲಿ ಅಪಸ್ಮಾರ ಅಥವಾ ಮೂರ್ಛೆರೋಗ ಎನ್ನುವುದನ್ನು ಬಹಳಷ್ಟು ಜನರಲ್ಲಿ ಕಾಣುತ್ತೇವೆ. ನಾವಿಂದು ನಿಮಗೆ ಮೂರ್ಛೆರೋಗ ಯಾವ ಕಾರಣದಿಂದ ಕಾಣಿಸಿಕೊಳ್ಳುತ್ತದೆ ಮತ್ತು ಅವುಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ವಾಸ್ತವದಲ್ಲಿ ಮೂರ್ಛೆರೋಗ ಒಂದು ಪ್ರತ್ಯೇಕ ಅದು ಮೆದುಳಿನ ರೋಗದ ಲಕ್ಷಣ. ಮೂರ್ಛೆರೋಗ ಎನ್ನುವುದು ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ನೋಡುವುದಾದರೆ ಕೆಲವೊಂದು ಸಮಯದಲ್ಲಿ ಇದು ವಂಶಪಾರಂಪರಿಕವಾಗಿ ಬರುವಂತದ್ದು ಇನ್ನು ಕೆಲವು ಸಮಯಗಳಲ್ಲಿ ತಲೆಗೆ ಪೆಟ್ಟು ಬಿದ್ದಾಗ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತದೆ.

ನರಗಳ ತೊಂದರೆಗೆ ಸಂಬಂಧಪಟ್ಟ ಹಾಗೆ ಮೂರ್ಛೆರೋಗ ಕಾಣಿಸುತ್ತದೆ ಅಥವಾ ರಕ್ತ ಚಲನೆಯಲ್ಲಿ ವ್ಯತ್ಯಯ ಉಂಟಾದಾಗ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಮಾನಸಿಕ ಖಿನ್ನತೆಯಿಂದ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತದೆ ಈ ರೋಗ ಇರುವಂತಹ ರೋಗಿಗಳಿಗೆ ಅದು ಯಾವುದೇ ಸಮಯದಲ್ಲಿ ಕೂಡ ಕಾಣಿಸಿಕೊಳ್ಳಬಹುದು ಆಗ ಅವರಿಗೆ ಬಿದ್ದು ಪೆಟ್ಟಾಗುವಂತಹ ಸಂಭವಗಳು ಇರುತ್ತವೆ ಕೆಲವೊಮ್ಮೆ ತುಂಬಾ ಎತ್ತರದ ಪ್ರದೇಶದಲ್ಲಿ ಇರುವಾಗ ಬೆಂಕಿಯ ಹತ್ತಿರ ಇರುವಾಗ ತಗ್ಗುಪ್ರದೇಶದಲ್ಲಿ ಹೋಗುತ್ತಿರುವಾಗ ಅಥವಾ ವಾಹನ ಚಾಲನೆ ಮಾಡುತ್ತಿರುವಾಗ ಈ ರೀತಿಯಾಗಿ ಮೂರ್ಛೆ ರೋಗ ಕಾಣಿಸಿಕೊಂಡರೆ ಆಗ ಜೀವಕ್ಕೆ ತೊಂದರೆಗಳಾಗುವಂತದ್ದು ಬೇರೆ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮೂರ್ಛೆ ರೋಗ ಇರುವವರು ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಮೂರ್ಛೆ ರೋಗ ಇರುವವರು ಅದನ್ನು ತಡೆಯುವುದಕ್ಕಾಗಿ ಕೆಲವು ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಮೂರ್ಛೆರೋಗ ಇರುವಂಥವರು ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಬೇಕು. ಆರೋಗ್ಯಕ್ಕೆ ಮಾರಕವಾದ ಅಂತಹ ಆಹಾರ ಪದಾರ್ಥಗಳ ಸೇವನೆಯನ್ನು ತ್ಯಜಿಸಬೇಕು ಕಫ ಹೆಚ್ಚಾಗುವಂತಹ ಅಥವಾ ಜಂಕ್ ಫುಡ್ ಗಳ ಸೇವನೆಯನ್ನು ಕಡಿಮೆ ಮಾಡಬೇಕು ಯೋಗ ಪ್ರಾಣಾಯಾಮ-ಧ್ಯಾನಗಳನ್ನು ಅಭ್ಯಾಸ ಮಾಡಿಕೊಂಡು ರಕ್ತಚಲನೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಕೆಲವು ಯೋಗಾಭ್ಯಾಸಗಳಿಂದ ಮಾಡುವುದರಿಂದ ಮೂರ್ಛೆ ರೋಗ ಪೂರ್ತಿಯಾಗಿ ಗುಣವಾಗುವ ಸಾಧ್ಯತೆಗಳು ಕೂಡ ಇರುತ್ತದೆ.

ಆಯುರ್ವೇದದಲ್ಲಿ ಕೆಲವೊಂದು ಪಂಚಕರ್ಮ ಚಿಕಿತ್ಸಾ ವಿಧಾನದಲ್ಲಿ ಮೂರ್ಛೆ ರೋಗವನ್ನು ಕಡಿಮೆ ಮಾಡುತ್ತಾರೆ ಅವುಗಳನ್ನು ಮಾಡಿಸಿಕೊಳ್ಳಬೇಕು. ಮೂರ್ಛೆ ರೋಗ ಇರುವವರು ಭಯಪಡುವ ಅವಶ್ಯಕತೆ ಇಲ್ಲ ಅವರು ನಾವು ಮೇಲೆ ತಿಳಿಸಿರುವ ಈ ಕ್ರಮಗಳನ್ನು ಅನುಸರಿಸುವ ಮೂಲಕ ಮೂರ್ಛೆ ರೋಗವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ. Dr.Laxmish Bhat B.A.M.S,F.A.G.E Near Janata Vidyalaya NH-66 Dhareshwar Kumata, Uttara Kannada Cell : 9632735261,9483941094

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: