WhatsApp Group Join Now
Telegram Group Join Now

ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿರುವಂತಹ ಜನರು ಅಥವಾ ಹಳ್ಳಿಯಲ್ಲಿ ವಾಸಿಸುತ್ತಿರುವ ಜನರು ಮತ್ತೆ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಗ್ರಾಮೀಣ ಭಾಗದ ಜನರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿವ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ಜನರಿಗೆ ಸರಿಯಾದ ರೀತಿಯಲ್ಲಿ ಎಲ್ಲರಿಗೂ ಮನೆ ಇರುವುದಿಲ್ಲ ಸೀಟಿನ ಮನೆಯನ್ನ ಹೊಂದಿರುವಂಥವರು ಅಥವಾ ಮಣ್ಣಿನಿಂದ ಕಟ್ಟಿದ ಮನೆಯನ್ನು ಹೊಂದಿರುವಂಥವರು ಅಥವಾ ಬರೀ ಜಾಗವನ್ನು ಮಾತ್ರ ಹೊಂದಿರುವಂಥವರು ಇವರುಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಒಂದು ಹೊಸ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಸಾಲ ಸೌಲಭ್ಯವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು.

ಅದರ ಜೊತೆಗೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿವರೆಗೆ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ. ಹಾಗಾದರೆ ಗ್ರಾಮೀಣ ಭಾಗದಲ್ಲಿ ಇರುವಂತಹ ಜನರು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಯಾವ ಅರ್ಹತೆಯನ್ನು ಹೊಂದಿರಬೇಕು ಯಾವೆಲ್ಲಾ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಜನರು ನಿವೇಶನವನ್ನು ಪಡೆದುಕೊಳ್ಳುವುದಕ್ಕೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವನ್ನ ಮಾಡಿಕೊಡಲಾಗಿದೆ ಗ್ರಾಮೀಣ ಭಾಗದಲ್ಲಿರುವ ಜನರು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಮತ್ತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಾರ್ಚ್ ಎರಡು ಸಾವಿರದ ಇಪ್ಪತ್ನಾಲ್ಕರವರೆಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ನಿಮಗೆ ಇನ್ನೂ ಮೂರು ವರ್ಷಗಳ ಕಾಲ ಸಮಯಾವಕಾಶವಿದೆ ಈ ಮೂರು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಇರುವಂತಹ ಜನರು ಯಾರು ನಿವೇಶನವನ್ನು ಪಡೆದಿರುವುದಿಲ್ಲ ಅವರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೂಲಕವಾಗಿ ಮನೆಯನ್ನು ಪಡೆದುಕೊಳ್ಳಬಹುದಾಗಿದೆ.

ಸರ್ಕಾರದಿಂದ ಈ ಮೂರು ವರ್ಷಗಳಲ್ಲಿ ನೂರಾ ಐವತ್ತೈದು.ಏಳು ಐದು ಲಕ್ಷ ಮನೆಗಳಿಗೆ ಒಪ್ಪಿಗೆಯನ್ನು ನೀಡಲಾಗುತ್ತದೆ. ಜೊತೆಗೆ ಈ ಒಂದು ಯೋಜನೆಗೆ ಸರ್ಕಾರ ಒಂದು ಲಕ್ಷದ ತೊಬ್ಬತ್ತೆಂಟು ಸಾವಿರದ ಐದು ನೂರಾ ಎಂಬತ್ತೊಂದು ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಿದೆ. ಹಾಗಾದರೆ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವುದಕ್ಕೆ ಯಾವೆಲ್ಲ ಅರ್ಹತೆಯನ್ನು ಹೊಂದಿರಬೇಕು ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲಾ ದಾಖಲಾತಿಗಳು ಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವ್ಯಕ್ತಿಯ ಬಳಿ ಖಾಲಿಜಾಗ ಇರಬೇಕು. ಇದರ ಜೊತೆಗೆ ಕೇಂದ್ರ ಸರ್ಕಾರ ಶೇಕಡ ಅರವತ್ತರಷ್ಟು ಸಾಲ ಸೌಲಭ್ಯವನ್ನು ನೀಡಿದರೆ ರಾಜ್ಯ ಸರ್ಕಾರ ಶೇಕಡ ನಲವತ್ತರಷ್ಟು ಹಣವನ್ನು ಸಾಲರೂಪದಲ್ಲಿ ನಿಮಗೆ ನೀಡುತ್ತದೆ.

ಜಮ್ಮು ಕಾಶ್ಮೀರ ಹಿಮಾಚಲ ಉತ್ತರಪ್ರದೇಶಗಳಲ್ಲಿ ಕೇಂದ್ರ ಸರ್ಕಾರ 90 ರಷ್ಟು ಹಣವನ್ನು ನೀಡಿದರೆ ಹತ್ತು ಶೇಕಡಾದಷ್ಟು ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ. ಇನ್ನು ಯಾರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಾರೆ ಅವರಿಗೆ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ಹದಿನಾರು ವರ್ಷ ತುಂಬಿರಬೇಕು ಮತ್ತು ಐವತ್ತೊಂಬತ್ತು ವರ್ಷದ ಒಳಗಿನವರಾಗಿರಬೇಕು. ಯಾವುದೇ ರೀತಿಯ ಜಮೀನು ಮನೆಯನ್ನು ಹೊಂದಿರದೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು. ಕುಟುಂಬದಲ್ಲಿ ಅಂಗವಿಕಲರು ಇರುವಂಥವರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದರ ಜೊತೆಗೆ ಎಸ್ಸಿ-ಎಸ್ಟಿ ಮತ್ತು ಎಲ್ಲಾ ವರ್ಗದ ಜನರು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಸಲ್ಲಿಸಲು ಅರ್ಜಿಯನ್ನು ಕೇಳಿ ತೆಗೆದುಕೊಳ್ಳಬೇಕು. ನಂತರ ಅರ್ಜಿಯಲ್ಲಿ ಕೇಳಿರುವಂತಹ ಮಾಹಿತಿಗಳನ್ನು ತುಂಬಿ ಅದರ ಜೊತೆಗೆ ನಿಮ್ಮ ಜಾಗಕ್ಕೆ ಸಂಬಂಧಿಸಿದ ದಾಖಲಾತಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಫೋಟೋ ಇವುಗಳನ್ನು ಲಗತ್ತಿಸಿ ಗ್ರಾಮ ಪಂಚಾಯಿತಿಯಲ್ಲಿ ಸಲ್ಲಿಸಬೇಕು. ಈ ರೀತಿಯಾಗಿ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: