WhatsApp Group Join Now
Telegram Group Join Now

ಗ್ರಹಗಳು ಸದಾ ಚಲನೆಯಲ್ಲಿ ಇರುವಂತವು. ಸೂರ್ಯ ಚಂದ್ರರು ಸಹ ತಮ್ಮ ಪಥವನ್ನು ಬದಲಿಸುತ್ತಲೇ ಇರುತ್ತಾರೆ. ಈ ರೀತಿ ಪಥ ಬದಲಾವಣೆಯಿಂದ ಮಕರ ರಾಶಿಯವರ ಮೇಲದ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡೊಣ. ಇದೇ ಮಾರ್ಚ್ 15 2023ರಂದು ಸೂರ್ಯದೇವನು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಈ ದಿನ ಬೆಳಗ್ಗೆ 6 ಗಂಟೆ 13 ನಿಮಿಷಕ್ಕೆ ಸೂರ್ಯನು ಮೀನ ರಾಶಿಗೆ ಸಾಗುತ್ತಾನೆ. ಏಪ್ರಿಲ್ 13ರ ತನಕವು ಸೂರ್ಯನು ಮೀನ ರಾಶಿಯಲ್ಲಿ ಇರುತ್ತಾನೆ. ಮೀನ ರಾಶಿಯು ನೈಸರ್ಗಿಕವಾಗಿ ಹನ್ನೆರಡನೆಯ ಮನೆಯಾಗಿದೆ. ಇದರ ಅಧಿಪತಿಯು ಗುರುವಾಗಿದ್ದಾನೆ.

ಅದರಿಂದಾಗಿ ಮೀನ ರಾಶಿಯಲ್ಲಿರುವ ಸೂರ್ಯನು ಗುರುವಿನ ಮಿಶ್ರ ಭಾವವನ್ನು ಹೊಂದಿರುತ್ತಾನೆ. ಮೀನರಾಶಿಯು ನೀರಿನ ಸಂಕೇತವಾಗಿದೆ. ಇದು ಆಳವಾದ ಸಮುದ್ರವನ್ನು ಸೂಚಿಸುತ್ತದೆ. ಇದು ಶಾಂತಿ, ಸ್ವಚ್ಚತೆ ಹಾಗೂ ಸಾಮಾನ್ಯ ವ್ಯಕ್ತಿ ತಲುಪದ ಸ್ಥಳವನ್ನು ಸೂಚಿಸುತ್ತದೆ. ಮೀನ ರಾಶಿಯಲ್ಲಿ ಸೂರ್ಯನ ಸಂಕ್ರಮಣವಾದ ನಂತರ ಅನಗತ್ಯ ಕೋಪ ಹಾಗೂ ಎಲ್ಲ ರೀತಿಯ ನಕಾರಾತ್ಮಕ ಭಾವನೆಗಳನ್ನು ಕಳೆದುಕೊಂಡು ಪರಿಶುದ್ಧನಾಗುತ್ತಾನೆ. ಇದಾದ ನಂತರ ಸೂರ್ಯನು ಮತ್ತೆ ಉನ್ನತಿಯತ್ತ ಸಾಗಲು ತನ್ನ ಸಂಚಾರ ಚಕ್ರವನ್ನು ಪುನರುಜ್ಜೀವನಗೊಳಿಸುತ್ತಾನೆ.

ಮೀನ ರಾಶಿಯಲ್ಲಿ ಸೂರ್ಯನ ಸಂಚಾರ ಎಲ್ಲಾ ಹನ್ನೆರಡು ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಸೂರ್ಯನನ್ನು ಎಲ್ಲ ರಾಶಿಗಳ ತಂದೆಯೆಂದಹ ಕರೆಯುತ್ತಾರೆ. ಹಾಗಾಗಿ ಉಳಿದೆಲ್ಲ ಗ್ರಹಗಳು ಸೂರ್ಯನನ್ನು ಪರಿಭ್ರಮಿಸುತ್ತದೆ. ಇದರಿಂದಾಗಿ ಮನುಷ್ಯ ಹಾಗೂ ಇತರ ಜೀವಿಗಳಲ್ಲಿ ಕಾಂತಿಯುತ ಶಕ್ತಿಯು ಹೊಮ್ಮುತ್ತದೆ. ಸೂರ್ಯನು ಪ್ರಾಪಂಚಿಕ ಗ್ರಹವಾಗಿದ್ದು, ರಾಜಯೋಗವನ್ನು ತರುವಂತವನಾಗಿದ್ದಾನೆ‌. ಹಾಗಾಗಿ ಸೂರ್ಯನ ನಿರ್ಧಿಷ್ಟ ಚಲನೆಯಿಂದಾಗಿ ರಾಜಕೀಯ ವ್ಯಕ್ತಿಗಳ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ.

ಸೂರ್ಯಗ್ರಹವು ಒಂದು ಮಾಸದಲ್ಲಿ ಒಮ್ಮೆ ಮಾತ್ರ ತನ್ನ ರಾಶಿಯನ್ನು ಬದಲಿಸುತ್ತದೆ. ಸಿಂಹ ರಾಶಿಗೆ ಸೂರ್ಯನು ಬಂದಾಗ ಉತ್ತಮ ಫಲಗಳನ್ನು ಉಳಿದೆಲ್ಲ ರಾಶಿಯವರಿಗೆ ನೀಡುತ್ತಾನೆ. ತುಲಾ ರಾಶಿಗೆ ಬಂದಾಗ ಸೂರ್ಯನು ತನ್ನ ಕಾಂತಿಯನ್ನು ಕಳೆದುಕೊಂಡು ದುರ್ಬಲನಾಗುತ್ತಾನೆ‌. ಪ್ರತಿ ಸಂಕ್ರಾಂತಿಯ ನಂತರ ಸೂರ್ಯ ಹೊಸ ರಾಶಿಯನ್ನು ಪ್ರವೇಶಿಸುತ್ತಾನೆ. ಇಲ್ಲಿಂದ ಉಳಿದ ಗ್ರಹಗತಿಗಳು ಬದಲಾಗಿ ಕೆಲವೊಮ್ಮೆ ಕೆಟ್ಟ ಪರಿಣಾಮವನ್ನು, ಕೆಲವೊಮ್ಮೆ ಒಳ್ಳೆಯ ಪರಿಣಾಮವನ್ನು ನೀಡುತ್ತವೆ.

ಈ ಬಾರಿ ಅಂದರೆ ಮಾರ್ಚ್ ತಿಂಗಳಿನ ಸಂಕ್ರಾಂತಿಯು ಸಹ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಇಲ್ಲಿಯವರೆಗೂ ಕುಂಭರಾಶಿಯಲ್ಲಿ ಸ್ಥಿರನಾಗಿದ್ದ ಸೂರ್ಯನು, ಇನ್ನು ಒಂದು ತಿಂಗಳ ಕಾಲ ಮೀನ ರಾಶಿಯಲ್ಲಿ ಇರಲಿದ್ದು ಮಕರ ರಾಶಿಯವರ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. ಈ ರಾಶಿಯಲ್ಲಿ ಸೂರ್ಯನು ಸದೃಢವಾಗಿರಲಿದ್ದು, ರಾಜಕೀಯ ಲಾಭಗಳನ್ನು ಹೇರಳವಾಗಿ ನೀಡಲಿವೆ. ಈ ಸಂಚಾರವು ಜನ ಜೀವನದಲ್ಲಿ ವಿವಿಧ ರೀತಿಯ ಪರಿಣಾಮವನ್ನು ಬೀರುತ್ತದೆ.

ಮಕರ ರಾಶಿಯವರಿಗೆ ಈ ಸಮಯದಲ್ಲಿ ಆತ್ಮವಿಶ್ವಾಸವು ಹೆಚ್ಚಾಗಲಿದ್ದು, ಅಂದುಕೊಂಡ ಕೆಲಸಗಳು ಸುಲಭವಾಗಿ ನಡೆಯಲಿವೆ. ನಿಮ್ಮ ರಾಶಿಯಲ್ಲಿ ಸೂರ್ಯನು ಅಷ್ಟಮದಲ್ಲಿ ಇರಲಿದ್ದಾನೆ. ಅಷ್ಟಮ ಸೂರ್ಯನ ಶಕ್ತಿಯು ಹಠಾತ್ ಏರಿಳಿತ ಕಾಣುವುದರಿಂದ ಹೊರಗಿನ ಕೆಲಸಗಳನ್ನು ಆದಷ್ಟು ಸಂಯಮದಿಂದ ಮಾಡಬೇಕಾಗುತ್ತದೆ. ಸ್ವಲ್ಪ ತಾಳ್ಮೆ ಇಟ್ಟುಕೊಂಡಲ್ಲಿ ವಿಜಯವು ನಿಮ್ಮದಾಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿ ಇದ್ದವರಿಗೆ ಸಂಕ್ರಮಣದ ನಂತರ ಒಳ್ಳೆಯ ಕೆಲಸ ಸಿಗುವ ಸಾಧ್ಯತೆಗಳಿವೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: