ಕಾರಾಗೃಹವು ಅಪರಾಧಿಗಳನ್ನು ಅಥವಾ ಕಾನೂನುಬದ್ಧ ಪ್ರಾಧಿಕಾರ ಒಪ್ಪಿಸಿಕೊಟ್ಟವರನ್ನು ಭದ್ರಸುಪರ್ದಿನಲ್ಲಿ ಅಥವಾ ಬಂಧನದಲ್ಲಿ ಇಡಲು ಬಳಸಲಾಗುವ ಕಟ್ಟಡ ಅಥವಾ ಸ್ಥಳ. ಕಾರಾಗೃಹ, ಜೈಲು, ಬಂದೀಖಾನೆ ಮತ್ತು ಸೆರೆಮನೆ ಇವು ಸಮಾನ ಪದಗಳು. ಭಾರತದ ಕಾರಾಗೃಹಗಳಿಗೆ ಸಂಬಂಧಿಸಿದ ಕಾಯಿದೆಗಳಲ್ಲಿ ಕಾರಾಗೃಹ ಶಬ್ದದ ವ್ಯಾಖ್ಯೆಯನ್ನು ಹೇಳಲಾಗಿದೆ. ಈಗ ಶಾಸನ ವಿರೋಧವೆನಿಸುವ ಸಮಾಜ ಘಾತಕವೆನಿಸುವ ಕ್ರಿಯೆಗಳಿಗೆ ವಿಧಿಸಲಾಗುವ ಕಾರಾಗೃಹ ಶಿಕ್ಷೆ ಹಿಂದೆ ಶಿಕ್ಷೆಯೆನಿಸುತ್ತಿರಲಿಲ್ಲ. ಕಾರಾಗೃಹಗಳನ್ನು ಕೇವಲ ವಿಚಾರಣೆಯ ಮೊದಲು ಮತ್ತು ಶಿಕ್ಷೆಯನ್ನು ವಿಧಿಸುವವರೆಗೆ ಆಪಾದಿತನನ್ನು ಕಾವಲಿನಲ್ಲಿಡಲು ಉಪಯೋಗಿಸಲಾಗುತ್ತಿತ್ತು. ಜೈಲಿನ ಹಾಗೂ ಅಲ್ಲಿ ಕೈದಿಗಳಿಗೆ ನೀಡುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.
ಎಲ್ಲ ದೇಶಗಳಲ್ಲೂ ಪ್ರತಿವರ್ಷವೂ ಸಾವಿರಾರು ಜನ ಕಾರಾಗೃಹವಾಸಿಗಳಾಗಿರುತ್ತಾರೆ. ಅವರೆಲ್ಲ ಅಪರಾಧದ ವಿಚಾರಣೆಗೆ ಸ್ಥಳೀಯ ಅಥವಾ ದೇಶದ ಕಾಯಿದೆಗಳನ್ನು ಅತಿಕ್ರಮಿಸಿದ ನಿಮಿತ್ತ ಶಿಕ್ಷೆಗೆ ಗುರಿಯಾಗಿಯೋ ಕಾರಾಗೃಹವಾಸಿಗಳಾಗುತ್ತಾರೆ. ಕೆಲವೊಂದು ದೇಶದ ಜೈಲುಗಳಲ್ಲಿ ಕೈದಿಗಳನ್ನು ವಿಶೇಷ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ಇಂತಹ ಜೈಲುಗಳಿಗೆ ಕೈದಿಗಳು ಹೋದರೆ ಅಲ್ಲಿಂದ ಹೊರಬರಲು ಮನಸ್ಸಾಗುವುದಿಲ್ಲ. ಅಂತಹ ವಿಶೇಷತೆಯನ್ನು ನೀಡಲಾಗುತ್ತದೆ. ಬಲಿವಿಯಾ ದಲ್ಲಿರುವ ಸನ್ ಪೆಡ್ರೋ ಪ್ರೀಸನ್ ಎಂಬ ಜೈಲಿನಲ್ಲಿ ಕೈದಿಗಳನ್ನು ಮನೆಯಲ್ಲಿ ನೋಡಿಕೊಂಡ ಹಾಗೆ ನೋಡಿಕೊಳ್ಳಲಾಗುತ್ತದೆ.
ಹೆಂಡತಿ ಮತ್ತು ಮಕ್ಕಳ ಜೊತೆಗೂಡಿ ಅಲ್ಲಿಯೇ ಸಂಸಾರ ಮಾಡಲು ಕೂಡ ಅವಕಾಶವಿರುತ್ತದೆ. ಕಾರಣ ಈ ಜೈಲಿನ ರೂಲ್ಸ್ ನ ಪ್ರಕಾರ ಯಾವ ಕೈದಿಗಳು ಎಷ್ಟು ಹಣವನ್ನು ನೀಡುತ್ತಾರೆ ಅದರ ಮೇಲೆ ಅವರನ್ನು ಅಷ್ಟು ಐಷಾರಾಮಿ ಜೀವನವನ್ನು ಮಾಡುವುದಾಗಿದೆ. ಇಲ್ಲಿಯ ಇನ್ನೊಂದು ವಿಶೇಷತೆಯೆಂದರೆ ಜೈಲಿನಲ್ಲಿರುವ ಕೈದಿಗಳು ಹೊರಗಡೆ ಡ್ರೆಸ್ಸನ್ನು ಮಾರಾಟ ಮಾಡುತ್ತಾರೆ. ಹಾಗೆ ಫಿಲಿಪೈನ್ಸ್ ನಲ್ಲಿರುವ ಸೆಬು ಪ್ರಿಸನ್ ಎಂಬ ಜೈಲು ಕೂಡ ತುಂಬಾ ವಿಭಿನ್ನವಾಗಿದೆ. ಏಕೆಂದರೆ ಇಲ್ಲಿನ ಅಧಿಕಾರಿಗಳು ಕೈದಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಕೈದಿಗಳಿಗೆ ಪ್ರತಿದಿನ ಡ್ಯಾನ್ಸ್ ಅನ್ನು ಹೇಳಿಕೊಡುತ್ತಾರೆ.
ನಾರ್ವೆಯಲ್ಲಿರುವ ಹಾರ್ಡನ್ ಪ್ರಿಸನ್ ಎನ್ನುವ ಜೈಲಿನಲ್ಲಿ ಕೈದಿಗಳಿಗೆ ಸಮಯಕ್ಕೆ ಸರಿಯಾಗಿ ವಿವಿಧ ಬಗೆಯ ಊಟ ತಿಂಡಿ ತಿನಿಸುಗಳು, ಹಾಕಿಕೊಳ್ಳಲು ಉತ್ತಮ ರೀತಿಯ ಬಟ್ಟೆಗಳು, ಕಾಫಿ, ಟೀ, ಎಣ್ಣೆ, ಟಿವಿ, ಫ್ರಿಜ್, ವಾಷಿಂಗ್ ಮಷಿನ್ ನಂತಹ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಇಟಲಿಯಲ್ಲಿರುವ ಫೋರ್ಟೆಸಾ ಮೆಡಿಸಿಯಾ ಪ್ರೀಸನ್ ಎಂಬ ಜೈಲಿನಲ್ಲಿ ದೊಡ್ಡ ದೊಡ್ಡ ಮಾಫಿಯಾ ಡಾನ್ ಗಳು ಕುಖ್ಯಾತ ರೌಡಿಗಳು, ರಾಜಕಾರಣಿಗಳು ಇಂಥವರನ್ನು ಮಾತ್ರ ಈ ಜೈಲಿನಲ್ಲಿ ಹಾಕಲಾಗುತ್ತದೆ. ಈ ಜೈಲಿನಲ್ಲಿ 5ಸ್ಟಾರ್ ರೆಸ್ಟೋರೆಂಟ್ ಕೂಡ ಇದೆ. ಈ ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡುವುದು, ಅಡುಗೆ ನೀಡುವವರು ಎಲ್ಲರೂ ಕೈದಿಗಳೇ ಆಗಿರುತ್ತಾರೆ.
ರೆಸ್ಟೋರೆಂಟ್ ನಿಂದ ಬಂದ ದುಡ್ಡನ್ನು ಕೈದಿಗಳಿಗೆ ನೀಡಲಾಗುತ್ತದೆ. ಸ್ಪೇನ್ ದೇಶದಲ್ಲಿರುವ ಆರೆಂಜ್ ಜೋಸ್ ಪ್ರಿಸನ್ ಎನ್ನುವ ಜೈಲಿನಲ್ಲಿ ಎಲ್ಲ ಕೈದಿಗಳನ್ನು ಹಾಕಲಾಗುವುದಿಲ್ಲ. ಯಾವ ಕೈದಿಯ ಹೆಂಡತಿಯು ಮಗುವಿಗೆ ಜನ್ಮ ನೀಡಿದಾಗ ಸ್ವಲ್ಪ ದಿನಗಳ ಕಾಲ ಹೆಂಡತಿ ಮತ್ತು ಮಗುವಿನ ಜೊತೆ ಕಾಲ ಕಳೆಯುವ ಸಲುವಾಗಿ ಈ ಜೈಲಿಗೆ ಕಳಿಸಲಾಗುತ್ತದೆ. ಇಲ್ಲಿ ಬಂದ ಕೈದಿಗಳಿಗೆ ಒಂದು ಸಪರೇಟ್ ರೂಮನ್ನು ನೀಡಲಾಗುತ್ತದೆ. ಇಲ್ಲಿಯೂ ಕೂಡ ಒಬ್ಬ ಮನುಷ್ಯನಿಗೆ ಬೇಕಾದ ಎಲ್ಲಾ ಸೌಲಭ್ಯವನ್ನು ನೀಡಲಾಗುತ್ತದೆ. ಕೈದಿಗಳಿಗೆ ಇಂತಹ ಸವಲತ್ತನ್ನು ನೀಡುವ ಜೈಲುಗಳು ಕೂಡ ಪ್ರಪಂಚದಲ್ಲಿ ಇವೆ.