ಆತ್ಮೀಯ ಓದುಗರೆ ನಾವು ಜೀವಿಸುತ್ತಿರುವಂತ ಸಮಾಜದಲ್ಲಿ ಮನುಷ್ಯ ನಂಬಿಕೆ ಹಾಗೂ ಅಪ ನಂಬಿಕೆ ಮೂಢನಂಬಿಕೆ ಎಲ್ಲವನ್ನು ಕೂಡ ತನ್ನದೇ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದಾನೆ ಅಷ್ಟೇ ಅಲ್ಲ ಕೆಲವರು ದೇವರ ಮೇಲೆ ಅತಿಯಾದ ನಂಬಿಕೆ ಇಟ್ಟರೆ ಇನ್ನು ಕೆಲವರು ದೇವರಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಂಬಿಕೆ ಇಡುತ್ತಾರೆ, ಎಲ್ಲವು ಕೂಡ ಅವರವರ ಮನೋಭಾವ ಜೀವನ ಶೈಲಿ ನಂಬಿಕೆಗೆ ಬಿಟ್ಟಿದ್ದು.
ಹಿಂದೂ ಧರ್ಮದಲ್ಲಿ ಕಂಡುಬರುವಂತ ಈ ತುಳಸಿ ನಿಜಕ್ಕೂ ಯಾರು ತುಳಸಿ ಪೂಜೆಯ ಮಹತ್ವವೇನು ಮನೆ ಮುಂದೆ ತುಳಸಿ ಗಿಡ ಇದ್ರೆ ಏನೆಲ್ಲಾ ಒಳಿತಾಗುವುದು, ಇದನ್ನು ಹೇಗೆ ಬೆಳೆಸಬೇಕು ಅನ್ನೋದನ್ನ ಬಹುತೇಕ ಜನ ತಿಳಿದಿರುತ್ತಾರೆ. ಈ ಲೇಖನದ ಮೂಲಕ ತುಳಸಿ ಪೂಜೆಯನ್ನು ಯಾವ ಸಮಯದಲ್ಲಿ ಯಾವ ಮಹಿಳೆ ಮಾಡಬಾರದು ಅನ್ನೋದನ್ನ ತಿಳಿದುಕೊಳ್ಳೋಣ, ಒಂದುವೇಳೆ ತುಳಸಿ ಪೂಜೆ ಮಾಡುವುದರಿಂದ ಏನಾಗಬಹುದು ಅನ್ನೋದನ್ನ ಕೂಡ ಶಾಸ್ತ್ರಗಳಲ್ಲಿ ಹೇಳಾಗುತ್ತದೆ
ತುಳಸಿಗಿಡದಲ್ಲಿ ವಿವಿಧ ಬಗೆಯ ತುಳಸಿ ಗಿಡಗಳಿವೆ ಆದ್ರೆ ಯಾವ ತುಳಸಿ ಗಿಡವನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿದುಕೊಳ್ಳುವುದು ಉತ್ತಮ.ಏಕಾದಶಿ ದಿನದಂದು ತುಳಸಿ ಪೂಜೆ ಮಾಡುವುದರಿಂದ ಶುಭ ಫಲದ ಜೊತೆಗೆ ಕನ್ಯಾದಾನದ ಫಲ ಸಿಗುತ್ತದೆ. ಮಹಿಳೆಯರು ಋತುಮತಿಯಾದಾಗ ತುಳಸಿ ಪೂಜೆ ಮಾಡಬಾರದು.
ಇನ್ನು ಚರಿತ್ರೆ ಹೀನ ವ್ಯಕ್ತಿಗಳು, ಮನದಲ್ಲಿ ಕೆಟ್ಟ ವಿಚಾರ ಇರುವ ವ್ಯಕ್ತಿಗಳು ತುಳಸಿ ಪೂಜೆ ಮಾಡಬಾರದು ಇಂತವರು ಪೂಜೆ ಮಾಡಿದರೆ ತಾಯಿ ಸಿಟ್ಟಾಗುತ್ತಾಳೆ. ತುಳಸಿ ಪೂಜೆ ಮಾಡುವಾಗ ಮನಸ್ಸು ಶುದ್ಧವಾಗಿರಬೇಕು. ಮದುವೆಯಾದ ಹೆಣ್ಣುಮಕ್ಕಳು ತುಳಸಿ ಪೂಜೆ ಮಾಡುವುದು ಒಳ್ಳೆಯದು ಆದರೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿಯದಿದ್ದರೆ ತುಳಸಿ ಪೂಜೆ ಮಾಡಲು ಸಾಧ್ಯವಿಲ್ಲ. ಶಾಸ್ತ್ರದ ವಿರುದ್ಧ ತುಳಸಿ ಪೂಜೆ ಮಾಡಿದರೆ ಪಾಪಕ್ಕೆ ಗುರಿಯಾಗಬೇಕಾಗುತ್ತದೆ ಮತ್ತು ತಾಯಿ ಕೋಪಗೊಳ್ಳುತ್ತಾಳೆ. ಹಿಂದೂ ಸಂಪ್ರದಾಯದ ಪ್ರಕಾರ ಕನ್ಯೆಯರು ತುಳಸಿ ಪೂಜೆ ಮಾಡಬಹುದು.
ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.