ಹೌದು ಆತ್ಮೀಯ ಓದುಗರೇ ಬಹಳಷ್ಟು ಜನ ಭಕ್ತಾದಿಗಳು ತಿರುಪತಿಗೆ ಹೋಗುತ್ತಾರೆ ಆದ್ರೆ ಅಲ್ಲಿನ ಪ್ರಸಾದ ಕುರಿತು ತಿಳಿದಿರುವುದಿಲ್ಲ ಹಾಗಾಗಿ ಅದರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮಿಯಲ್ಲಿ ಹಂಚಿಕೊಳ್ಳಿಪ್ರಪಂಚದ ಶ್ರೀಮಂತ ಹಿಂದೂ ದೇವಾಲಯ ಎಂದಾಗ ನೆನಪಾಗುವುದು ತಿರುಪತಿ ತಿಮ್ಮಪ್ಪ. ಹೌದು ಈ ಏಳು ಬೆಟ್ಟದ ಒಡೆಯನನ್ನು ನೋಡಲು ಆತನ ಅನುಗ್ರಹ ಪಡೆಯಲು ಲಕ್ಷ ಲಕ್ಷ ಮಂದಿ ದಿನವೊಂದಕ್ಕೆ ದರ್ಶನ ಪಡೆಯುತ್ತಾರೆ. ಇನ್ನು ಆತನ ಭಕ್ತರು ಆ ಮಹಾಪ್ರಭುವಿಗೆ ನೀಡಿದ ದೇಣಿಗೆ ರೂಪದ ಹಣ ಒಡವೆ ವಜ್ರ ವೈಡೂರ್ಯಗಳ ಲೆಕ್ಕವೇ ಇಲ್ಲ. ಅಷ್ಟೊಂದು ಶ್ರೀಮಂತ ದೇಗುಲಗಳಲ್ಲಿ ಒಂದಾದ ಈ ತಿರುಪತಿ ತಿಮ್ಮಪ್ಪ ಜಗತ್ತಿನಲ್ಲೇ ಒಂದು ಶ್ರೀಮಂತ ಹಾಗು ಭಕ್ತರನ್ನು ಕಾಯುವ ದೇವನಾಗಿದ್ದಾನೆ ಎನ್ನಬಹದು.
ಸಂಕಟ ಬಂದಾಗ ವೆಂಕಟರಮಣ ಎಂಬುದು ಬಹು ಜನಪ್ರಿಯ ಮಾತು. ಯಾರಿಗೇ ಕಷ್ಟ ಎದುರಾದರೂ ಮೊದಲು ವೆಂಕಟರಮಣನ ಮೊರೆ ಹೋಗುತ್ತಾರೆ. ವೆಂಕಟರಮಣ ಎಂದೊಡನೆ ನೆನಪಿಗೆ ಬರುವುದು ಭೂವೈಕುಂಠ ತಿರುಪತಿ.ಭೂ ವೈಕುಂಠ ಎಂದೇ ಕರೆಯಲಾಗುವ ಲಕ್ಷ ಪದ್ಮಾವತಿ ಸಹಿತ ನೆಲೆಸಿರುವ ಶ್ರೀನಿವಾಸ ದರ್ಶನಕ್ಕೆ ಬರುವ ಸಕಲ ಕಷ್ಟಗಳನ್ನು ನಿವಾರಿಸಿ ಸುಖ ಸೌಭಾಗ್ಯ ಕರುಣಿಸುತ್ತಾನೆ. ಹೀಗಾಗಿಯೇ ಎಲ್ಲಾ ದೇವಾಲಯಗಳಲ್ಲಿ ವರ್ಷಕ್ಕೆ ಒಮ್ಮೆ ಜಾತ್ರೆ ನಡೆದರೆ ಇಲ್ಲಿ ನಿತ್ಯ ಜಾತ್ರೆ ಸೇರುತ್ತದೆ. ನಾನಾ ಭಾಗದಿಂದ ಭಕ್ತರು ಬರುತ್ತಾರೆ. ಸಾವಿರಾರು ಭಕ್ತರು ಬಗವಂತನ ದರ್ಶನ ಪಡೆಯುತ್ತಾರೆ. ಅದರಲ್ಲೂ ಶನಿವಾರ ವೈಕುಂಠ ಏಕಾದಶಿಯಂದು ಭಕ್ತರು ತುಂಬಿ ತುಳುಕುತ್ತಾರೆ.
ಇನ್ನು ಜಗತ್ಪ್ರಸಿದ್ಧ ಪ್ರಸಾದ ಎಂದರೆ ಲಾಡು ಬಹುಶಃ ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಲಾಡುವಿನ ಮೂಲಕವೇ ತಿಮ್ಮಪ್ಪನಿಗೆ ಕೋಟಿ ಕೋಟಿ ಲಾಭ ಆಗುತ್ತದೆ ಲಾಡು ಇಲ್ಲದೇ ತಿಮ್ಮಪ್ಪನ ದರ್ಶನ ಪೂರ್ತಿಗೊಳುವುದಿಲ್ಲ. ಇಲ್ಲಿ ಬರುವ ಭಕ್ತರಿಗೆ ಒಂದು ಲಾಡನ್ನು ಉಚಿತವಾಗಿ ನೀಡಲಾಗುವುದು ಹೆಚ್ಚಿನ ಲಾಡನ್ನು ಹಣ ಕೊಟ್ಟು ಕರುದಿ ಮಾಡಬೇಕು.ಇನ್ನು ಈ ಲಾಡು ಮಾಡಲು ವಿಶೇಷ ಗೋ ಮಾತೆಯ ಹಾಲನ್ನು ತಿಮ್ಮಪ್ಪ ದೇಗುಲದ ಟ್ರಸ್ಟ್ ಬಳಸಿಕೊಳ್ಳುತ್ತಿದೆ. ಇಷ್ಟಕ್ಕೂ ಈ ಗೋ ಮಾತೇ ಯಾವುದು ಅದರ ವಿಶೇಷತೆ ಏನು ಎನ್ನುವುದನ್ನು ತಿಳಿಯಲೇ ಬೇಕು. ಸುರಭಿ ಎಂದು ಕರೆಯುವ ಕಾಮಧೇನುವನ್ನು ವೇದ ಗ್ರಂಥದಲ್ಲಿ ಎಲ್ಲಾ ಹಸುಗಳ ತಾಯಿ ಎಂದು ಹೇಳಲಾಗುತ್ತದೆ. Ttd ಸುಮಾರು ಪುಂಗನೂರು ಹಸುವನ್ನು ಹೊಂದಿದೆ. ಈ ಹಸುವಿನಿಂದ ಮಾಡಿದ ತುಪ್ಪದಿಂದ ತಿಮ್ಮಪ್ಪನ ಲಾಡು ಮಾಡುವುದು.
ವಿಶ್ವದ ಅತಿ ಚಿಕ್ಕ ತಳಿಗಳು ಎಂದು ಪುಂಗನೂರು ತಳಿಯ ಹೆಚ್ಚಿನ ಕಬ್ಬಿನಾಂಶ ಮತ್ತು ಸಮೃದ್ಧ ಔಷಧೀಯ ಗುಣಗಳನ್ನು ಹೊಂದಿರುವ ಪುಂಗನೂರು ಹಸು. ಎಲ್ಲಾ ಹಸುವಿನ ಹಾಲಿನಲ್ಲಿ ಶೇಕಡಾ 3 ರಿಂದ 3.5 ರಷ್ಟು ಇದ್ದರೆ ಪುಂಗನೂರು ತಳಿಯ ಹಾಲಿನಲ್ಲಿ ಎಮ್ಮೆಯ ಹಾಲಿನಂತಯೇ ಶೇಕಡಾ ಎಂಟರಷ್ಟು ಇರುತ್ತದೆ. ಈ ಹಾಲುನ್ನು ತಿಮ್ಮಪ್ಪನಿಗೆ ಕ್ಷೀರ ಅಭಿಷೇಕ ಮಾಡುತ್ತಾರೆ ಆ ತುಪ್ಪವನ್ನು ಅತ್ಯಂತ ಪ್ರಸಿದ್ಧವಾದ ತಿಮ್ಮಪ್ಪ ನ ಪ್ರಸಾದಕ್ಕೆ ಬಳಸುತ್ತಾರೆ. ಈ ಹಸುವಿನ ದರ್ಶನ ಅತ್ಯಂತ ಪವಿತ್ರ ಎಂದೇ ಹೇಳಬಹುದು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು