ಮನೆಯಲ್ಲಿ ಪ್ರತಿಯೊಂದು ಮೂಲೆಯನ್ನೂ ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು ಕಿಟಕಿ ಬಾಗಿಲು ನೆಲ ಅಡುಗೆ ಕೋಣೆ ಇತ್ಯಾದಿಯಾಗಿ ಪ್ರತಿಯೊಂದು ಮೂಲೆ ಮೂಲೆಯನ್ನೂ ನಾವು ಶುಭ್ರವಾಗಿಟ್ಟುಕೊಂಡರೆ ನಮಗೂ ತೃಪ್ತಿ ಜೊತೆಗೆ ಮನೆಗೆ ಬರುವ ಅತಿಥಿಗಳೂ ಮೆಚ್ಚಿಕೊಳ್ಳುತ್ತಾರೆ. ಮನೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನ ಕೊಡಬೇಕಾದ ಸ್ಥಳ ಬಚ್ಚಲು ಮನೆ ಮತ್ತು ಟಾಯ್ಲೆಟ್‌ಗೆ ಈ ಭಾಗ ಸ್ವಚ್ಛವಾಗಿಲ್ಲ ಎಂದಾದಲ್ಲಿ ರೋಗಾಣುಗಳು ಮನೆಯನ್ನು ಬೇಗನೇ ಆವರಿಸಿಕೊಂಡುಬಿಡುತ್ತವೆ.
ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದು ಹೇಳುತ್ತಾರೆ ಆದ್ದರಿಂದ ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ಮನೆಯನ್ನುರಕ್ಷಿಸಿಕೊಳ್ಳಬಹುದಾಗಿದೆ. ನಾವು ಈ ಲೇಖನದ ಮೂಲಕ ಮನೆಯಲ್ಲಿ ಲಿಕ್ವಿಡ್ ಸಿದ್ದ ಮಾಡಿ ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ತಿಳಿದುಕೊಳ್ಳೋಣ.
ಟಾಯ್ಲೆಟ್ ಹಾಗೂ ಬಾತ್ರೂಂ ಹಾಗೂ ಕೈ ತೊಳೆಯುವ ಬೆಸಿನ ಕ್ಲೀನ್ ಮಾಡಲು ಮನೆಯಲ್ಲಿ ಲಿಕ್ವಿಡ್ ಅನ್ನು ತಯಾರಿ ಮಾಡಿಕೊಳ್ಳಬಹುದು ಅದರಲ್ಲಿ ಮೊದಲು ವಿಮ್ ಸೊಪ್ಪನ್ನು ಸಣ್ಣಗೆ ತುರಿದುಕೊಳ್ಳಬೇಕು ಅರ್ಧ ಸೋಪನ್ನು ಬಳಸಬೇಕು ಬಿಸಿ ನೀರಿಗೆ ತುರಿದ ಸೋಪನ್ನು ಹಾಕಬೇಕು ಹಾಗೆಯೇ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಸ್ವಲ್ಪ ತಣ್ಣಗೆ ಆಗುವ ವರೆಗೆ ಬಿಡಬೇಕು ಅದಕ್ಕೆ ಒಂದು ಚಮಚದಷ್ಟು ಅಡುಗೆ ಸೋಡಾವನ್ನು ಹಾಕಬೇಕು ಹಾಗೂ ಸರಿಯಾಗಿ ಮಿಕ್ಸ್ ಮಾಡಬೇಕು ಹಾಗೆಯೇ ಲಿಂಬೆ ಹಣ್ಣಿನ ರಸ ಅಥವಾ ವಿನಿಗರ್ ಹಾಕಬೇಕು
ಹೀಗೆ ಮನೆಯಲ್ಲಿ ಲಿಕ್ವಿಡ್ ಸಿದ್ದ ಮಾಡಿಕೊಳ್ಳಬಹುದು ನಂತರ ಟಾಯ್ಲೆಟ್ ಬಾತ ರೂಮ್ ಕೈ ತೊಳೆಯುವ ಬೇಸಿನ್ ಗಳಿಗೆ ಹಾಕಿ ಸ್ವಚ್ಚ ಮಾಡಿಕೊಳ್ಳಬಹುದು ಹತ್ತು ಹದಿನೈದು ನಿಮಿಷ ಹಾಗೆ ಬಿಟ್ಟು ನಂತರ ತೊಳೆಯ ಬೇಕು ಪಾತ್ರೆ ತೊಳೆಯುವ ಸೋಪ್ ಹಾಕಿದರೆ ಯಾವುದೇ ರೀತಿಯ ಇನ್ಸ್ಪೆಕಷನ್ ಇರುವುದಿಲ್ಲ .
ಬಾಗಿಲನ್ನು ಸಹ ಈ ರೀತಿ ಮನೆಯಲ್ಲಿ ಮಾಡಿದ ಲಿಕ್ವಿಡ್ ಬಳಸಿ ಸ್ವಚ್ಚವಾಗಿ ಇರಿಸಬಹುದು ಬ್ರೇಶ ಮೂಲಕ ಸರಿಯಾಗಿ ರಬ್ ಮಾಡುವ ಮೂಲಕ ಟೈಲ್ಸ್ ಅನ್ನು ಸಹ ಸರಿಯಾಗಿ ಲಿಕ್ವಿಡ್ ಹಾಕಿ ಉಜ್ಜುವ ಮೂಲಕ ಸ್ವಚ್ಛವಾಗಿ ಇಡಬೇಕ.
ಬಜೆಟ್ ಟಬ್ ಹಾಗೂ ಚೇರ್ ಗಳನ್ನು ಸಹ ಕ್ಲೀನ್ ಮಾಡಿಕೊಳ್ಳಬಹುದು ಶೌಚಾಲಯದಲ್ಲಿ ನೀವು ಬಳಸುವ ಬ್ರಶ್ ಆಗಿರಬಹುದು ಟಾಯ್ಲೆಟ್ ಸೀಟ್ ಆಗಿರಬಹುದು ಫ್ಲಶ್ ಬಟನ್ ಆಗಿರಬಹುದು ಹೀಗೆ ನಾವು ಯೋಚಿಸಲೂ ಸಾಧ್ಯವಾಗದೇ ಇರುವ ಕಡೆಗಳಲ್ಲಿ ಕೀಟಾಣುಗಳು ಮನೆ ಮಾಡಿಕೊಂಡುಬಿಡುತ್ತವೆ ಹಾಗಾಗಿವಾರಕ್ಕೊಮ್ಮೆ ಸ್ವಚ್ಛಮಾಡಿಕೊಳ್ಳುವುದು ಉತ್ತಮ.ಹೀಗೆ ಟಾಯ್ಲೆಟ್ ಹಾಗೂ ಬಾತ್ ರೂಮ್ ಹಾಗೂ ಕಿಟಕಿ ಬಾಗಿಲು ಎಲ್ಲವನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮೂಲಕ ರೋಗಾಣು ಗಳಿಂದ ರಕ್ಷಿಸಿಕೊಳ್ಳಬಹುದು.