ಕಲರ್ಸ್ ಕನ್ನಡ ಹೊಸ ಹೊಸ ಧಾರಾವಾಹಿಗಳನ್ನು ರೀಯಾಲಿಟಿ ಶೋಗಳನ್ನು ಟಿವಿ ಪರದೆ ಮೇಲೆ ನೋಡುವ ಮನಸುಗಳಿಗೆ ಅದರ ಹಿಂದೆ ನಡೆಯುತ್ತಿರುವ ವಾಹಿನಿಗಳ ಲೆಕ್ಕಾಚಾರಗಳ ಬಗ್ಗೆ ತಿಳಿದಿರುವುದಿಲ್ಲ. ಕಥೆ ನಟ ನಟಿಯರು ಚೆನ್ನಾಗಿ ಅಭಿನಯಿಸಿದರೆ ಸಾಕು ಅದು ಸಾಕಷ್ಟು ಜನರ ನೆಚ್ಚಿನ ಧಾರಾವಾಹಿ ಆಗುತ್ತದೆ. ಹೀಗೆ ಬಹಳ ಜನ ಮೆಚ್ಚಿ ನೋಡುವ ಧಾರಾವಾಹಿ ಹೆಚ್ಚಿನ ಟಿ ಆರ್ ಪಿ ಪಡೆಯುತ್ತದೆ. ಜನರ ಮನಸ್ಸನ್ನು ಗೆಲ್ಲಲು ಟಿ ಆರ್ ಪಿ ಯನ್ನು ಹೆಚ್ಚಿಸಿ ಕೊಳ್ಳಲು ವಾಹಿನಿಗಳು ಇನ್ನಿಲ್ಲದ ಸಾಹಸ ಮಾಡುತ್ತಿರುತ್ತವೆ. ಈ ನಿಟ್ಟಿನಲ್ಲಿ ಕಲರ್ಸ್ ಕನ್ನಡ ಸಹ ಸಾಲು ಸಾಲು ಹೊಸ ಕಾರ್ಯಕ್ರಮಗಳನ್ನು ತನ್ನ ಬತ್ತಳಿಕೆಯಿಂದ ಹೊರಬಿಡುತ್ತಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಆಗಿ ಪರಮೇಶ್ವರ್ ಗುಂಡ್ಕಲ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಮಾಚಾರಿ ಸದ್ಯ ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಹೊಸ ಧಾರಾವಾಹಿ. ಹೌದು ರಾಮಾಚಾರಿ ಧಾರಾವಾಹಿ ಕಳೆದ ಒಂದು ತಿಂಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರ ಆರಂಭಿಸಿದೆ. ಧಾರಾವಾಹಿಗೆ ಕಳೆದ ಎಂಟು ತಿಂಗಳ ಹಿಂದೆ ಇಂದ ತಯಾರಿ ನಡೆದಿತ್ತು. ಮೈಸೂರಿನ ಮಂಡ್ಯ ರಮೇಶ್ ಅವರ ನಟನಾರಂಗ ತರಬೇತಿ ಶಾಲೆಯಲ್ಲಿ ಕಲಿತ ರಿತ್ವಿಕ್ ಕೃಪಾಕರ ಅನ್ನು ಈ ಧಾರಾವಾಹಿ ನಾಯಕ ನಟನಾಗಿ ಆಯ್ಕೆ ಮಾಡಲಾಗಿದೆ. ಇತ್ತ ನೂರ ಇಪ್ಪತ್ತೈದು ಕೆಜಿ ತೂಕವಿದ್ದ ರಿತ್ವಿಕ್ ರಾಮಾಚಾರಿ ಧಾರಾವಾಹಿಗಾಗಿ ಸತತ ಆರು ತಿಂಗಳ ಕಾಲ ಪರಿಶ್ರಮ ಪಟ್ಟು ಎಂಭತ್ತೈದು ಕೆಜಿ ತೂಕಕ್ಕೆ ಬಂದು ನಿಂತರು .. ಇನ್ನು ಕಳೆದ ಎರಡು ತಿಂಗಳುಗಳಿಂದ ಭರ್ಜರಿ ಪ್ರಚಾರ ಕೊಟ್ಟು ಧಾರಾವಾಹಿ ಅಂದುಕೊಂಡಂತೆ ಕಳೆದ ತಿಂಗಳು ಪ್ರಸಾರ ಶುರು ಮಾಡಿತು.
ಅತ್ತ ಅದಾಗಲೇ ಕಳೆದ ಆರು ವರ್ಷಗಳಿಂದ ಜೀ ಕನ್ನಡ ವಾಹಿನಿ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿ ಆಗಿದ್ದು ಪುಟ್ಟಕ್ಕನ ಮಕ್ಕಳು, ಹಿಟ್ಲರ್ ಕಲ್ಯಾಣ, ಜೊತೆಜೊತೆಯಲಿ, ಪಾರು, ಗಟ್ಟಿಮೇಳ ಹೀಗೆ ಸಾಕಷ್ಟು ಧಾರಾವಾಹಿಗಳು ಟಾಪ್ ಧಾರಾವಾಹಿಗಳಾಗಿವೆ .. ಇತ್ತ ಆರು ವರ್ಷದ ಹಿಂದೆ ಮೊದಲ ಸ್ಥಾನದಲ್ಲಿದ್ದ ಕಲರ್ಸ್ ಕನ್ನಡ ವಾಹಿನಿ ಮತ್ತೆ ತನ್ನ ಟ್ರ್ಯಾಕ್ ಗೆ ಮರಳಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದು ಹೊಸ ಹೊಸ ವಿಭಿನ್ನ ಶೋಗಳನ್ನು ತೆರೆ ಮೇಲೆ ತರುತ್ತಿದೆ .. ಎದೆ ತುಂಬಿ ಹಾಡುವೆನು .. ರಾಜಾ ರಾಣಿ .. ನನ್ನಮ್ಮ ಸೂಪರ್ ಸ್ಟಾರ್ ಹೀಗೆ ಸಾಕಷ್ಟು ವಾರಾಂತ್ಯದ ವಿಭಿನ್ನ ಶೋಗಳನ್ನು ತೆರೆ ಮೇಲೆ ತಂದು ಯಶಸ್ವಿಯಾಯಿತು. ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಂಡಿತು. ಆದರೆ ಇತ್ತ ಧಾರಾವಾಹಿಗಳು ಮಾತ್ರ ಎಷ್ಟೇ ಪ್ರಯತ್ನ ಪಟ್ಟರೂ ಸಹ ಟಾಪ್ ಐದರ ಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅದೇ ಕಾರಣಕ್ಕೆ ಕಳೆದ ಆರೇಳು ತಿಂಗಳುಗಳಿಂದ ತಯಾರಿ ನಡೆಸಿ ರಾಮಾಚಾರಿ ಧಾರಾವಾಹಿಯನ್ನು ತೆರೆ ಮೇಲೆ ತರಲಾಯಿತು.
ಸ್ಯಾಂಡಲ್ ವುಡನಲ್ಲಿ ತನ್ನದೇ ಆದ ದೊಡ್ಡ ಮಟ್ಟದ ಯಶಸ್ಸು ಹಾಗೂ ಖ್ಯಾತಿ ಗಳಿಸಿರುವ ರಾಮಾಚಾರಿ ಎಂಬ ಹೆಸರಿನ ಮೂಲಕ ಧಾರಾವಾಹಿಯೊಂದು ಬರುತ್ತಿದೆ ಎಂದ ಕೂಡಲೇ ಸಾಕಷ್ಟು ನಿರೀಕ್ಷೆ ಮೂಡಿದ್ದವು .. ಒಂದು ಕಡೆ ಸರಿಯಾದದ್ದನ್ನೇ ಮಾಡೋ ರಾಮಾಚಾರಿ .. ಇನ್ನೊಂದು ಕಡೆ ತಾನು ಮಾಡೋದೆಲ್ಲಾ ಸರಿ ಎನ್ನುವ ಚಾರು. ಇಬ್ಬರ ನಡುವಿನ ಕಿತ್ತಾಟ ಪೈಪೋಟಿ ಜಗಳಗಳು ಮುಂದೆ ಇವರಿಬ್ಬರ ನಡುವೆ ಹೇಗೆ ಪ್ರೀತಿ ಮೂಡುವುದೋ ಹೀಗೆ ಸಾಕಷ್ಟು ವಿಚಾರಗಳಿಂದ ಧಾರಾವಾಹಿ ಗಮನ ಸೆಳೆದಿತ್ತು. ಅಂದುಕೊಂಡಂತೆ ಧಾರಾವಾಹಿ ಮೊದಲ ವಾರವೇ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಕಳೆದ ಎರಡು ವರ್ಷದಲ್ಲಿ ಇದೇ ಮೊದಲ ಬಾರಿಗೆ ಧಾರಾವಾಹಿ ಶುರುವಾದ ಮೊದಲ ವಾರದ ರೇಟಿಂಗ್ ನಲ್ಲಿ ಆರರ ಅಂಕಿಯನ್ನು ದಾಟಿತ್ತು.
ಸದ್ಯ ಕಲರ್ಸ್ ವಾಹಿನಿಯ ರಾಮಾಚಾರಿ ಸೀರಿಯಲ್ ಅತ್ಯಂತ ಜನಪ್ರಿಯ ಧಾರವಾಹಿಯಾಗಿ ಗುರುತಿಸಿಕೊಂಡಿದೆ. ಈ ಧಾರಾವಹಿಯಲ್ಲಿ ಅನೇಕ ಹಿರಿ ಮತ್ತು ಕಿರಿ ತೆರೆಯ ಪ್ರಸಿದ್ಧ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಪ್ರಮುಖ ಕಲಾವಿದರುಗಳ ನಿಜನಾಮ ಹಾಗೂ ಅವರ ಹುಟ್ಟೂರು ಇಂತಿದೆ.
ಚಾರು ತಂದೆ ಪಾತ್ರದಲ್ಲಿ ಸಿನಿಮಾ ನಟ ಗುರುದತ್ತ ಬೆಂಗಳೂರಿನವರು. ಚಾರು ತಾಯಿ ಪಾತ್ರಧಾರಿಯಾಗಿ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಖ್ಯಾತಿಯ ಭಾವನಾ ದಾವಣಗೆರೆ. ಚಾರು ಚಿಕ್ಕಮ್ಮನ ಪಾತ್ರದಲ್ಲಿ ಅನೇಕ ಪ್ರಸಿದ್ಧ ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ ಸಿರಿ ಬೆಂಗಳೂರು ಕಾಣಿಸಿಕೊಂಡಿದ್ದಾರೆ. ಚಾರು ಗೆಳತಿಯ ಪಾತ್ರದಲ್ಲೀ ಬೆಂಗಳೂರಿನ ಶ್ರೀ ಭವ್ಯ ಬಣ್ಣ ಹಚ್ಚಿದ್ದಾರೆ.
ಇನ್ನೂ ರಾಮಾಚಾರಿಯ ತಂದೆ ಪಾತ್ರದಲ್ಲಿ ಶಂಕರ್ ಅಶ್ವತ್ಥ್ ಮೈಸೂರು, ತಾಯಿ ಅಂಜಲಿ ರಾಮನಗರ ಜಿಲ್ಲೆಯ ಕನಕಪುರದವರು. ಚಾರಿ ಅಜ್ಜಿ ಪಾತ್ರದಲ್ಲಿ ತುಮಕೂರಿನ ವಿಜಯಲಕ್ಷ್ಮಿ ಅವರು ಬಣ್ಣ ಹಚ್ಚಿದ್ದಾರೆ. ತಂಗಿಯಾಗಿ ಹಾಸನದ ರಾಧಾ ಭಗವತಿ ಕಾಣಿಸಿಕೊಂಡಿದ್ದಾರೆ. ಇನ್ನೂ ರಾಮಾಚಾರಿಯ ಮಾವನಾಗಿ ಬಾಲ್ ರಾಜ್ ರಜತ್ ಮೈಸೂರಿನವರು, ಅತ್ತೆ ಶ್ವೇತಾ ಬಿ ಮಂಡ್ಯ ಇನ್ನೂ ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೂ ಈ ಧಾರಾವಾಹಿಯ ನಾಯಕಿಯಾಗಿ ಉತ್ತರ ಕನ್ನಡದ ಮೌನ ಗೊಡ್ಡೆಮನೆ ಮತ್ತು ನಾಯಕನಾಗಿ ಮೈಸೂರಿನ ರಿತ್ವಿಕ್ ಕೃಪಾಕರ ಅಭಿನಯಿಸಿದ್ದಾರೆ. ಸದ್ಯ ಈ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದ್ದು ಜನರ ಮೆಚ್ಚಗೆಗೆ ಪಾತ್ರವಾಗಿದೆ.