ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿ ಹಣ ಸಂಪಾದಿಸಬೇಕು ಎಂದು ಅಂದುಕೊಂಡವರಿಗೆ ಯಾವ ದೇಶಕ್ಕೆ ಹೋದರೆ ಸಂಬಳ ಹೆಚ್ಚು ಸಿಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಕೆಲವರು ಅಮೆರಿಕ, ಇಂಗ್ಲೆಂಡ್ ದೇಶಗಳು ಅಂತ ಹೇಳಬಹುದು, ಇನ್ನು ಕೆಲವರು ಗರ್ಲ್ಫ್ ರಾಷ್ಟ್ರಗಳು ಅಂತ ಹೇಳಬಹುದು, ಮತ್ತೆ ಕೆಲವರು ಯುರೋಪ್ ರಾಷ್ಟ್ರಗಳು ಎಂದು ಹೇಳುತ್ತಾರೆ. ಹಾಗಾದರೆ ಅತಿ ಹೆಚ್ಚು ಸಂಬಳ ಕೊಡುವ 10 ರಾಷ್ಟ್ರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ
ಜಗತ್ತಿನಲ್ಲಿ ಅತಿ ಹೆಚ್ಚು ಸಂಬಳ ಕೊಡುವ 10 ರಾಷ್ಟ್ರಗಳಲ್ಲಿ ಹತ್ತನೆಯ ಸ್ಥಾನವನ್ನು ಬೆಲ್ಜಿಯಂ ದೇಶ ಪಡೆದುಕೊಂಡಿದೆ. ಬೆಲ್ಜಿಯಂ ಯೂರೋಪ್ ರಾಷ್ಟ್ರಗಳಲ್ಲಿ ಒಂದು ಪ್ರಮುಖ ರಾಷ್ಟ್ರವಾಗಿದೆ. ಈ ದೇಶದಲ್ಲಿ ಮೂರು ಭಾಷೆಗಳನ್ನು ಮಾತನಾಡಲಾಗುತ್ತದೆ ಡಚ್, ಫ್ರೆಂಚ್, ಜರ್ಮನ್. ಈ ದೇಶದಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಮಾತನಾಡಲಾಗುತ್ತದೆ. ಯುರೋಪ್ ರಾಷ್ಟ್ರಗಳಲ್ಲಿ ಆರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಇದಾಗಿದೆ. 47 ಸಾವಿರ ಕೋಟಿ ಡಾಲರ್ ಜಿಡಿಪಿಯನ್ನು ಈ ದೇಶ ಹೊಂದಿದೆ. ಇಲ್ಲಿನ ಜನರ ಸರಾಸರಿ ವಾರ್ಷಿಕ ಆದಾಯ 48,093 ಡಾಲರ್. ಇಲ್ಲಿನ ಜನರು ವಾರಕ್ಕೆ ಸರಾಸರಿ 40 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಬೆಲ್ಜಿಯಂ ದೇಶದಲ್ಲಿ ಕ್ಯಾಪಿಟಲ್ ಕೇನ್ಸ್ ಮೇಲೆ ಹೆಚ್ಚು ಟ್ಯಾಕ್ಸ್ ವಿಧಿಸುವುದಿಲ್ಲ. ಬಿಯರ್, ಚಾಕ್ಲೆಟ್ ಉತ್ಪಾದನೆಗೆ ಈ ದೇಶ ಹೆಸರುವಾಸಿಯಾಗಿದೆ. ಒಂಭತ್ತನೆ ಸ್ಥಾನವನ್ನು ಕೆನಡಾ ದೇಶ ಪಡೆದುಕೊಂಡಿದೆ. ಈ ದೇಶದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆ ಮಾಡಿ ಮಾರಾಟ ಮಾಡಲಾಗುತ್ತದೆ. ಮೀನುಗಾರಿಕೆ, ಸಾಫ್ಟ್ ವೇರ್ ಫೀಲ್ಡ್ ನಲ್ಲಿ ಈ ದೇಶ ಮುಂದಿದೆ. ಇಲ್ಲಿನ ಜನರಿಗೆ ಫ್ರೀ ಮೆಡಿಕಲ್ ಟ್ರೀಟ್ಮೆಂಟ್ ಕೊಡಲಾಗುತ್ತದೆ. ವಾರಕ್ಕೆ 32 ಗಂಟೆ ಇವರು ಕೆಲಸ ಮಾಡುತ್ತಾರೆ, ಇಲ್ಲಿಯ ಜನರ ವಾರ್ಷಿಕ ಆದಾಯ 48,164 ಡಾಲರ್. ಎಂಟನೇ ಸ್ಥಾನವನ್ನು ಡೆನ್ಮಾರ್ಕ್ ಪಡೆದುಕೊಂಡಿದೆ. ಯುರೋಪ್ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರವಾಗಿದೆ. ಇದು ಉನ್ನತ ಜೀವನಮಟ್ಟವನ್ನು ಹೊಂದಿರುವ ದೇಶವಾಗಿದೆ. ಹಲವು ಬಾರಿ ಅತಿ ಸಂತೋಷವಾಗಿರುವ ದೇಶ ಎಂಬ ಬಿರುದನ್ನು ಪಡೆದುಕೊಂಡಿದೆ. ಇಲ್ಲಿ ಐವತ್ತೆಂಟು ಲಕ್ಷ ಜನರು ಮಾತ್ರ ವಾಸಿಸುತ್ತಿದ್ದಾರೆ ಇಲ್ಲಿಯ ಜನರ ವಾರ್ಷಿಕ ಆದಾಯ 49,589 ಡಾಲರ್. ಈ ದೇಶದಲ್ಲಿ ಸಾಫ್ಟ್ ವೇರ್ ಡಿಸೈನ್ ಮಾಡುವ ವ್ಯಕ್ತಿಯೊಬ್ಬ ವರ್ಷಕ್ಕೆ 80,000 ಡಾಲರ್ ದುಡಿಯುತ್ತಾನೆ. ಈ ದೇಶದಲ್ಲಿ ಜನರು ವಾರಕ್ಕೆ 37 ಗಂಟೆ ಕೆಲಸ ಮಾಡುತ್ತಾರೆ. ಇಲ್ಲಿಯ ಜನರು ನೇರವಾಗಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ ಹಾಗೂ ಸರ್ಕಾರ ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತದೆ ಹೀಗಾಗಿ ಇಲ್ಲಿಯ ಜನರು ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟುತ್ತಾರೆ. ಈ ದೇಶದಲ್ಲಿ ಬಿಸಿನೆಸ್ ಪ್ರಾರಂಭಿಸುವುದು ಸುಲಭ.
ಅತಿ ಹೆಚ್ಚು ಸಂಬಳ ಕೊಡುವ ದೇಶಗಳಲ್ಲಿ ಏಳನೇ ಸ್ಥಾನವನ್ನು ನೆದರ್ಲ್ಯಾಂಡ್ ಪಡೆದುಕೊಂಡಿದೆ. ಪಶ್ಚಿಮ ಯುರೋಪ್ ನಲ್ಲಿ ಇರುವ ಈ ದೇಶವನ್ನು ಹಾಲೆಂಡ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಒಂದು ಕೋಟಿ ಎಪ್ಪತ್ನಾಲ್ಕು ಲಕ್ಷ ಜನರು ವಾಸಿಸುತ್ತಿದ್ದಾರೆ. ಇಲ್ಲಿಯ ಜನರ ವಾರ್ಷಿಕ ಆದಾಯ 51,003 ಡಾಲರ್. ಇಲ್ಲಿಯ ಜನರು ವಾರಕ್ಕೆ 35 ಗಂಟೆ ಕೆಲಸ ಮಾಡುತ್ತಾರೆ. ಈ ದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ದೇಶದಲ್ಲಿ ಸರ್ಕಾರ ಹೆಚ್ಚಿನ ಟ್ಯಾಕ್ಸ್ ವಸೂಲಿ ಮಾಡುತ್ತದೆ ಆದರೆ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿದೆ. ಆರನೇ ಸ್ಥಾನವನ್ನು ಆಸ್ಟ್ರೇಲಿಯಾ ಪಡೆದುಕೊಂಡಿದೆ. ಈ ದೇಶದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಇಲ್ಲಿ ಎರಡು ಕೋಟಿ ಐವತ್ತು ಲಕ್ಷ ಜನರಿದ್ದಾರೆ. ಇಲ್ಲಿಯ ಜನರ ವಾರ್ಷಿಕ ಆದಾಯ 51,148 ಡಾಲರ್. ಇಲ್ಲಿ ಜನರು ವಾರಕ್ಕೆ 25 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಈ ದೇಶ ಆರ್ಥಿಕವಾಗಿ ಬಹಳ ಪ್ರಬಲವಾಗಿದೆ. ಐದನೇ ಸ್ಥಾನವನ್ನು ನಾರ್ವೆ ಪಡೆದುಕೊಂಡಿದೆ. ಯುರೋಪ್ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರವಾದ ಇದು ಅನೇಕ ಸುಂದರ ಸ್ವಚ್ಛ, ನಗರಗಳನ್ನು ಹೊಂದಿದೆ. ಇಲ್ಲಿ ಐವತ್ತು ಲಕ್ಷ ಜನರು ವಾಸಿಸುತ್ತಿದ್ದಾರೆ, ತೈಲ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಸಂಪನ್ಮೂಲ ಹಂಚಿಕೆಯಲ್ಲಿ ಈ ದೇಶ ಉನ್ನತ ಸ್ಥಾನವನ್ನು ಪಡೆದಿದೆ. ಇಲ್ಲಿಯ ಜನರು ವಾರಕ್ಕೆ 30 ಗಂಟೆ ಕೆಲಸ ಮಾಡುತ್ತಾರೆ, ಅವರ ವಾರ್ಷಿಕ ಆದಾಯ 51,718 ಡಾಲರ್.
ಅತಿ ಹೆಚ್ಚು ಸಂಬಳ ಕೊಡುವ ದೇಶಗಳಲ್ಲಿ ನಾರ್ವೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಈ ದೇಶ ಉನ್ನತ ಜೀವನಮಟ್ಟವನ್ನು ಹೊಂದಿದೆ. ಯುಕೆಯ ಒಂದು ಭಾಗವಾದ ಈ ದೇಶ ಕೃಷಿ ಕೇಂದ್ರವಾಗಿದೆ, ಅಲ್ಲದೆ ದೊಡ್ಡ ದೊಡ್ಡ ಕೈಗಾರಿಕೆಗಳು ಇವೆ. ಇಲ್ಲಿಯ ಜನರು ವಾರಕ್ಕೆ 22 ಗಂಟೆಗಳು ಮಾತ್ರ ಕೆಲಸ ಮಾಡುತ್ತಾರೆ ಇವರ ವಾರ್ಷಿಕ ಆದಾಯ 53,286 ಡಾಲರ್. ಮೂರನೇ ಸ್ಥಾನವನ್ನು ಸ್ವಿಜರ್ಲ್ಯಾಂಡ್ ಪಡೆದುಕೊಂಡಿದೆ, ಯುರೋಪ್ ಹೃದಯಭಾಗದಲ್ಲಿರುವ ಇದು ಒಂದು ಪುಟ್ಟ ದೇಶವಾಗಿದೆ. ತನ್ನ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅಭಿವೃದ್ಧಿಗೊಂಡಿದೆ. ಟೂರಿಸಂ ಮತ್ತು ಮ್ಯಾನುಫ್ಯಾಕ್ಚರಿಂಗ್ ಇಲ್ಲಿನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇಲ್ಲಿ ಎಂಭತ್ತಾರು ಲಕ್ಷ ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಜನರು ವಾರಕ್ಕೆ 41 ಗಂಟೆ ಕೆಲಸ ಮಾಡುತ್ತಾರೆ, ಇವರ ವಾರ್ಷಿಕ ಆದಾಯ 54,027 ಡಾಲರ್. ಎರಡನೇ ಸ್ಥಾನವನ್ನು ಅಮೆರಿಕ ಪಡೆದುಕೊಂಡಿದೆ. ಇಲ್ಲಿ ಮೂವತ್ತೆರಡು ಕೋಟಿ ಜನ ವಾಸವಾಗಿದ್ದಾರೆ, ಆರ್ಥಿಕತೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ವಾರಕ್ಕೆ ಇಲ್ಲಿಯ ಜನರು 44 ಗಂಟೆ ಕೆಲಸ ಮಾಡುತ್ತಾರೆ, ಇಲ್ಲಿಯ ಜನರ ವಾರ್ಷಿಕ ಆದಾಯ 57,138 ಡಾಲರ್. ಅಮೆರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳಿವೆ, ಇಲ್ಲಿಯ ಜನರು ತಮ್ಮ ಸಂಬಳದ 31% ಟ್ಯಾಕ್ಸ್ ಕಟ್ಟಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಸಂಬಳ ಕೊಡುವ ದೇಶಗಳಲ್ಲಿ ಮೊದಲನೇ ಸ್ಥಾನವನ್ನು ಲಕ್ಸಂಬರ್ಗ್ ದೇಶ ಪಡೆದುಕೊಂಡಿದೆ. ಪಶ್ಚಿಮ ಯುರೋಪಿನ ಒಂದು ಸಣ್ಣ ದೇಶ, ಇಲ್ಲಿ ಕೇವಲ ಆರು ಲಕ್ಷ ಜನರು ವಾಸಿಸುತ್ತಿದ್ದಾರೆ. ಇಲ್ಲಿಯ ಜನರ ವಾರ್ಷಿಕ ಆದಾಯ 61,511 ಡಾಲರ್, 37% ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಈ ದೇಶದಲ್ಲಿ ಸ್ಟೀಲ್ ಉತ್ಪಾದನೆ ಹೆಚ್ಚಿದೆ ಮತ್ತು ಸೇವಾ ವಲಯದಲ್ಲಿ ಮುಂದಿದೆ. ಭಾರತ ಟಾಪ್ ಟೆನ್ ಲೀಸ್ಟ್ ನಲ್ಲಿ ಬರುವುದಿಲ್ಲ. ಭಾರತೀಯರ ವಾರ್ಷಿಕ ಆದಾಯ 5,184 ಡಾಲರ್ ಅಂದರೆ ಮೂರು ಲಕ್ಷದ ಎಂಭತ್ತೈದು ಸಾವಿರದ ಒಂಬೈನೂರ ನಲವತ್ತೊಂದು ರೂಪಾಯಿ. ಭಾರತದಲ್ಲಿ ಆದಾಯ ಅಸಮಾನತೆ ಹೆಚ್ಚಿನ ಪ್ರಮಾಣದಲ್ಲಿದೆ.