WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತ ಇರುವಂತದ್ದು ರವಿ ಡಿ ಚೆನ್ನಣ್ಣನವರ್ ಅವರ ಆಸ್ತಿ ವಿಚಾರ ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಅವರು ಅಕ್ರಮ ಆಸ್ತಿಯನ್ನು ಗಳಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು ಅವರ ಅಕ್ರಮ ಆಸ್ತಿ ಆರೋಪದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ.

ಅನೇಕ ಜನರಿಗೆ ರೋಲ್ ಮಾಡೆಲ್ ಆಗಿ ಇದ್ದಂತಹ ರವಿ ಚನ್ನಣ್ಣನವರ್ ವಿರುದ್ಧ ಹರಿದಾಡುತ್ತಿದ್ದ ಸುದ್ದಿಗಳ ಕುರಿತು ಚನ್ನಣ್ಣನವರ್ ಕುಟುಂಬದವರಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಲಾಗಿದೆ. ಮಾಧ್ಯಮ ಪ್ರಕಟಣೆಯಲ್ಲಿ ಅವರ ತಂದೆ-ತಾಯಿ ಅವರ ಆಸ್ತಿಯ ಕುರಿತಾಗಿ ಕೆಲವೊಂದಿಷ್ಟು ಮಾಹಿತಿಗಳನ್ನು ತಿಳಿಸಿದ್ದಾರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ರವಿ ಡಿ ಚನ್ನಣ್ಣನವರ ಆಸ್ತಿಯ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು ಅವೆಲ್ಲವೂ ಅಕ್ರಮ ಆಸ್ತಿ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದವು ಆ ಕುರಿತಂತೆ ಇದೀಗ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಲಾಗಿದೆ. ಆ ಕುರಿತಂತೆ ಕುಟುಂಬದವರು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು ಅದರಲ್ಲಿ ಕೆಲವೊಂದು ಅಂಶಗಳನ್ನು ಪ್ರಕಟಿಸಿದ್ದಾರೆ ಅವರ ತಂದೆ ದ್ಯಾಮಪ್ಪ ಹಾಗೂ ತಾಯಿ ರತ್ನವ್ವ ಅವರ ಆಸ್ತಿಯ ಕುರಿತಂತೆ ಒಂದಷ್ಟು ವಿಚಾರಗಳನ್ನು ತಿಳಿಸಿದ್ದಾರೆ

ಅದರಲ್ಲಿ ಅವರು ತಿಳಿದಿರುವಂತಹ ಪ್ರಮುಖ ವಿಚಾರಗಳು ಯಾವವು ಎಂದರೆ ಅವರು ಆರು ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ. ಅಲ್ಲಿ ಒಣಬೇಸಾಯ ಹಾಗೂ ಬರದಿಂದಾಗಿ ಯಾವುದೇ ಆದಾಯ ಬರುತ್ತಿರಲಿಲ್ಲ ಹಾಗಾಗಿ ಅಲ್ಲಿ ನೀರಾವರಿ ಸೌಲಭ್ಯವನ್ನು ಮಾಡುತ್ತಾರೆ ಅದಾದ ನಂತರ ಅಲ್ಲಿ ಫಸಲು ಒಳ್ಳೆಯ ರೀತಿಯಲ್ಲಿ ಬರುತ್ತದೆ ಅದರಿಂದ ಬಂದ ಆದಾಯದಿಂದ ಕೆಲವೊಂದು ಆಸ್ತಿಗಳನ್ನು ಖರೀದಿ ಮಾಡಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ಅದನ್ನು ಹೊರತುಪಡಿಸಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಇದೆ ಅದನ್ನ ನಾವು ಈಗಲೂ ತೀರಿಸುತ್ತಾ ಬರುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿವರ್ಷ ನಾವು ನಮ್ಮ ಆದಾಯದ ಮೂಲವನ್ನು ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಜೊತೆಗೆ ಅವರು ಪ್ರಕಟಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಾವು ಹೊಂದಿರುವ ಐದು ಆಸ್ತಿಗಳ ವಿವರವನ್ನು ತಿಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿರುವ ಆಸ್ತಿಯ ವಿವರ ಜೊತೆಗೆ ಎಲ್ಲಿ ಅವರ ಆಸ್ತಿ ಇದೆ ಅದರ ವಿವರವನ್ನು ಕೂಡ ಪ್ರಕಟಣೆಯಲ್ಲಿ ಹಾಕಿದ್ದಾರೆ. ಅವರ ಕಿರಿಯ ಮಗ ರಾಘವೇಂದ್ರ ಚನ್ನಣ್ಣನವರ್ ಅವರ ಬಳಿ ಗುತ್ತಿಗೆದಾರ ಲೈಸನ್ಸ್ ಇರುವುದರಿಂದ ಅವರು ಸಣ್ಣಪುಟ್ಟ ಗುತ್ತಿಗೆ ವ್ಯವಹಾರವನ್ನು ನಡೆಸುತ್ತಿದ್ದುದರಿಂದ ಅದರಿಂದ ಬರುವಂತಹ ಲಾಭದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಒಂದಷ್ಟು ಆಸ್ತಿಗಳನ್ನು ಖರೀದಿ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ.

ತಮ್ಮ ಬಳಿ ಇರುವಂತಹ ಆಸ್ತಿಯನ್ನು ಕೂಡ ತಾವು ಕಷ್ಟಪಟ್ಟು ಖರೀದಿ ಮಾಡಿರುವಂತಹದ್ದು ಎಂದು ತಿಳಿಸಿದ್ದಾರೆ ಜೊತೆಗೆ ಜಲ್ಲಿ ವ್ಯವಹಾರವನ್ನು ಮಾಡುವುದಕ್ಕೆ ನಾವು ಮುಂದಾಗಿದ್ದೇವೆ ಅದಕ್ಕೆ ಬೇಕಾದಂತಹ ತಯಾರಿಯನ್ನು ಕೂಡ ನಡೆಸಿ ಕೊಂಡಿದ್ದೇವೆ ವ್ಯವಹಾರವನ್ನು ನಡೆಸುವುದಕ್ಕೆ ಪಾಲುದಾರರನ್ನು ಹುಡುಕುತ್ತಿದ್ದೇವೆ ಎನ್ನುವ ವಿಚಾರವನ್ನ ಕೂಡ ಉಲ್ಲೇಖ ಮಾಡಿದ್ದಾರೆ.

ಈಗಾಗಲೇ ಜಾಲತಾಣದಲ್ಲಿ ಯಾರು ಸುಖಾಸುಮ್ಮನೆ ಸುಳ್ಳು ಸುದ್ದಿಯನ್ನು ಹೊರಡಿಸುತ್ತಿದ್ದಾರೆ ಅದು ಶಿಕ್ಷಾರ್ಹ ಅಪರಾಧ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಂದೆ ಧ್ಯಾಮಪ್ಪ ತಾಯಿ ರತ್ನವ್ವ ಅವರಿಂದ ಜಂಟಿ ಪ್ರಕಟಣೆಯನ್ನು ಹೊರಡಿಸಲಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: