ಮನೆಯ ಅಂಗಳದಲ್ಲಿ ಸುಲಭವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಮೃತಬಳ್ಳಿ ಒಂದು. ಇದು ಒಂದು ಔಷಧೀಯ ಸಸ್ಯವಾಗಿದೆ ಅಮೃತಕ್ಕೆ ಸಮಾನವಾದದ್ದು ಅಮೃತಬಳ್ಳಿ. ಇದು ನಾನಾ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಅದಕ್ಕಾಗಿಯೆ ಹಿಂದಿನ ಕಾಲದಲ್ಲಿ ಹಿರಿಯರು ಇದಕ್ಕೆ ಅಮೃತಬಳ್ಳಿ ಎಂದು ಹೆಸರಿಟ್ಟಿದ್ದಾರೆ. ಅಮೃತಬಳ್ಳಿಯನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯಾದಂತಹ ಲಾಭದಾಯಕ ಅಂಶಗಳು ದೊರೆಯುತ್ತವೆ ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ನಿಯಮಿತವಾಗಿ ಅಮೃತಬಳ್ಳಿಯ ಎಲೆಗಳನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ನೆನಪಿನ ಶಕ್ತಿ ಹೆಚ್ಚಾಗಬೇಕು ಎಂದರೆ ಪ್ರತಿನಿತ್ಯ ಅಮೃತಬಳ್ಳಿಯಿಂದ ತಯಾರಿಸಿದ ಜ್ಯೂಸನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಜೊತೆಗೆ ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ಅಮೃತಬಳ್ಳಿಯ ಜ್ಯೂಸನ್ನು ಸೇವನೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿ ಪಿತ್ತ ಹೆಚ್ಚಾದಾಗ ಉರಿ ಕಾಣಿಸಿಕೊಳ್ಳುತ್ತದೆ ಅಂತಹ ಸಂದರ್ಭದಲ್ಲಿ ಅಮೃತಬಳ್ಳಿಯ ಜ್ಯೂಸಿಗೆ ಜೀರಿಗೆಯನ್ನು ಸೇರಿಸಿ ಸೇವನೆಯನ್ನು ಮಾಡುವುದರಿಂದ ಪಿತ್ತ ಶಮನವಾಗುತ್ತದೆ.
ದೇಹದಲ್ಲಿ ಬೇರೆಬೇರೆ ರೀತಿಯಾಗಿ ಸಂಧಿಗಳಲ್ಲಿ ನೋವು ಕಾಣಿಸಿಕೊಂಡರೆ ಅಮೃತಬಳ್ಳಿಯ ಎಲೆಗಳ ರಸಕ್ಕೆ ಹಸುವಿನ ತುಪ್ಪವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ ಮತ್ತು ಈ ಅಮೃತಬಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಸ್ಪಷ್ಟತೆ ಹೆಚ್ಚುತ್ತದೆ ಜೊತೆಗೆ ಕನ್ನಡಕವನ್ನು ಧರಿಸದೆ ಸ್ಪಷ್ಟವಾಗಿ ನೋಡಬಹುದಾಗಿದೆ. ಅಮೃತಬಳ್ಳಿಯಲ್ಲಿ ಮುಖದ ಮೇಲಿರುವ ಕಲೆಗಳನ್ನು ಮತ್ತು ಗುಳ್ಳೆಗಳನ್ನು ಕಡಿಮೆ ಮಾಡುವಂತಹ ಲಕ್ಷಣ ಅಡಕವಾಗಿದೆ. ಇನ್ನು ವಾಂತಿ ಆಗುತ್ತಿದ್ದರೆ ಹತ್ತರಿಂದ ಇಪ್ಪತ್ತು ಗ್ರಾಂ ಅಮೃತಬಳ್ಳಿಯ ಕಷಾಯದೊಂದಿಗೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ವಾಂತಿ ಕಡಿಮೆಯಾಗುತ್ತದೆ.
ಎಲ್ಲಾ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಉತ್ತಮವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಮೃತಬಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಹಾಗೂ ಅಮೃತಬಳ್ಳಿಯ ಕಾಂಡದ ರಸದೊಂದಿಗೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಮುಂಜಾನೆ ಮತ್ತು ಸಂಜೆ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಅಂಶ ಹೆಚ್ಚಾಗುತ್ತದೆ. ಈ ರೀತಿಯಾಗಿ ನೀವು ನಿಯಮಿತವಾಗಿ ಅಮೃತಬಳ್ಳಿಯನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು ಆಗಿದೆ. ಅಮೃತಬಳ್ಳಿಯ ಸೇವನೆಯನ್ನು ಮಾಡುವುದು ಅಮೃತವನ್ನು ಸೇರಿಸಿದಂತೆ ಎಂದು ಹೇಳಬಹುದು. ಅಮೃತಬಳ್ಳಿಯ ಬಳಕೆಯನ್ನು ಮಾಡಿ ನೀವು ಕೂಡ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಜೊತೆಗೆ ಈ ಮಾಹಿತಿಯನ್ನು ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.