WhatsApp Group Join Now
Telegram Group Join Now

ವರಮಹಾಲಕ್ಷ್ಮಿ ಹಬ್ಬವು ಹಿಂದೂ ಸಂಪ್ರದಾಯದಲ್ಲಿ ತನ್ನದೆ ಆದ ಮಹತ್ವವನ್ನು ಪಡೆದಿದೆ. ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಪೂಜೆಯನ್ನು ಯಾವಾಗ ಹೇಗೆ ಆಚರಿಸಬೇಕು ಹಾಗೂ ವರಮಹಾಲಕ್ಷ್ಮಿ ಆಚರಣೆಯ ಮಹತ್ವವನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಆಗಸ್ಟ್ 16ನೇ ತಾರೀಖು ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬ ಎಂತಲೂ ಹೇಳಬಹುದು ವರಮಹಾಲಕ್ಷ್ಮಿ ಆಚರಣೆ ಎಂತಲೂ ಹೇಳಬಹುದು. ವರಮಹಾಲಕ್ಷ್ಮಿ ಹಬ್ಬವನ್ನು ಕಟ್ಟುನಿಟ್ಟಾಗಿ ಉಪವಾಸ ಮಾಡುವುದರ ಮೂಲಕ ಆಚರಿಸುವವರು ಇದ್ದಾರೆ ಲಘು ಆಹಾರವನ್ನು ಸೇವಿಸಿ ಆಚರಿಸುವವರು ಇದ್ದಾರೆ. ಮದುವೆಯಾದ ಮಹಿಳೆಯರು ಗುರುವಾರದ ದಿನದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವಿದ್ದು ಮರುದಿನದ ಪೂಜಾ ಸಿದ್ಧತೆಗಳನ್ನ ಮಾಡಿಕೊಳ್ಳಬೇಕು ಶುಕ್ರವಾರದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆ ಸ್ವಚ್ಛ ಮಾಡಿ ರಂಗೋಲಿಯನ್ನು ಹಾಕಬೇಕು ನಂತರ ಕಳಶ ಸ್ಥಾಪನೆ ಮಾಡಿಕೊಳ್ಳಬೇಕಾಗುತ್ತದೆ.

ಕಳಶವನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಿ ಸಿಂಗರಿಸಬೇಕು. ಕೆಲವರು ಕಳಶದಲ್ಲಿ ಅಕ್ಕಿ ತುಂಬಿ ನಾಣ್ಯ, ಅರಿಶಿಣ ಕುಂಕುಮ ಹೂವು ಅಕ್ಷತೆ ಹಾಕಿ ರೆಡಿ ಮಾಡುತ್ತಾರೆ ನಂತರ ತೆಂಗಿನಕಾಯಿಯನ್ನು ಸ್ಥಾಪನೆ ಮಾಡುತ್ತಾರೆ ಇನ್ನು ಕೆಲವರು ಕಳಶದಲ್ಲಿ ನೀರನ್ನು ತುಂಬಿ ಅದಕ್ಕೆ ಒಂದು ನಾಣ್ಯ ಅರಿಶಿಣ ಕುಂಕುಮ ಅಕ್ಷತೆ ಹಾಕುತ್ತಾರೆ. ಐದು ವೀಳ್ಯದೆಲೆ ಅಥವಾ ಮಾವಿನ ಎಲೆಯಿಂದ ಅದಕ್ಕೆ ಸಿಂಗಾರ ಮಾಡಿ ತೆಂಗಿನಕಾಯಿಯನ್ನು ಕಳಶದ ಮೇಲೆ ಇಟ್ಟುಕೊಳ್ಳುತ್ತಾರೆ. ಒಬ್ಬೊಬ್ಬರು ಆಯಾ ಪ್ರದೇಶಕ್ಕೆ ತಕ್ಕನಾಗಿ ಶಾಸ್ತ್ರಗಳನ್ನು ಮಾಡುತ್ತಾರೆ.

ಮೊದಲಿಗೆ ಗಣಪತಿಯನ್ನು ಆರಾಧನೆ ಮಾಡಬೇಕು ಶ್ಲೋಕವನ್ನು ಪಠಿಸಬೇಕು, ದೇವರಿಗೆ ಸಿಹಿ ತಿಂಡಿಯನ್ನು ಅರ್ಪಿಸಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಬೇಕು ಇದು ಬಿಟ್ಟು ಸಂಜೆ ಸಮಯ ಪ್ರದೂಷದ ಸಮಯ ಒಳ್ಳೆಯದು ನಂತರ ಬೇಕಿದ್ದರೆ ಸಿಂಗರಿಸಿ ಮತ್ತೆ ಪೂಜೆ ಮಾಡಬಹುದು ಮದುವೆಯಾದ ಮಹಿಳೆಯರು ವ್ರತ ಮಾಡುವಾಗ ಕೈಗೆ ಅರಿಶಿಣ ಹೂವಿನ ಕಂಕಣವನ್ನು ಕಟ್ಟಿಕೊಳ್ಳಬೇಕು ಬೆಲ್ಲದಿಂದ ಬೇಯಿಸಿದ ದ್ವಿದಳ ಧಾನ್ಯ ಪೊಂಗಲ್ ಸಿಹಿ ತಿಂಡಿಯನ್ನು ದೇವರಿಗೆ ನೈವೇದ್ಯ ಮಾಡಬೇಕು ಮನೆಗೆ ಬಂದವರಿಗೆ ಸಿಹಿ ತಿಂಡಿಯನ್ನು ಪ್ರಸಾದದ ರೂಪದಲ್ಲಿ ಕೊಡಬೇಕು.

ಕೆಲವರು ಶುಕ್ರವಾರವೆ ಕಳಶವನ್ನು ವಿಸರ್ಜನೆ ಮಾಡುತ್ತಾರೆ ಇನ್ನು ಕೆಲವರು ಶುಕ್ರವಾರ ಸ್ಥಾಪನೆ ಮಾಡಿ ಶನಿವಾರ ವಿಸರ್ಜನೆ ಮಾಡುತ್ತಾರೆ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ಪುರುಷರು ಮತ್ತು ಮಹಿಳೆಯರು ಇಬ್ಬರು ವರಮಹಾಲಕ್ಷ್ಮಿ ಆಚರಣೆಯನ್ನು ಮಾಡಬಹುದು. ಸಂಪತ್ತು ಸಮೃದ್ಧಿ ಧೈರ್ಯ ಬುದ್ಧಿವಂತಿಕೆ ಫಲವತ್ತತೆ ದೈವೀಕವಾಗಿ ಪೂಜೆ ಮಾಡಲಾಗುತ್ತದೆ. ಆರ್ಥಿಕ ಸಂಪತ್ತಿಗಾಗಿ, ಆಹಾರ ಧಾನ್ಯದ ಸಮೃದ್ಧಿಗಾಗಿ, ಆರೋಗ್ಯ ಉತ್ತಮ ದೈಹಿಕ ಯೋಗ ಕ್ಷೇಮಕ್ಕಾಗಿ, ಭೌತಿಕ ಆಸ್ತಿ ಮತ್ತು ಸಂಪತ್ತಿಗಾಗಿ, ಆರೋಗ್ಯಕರ ಸಂತತಿಗಾಗಿ, ಗಂಡನ ದೀರ್ಘಾಯುಶ್ಯಕ್ಕಾಗಿ ಸವಾಲುಗಳನ್ನು ಎದುರಿಸಲು ಧೈರ್ಯಕ್ಕಾಗಿ ಸಾಲದಿಂದ ಮುಕ್ತಿ ಪಡೆಯಲು ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ಪೂಜೆ ಮಾಡುವ ಮಹಿಳೆಯರು ಉಪವಾಸವಿದ್ದು ಪೂಜೆ ಮುಗಿದ ನಂತರ ಉಪವಾಸವನ್ನು ಮುರಿಯುತ್ತಾರೆ ವರಮಹಾಲಕ್ಷ್ಮಿ ಆಚರಣೆಯನ್ನು ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಒಳ್ಳೆಯ ಮಾರ್ಗವಾಗಿದೆ.

ಸಂಪತ್ತು ಸಮೃದ್ಧಿಯ ಹಿಂದೂ ಧರ್ಮದ ದೇವತೆಯಾದ ಲಕ್ಷ್ಮಿ ದೇವಿಯನ್ನು ವರಮಹಾಲಕ್ಷ್ಮಿ ಪೂಜೆಯನ್ನು ಪ್ರಾಮಾಣಿಕ ಹಾಗೂ ಸಮರ್ಪಣೆಯಿಂದ ಮಾಡುವ ಮೂಲಕ ಆಶೀರ್ವಾದವನ್ನು ಪಡೆಯಲಾಗುತ್ತದೆ. ಕುಂಕುಮ ಚಂದನ ಹರಿದ್ರ ದೂರಗ್ರಂಥಿ, ಅಕ್ಷತೆ, ಶ್ರೀ ವರಮಹಾಲಕ್ಷ್ಮಿ ವಿಗ್ರಹ ಅಥವಾ ಫೋಟೋ ವಸ್ತ್ರ, ತಾಜಾ ಹಣ್ಣು ಹೂವು ನೈವೇದ್ಯಕ್ಕೆ ಸಿಹಿ ತಿಂಡಿ ಸಿಂಧೂರ ಮಾಲೆ ವೀಳ್ಯದೆಲೆ ಪೀಠ ಕಳಶ ದೂಪ ದ್ರವ್ಯ ಕರ್ಪೂರ ಇವು ವರಮಹಾಲಕ್ಷ್ಮಿ ಆಚರಣೆಗೆ ಬೇಕಾಗುವ ಸಾಮಗ್ರಿಗಳಾಗಿವೆ ಕೆಲವು ಅಂಗಡಿಯಲ್ಲಿ ಹೋಗಿ ಕೇಳಿದರೆ ಎಲ್ಲಾ ವಸ್ತುಗಳ ಒಂದು ಬಾಕ್ಸ್ ಅನ್ನು ಕೊಡುತ್ತಾರೆ. ಮನೆಗೆ ಲಕ್ಷ್ಮಿಯನ್ನು ಆಹ್ವಾನಿಸಬೇಕಾದರೆ ಮನೆಯ ಅಲಂಕಾರ ಹಾಗೂ ಸಂತೋಷದ ವಾತಾವರಣ ಇರಬೇಕಾಗುತ್ತದೆ, ಅಲಂಕಾರ ಪ್ರಿಯೆ ಲಕ್ಷ್ಮಿ ದೇವಿಗೆ ಅಲಂಕಾರ ಮಾಡಬೇಕಾಗುತ್ತದೆ ಒಂದೊಂದು ಮನೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಲಂಕರಿಸುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕುಟುಂಬದ ಸಮೃದ್ಧಿ ಶ್ರೇಯಸ್ಸಿಗಾಗಿ ವರಮಹಾಲಕ್ಷ್ಮಿ ಆಚರಣೆಯನ್ನು ಮಾಡಬೇಕು ಮನೆಗೆ ಸುಮಂಗಲಿಯರನ್ನು ಕರೆದು ಅವರಿಗೆ ಅರಿಶಿಣ ಕುಂಕುಮ ಕೊಡಬೇಕು.

ವರಮಹಾಲಕ್ಷ್ಮಿ ಹಬ್ಬ ಬರುತ್ತಿದ್ದಂತೆ ಮಹಿಳೆಯರಿಗೆ ಸಂಭ್ರಮವಿರುತ್ತದೆ ಕಳಶ ಸಿದ್ಧ ಮಾಡುವುದು ಪೂಜೆ ಮಾಡುವುದು ಮಂತ್ರ ಪಠಿಸುವುದು ಹೀಗೆ ಹಲವು ಕೆಲಸಗಳಿರುತ್ತದೆ. ಮದುವೆಯಾಗದೆ ಇರುವ ಸ್ತ್ರೀಯರು ವರಮಹಾಲಕ್ಷ್ಮಿ ಪೂಜೆಯನ್ನು ಮಾಡಬಹುದು ಆದರೆ ವಿವಾಹಿತ ಸ್ತ್ರೀಯರು ಹೆಚ್ಚಾಗಿ ಮಾಡುತ್ತಾರೆ. ವರಮಹಾಲಕ್ಷ್ಮಿ ಆಚರಣೆಯಲ್ಲಿ ದೇವರಿಗೆ ಕೆಂಪು ಅಥವಾ ಹಸಿರು ಬಣ್ಣದ ಸೀರೆಯನ್ನ ಅರ್ಪಿಸಬೇಕು ಹಾಗೂ ಪೂಜೆ ಮಾಡುವವರು ಕೆಂಪು ಅಥವಾ ಹಸಿರು ಬಣ್ಣದ ಸೀರೆಯನ್ನು ಧರಿಸಿದರೆ ಉತ್ತಮ ಕೆಂಪು ಬಣ್ಣ ಶಕ್ತಿಯನ್ನು ಸೂಚಿಸುತ್ತದೆ ದೇವಿಗೆ ಪ್ರಿಯವಾದ ಬಣ್ಣವಾಗಿದೆ ಹಸಿರು ಸಮೃದ್ಧಿಯ ಸೂಚಕವಾಗಿದೆ ಹೀಗೆ ವರಮಹಾಲಕ್ಷ್ಮಿ ಆಚರಣೆಯನ್ನು ಮಾಡಬೇಕು ಲಕ್ಷ್ಮಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: