WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ 12 ಮಾಸಗಳು ಇವೆ. 12 ಮಾಸಗಳಲ್ಲಿ ಒಂದೊಂದು ಮಾಸ ಕೂಡ ಅದರದೇ ಆದ ವೈಶಿಷ್ಟ್ಯ ಹಾಗೂ ಪವಿತ್ರತೆಯನ್ನು ಹೊಂದಿದೆ. ಅದರಲ್ಲಿ, ಕೆಲವೊಂದು ಮಾಸಗಳು ಅತಿ ಪವಿತ್ರವಾದ ಮಾಸಗಳಾಗಿವೆ.

ಆ ಗುಂಪಿಗೆ ಸೇರ್ಪಡೆ ಆಗುವುದು ಈ ಶ್ರಾವಣ ಮಾಸ. ಇದಕ್ಕೆ ಕಾರಣ ವಿಷ್ಣು ದೇವ ಯೋಗ ನಿದ್ರೆಗೆ ಜಾರಿದ ನಂತರ ಮಹಾದೇವ ಆಗಿರುವ ಈಶ್ವರನು ಭೂಮಿಯ ಮೇಲೆ ಪಾರ್ವತಿಯ ಸಮೇತನಾಗಿ ನೆಲೆ ನಿಂತಿರುವನು ಮತ್ತು ಲೋಕ ಪಾಲನೆಯಲ್ಲಿ ತೊಡಗಿಸಿಕೊಳ್ಳುವನು.

ಆದ್ದರಿಂದ, ಶ್ರಾವಣ ಸೋಮವಾರ ಶಿವನಿಗೆ ವಿಶೇಷವಾದ ಪೂಜೆಗಳು ನಡೆಯುತ್ತದೆ. ಇನ್ನು ಅನೇಕ ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಶಿವ ಹಾಗೂ ಪಾರ್ವತಿಯ ಕಲ್ಯಾಣ ಆಗಿದೆ ಎನ್ನುವ ಉಲ್ಲೇಖಗಳು ಇದೆ. ಶಿವ ಪುರಾಣದ ಪ್ರಕಾರ ಅಗ್ನಿಗೆ ತನ್ನನ್ನೇ ಆಹುತಿ ಮಾಡಿಕೊಂಡ ಸತಿ ದೇವಿ. ಪುನಃ ಪಾರ್ವತಿ ದೇವಿಯ ಸ್ವರೂಪವಾಗಿ ಜನನ ಪಡೆಯುವಳು. ತನ್ನ ಹಿಂದಿನ ಜನ್ಮದ ಪತಿಯಾದ ಶಿವನನ್ನು ಪುನಃ ವಿವಾಹ ಆಗಲು ಕಠಿಣ ತಪಸ್ಸನ್ನು ಕೈಗೊಳ್ಳುವಳು. ಪಾರ್ವತಿ ದೇವಿಯ ತಪಸ್ಸನ್ನು ಮೆಚ್ಚಿ ಶಿವ ಅವಳನ್ನು ವಿವಾಹ ಆಗಲು ಒಪ್ಪಿಗೆ ಸೂಚಿಸುವನು ಮತ್ತು ಶ್ರಾವಣ ಮಾಸದಲ್ಲಿ ವಿವಾಹ ಆಗುವನು.

ಈ ಶ್ರಾವಣ ಮಾಸದಲ್ಲಿ ಶಿವ ಪಾರ್ವತಿಯ ತಂದೆ ತಾಯಿಯನ್ನು ಭೇಟಿ ಮಾಡಲು ಹೋಗುವನು. ಶಿವನು ಕೈಲಾಸದಿಂದ ಭೂಮಿಗೆ ಬರಲು ಅವನಿಗೆ ಸಂತಸದ ಸ್ವಾಗತ ಸಿಗುತ್ತದೆ. ಆದ್ದರಿಂದ, ಪ್ರತಿ ಶ್ರಾವಣ ಮಾಸದಲ್ಲಿ ಶಿವನು ಭೂಮಿಗೆ ಬರುವ ಎನ್ನುವ ನಂಬಿಕೆಯಿಂದ ಶಿವನಿಗೆ ಈ ಮಾಸದಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

ಪುರಾಣಗಳ ಉಲ್ಲೇಖದ ಪ್ರಕಾರ ಶ್ರಾವಣ ಮಾಸದಲ್ಲೇ ಕ್ಷೀರಸಾಗರದ ಮಂಥನ ನಡೆದಿದೆ ಎಂದು ಹೇಳಲಾಗುತ್ತದೆ. ಆಗ ಕ್ಷೀರಸಾಗರದ ಮಂಥನದ ಸಮಯದಲ್ಲಿ ಅಮೃತ ಮತ್ತು ಹಾಲಾಹಲ ಇನ್ನು ವಿವಿಧವಾದ, ವಿಶೇಷವಾದ ಮತ್ತು ಪವಿತ್ರವಾದ ವಸ್ತುಗಳು ಕೂಡ ಉದ್ಭವ ಆಗುತ್ತವೆ. ಇದರ ಜೊತೆಗೆ ಶ್ರೀ ಮಹಾಲಕ್ಷ್ಮಿಯ ಕೂಡ ಅಲ್ಲಿ ಇರುವಳು. ಈ ಕಾರಣದಿಂದ ಶ್ರಾವಣ ಮಾಸ ಅತ್ಯಂತ ಪವಿತ್ರವಾದ ಮಾಸವಾಗಿದೆ. ಶ್ರಾವಣ ಮಾಸದ 2 ನೇ ಶುಕ್ರವಾರ ದೇಶದ ಎಲ್ಲೆಡೆ ವೈಭವದಿಂದ ವರಮಹಾಲಕ್ಷ್ಮಿ ವ್ರತವನ್ನು ವಿಜೃಂಭಣೆಯಿಂದ ಆಚರಣೆ ಮಾಡುವರು.

ಇನ್ನು, ಈ ಶ್ರಾವಣ ಮಾಸ ಅತ್ಯಂತ ವೈಶಿಷ್ಟ್ಯವಾದ ಮಾಸ ಎಂದು ಹೇಳಲು ಇನ್ನು, ಬೇರೆ ರೀತಿಯ ಕಾರಣವೂ ಸಹ ಇವೆ. ವದಾದೇವಿಯ ಹುಟ್ಟು ಸಹ ಈ ಮಾಸದಲ್ಲಿ ಆಗಿದೆ. ರಾಶಿ ಪೂರ್ಣಿಮಾ ಅಥವಾ ನೂಲು ಹುಣ್ಣಿಮೆ ಎಂದು ಕರೆಯುವ ಶ್ರಾವಣ ಮಾಸದ ಹುಣ್ಣಿಮೆ ತುಂಬಾ ವಿಶೇಷವಾದ ಪೌರ್ಣಿಮೆಯಾಗಿ ಇರುತ್ತದೆ. ಇದೇ, ಕಾರಣದಿಂದ ಈ ದಿನದಂದು ಸಹೋದರಿಯರು ಅವರ ಸಹೋದರರ ಶ್ರೇಯಸ್ಸನ್ನು ಬಯಸಿ ರಕ್ಷಾ ಬಂಧನವನ್ನು ಆಚರಣೆ ಮಾಡುವರು. ಇನ್ನು, ಈ ಶ್ರಾವಣ ಮಾಸದ ಶುಕ್ಲ ಚೌತಿ ಮತ್ತು ಪಂಚಮಿ ನಾಗ ದೇವರ ಆರಾಧನೆಗಾಗಿ ಮಹತ್ವವನ್ನು ಹೊಂದಿದೆ.

ಅತ್ಯಂತ ಕಠಿಣ ವ್ರತ ಹಾಗೂ ಉಪವಾಸದಿಂದ ಈ ನಾಗ ದೇವತೆಯ ಆರಾಧನೆ ಮಾಡುವರು. ಮಹಾವಿಷ್ಣು ದೇವರು ಈ ಶ್ರವಣ ನಕ್ಷತ್ರದ ಅಧಿ ದೇವತೆಯಾಗಿ ಇರುವರು. ಶ್ರಾವಣ ಮಾಸದ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರ ಇರುವ ಕಾರಣ ಇದನ್ನು, ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ.

ಏನು ಮಾಡಲು ಸಾಧ್ಯವಿಲ್ಲದ ಜನರು ಕೊನೆಯ ಪಕ್ಷ ದೇವರ ಕಥಾ ಶ್ರವಣವನ್ನು ಮಾಡಿದರೆ. ಮಾಡಿರುವ ಪಾಪದಿಂದ ಮುಕ್ತಿ ದೊರಕುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯ ಬೇರೆ ಬೇರೆ ರೀತಿಯ ವಿಶೇಷ ವ್ರತಗಳನ್ನು ಒಳಗೊಂಡಿರುವ ಶ್ರಾವಣ ಮಾಸ ಪವಿತ್ರವಾದ ಮಾಸ ಎಂದು ಹೇಳಲಾಗುತ್ತದೆ. ಅದರಲ್ಲೂ ಈ ಶ್ರಾವಣ ಮಾಸ ಹಿಂದು ಧರ್ಮದ ಜನರಿಗೆ ತುಂಬಾ ಮುಖ್ಯವಾದ ಮಾಸವಾಗಿದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: