2024 ರಲ್ಲಿ ಶನಿಯ ಸ್ಥಾನ ಬದಲಾವಣೆಯಿಂದ ಹನ್ನೆರಡು ರಾಶಿಗಳಲ್ಲಿ ಜನಿಸಿದವರ ಮೇಲೆ ಒಂದೊಂದು ರಾಶಿಯ ಮೇಲೆ ಒಂದೊಂದು ರೀತಿಯಲ್ಲಿ ಶನಿ ಪ್ರಭಾವ ಬೀರುತ್ತಾನೆ. ಹಾಗಾದರೆ 2024 ರಲ್ಲಿ ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಯಾವ ರೀತಿಯಲ್ಲಿ ಶನಿ ತನ್ನ ಪ್ರಭಾವ ಬೀರುತ್ತಾನೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ
ಶನಿಯ ಸ್ಥಾನ ಬದಲಾವಣೆಯಿಂದ ಮೇಷ ರಾಶಿಯವರು ಹೆಚ್ಚಿನ ಆದಾಯ ಹಾಗೂ ಲಾಭವನ್ನು ಗಳಿಸುತ್ತಾರೆ ಹಾಗೂ ಅವರು ಹಲವು ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ ಹಾಗೂ ಕೌಟುಂಬಿಕ ಕಲಹಗಳು ಕಡಿಮೆ ಆಗುತ್ತದೆ. ಅನಾರೋಗ್ಯ ಸಮಸ್ಯೆ ಇದ್ದಲ್ಲಿ ಅದು ಕೂಡ ನಿವಾರಣೆಯಾಗುತ್ತಾ ಬರುತ್ತದೆ. ಶನಿ ದೇವರ ಕೃಪೆಗೆ ಮೇಷ ರಾಶಿಯವರು ಒಳಗಾಗುತ್ತಾರೆ. ಎರಡನೆ ರಾಶಿ ವೃಷಭ ರಾಶಿ ಇವರಿಗೆ ಹತ್ತನೆ ಮನೆಯಲ್ಲಿ ಶನಿ ಇದ್ದಾನೆ ಕರ್ಮ ಸ್ಥಾನದಲ್ಲಿ ಇದ್ದಾನೆ. ಇವರು ಕೆಲಸದ ನಿಮಿತ್ತ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇವರಿಗೆ ಕುಟುಂಬದವರಿಗೆ ಸಮಯ ನೀಡಲು ಕಷ್ಟವಾಗುತ್ತದೆ ಏಕೆಂದರೆ ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ ಹಣ ಸಂಪಾದನೆ ಆಗುತ್ತದೆ ಆದರೆ ಉಳಿಕೆ ಆಗುವುದಿಲ್ಲ. ಉದ್ಯೋಗ ಬದಲಾವಣೆ ಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ.
ಮೂರನೆ ರಾಶಿ ಮಿಥುನ ರಾಶಿಯಲ್ಲಿ ಜನಿಸಿದವರಿಗೆ 2024 ರಲ್ಲಿ ಶನಿಯಿಂದ ವೃತ್ತಿಕ್ಷೇತ್ರದಲ್ಲಿ ಕಿರಿ ಕಿರಿ ಒತ್ತಡ ಇದ್ದರೂ ಇವರಿಗೆ ಒಂದು ಮಟ್ಟದಲ್ಲಿ ಹಣ ಸಂಪಾದನೆ ಉತ್ತಮವಾಗಿ ಇರುತ್ತದೆ. ದೇವರ ಆರಾಧನೆಯನ್ನು ಇವರು ಮಾಡಬೇಕು. ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಕ್ಕೆ ಇರುತ್ತದೆ. ಈ ರಾಶಿಯ ಗಂಡ ಹೆಂಡತಿಯ ನಡುವೆ ಮೆ ತಿಂಗಳ ನಂತರ ವೈಮನಸ್ಸು ಬರುವ ಸಾಧ್ಯತೆ ಇದೆ ಇದರ ಬಗ್ಗೆ ಜಾಗರೂಕರಾಗಿರಬೇಕು. ಇವರ ವೃತ್ತಿ ಜೀವನದಲ್ಲಿ ಕಷ್ಟವಿದೆ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ 2024 ರಲ್ಲಿ ಶನಿಯ ಅಶುಭ ಫಲ ಸಿಗಲಿದೆ ಮನೆಯಲ್ಲಿ ವೈ ಮನಸ್ಸು ಸೃಷ್ಟಿಯಾಗುತ್ತದೆ ಮಾನಸಿಕ ಕಿರಿ ಕಿರಿ ಕಂಡುಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆಗಳು ಕಾಣಿಸುತ್ತವೆ. ಇವರ ವೃತ್ತಿ ಜೀವನದಲ್ಲಿ ಒಳ್ಳೆಯದಾಗುತ್ತದೆ.
ಕನ್ಯಾ ರಾಶಿಯವರಿಗೆ 2024 ರ ಶನಿ ಉತ್ತಮ ರೀತಿಯಲ್ಲಿ ಯಶಸ್ಸನ್ನು ಕೊಡುತ್ತಾನೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುತ್ತದೆ. ತುಲಾ ರಾಶಿಯವರಿಗೆ 2024 ರಲ್ಲಿ ಪಂಚಮ ಶನಿ ನಡೆಯುತ್ತದೆ ಇದರಿಂದ ಖರ್ಚು ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಇದರಿಂದ ಗೊಂದಲವಾಗುತ್ತದೆ. ಆಸ್ತಿ ವಿವಾದವಿದ್ದರೆ ಅದು ಈ ಸಮಯದಲ್ಲಿ ಪರಿಹಾರವಾಗುತ್ತದೆ. ವೃಶ್ಚಿಕ ರಾಶಿಯವರಿಗೆ 2024 ರಲ್ಲಿ ಶನಿಯು ಸ್ವಲ್ಪ ಮಟ್ಟಕ್ಕೆ ಕಾಡುತ್ತಾನೆ ಕೆಲಸದಲ್ಲಿ ಶನಿ ಅಡ್ಡಿ ಮಾಡುತ್ತಾನೆ ಆದರೆ ದೇವರ ಆಶೀರ್ವಾದ ಇದ್ದರೆ ಜೂನ್ ಇಂದ ನವೆಂಬರ್ ತಿಂಗಳವರೆಗೆ ಶನಿಯಿಂದ ಅನುಕೂಲವಿದೆ. ಆರ್ಥಿಕ ಸ್ಥಿತಿಯು ಸುಧಾರಣೆಯಾಗುತ್ತದೆ.
ಧನಸ್ಸು ರಾಶಿಯಲ್ಲಿ ಜನಿಸಿದವರಿಗೆ ಶನಿ ಮೂರನೆ ಮನೆಯಲ್ಲಿದ್ದು ಒಂದು ಹಂತಕ್ಕೆ ಒಳ್ಳೆಯದನ್ನು ಮಾಡಲಿದ್ದಾನೆ. ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ ಆದರೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಾಣುತ್ತದೆ. ಮಕರ ರಾಶಿಯಲ್ಲಿ ಜನಿಸಿದವರಿಗೆ ಸಾಡೆಸಾತಿ ಪ್ರಭಾವ ನಡೆಯುತ್ತದೆ. ಸಾಡೇಸಾತಿ ಎಷ್ಟನೇಯದು ಎಂಬುದನ್ನು ತಿಳಿದಿರಬೇಕು ಮೊದಲನೇಯದು ಹಾಗೂ ಮೂರನೇಯದು ಆಗಿದ್ದರೆ ಭಯಪಡಬೇಕು ಎರಡನೆ ಬಾರಿ ಆಗಿದ್ದರೆ ಶುಭ ಫಲ ಕೊಡುತ್ತಾನೆ. ಮಕರ ರಾಶಿಯವರ ಕುಟುಂಬದಲ್ಲಿ ಇರುವ ವೈಷಮ್ಯ ನಿವಾರಣೆಯಾಗುತ್ತದೆ. ಈ ಸಮಯದಲ್ಲಿ ಇವರಿಗೆ ಖರ್ಚು ಹಾಗೂ ಆದಾಯ ಹೆಚ್ಚಾಗುತ್ತದೆ. ಹೊಸ ಬದುಕನ್ನು ಕಟ್ಟಿಕೊಳ್ಳಲು ಶನಿ ದೇವರು ಒಳ್ಳೆಯದನ್ನು ಮಾಡುತ್ತಾನೆ. ಕುಂಭ ರಾಶಿಯಲ್ಲಿ ಜನಿಸಿದವರು ಜನ್ಮ ಶನಿ ಹಾಗೂ ಗರ್ಭ ಶನಿಯನ್ನು ಎದುರಿಸುತ್ತಿದ್ದು ಇದರಿಂದ ಸೊಂಬೇರಿತನ ಕಾಣುತ್ತದೆ. ಆತ್ಮವಿಶ್ವಾಸದ ಕಡಿಮೆಯಾಗುತ್ತದೆ. ಕಣ್ಣು, ಹಲ್ಲು, ಮೂಳೆಗೆ ಸಂಬಂಧಿಸಿದ ಖಾಯಿಲೆಗಳು ಬರುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುತ್ತದೆ ಆದರೆ ಸಾಲ ಆಗುವುದಿಲ್ಲ ಉಳಿಕೆ ಅಸಾಧ್ಯ.
ಮೀನ ರಾಶಿಯಲ್ಲಿ ಜನಿಸಿದವರಿಗೆ ಶನಿ ದೇವರಿಂದ ಮಾತ್ರ 2024 ರಲ್ಲಿ ಆರೋಗ್ಯ ಮತ್ತು ಹಣದ ವಿಷಯದಲ್ಲಿ ತೊಂದರೆ ಎದುರಿಸುತ್ತಾರೆ. ದುಂದುವೆಚ್ಚ ಹೆಚ್ಚಾಗುತ್ತದೆ ಇದನ್ನು ನಿಯಂತ್ರಣ ಮಾಡಬೇಕು. ಜಾಯಿಂಟ್ ಪೇನ್, ಮೂಲವ್ಯಾಧಿ ಸಮಸ್ಯೆಗಳು ಬರಬಹುದು. 2024 ರಲ್ಲಿ ಹನ್ನೆರಡು ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಶುಭ ಫಲ ಕೆಲವು ರಾಶಿಗಳಿಗೆ ಅಶುಭ ಫಲ ಸಿಗಲಿದೆ. ಲಕ್ಷ್ಮೀ ನರಸಿಂಹ ದೇವರ ಆರಾಧನೆ ಮಾಡಿದರೆ ಶನಿ ದೇವರು ಶಾಂತನಾಗುತ್ತಾನೆ. ಹನುಮ ದೇವರನ್ನು ಆರಾಧನೆ ಮಾಡುವುದರಿಂದಲೂ ಶನಿ ದೇವರು ಆಶೀರ್ವಾದ ಮಾಡುತ್ತಾನೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.