ಬ್ಯಾಂಕ್ ಅಕೌಂಟ್ ಇದ್ದು ಎಟಿಎಂ ಕಾರ್ಡ್ ಪಡೆದಿಲ್ಲ ಆದರೆ ಫೋನ್ ಪೇ ಅಕೌಂಟ್ ಅವಶ್ಯಕತೆ ಇದೆಯೆ ಹಾಗಾದರೆ ಎಟಿಎಂ ಕಾರ್ಡ್ ಇಲ್ಲದೆ ಮೊಬೈಲ್ ನಲ್ಲಿ ಫೋನ್ ಪೆ ಅಕೌಂಟ್ ಸುಲಭವಾಗಿ ಮಾಡಬಹುದು ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಇನ್ನು ಮುಂದೆ ಫೋನ್ ಪೆ ಗೂಗಲ್ ಪೆ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಲು ಎಟಿಎಂ ಕಾರ್ಡ್ ನ ಅವಶ್ಯಕತೆ ಇರುವುದಿಲ್ಲ. ಎಟಿಎಂ ಕಾರ್ಡ್ ಇಲ್ಲದೆ ಫೋನ್ ಪೆ ಅಕೌಂಟ್ ಮಾಡಿಕೊಳ್ಳಲು ಮೊದಲಿಗೆ ಮೊಬೈಲ್ ನಲ್ಲಿ ಫೋನ್ ಪೆ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಫೋನ್ ನಂಬರ್ ಅನ್ನು ಎಂಟ್ರಿ ಮಾಡಿ ಅಕೌಂಟ್ ಮಾಡಿಕೊಂಡ ನಂತರ ಆಡ್ ಬ್ಯಾಂಕ್ ಅಕೌಂಟ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು ನಂತರ ಅಕೌಂಟ್ ಇರುವ ಬ್ಯಾಂಕ್ ಹೆಸರನ್ನು ಕ್ಲಿಕ್ ಮಾಡಿಕೊಂಡು ನಿಮ್ಮ ಅಕೌಂಟನ್ನು ಲಿಂಕ್ ಮಾಡಬೇಕು ನಂತರ ಕ್ರಿಯೇಟ್ ಟು ಯುಪಿಐ ಆಪ್ಷನ್ ಅನ್ನು ಕ್ಲಿಕ್ ಮಾಡಿಕೊಂಡು ಯಾವುದೆ ಎಟಿಎಂ ಕಾರ್ಡ್ ಅನ್ನು ಬಳಸದೆ ಅಕೌಂಟ್ ಮಾಡಿಕೊಳ್ಳಬಹುದು.
ನಂತರ ಕೆಳಗಡೆ ಅಥಂಟಿಕೇಟ್ ಯುಸಿಂಗ್ ಆಧಾರ್ ನಂಬರ್ ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ನ ಮೊದಲ ಆರು ನಂಬರ್ ಅನ್ನು ಹಾಕಿದಾಗ ಮೊದಲ ಮೂರು ನಂಬರ್ ಮಾತ್ರ ಕಾಣಿಸುತ್ತದೆ ನಂತರ ಪ್ರೊಸೀಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ ಓಟಿಪಿಯನ್ನು ಹಾಕಿದ ತಕ್ಷಣ ಯುಪಿಐ ನಂಬರ್ ಒಂದುಸಾರಿ ಸೆಟ್ ಮಾಡಿದರೆ ಆಧಾರ್ ನಂಬರ್ ನೊಂದಿಗೆ ಫೋನ್ ಪೆ ನಲ್ಲಿ ಅಕೌಂಟ್ ಕ್ರಿಯೇಟ್ ಆಗುತ್ತದೆ. ಫೋನ್ ಪೆ ನಲ್ಲಿ ಅಮೌಂಟ್ ಅನ್ನು ಸರಳವಾಗಿ ಸುಲಭವಾಗಿ ಕಳುಹಿಸಬಹುದು. ಇದರಲ್ಲಿ ಒಂದು ಸಮಸ್ಯೆ ಎಂದರೆ ಎರಡು ಲಕ್ಷ, ಮೂರು ಲಕ್ಷ ಅಮೌಂಟ್ ಅನ್ನು ಕಳಿಸಲು ಬರುವುದಿಲ್ಲ 20,000 ಅಥವಾ 50000 ಹೀಗೆ ಸಣ್ಣ ಸಣ್ಣ ಮೊತ್ತದ ಅಮೌಂಟ್ ಅನ್ನು ಕಳುಹಿಸಬಹುದು.
ಹೀಗೆ ಎಟಿಎಂ ಕಾರ್ಡ್ ಇಲ್ಲದೆ ಎಲ್ಲಿ ಬೇಕಾದರೂ ಮೊಬೈಲ್ ನಲ್ಲಿ ಫೋನ್ ಪೆ ಅಕೌಂಟ್ ಮಾಡಿಸಬಹುದು. ದಿನನಿತ್ಯದ ವ್ಯವಹಾರವನ್ನು ಸುಲಭವಾಗಿ ಮೊಬೈಲ್ ಮೂಲಕವೆ ಮಾಡಬಹುದು. ಗಮನಿಸಬೇಕಾದ ಅಂಶವೆಂದರೆ ಲಕ್ಷಗಟ್ಟಲೆ ವ್ಯವಹಾರವನ್ನು ಮಾಡಲು ಬರುವುದಿಲ್ಲ. ಯಾರೆಲ್ಲ ಫೋನ್ ಪೆ ಅಕೌಂಟ್ ಮಾಡಿಸಿಕೊಂಡಿಲ್ಲ ಅವರೆಲ್ಲ ನಿಮ್ಮ ಮೊಬೈಲ್ ನಲ್ಲಿಯೆ ಎಟಿಎಂ ಕಾರ್ಡ್ ಇಲ್ಲದೆ ಫೋನ್ ಪೆ ಅಕೌಂಟ್ ಮಾಡಿಕೊಳ್ಳಿ, ಇತರರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.