WhatsApp Group Join Now
Telegram Group Join Now

2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಮಿಥುನ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಮಿಥುನ ರಾಶಿಯ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಹಾಗೂ ನಾಲ್ಕನೆ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣ, ಪುನರ್ವಸು ನಕ್ಷತ್ರದ ಮೂರು ಚರಣಗಳಿಂದ ಕೂಡಿದೆ. ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳು ಸಿಂಹ ಮೇಷ ತುಲಾ ಹಾಗೂ ಕನ್ಯಾ ರಾಶಿ ಇನ್ನು ಶತ್ರು ರಾಶಿ ನೋಡಿದಾಗ ಕಟಕ ರಾಶಿ ಮಿಥುನ ರಾಶಿಯ ಶತ್ರುರಾಶಿಯಾಗಿರುತ್ತದೆ. ಕರುಣಾಮಯಿಗಳು ದಯಾಮಯಿಗಳು ಮಿಥುನ ರಾಶಿಯವರಾಗಿರುತ್ತಾರೆ ಇವರಿಗೆ ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ಫಲವಿದೆ. ಮಿಥುನ ರಾಶಿಯವರು ಜವಾಬ್ದಾರಿಯನ್ನು ಹೊಂದಿರುತ್ತಾರೆ ಒಂದು ಸಂಸ್ಥೆಯ ಜವಾಬ್ದಾರಿ, ಮನೆಯ ಜವಾಬ್ದಾರಿ ಹೀಗೆ ಒಂದು ಉನ್ನತ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ, ಜವಾಬ್ದಾರಿಯನ್ನು ಮಿಥುನ ರಾಶಿಯವರು ಯಶಸ್ವಿಯಾಗಿ ನಿರ್ವಹಿಸುತ್ತಾರೆ ಅಂತಹ ಜಾಣ್ಮೆ ಅವರಿಗಿದೆ.

ಆಗಸ್ಟ್ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ತಾವು ಕೈಗೊಂಡ ಯೋಜನೆಗಳಲ್ಲಿ ಯಶಸ್ವಿ ಸಿಗುತ್ತದೆ. ಮಿಥುನ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಯಾವುದೆ ತೊಂದರೆ ಆಗುವುದಿಲ್ಲ ದುಡಿಯುತ್ತಿರುತ್ತಾರೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಅಲ್ಲದೆ ಹಣಕಾಸಿನ ಸಮಸ್ಯೆ ಇದ್ದಾಗ ಇತರರ ಸಹಾಯ ಸಿಗುತ್ತದೆ. ಶಿಸ್ತಿಗೆ ಮತ್ತೊಂದು ಹೆಸರು ಮಿಥುನ ರಾಶಿಯವರು, ಹದಗೆಟ್ಟಿರುವ ವ್ಯವಸ್ಥೆಯನ್ನು ಸಹ ಅವರು ವ್ಯವಸ್ಥಿತವಾಗಿ ಇರುವಂತೆ ಮಾಡುತ್ತಾರೆ. ಆಗಸ್ಟ್ ತಿಂಗಳಿನಲ್ಲಿ ಮಿಥುನ ರಾಶಿಯವರ ಕುಟುಂಬದಲ್ಲಿ ಶಾಂತಿ ಸಮಾಧಾನ ನೆಮ್ಮದಿ ಕಂಡುಬರುತ್ತದೆ. ಮಿಥುನ ರಾಶಿಯ ಪ್ರೇಮಿಗಳ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಮಿಥುನ ರಾಶಿಯ ವಿದ್ಯಾರ್ಥಿಗಳು ಹೆಚ್ಚು ಓದಬೇಕು ದೊಡ್ಡ ಮಟ್ಟಕ್ಕೆ ಹೋಗಬೇಕು ಅಥವಾ ಓದು ಮುಗಿದಿದೆ ಉತ್ತಮ ಕೆಲಸ ಬೇಕು ಎನ್ನುವವರಿಗೆ ಪರಿಶ್ರಮ ಪಟ್ಟರೆ ಖಂಡಿತವಾಗಿಯೂ ಉತ್ತಮ ಕೆಲಸ ಸಿಗುತ್ತದೆ.

ಮಿಥುನ ರಾಶಿಯವರು ಆಗಸ್ಟ್ ತಿಂಗಳಲ್ಲಿ ಬೇಡದೆ ಇರುವ ಸಂಬಂಧಪಡದೆ ಇರುವ ಕೆಲಸಗಳನ್ನು ಮಾಡಬಾರದು ಏಕೆಂದರೆ ಈ ತಿಂಗಳಿನಲ್ಲಿ ತಮ್ಮ ಗುರಿ ತಲುಪಬಹುದು ಹಾಗೂ ಮಿಥುನ ರಾಶಿಯವರದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ರಿಸ್ಕ್ ತೆಗೆದುಕೊಂಡು ಮಾಡುವ ಕೆಲಸ, ಯಾರನ್ನೊ ನಂಬಿ ಮಾಡುವ ಕೆಲಸ, ಬಂಡವಾಳ ಹಾಕಿ ಮಾಡುವ ಕೆಲಸಗಳು ಮಿಥುನ ರಾಶಿಯವರು ಮಾಡಬಾರದು. ಮಿಥುನ ರಾಶಿಯವರಿಗೆ ಉತ್ತಮ ಆದಾಯವಿದ್ದರೂ ಹೆಚ್ಚು ಖರ್ಚು ಇರುತ್ತದೆ, ಏನಕ್ಕೊ ಇಟ್ಟಿರುವ ದುಡ್ಡು ಇನ್ನೇನಕ್ಕೊ ಖರ್ಚಾಗುತ್ತಿದೆ ಇದರ ಬಗ್ಗೆ ಎಚ್ಚರಿಕೆ ಬೇಕು ಬೇಡದೆ ಇರುವ ಕೆಲಸಗಳಿಗೆ ಖರ್ಚು ಮಾಡಬಾರದು ಸಾಲ ಮಾಡಿ ವೈಭೋಗದ ವಸ್ತುಗಳನ್ನು ಖರೀದಿಸಬೇಡಿ ದುಡ್ಡಿಗೆ ತಕ್ಕನಾಗಿ ಖರ್ಚು ಮಾಡಿ.

ಆಗಸ್ಟ್ ತಿಂಗಳಿನಲ್ಲಿ ಮಿಥುನ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಅನುಸರಿಸಿಕೊಂಡು ಹೋಗುತ್ತಾರೆ ಆರೋಗ್ಯದ ವಿಷಯದಲ್ಲಿ ಅನುಕೂಲವಿದೆ. ವಾಹನ ಮಾರಾಟ ಮಾಡುವ ಬಿಸಿನೆಸ್ ಮಾಡುತ್ತಿದ್ದವರಿಗೆ, ಆಹಾರಕ್ಕೆ ಸಂಬಂಧಿಸಿದಂತೆ ಬಿಸಿನೆಸ್ ಮಾಡುತ್ತಿರುವವರಿಗೆ ಆಗಸ್ಟ್ ತಿಂಗಳಿನಲ್ಲಿ ಲಾಭವಿದೆ. ಸರ್ಕಾರಿ ಅರೆ ಸರ್ಕಾರಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ ಸರಿಯಾಗಿ ನಿಭಾಯಿಸಬೇಕು. ಉದ್ಯೋಗದ ನಿಮಿತ್ತ ಬೇರೆ ರಾಜ್ಯ ದೇಶಗಳಿಗೆ ಹೋಗುವ ಸಾಧ್ಯತೆ ಇದೆ. ಮಿಥುನ ರಾಶಿಯ ರಾಜಕಾರಣಿಗಳಿಗೆ ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗುತ್ತದೆ ಹಾಗೂ ಒಳ್ಳೆಯದಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಅಶ್ವತ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಬೇಕು, ಆಂಜನೇಯ ಸ್ತೋತ್ರ, ಶಿವ ಸಹಸ್ರನಾಮ ಸ್ತೋತ್ರವನ್ನು ಪಠಣ ಮಾಡಬೇಕು ಹಾಗೂ ಪ್ರಾಣಿ ಪಕ್ಷಿಗಳಿಗೆ ಅನ್ನ ಆಹಾರವನ್ನು ನೀಡಬೇಕು. ಈ ಮಾಹಿತಿಯನ್ನು ತಪ್ಪದೆ ಮಿಥುನ ರಾಶಿಯವರಿಗೆ ತಿಳಿಸಿ.

 ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: