ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕೆಲವು ರಾಶಿಯವರ ಮೇ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ. ಈ ತಿಂಗಳು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. 10 ನೇ ತಾರೀಖು ಅಕ್ಷಯ ತೃತೀಯ.
ಮೇಷ ರಾಶಿ :– ಈ ತಿಂಗಳು ಮೇಷ ರಾಶಿಯ ಜನರಿಗೆ ಉತ್ತಮ ಕಾಲ. ಗುರು ಗ್ರಹ, ಸೂರ್ಯ ಗ್ರಹ, ಶನಿ ಗ್ರಹ ಮತ್ತು ಶುಕ್ರ ಗ್ರಹ ಶುಭಕರ ಫಲಗಳನ್ನು ಕೊಡುತ್ತದೆ. ಕುಜ ಗ್ರಹ ರಾಹು ಗ್ರಹದ ಜೊತೆ ವ್ಯಯ ಸ್ಥಾನದಲ್ಲಿ ಸಂಚಾರ ಮಾಡುತ್ತಿರುವುದರಿಂದ ನಿದ್ದೆ ಬಾರದೆ ಇರುವುದು. ಹೆಚ್ಚಿನ ಒತ್ತಡ, ಚರ್ಮಕ್ಕೆ ಸಂಬಂಧಪಟ್ಟಂತೆ ಸಣ್ಣಪುಟ್ಟ ಅಲರ್ಜಿ ಕಾಡುವ ಸಾಧ್ಯತೆ ಇದೆ. ಇನ್ನು ಉಳಿದಂತೆ ಎಲ್ಲಾ ಮಂಗಳಕರ ಫಲಗಳನ್ನು ಮೇಷ ರಾಶಿಯವರು ಅನುಭವಿಸುವರು. ಸಂತಾನ ಇಲ್ಲದ ಜನರಿಗೆ ಸಂತಾನ ಪ್ರಾಪ್ತಿ ಆಗುತ್ತದೆ. ಪ್ರಯಾಣ ಮಾಡುವ ಯೋಗ ಹೆಚ್ಚಾಗಿ ಇರುತ್ತದೆ. ಸರ್ಕಾರದ ಗುತ್ತಿಗೆದಾರರು ಮತ್ತು ಕ್ರೀಡೆಯಲ್ಲಿ ತೊಡಗಿಕೊಂಡಿರುವ ಜನರಿಗೆ ಹೆಚ್ಚು ಒಳ್ಳೆ ಫಲ ಹಾಗು ಗೆಲುವು ಸಿಗುತ್ತದೆ.
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಸಿಗುತ್ತದೆ. ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಆದಾಯ ಗಳಿಕೆ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಸುಖ ಹಾಗು ಅವರ ಜೊತೆ ಒಳ್ಳೆಯ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಬೇಡದೆ ಇರುವ ವ್ಯವಹಾರಕ್ಕೆ ಕೈ ಹಾಕದೆ ಇರುವುದು ಉತ್ತಮ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಸ್ತು ಕಾಡಬಹುದು. ಮೇಷ ರಾಶಿಯ ಜನರಿಗೆ 13, 15, 26, 27 ತಾರೀಖು ಅಶುಭ ದಿನಗಳು.
ಪರಿಹಾರಗಳು :- ಸುಬ್ರಹ್ಮಣ್ಯ ದೇವರಿಗೆ ಎಳನೀರಿನ ಅಭಿಷೇಕ ಮಾಡಿಸಬೇಕು. ಸುಬ್ರಹ್ಮಣ್ಯ ಕರವಳಂಬ ಸ್ತೋತ್ರ ಪಾರಾಯಣ ಮಾಡುವುದು ಉತ್ತಮ. ಸುಬ್ರಮಣ್ಯ ದೇವಸ್ಥಾನದಲ್ಲಿ 108 ಪ್ರದಕ್ಷಿಣೆ ಮಾಡುವುದು ಇನ್ನು ಹೆಚ್ಚು ಶುಭ ತರುತ್ತದೆ.ಈಶ್ವರನ ಆರಾಧನೆ ಮಾಡಬೇಕು.
ವೃಷಭ ರಾಶಿ :- ವ್ಯಯ ಸ್ಥಾನದಲ್ಲಿ ಸೂರ್ಯ ಗ್ರಹ, ಗುರು ಗ್ರಹ ಮತ್ತು ಬುಧ ಗ್ರಹ ಇರುವುದರಿಂದ ಮಿಶ್ರ ಫಲಿತಾಂಶಗಳು ಈ ರಾಶಿಯವರಿಗೆ ಸಿಗುತ್ತದೆ. ಮೇಲಿನ ಅಧಿಕಾರಿಗಳಿಂದ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆಗಳು ಉಂಟಾಗಬಹುದು. ಕುಟುಂಬದಲ್ಲಿ ಅಷ್ಟು ಸೌಖ್ಯ ಇರುವುದಿಲ್ಲ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗುತ್ತೇ. ಈ ರಾಶಿಯವರು ಪ್ರಯಾಣ ಹೆಚ್ಚಾಗಿ ಮಾಡುವರು ಮತ್ತು ಅದರಲ್ಲಿ, ಹೆಚ್ಚಿನ ಎಚ್ಚರಿಕೆ ವಹಿಸಬೇಕು ಜೊತೆಗೆ ವಸ್ತುಗಳನ್ನು ಕಾಪಾಡಬೇಕು. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಲಾಭ ಗಳಿಕೆ ಆಗುತ್ತದೆ. ತಿಂಗಳ ಕೊನೆಯಲ್ಲಿ ಈ ರಾಶಿಯವರ ಕುಟುಂಬ ಅಥವಾ ಅವರ ಆರೋಗ್ಯ ವಿಚಾರವಾಗಿ ಹೆಚ್ಚಿನ ಖರ್ಚು ಆಗುತ್ತದೆ. ಮಕ್ಕಳ ಬಗ್ಗೆ ಹೆಚ್ಚಿನ ಚಿಂತೆ ಮಾಡುವ ಸಂಭವ ಇದೆ.
ಪರಿಹಾರಗಳು :– ಸೂರ್ಯನಿಗೆ ಹರಕೆ ಕೊಡಿ ಹಾಗು ಸೂರ್ಯ ದೇವನಿಗೆ ನಮಸ್ಕಾರ ಮಾಡಬೇಕು. ಆದಿತ್ಯ ದೇವನ ಸ್ತೋತ್ರ ಪಾರಾಯಣ ಮಾಡಬೇಕು. ಯಾವುದಾದರೂ ದೇವಿಯ ದರ್ಶನ ಮಾಡುವುದು ಅತ್ಯಗತ್ಯ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ಕೊಡಬೇಕು. ಇದರ ಜೊತೆಗೆ ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು.
ವೃಶ್ಚಿಕ ರಾಶಿ :-ಬುಧ ಗ್ರಹ, ಸೂರ್ಯ ಗ್ರಹ, ಗುರು ಗ್ರಹ ಮತ್ತು ಶುಕ್ರ ಗ್ರಹ ಈ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರಿಗೆ ಮಂಗಳಕರ ಫಲಗಳನ್ನು ಕೊಡುವರು. ಈ ರಾಶಿಯವರು ಅನಾವಶ್ಯಕ ಯೋಚನೆಯನ್ನು ಹೆಚ್ಚಾಗಿ ಮಾಡುವರು ಮತ್ತು ಆತುರತೆ ಹೆಚ್ಚಾಗಿ ಇರುತ್ತದೆ. ಪ್ರೀತಿ ಪ್ರೇಮದ ವಿಚಾರ ಕೌಟುಂಬಿಕ ವಿಚಾರ ಮಕ್ಕಳ ವಿಚಾರ ಇದೆಲ್ಲದರ ಕುರಿತು ಸ್ವಲ್ಪ ತೊಂದರೆಗಳು ಎದುರಾಗಬಹುದು. ಆತುರದ ನಿರ್ಧಾರಗಳನ್ನು ಮಾಡುವುದು ಹೆಚ್ಚು ಶ್ರೇಯಸ್ಸು ತರುವುದಿಲ್ಲ.
ಪ್ರೀತಿ ಪ್ರೇಮದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಹೊಸ ಪದವಿ ಸಿಗುವ ಸಂಭವ ಕೂಡ ಹೆಚ್ಚಾಗಿದೆ. ಕೀರ್ತಿ ಗೌರವ ಕೂಡ ಇಮ್ಮಡಿಯಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಜನರಿಗೆ ಅಥವಾ ಇಂಟರ್ವ್ಯೂ ಅಟೆಂಡ್ ಮಾಡುವ ಜನರಿಗೆ ಜಯ ಸಿಗುತ್ತದೆ. ಉದ್ಯೋಗ ಅಪೇಕ್ಷೆ ಪಡುವವರಿಗೆ ಅವರು ಇಚ್ಛೆ ಪಟ್ಟ ಕೆಲಸ ಸಿಗುತ್ತದೆ. ಈ ರಾಶಿಯವರಿಗೆ ಮೇ ತಿಂಗಳ ಮೂರನೇ ವಾರ ಅಷ್ಟು ಶುಭಕರವಲ್ಲ. ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಹೊಸ ವಸ್ತ್ರಗಳ ಪ್ರಾಪ್ತಿಯಾಗುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು.1, 4, 6, 10, 15, 18, 22, 27, 29 ತಾರೀಖುಗಳು ಒಳ್ಳೆಯ ದಿನಗಳು
ಪರಿಹಾರಗಳು :- ಸುಬ್ರಹ್ಮಣ್ಯ ಸ್ವಾಮಿಗೆ ಎಳನೀರ ಅಭಿಷೇಕ ಮಾಡಿಸಬೇಕು ಜೊತೆಗೆ ಸುಬ್ರಮಣ್ಯ ಕರವಳಂಬ ಸ್ತೋತ್ರ ಪಾರಾಯಣ ಮಾಡಬೇಕು. ಪ್ರತಿದಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎಳ್ಳಿನ ದೀಪ ಹಚ್ಚುವುದು ಹೆಚ್ಚು ಶುಭಕರ.
ಮಿಥುನ ರಾಶಿ :-ಎಲ್ಲಾ ಗ್ರಹಗಳ ಸ್ಥಾನ ಮಿಥುನ ರಾಶಿಯವರಿಗೆ ಮಿಶ್ರ ಫಲಗಳನ್ನು ಕೊಡುತ್ತದೆ.. ಈ ತಿಂಗಳು ಈ ರಾಶಿಯವರಿಗೆ ಹೆಚ್ಚು ಉತ್ತಮ ಫಲಿತಾಂಶಗಳನ್ನು ಕೊಡುವುದಿಲ್ಲ. ಹತ್ತಿರವಾದ ಬಂಧುಗಳ ಜೊತೆ ವಿರೋಧಗಳು ಎದುರಾಗುತ್ತದೆ. ಕಾರಣವಿಲ್ಲದ ಅಪವಾದಗಳು ಎದುರಾಗುತ್ತವೆ. ಪ್ರೀತಿ ಪ್ರೇಮ ವಿಚಾರದಲ್ಲಿ ವಿಫಲತೆ ಎದುರಿಸಬೇಕಾಗುತ್ತದೆ. ಈ ತಿಂಗಳಿನಲ್ಲಿ ಉದ್ಯೋಗ ಕೈ ಜಾರುವ ಸಾಧ್ಯತೆ ಹೆಚ್ಚಾಗಿ ಇದೆ. ಕೋಪ ಹೆಚ್ಚಾಗುತ್ತದೆ, ನಂಬಿಕೆ ಇಟ್ಟ ಜನರಿಂದ ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಸುಖ ಸೌಖ್ಯತೆ ಇರುವುದಿಲ್ಲ. ಕೌಟುಂಬಿಕ ಜೀವನ ಕೂಡ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆಯಾಗುತ್ತದೆ ಈ ತಿಂಗಳು ಬರುವ ಯಾವುದೇ ಫಲಿತಾಂಶ ಋಣಾತ್ಮಕವಾಗಿರುತ್ತದೆ. 14, 15, 17 ತಾರೀಖು ಹೆಚ್ಚು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಕತ್ತು ಮತ್ತು ಗಂಟಲಿನ ಭಾಗದಲ್ಲಿ ನೋವು ಉಂಟಾಗುತ್ತದೆ.
ಪರಿಹಾರಗಳು :-ನವಗ್ರಹ ದೇವಸ್ಥಾನದಲ್ಲಿ ನವಗ್ರಹಗಳಿಗೆ 9 ಪ್ರದಕ್ಷಿಣೆ ಮಾಡಬೇಕು. ನವಗ್ರಹ ದೇವರ ಮುಂದೆ ನಿಂತು ದೀಪ ಬೆಳಗಿ ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ ಗುರು ಶುಕ್ರ ಶನೇಶ್ವರಾಯ ರಾಹುವೇ ಕೇತುವೇ ನಮಃ ಎನ್ನುವ ಮಂತ್ರವನ್ನು ಪ್ರದಕ್ಷಿಣೆ ಹಾಕುವಾಗ ಪಠಣೆ ಮಾಡಬೇಕು. ಈಶ್ವರನಿಗೆ ಎಳನೀರಿನ ಅಭಿಷೇಕ ಇಲ್ಲವೇ ಕಬ್ಬಿನ ರಸದ ಅಭಿಷೇಕ ಮಾಡಬೇಕು. ವಿಷ್ಣುವಿನ ಆರಾಧನೆ ಮಾಡಬೇಕು ಅಥವಾ ಮಹಾಲಕ್ಷ್ಮಿಯ ಆರಾಧನೆ ಮಾಡಬೇಕು. ಇದರಿಂದ, ಋಣಾತ್ಮಕ ಪರಿಣಾಮದಿಂದ ಹೊರಗೆ ಬರಬಹುದು. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು