WhatsApp Group Join Now
Telegram Group Join Now

2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಮಕರ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಮಕರ ರಾಶಿಯ ರಾಶ್ಯಾಧಿಪತಿ ಶನಿ ಮಹಾತ್ಮ ಆಗಸ್ಟ್ ತಿಂಗಳಲ್ಲಿ ದ್ವಿತೀಯ ಸ್ಥಾನದಲ್ಲಿ ಶನಿ ಇರುವುದರಿಂದ ಹಣಕಾಸು ವಿಷಯದಲ್ಲಿ ಮಕರ ರಾಶಿಯವರು ಎಚ್ಚರಿಕೆಯಿಂದ ಇರಬೇಕು, ಯಾರ ಬಳಿಯಾದರೂ ದುಡ್ಡಿನ ವ್ಯವಹಾರ ಮಾಡುವಾಗ 10 ಸರಿ ಯೋಚನೆ ಮಾಡಬೇಕು. ಮಕರ ರಾಶಿಯವರಿಗೆ ತಮ್ಮವರೆ ಮೋಸ ಮಾಡುವ ಸಾಧ್ಯತೆ ಇದೆ ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಕುಟುಂಬದಲ್ಲಿ ಮಾತಿಗೆ ಮಾತು ಬೆಳೆಯುವುದು ಕಂಡು ಬರುತ್ತದೆ ಆಗಸ್ಟ್ ತಿಂಗಳಿನಲ್ಲಿ ಮಾತಿನ ಮೇಲೆ ಹಿಡಿತವಿರಲಿ, ಅಣ್ಣ ತಮ್ಮಂದಿರ ನಡುವೆ ವಾದ ವಿವಾದ ನಡೆಯಬಹುದು.

ಮಕರ ರಾಶಿಯ ವಿದ್ಯಾರ್ಥಿಗಳಿಗೆ ಸೋಂಬೇರಿತನ ಇರುತ್ತದೆ. ಮಕರ ರಾಶಿಯವರು ಮಾಡುವ ಕೆಲಸದಲ್ಲಿ ಅವರ ಸ್ನೇಹಿತರು ಅಥವಾ ಹತ್ತಿರದ ಸಂಬಂಧಿಕರು ನಾನು ಸಹಾಯ ಮಾಡುತ್ತೇನೆ ಎಂದು ಮುಂದೆ ಬಂದು ಕೊನೆ ಕ್ಷಣದಲ್ಲಿ ಹಿಂಜರಿಯುವ ಸಾಧ್ಯತೆ ಇದೆ. ಯಾರನ್ನು ನಂಬಿ ಮಕರ ರಾಶಿಯವರು ಕೆಲಸ ಮಾಡಬಾರದು, ತಮ್ಮ ಶಕ್ತಿಯಿಂದ ಕೆಲಸ ಕಾರ್ಯವನ್ನು ಪ್ರಾರಂಭಿಸಬೇಕು.

ಮಕರ ರಾಶಿಯ ಭೂಮಿ, ಹೈನುಗಾರಿಕೆ, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರಿಗೆ ಉತ್ತಮ ಲಾಭವಿದೆ ಸಾಮಾನ್ಯವಾದ ಸಣ್ಣಪುಟ್ಟ ಗೊಂದಲ ಬರಬಹುದು. ಮಕರ ರಾಶಿಯವರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ, ನಿರ್ಲಕ್ಷ ಮಾಡದೆ ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು. ಮಕರ ರಾಶಿಯವರ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿದ್ದರೆ ಆಗಸ್ಟ್ ತಿಂಗಳಿನಲ್ಲಿ ಜಯ ಸಿಗುತ್ತದೆ. ಮಕರ ರಾಶಿಯವರಿಗೆ ಶತ್ರು ಧಾಳಿ ಇರುತ್ತದೆ ಎಲ್ಲರಿಗೂ ಸಾಮಾನ್ಯವಾಗಿ ಶತ್ರುಗಳಿರುತ್ತಾರೆ ಕೆಲವರು ಮುಂದೆ ಬಂದರೆ ಇನ್ನೂ ಕೆಲವರು ಹಿಂದಿನಿಂದಲೆ ಹೊಂಚು ಹಾಕುತ್ತಾರೆ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಮಕರ ರಾಶಿಯವರ ದಾಂಪತ್ಯದಲ್ಲಿ ಕೋಪ ಹೆಚ್ಚಾಗಬಹುದು ಹೀಗಾಗಿ ಇಬ್ಬರಲ್ಲಿ ಒಬ್ಬರು ಹೊಂದಿಕೊಂಡು ಹೋಗಬೇಕು. ಅನಗತ್ಯ ತಿರುಗಾಟವಾಗುತ್ತದೆ ಇದರಿಂದ ಖರ್ಚು ಹೆಚ್ಚುತ್ತದೆ. ಮಕರ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ರವಿ ಶುಕ್ರರಿಂದ ಒಳ್ಳೆಯ ಫಲವಿದೆ. ಮಕರ ರಾಶಿಯವರು ತಂದೆಯ ಆರೋಗ್ಯದಲ್ಲಿ ಜಾಗರೂಕರಾಗಿರಬೇಕು. ಮಕರ ರಾಶಿಯವರು ಯಾವುದೇ ಕೆಲಸ ಮಾಡಬೇಕಾದರೂ ಇನ್ನೇನು ಮುಗಿಯುತ್ತಿದೆ ಎನ್ನುವಾಗ ಹಾಳಾಗಿಬಿಡುತ್ತದೆ ಹೀಗಾಗಿ ನೀಟಾಗಿ ನೋಡಿ ಯೋಚಿಸಿ ಕೆಲಸ ಮಾಡುವುದು ಒಳ್ಳೆಯದು.

ಮಕರ ರಾಶಿಯ ಉದ್ಯೋಗ ಇಲ್ಲದವರಿಗೆ ಆಗಸ್ಟ್ ತಿಂಗಳಲ್ಲಿ ಉದ್ಯೋಗ ಸಿಗುತ್ತದೆ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಸಿಗುತ್ತದೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗೌರವ ಸಿಗುತ್ತದೆ. ಈ ತಿಂಗಳು ಮಕರ ರಾಶಿಯವರು ಬಹಳ ಜನರಿಗೆ ಸಹಾಯ ಮಾಡುತ್ತಾರೆ. ಮಕರ ರಾಶಿಯವರು ಆದಾಯ ಬಂದ ತಕ್ಷಣ ಖರ್ಚು ಮಾಡಬಾರದು. ಎಂದೋ ಮಾಡಿದ ಸಹಾಯವನ್ನು ನೆನೆದು ಇಂದು ಸಹಾಯಕ್ಕಾಗಿ ಬರಬಹುದು. ಮಕರ ರಾಶಿಯವರಿಗೆ ಸಿಕ್ಸ್ ಸೆನ್ಸ್ ಉತ್ತಮವಾಗಿ ಕೆಲಸ ಮಾಡುತ್ತದೆ ಮಾಡುವ ಕೆಲಸ ಇದು ಯಶಸ್ವಿಯಾಗುತ್ತದೆ ಮಾಡು ಅಥವಾ ಇದು ಆಗುವುದಿಲ್ಲ ಎಂಬ ಸೂಚನೆ ಸಿಗುತ್ತದೆ. ಮಕರ ರಾಶಿಯವರು ತಮ್ಮ ಸಿಕ್ತ ಸೆನ್ಸ್ ಅನ್ನು ನಂಬಬಹುದು ಈ ಮಾಹಿತಿಯನ್ನು ಮಕರ ರಾಶಿಯಲ್ಲಿ ಜನಿಸಿದವರಿಗೆ ಖಂಡಿತ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: