ಏಳನೆ ರಾಶಿ ತುಲಾ ರಾಶಿ ಈ ರಾಶಿಯ ಅಧಿಪತಿ ಶುಕ್ರ. ತುಲಾ ರಾಶಿಗೆ ಅದೃಷ್ಟ ತರುವ ಬಣ್ಣಗಳು ಯಾವುವು ಯಾವ ಬಣ್ಣದಿಂದ ಯಾವ ಪ್ರಯೋಜನ ಹಾಗೂ ಯಾವ ಬಣ್ಣವನ್ನು ಬಳಸುವುದರಿಂದ ಅಶುಭ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ನೀಲಿ ಮತ್ತು ಬಿಳಿ ಬಣ್ಣವು ತುಲಾ ರಾಶಿಯವರಿಗೆ ಮಂಗಳಕರವೆಂದು ಹೇಳಲಾಗುತ್ತದೆ. ನೀಲಿ ಬಣ್ಣ ಶಾಂತಿ ಹಾಗೂ ವಿಶ್ವಾಸವನ್ನು ಸೂಚಿಸುತ್ತದೆ. ಸ್ವಚ್ಛ ಬಿಳಿ ಹಾಗೂ ತಿಳಿ ಬಿಳಿ ಬಣ್ಣ ಸೇರಿದಂತೆ ನೀಲಿ ಬಣ್ಣಗಳು ತುಲಾ ರಾಶಿಯವರಿಗೆ ಒಳ್ಳೆಯ ಬಣ್ಣವಾಗಿದೆ ಅದೃಷ್ಟವನ್ನು ಕೊಡುತ್ತದೆ ಇದರ ಶ್ರೇಯ ಶುಕ್ರನಿಗೆ ಸೇರುತ್ತದೆ. ಪ್ರತಿ ಶುಕ್ರವಾರದಂದು ತುಲಾ ರಾಶಿಯಲ್ಲಿ ಜನಿಸಿದವರು ನೀಲಿ ಹಾಗೂ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ತುಲಾ ರಾಶಿಯವರ ಅದೃಷ್ಟದ ಕಲ್ಲು ವಜ್ರವಾಗಿದೆ ಉಂಗುರ ಮಾಡಿಸಬೇಕಾದರೆ ಈ ವಿಷಯ ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಏಕೆಂದರೆ ಅದು ಬಿಳಿ ಹಾಗೂ ನೀಲಿ ಬಣ್ಣದಲ್ಲಿರುತ್ತದೆ. ತುಲಾ ರಾಶಿಯವರ ಜಾತಕದಲ್ಲಿ ಶುಕ್ರ ದೋಷದಿಂದ ಕೂಡಿದರೆ ವಜ್ರವನ್ನು ಧರಿಸಬೇಕು. ಪ್ರತಿ ಶುಕ್ರವಾರದಂದು ಬೆಳ್ಳಿ ಹಾಗೂ ಪ್ಲಾಟಿನಮ್ ಉಂಗುರದಲ್ಲಿ ವಜ್ರವನ್ನು ಧರಿಸಿ ಶುಕ್ರನನ್ನು ಧ್ಯಾನಿಸಬೇಕು ಆನಂತರ ಮಧ್ಯದ ಬೆರಳಿಗೆ ಉಂಗುರವನ್ನು ಧರಿಸಬೇಕು ಇದರಿಂದ ಎಲ್ಲಾ ಕೆಲಸಗಳಿಗೆ ಶುಭ ಕೊಡುತ್ತದೆ.
ನೀಲಿ ಬಣ್ಣ ಆಕಾಶವನ್ನು ಪ್ರತಿನಿಧಿಸುತ್ತದೆ ಶಾಂತಿಯನ್ನು ಸೂಚಿಸುತ್ತದೆ ತುಲಾ ರಾಶಿಯವರು ಸ್ವಭಾವತಃ ಶಾಂತಿಪ್ರಿಯರು ಶುಭ ಸಂದರ್ಭಗಳಲ್ಲಿ ನೀಲಿ ಬಣ್ಣವನ್ನು ಧರಿಸಬಹುದು. ಯಾವುದಾದರೂ ಒಳ್ಳೆಯ ಕೆಲಸಕ್ಕೆ, ಇಂಟರ್ ವ್ಯೂಗೆ ಹೋಗುವುದಾದರೆ ನೀಲಿ ಬಣ್ಣದ ಬಟ್ಟೆಯನ್ನು ಧರಿಸುವುದು ಒಳ್ಳೆಯದು. ಮನೆಯ ಗೋಡೆಗೆ ನೀಲಿ ಬಣ್ಣದ ಪೇಂಟ್ ಮಾಡಿಸುವುದು ಒಳ್ಳೆಯದು ಹೆಚ್ಚು ನೀಲಿ ಬಣ್ಣವನ್ನು ಬಳಸುವುದರಿಂದ ಯಶಸ್ಸನ್ನು ಕೊಡುತ್ತದೆ. ಹಳದಿ ಬಣ್ಣವನ್ನು ಹೊಸ ಬೆಳಕಿನ ಸಂಕೇತ ಎನ್ನುತ್ತಾರೆ ತುಲಾ ರಾಶಿಯಲ್ಲಿ ಜನಿಸಿದವರು ಹಳದಿ ಬಣ್ಣವನ್ನು ಬಳಸುವುದರಿಂದ ಒಳ್ಳೆಯದಾಗುತ್ತದೆ, ಈ ಬಣ್ಣ ಕತ್ತಲೆಯಿಂದ ಜಯ ಪಡೆಯಲು ಬೆಳಕಿನತ್ತ ಸಾಗಲು ಸ್ಫೂರ್ತಿ ಕೊಡುತ್ತದೆ ತುಲಾ ರಾಶಿಯವರು ಹಳದಿ ಬಣ್ಣವನ್ನು ಬಳಸಬಹುದು. ಈ ರಾಶಿಯವರು ಕಿತ್ತಳೆ ಬಣ್ಣವನ್ನು ಬಳಸಬೇಕು ಈ ಬಣ್ಣ ಸೂರ್ಯನಂತೆ ಪ್ರಕಾಶಮಾನವಾಗಿದೆ ಹೊಸ ಭರವಸೆಯನ್ನು ಕೊಡುತ್ತದೆ. ತುಲಾ ರಾಶಿಯವರು ಹಸಿರು ಬಣ್ಣವನ್ನು ಬಳಸುವುದು ಒಳ್ಳೆಯದು ಹಸಿರು ಪ್ರಕೃತಿಯೊಂದಿಗೆ ಸಂಬಂಧವಿದ್ದು ತುಲಾ ರಾಶಿಯವರು ಪ್ರಕೃತಿ ಪ್ರೇಮಿ ಎನ್ನುತ್ತಾರೆ ಈ ಬಣ್ಣವು ಬಹಳ ಮಂಗಳಕರವಾಗಿದೆ. ತುಲಾ ರಾಶಿಯವರು ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದರೆ ಶುಭವಾಗುತ್ತದೆ ಈ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಮಾಡಿದ ಒಳ್ಳೆಯ ಕೆಲಸ ಫಲ ಕೊಡುತ್ತದೆ.
ಗುಲಾಬಿ ಬಣ್ಣ ತುಲಾ ರಾಶಿಯ ಅಧಿಪತಿ ಶುಕ್ರನನ್ನು ಪ್ರತಿನಿಧಿಸುತ್ತದೆ ಹಾಗೂ ಮನುಷ್ಯನ ಆಂತರಿಕ ಸ್ವಭಾವವನ್ನು ಸೂಚಿಸುತ್ತದೆ. ಇದು ಪ್ರೀತಿ ಹಾಗೂ ನಿಷ್ಠೆಯ ಸಂಕೇತವಾಗಿದೆ ಗುಲಾಬಿ ಬಣ್ಣ ಪ್ರೀತಿ ಹಾಗೂ ಕಾಳಜಿಯ ಸಂಕೇತವಾಗಿದೆ. ಸಂತೋಷವನ್ನು ಕಾಪಾಡಿಕೊಳ್ಳಲು ಹಾಗೂ ಪ್ರೀತಿಯಿಂದ ಇರಲು ಈ ರಾಶಿಯವರು ಗುಲಾಬಿ ಬಣ್ಣವನ್ನು ಬಳಸಬಹುದು. ತುಲಾ ರಾಶಿಯಲ್ಲಿ ಜನಿಸಿದವರು ಕೆಂಪು ಕಪ್ಪು ಹಾಗೂ ಕಂದು ಬಣ್ಣವನ್ನು ಬಳಸಬಾರದು ಈ ಬಣ್ಣಗಳು ತುಲಾ ರಾಶಿಯವರಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಂಪು ಆಕ್ರಮಣ ಶೀಲತೆ ಆಗಿರುತ್ತದೆ ಅಪಾಯ ಹಾಗೂ ಉದ್ವೇಗದ ಬಣ್ಣವಾಗಿರುತ್ತದೆ, ತುಲಾ ರಾಶಿಯವರು ಶಾಂತ ಸ್ವರೂಪದವರಾಗಿರುವುದರಿಂದ ಕೆಂಪು ಬಣ್ಣ ಅವರಿಗೆ ಹೊಂದಿಕೆಯಾಗುವುದಿಲ್ಲ. ಕಂದು ಬಣ್ಣ ಒಂಟಿತನದ ಭಾವನೆಯನ್ನು ಸೂಚಿಸುತ್ತದೆ ಪ್ರತ್ಯೇಕತೆಯನ್ನು ಉತ್ತೇಜಿಸುತ್ತದೆ ತುಲಾ ರಾಶಿಯವರು ಒಳ್ಳೆಯ ಕೆಲಸ ಮಾಡಲು ಈ ಬಣ್ಣ ಬಿಡುವುದಿಲ್ಲ. ಕಪ್ಪು ಬಣ್ಣ ನಿಗೂಢ ಬಣ್ಣವಾಗಿದೆ. ಕಪ್ಪು ಬಣ್ಣ ಶಾಂತಿ ಹಾಗೂ ಪ್ರೀತಿಗೆ ವಿರುದ್ಧವಾಗಿದೆ. ಹೀಗೆ ತುಲಾ ರಾಶಿಯವರಿಗೆ ಸರಿ ಹೊಂದುವ ಬಣ್ಣಗಳನ್ನು ಬಳಸುವುದು ಒಳ್ಳೆಯದು. ಈ ಮಾಹಿತಿಯನ್ನು ತುಲಾ ರಾಶಿಯವರಿಗೆ ತಿಳಿಸಿ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519