WhatsApp Group Join Now
Telegram Group Join Now

12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವ್ಯಕ್ತಿತ್ವ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ದ್ವಾದಶ ರಾಶಿಗಳಲ್ಲಿ ತುಲಾ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ ಈ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವ, ಭವಿಷ್ಯ, ಎಚ್ಚರಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ತಕ್ಕಡಿಯು ತುಲಾ ರಾಶಿಯ ಲಾಂಛನವಾಗಿದೆ, ಈ ರಾಶಿಯ ಅಧಿಪತಿ ಶುಕ್ರನಾಗಿದ್ದಾನೆ, ವಾಯುತತ್ವದ ರಾಶಿ, ಈ ರಾಶಿಯ ರತ್ನ ವಜ್ರವಾಗಿದೆ, ತುಲಾ ರಾಶಿಯ ಬಣ್ಣ ಬಿಳಿ ಹಾಗೂ ನೀಲಿ ಆಗಿದೆ, ತುಲಾ ರಾಶಿಯ ಅದೃಷ್ಟದ ದಿನ ಶುಕ್ರವಾರ ಹಾಗೂ ಸೋಮವಾರ, ಈ ರಾಶಿಯ ಅದೃಷ್ಟದ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ, 4,6,7,9, ಅದೃಷ್ಟದ ದಿನಾಂಕ 6,15, 24. ಇನ್ನು ತುಲಾ ರಾಶಿಗೆ ಮಿತ್ರ ರಾಶಿಗಳು ಮಿಥುನ, ಕಟಕ, ಕುಂಭ ರಾಶಿಗಳಾಗಿವೆ, ಸಿಂಹ ರಾಶಿ ಶತ್ರು ರಾಶಿ ಆಗಿರುತ್ತದೆ. ತುಲಾ ರಾಶಿಯವರು ನಿಪುಣರು ಅಧ್ಯಯನಶೀಲರು ಎಂತಹ ಅವ್ಯವಸ್ಥಿತ ಪರಿಸ್ಥಿತಿಯನ್ನು ಸಹ ಇವರು ಸುಧಾರಣೆ ಮಾಡುತ್ತಾರೆ. ತುಲಾ ರಾಶಿಯವರು ಎಲ್ಲಿಯೆ ಇರಲಿ ಅವರು ಜವಾಬ್ದಾರಿ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಾರೆ. ಇವರ ಮಾತಿನಲ್ಲಿ ಆಕರ್ಷಣೆ ಇರುತ್ತದೆ ಮೃದುತ್ವ ಇರುತ್ತದೆ ಇವರು ದೃಢ ಸಂಕಲ್ಪ ಮಾಡುತ್ತಾರೆ. ಜೂನ್ ತಿಂಗಳಿನಲ್ಲಿ ತುಲಾ ರಾಶಿಯವರ ವ್ಯವಹಾರ ವ್ಯಾಪಾರ ಅಥವಾ ಯಾವುದೆ ನಿಂತು ಹೋಗಿರುವ ಕೆಲಸ, ಮನೆ ನಿರ್ಮಾಣ ಇಂತಹ ಕೆಲಸಗಳಿಗೆ ಜೂನ್ ತಿಂಗಳಲ್ಲಿ ಮರುಚಾಲನೆ ದೊರೆಯುತ್ತದೆ ಹೆಚ್ಚು ಓಡಾಟವಾಗುತ್ತದೆ, ಖರ್ಚು ಹೆಚ್ಚಾಗಬಹುದು.

ತುಲಾ ರಾಶಿಯವರು ಸುಮ್ಮನೆ ಕೂರುವುದಿಲ್ಲ ಏನಾದರೂ ಒಂದು ಕೆಲಸದಲ್ಲಿ ತೊಡಗಿಕೊಳ್ಳಲು ಇಷ್ಟಪಡುತ್ತಾರೆ. ತುಲಾ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಅವರು ಮಾಡುವ ಕೆಲಸದಲ್ಲಿ ಒತ್ತಡ ಹೆಚ್ಚಾಗಿ ಮನಸ್ಸಿಗೆ ಬೇಸರವೆನಿಸುತ್ತದೆ ತುಲಾ ರಾಶಿಯವರು ಕೆಲಸವನ್ನು ಪ್ರೀತಿಸಬೇಕು ಆಗ ಬೇಸರವೆನಿಸುವುದಿಲ್ಲ. ತುಲಾ ರಾಶಿಯ ಪತಿ-ಪತ್ನಿಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪ ಬರುತ್ತದೆ ಅದು ತಾತ್ಕಾಲಿಕವಾಗಿರುತ್ತದೆ ಆದರೆ ಅದನ್ನು ಶಾಶ್ವತವಾಗುವಂತೆ ಮಾಡಿಕೊಳ್ಳಬಾರದು. ತುಲಾ ರಾಶಿಯವರು ಜೂನ್ ತಿಂಗಳಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು, ಆಹಾರ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ತುಲಾ ರಾಶಿಯವರು ಜೂನ್ ತಿಂಗಳಿನಲ್ಲಿ ಮನೆ ಕಟ್ಟುತ್ತಿದ್ದರೆ ಅದು ಪೂರ್ಣವಾಗುತ್ತದೆ. ತುಲಾ ರಾಶಿಯವರಿಗೆ ಈ ತಿಂಗಳಲ್ಲಿ ಬೇರೆ ಆದಾಯದ ಮೂಲಗಳು ಕಂಡುಬರುತ್ತದೆ. ಬೆಲೆಬಾಳುವ ವಸ್ತುಗಳನ್ನು ತುಲಾ ರಾಶಿಯವರು ಬೇರೆಯವರಿಗೆ ಉಡುಗೊರೆಯಾಗಿ ಕೊಡಬಹುದು ಅಥವಾ ಬೇರೆಯವರು ಇವರಿಗೆ ಕೊಡುವ ಸಾಧ್ಯತೆ ಇದೆ. ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಜೂನ್ ತಿಂಗಳು ಒಳ್ಳೆಯ ಸಮಯವಾಗಿದೆ, ಮೊಬೈಲ್ ಬಳಕೆ ಕಡಿಮೆ ಮಾಡಿ ಹೆಚ್ಚಿನ ಸಮಯ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು, ಪರಿಶ್ರಮ ಪಟ್ಟರೆ ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗುತ್ತದೆ.

ತುಲಾ ರಾಶಿಯ ಪ್ರೇಮಿಗಳಿಗೆ ಜೂನ್ ತಿಂಗಳು ಉತ್ತಮ ಸಮಯವಾಗಿದೆ ಇಬ್ಬರ ನಡುವೆ ಹೊಂದಾಣಿಕೆ ಹೆಚ್ಚಾಗುತ್ತದೆ. ತುಲಾ ರಾಶಿಯವರಿಗೆ ಈ ತಿಂಗಳಲ್ಲಿ ತಂದೆ ಹಾಗೂ ಸೋದರ ಮಾವನಿಂದ ಧನ ಲಾಭವಾಗುತ್ತದೆ ಅಲ್ಲದೆ ಶತ್ರುಗಳನ್ನು ಸೋಲಿಸಿ ಗೌರವಕ್ಕೆ ಪಾತ್ರರಾಗುತ್ತಾರೆ. ಸರ್ಕಾರಿ ಅಥವಾ ಅರೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತುಲಾ ರಾಶಿಯವರಿಗೆ ಕೆಲಸದಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಖಾಸಗಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗಬಹುದು ಒಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ತುಲಾ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನಮಾನ ಸಿಗುತ್ತದೆ, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳುತ್ತಾರೆ. ತುಲಾ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗುತ್ತದೆ. ತುಲಾ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ತುಲಾ ರಾಶಿಯವರು ಕುಲದೇವರ ಆರಾಧನೆ ಮಾಡಬೇಕು ಹಾಗೂ ಗಣಪತಿಯ ಆರಾಧನೆ ಮಾಡಬೇಕಾಗುತ್ತದೆ ಇದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತುಲಾ ರಾಶಿಯವರಿಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: