WhatsApp Group Join Now
Telegram Group Join Now

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕನ್ಯಾ ರಾಶಿಯವರ ಜೂನ್ ತಿಂಗಳ ಮಾಸ  ಭವಿಷ್ಯವನ್ನು ತಿಳಿಯೋಣ.

ಕನ್ಯಾ ರಾಶಿಯವರ ಲಾಂಛನ ಹೆಸರಿಗೆ ತಕ್ಕಂತೆ ಒಂದು ಕನ್ಯೆಯ ಚಿಹ್ನೆ. ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿ ಭೂಮಿ ತತ್ವದ ರಾಶಿ. ಸ್ತ್ರೀ ಲಿಂಗದ ರಾಶಿ ಹಾಗೂ ಸೌಮ್ಯ ಸ್ವಭಾವದ ರಾಶಿ. ಈ ರಾಶಿಯ ರತ್ನ ಪಚ್ಚೆ. ಕನ್ಯಾ ರಾಶಿಯ ಅದೃಷ್ಟದ ಬಣ್ಣ ಹಸಿರು ಹಾಗೂ ಹಳದಿ. ಅದೃಷ್ಟದ ದಿನ ಬುಧವಾರ ಹಾಗೂ ಸೋಮವಾರ. ಅದೃಷ್ಟದ ದೇವರು ಗಣೇಶ. ಅದೃಷ್ಟದ ಸಂಖ್ಯೆ 2, 3, 5, 6, 7. ಅದೃಷ್ಟದ ದಿನಾಂಕಗಳು 5, 14, 23. ಮಿತ್ರ ರಾಶಿಗಳು ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ. ಶತ್ರು ರಾಶಿ ಕಟಕ ರಾಶಿ.

ಯಾವುದೇ ರೀತಿಯ ಕಷ್ಟಗಳು ಸಮಸ್ಯೆಗಳು ತೊಂದರೆಗಳು ಇಲ್ಲದಂತೆ ನೆಮ್ಮದಿಯ ಜೀವನ ನಡೆಸುವ ಇರಾದೆ ಕನ್ಯಾ ರಾಶಿಯವರಿಗೆ ಇರುತ್ತದೆ. ಎಲ್ಲಾ ರೀತಿಯ ಕಷ್ಟಗಳನ್ನು ನೋಡಿ ಅನುಭವಿಸಿ ಒಂದು ಅಂತಕ್ಕೆ ಬಂದು ನಿಲ್ಲುವ ಸಾಮರ್ಥ್ಯ ಕನ್ಯಾ ರಾಶಿಯ ಜನರಿಗೆ ಇರುತ್ತದೆ. ಕನ್ಯಾ ರಾಶಿಯ ಜನರು ಚುರುಕಾಗಿ ಇರುವವರು ಅದರ ಜೊತೆಗೆ ವ್ಯಾಪಾರ ವ್ಯವಹಾರದ ತಿಳುವಳಿಕೆ ಈ ರಾಶಿಯವರಿಗೆ ಚೆನ್ನಾಗಿ ಇರುತ್ತದೆ. ಈ ರಾಶಿಯ ಜನರು ಕೈಗೊಂಡ ಎಲ್ಲಾ ಕಾರ್ಯಗಳಲ್ಲಿ ತಕ್ಕಮಟ್ಟಿಗೆ ಯಶಸ್ಸು ಸಿಗುತ್ತದೆ. ಎಲ್ಲಾ ಕೆಲಸಗಳನ್ನು ಮಾಡಲು ಅತಿ ಮುಖ್ಯವಾಗಿ ಬೇಕಾಗಿರುವುದು ಪ್ರಯತ್ನ ಎಷ್ಟೇ. ತೊಂದರೆಗಳು ಎದುರಾದರೂ ಕನ್ಯಾ ರಾಶಿಯವರು ಅವರ ಕಡೆಯಿಂದ ಶೇಕಡ 100ರಷ್ಟು ಪ್ರಯತ್ನವನ್ನು ಹಾಕುವುದರಿಂದ ಗೆಲುವು ಸಾಧಿಸಬಹುದು.

ಈ ರಾಶಿಯವರ ವಿಶೇಷ ಗುಣ ಎಂದರೆ ಮಾತಿನಲ್ಲೇ ಜಟಿಲವಾದ ಸಮಸ್ಯೆಗಳನ್ನು ಬೇಗ ಪರಿಹರಿಸುವ ಸಾಮರ್ಥ್ಯ ಇವರಿಗೆ ಇರುತ್ತದೆ. ಕನ್ಯಾ ರಾಶಿಯವರು ಸಮಯ ಹಾಗೂ ಸಂದರ್ಭವನ್ನು ಪರಿಶೀಲನೆ ಮಾಡಿಕೊಂಡು ಕೆಲಸಗಳನ್ನು ಮಾಡಬೇಕು.

ತಾಳ್ಮೆ ಹಾಗೂ ಬುದ್ಧಿವಂತಿಕೆ ಇದ್ದರೆ ಅಂದುಕೊಂಡಿರುವ ಕಾರ್ಯ ಬೇಗ ನೆರವೇರುತ್ತದೆ ಮತ್ತು ಅಭಿವೃದ್ಧಿ ಸಿಗುತ್ತದೆ. ಈ ತಿಂಗಳಿನಲ್ಲಿ ಕನ್ಯಾ ರಾಶಿಯವರು ಬೇರೆಯವರೊಂದಿಗೆ ವಾದ ವಿವಾದಗಳನ್ನು ಮಾಡುವುದು ಅಷ್ಟೇನೂ ಶ್ರೇಯಸ್ಸು ತರುವುದಿಲ್ಲ. ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ.

ಕನ್ಯಾ ರಾಶಿಯವರು ಅವರು ಮಾಡುವ ಕೆಲಸದ ಕಡೆ ಲಕ್ಷ್ಯ ಕೊಟ್ಟರೆ ಸಾಕು. ಅನಾವಶ್ಯಕವಾಗಿ ಬೇರೆಯವರ ಸಮಸ್ಯೆಗಳ ಮಧ್ಯೆ ಹೋಗುವುದು ತಪ್ಪು ಅದರಿಂದ ಕನ್ಯಾ ರಾಶಿಯವರಿಗೆ ಕೆಡುಕಾಗುವ ಸಾಧ್ಯತೆ ಇದೆ. ನಿಮ್ಮ ನಿರ್ಧಾರಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಸರಿಯಲ್ಲ ಅದರಿಂದ, ಈ ರಾಶಿಯವರನ್ನು ಬೇರೆಯವರು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ.

ಬೇರೆಯವರ ಮೇಲೆ ಡಿಪೆಂಡ್ ಆಗುವುದು ಕೂಡ ತಪ್ಪು ಅದರಿಂದ, ಮುಂದೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ತಿಂಗಳಿನಲ್ಲಿ ಕನ್ಯಾ ರಾಶಿಯವರು ಯಾವುದೇ ಕಾರಣಕ್ಕೂ ವಾಸ ಮಾಡುವ ಸ್ಥಳವನ್ನು ಬದಲಾವಣೆ ಮಾಡಬಾರದು. ಅನಿವಾರ್ಯತೆ ಇದ್ದರೆ ಮಾತ್ರ ಸ್ಥಳ ಬದಲಾವಣೆ ಮಾಡಬಹುದು. ನೂತನ ವಾಹನವನ್ನು ಖರೀದಿ ಮಾಡುವ ಯೋಗ ಈ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಇರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವ ಎಲ್ಲಾ ಸಾಧ್ಯತೆ ಇದೆ. ನೂತನ ಮನೆ ಹಾಗೂ ಜಮೀನಿನ ಖರೀದಿ ಮಾಡುವ ಯೋಗ ಕೂಡ ಕನ್ಯಾ ರಾಶಿಯವರಿಗೆ ಈ ತಿಂಗಳಿನಲ್ಲಿ ಇದೆ.

ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗೂ ಬದಲಾವಣೆಯನ್ನು ಕನ್ಯಾ ರಾಶಿಯವರು ಈ ತಿಂಗಳಿನಲ್ಲಿ ಕಾಣಬಹುದು. ಈ ರಾಶಿಯವರು ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಮಾಡಿದರು ಅದರಲ್ಲಿ ಲಾಭ ಗಳಿಕೆ ಮಾಡುವ ಸಾಧ್ಯತೆ ಇದೆ. ಆದರೆ, ಈ ರಾಶಿಯ ವ್ಯಕ್ತಿಗಳು ಜಂಟಿ ವ್ಯವಹಾರಗಳಿಂದ ದೂರ ಉಳಿಯುವುದು ಉತ್ತಮ.

ನೂತನ ವ್ಯಾಪಾರ ವ್ಯವಹಾರ ಮಾಡಲು ಕನ್ಯಾ ರಾಶಿಯವರಿಗೆ ಈ ತಿಂಗಳು ಸೂಕ್ತವಾಗಿಲ್ಲ. ಹೊಸ ಹೂಡಿಕೆ ಮಾಡುವುದು ಅಥವಾ ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಕೊಡುವುದು ಈ ಕೆಲಸಗಳನ್ನು ಕನ್ಯಾ ರಾಶಿಯವರು ಈ ತಿಂಗಳು ಮಾಡದೆ ಇದ್ದರೆ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ರೀತಿಯ ದುಡುಕು ನಿರ್ಧಾರಗಳನ್ನು ಮಾಡಬಾರದು. ರಾಜಕಾರಣಿಗಳಿಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವ ಜನರಿಗೆ, ಡಾಕ್ಟರ್, ಲಾಯರ್, ಇಂಜಿನಿಯರ್’ಗಳಿಗೆ ಈ ರೀತಿಯ ಜನರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಸರ್ಕಾರಿ ಕೆಲಸ ಮಾಡುವ ಕನ್ಯಾ ರಾಶಿಯ ಜನರಿಗೆ ಒಳ್ಳೆಯ ಸ್ಥಾನಮಾನ ದೊರಕುತ್ತದೆ. ಮಾರಾಟ ಪ್ರತಿನಿಧಿಗಳು ಹಾಗೂ ಭೂ ವ್ಯವಹಾರ ಮಾಡುವ ಕನ್ಯಾ ರಾಶಿಯ ಜನರಿಗೆ ಈ ತಿಂಗಳಿನಲ್ಲಿ ಒಳ್ಳೆಯ ಫಲ ಸಿಗುತ್ತದೆ. ಕನ್ಯಾ ರಾಶಿಯ ಸ್ತ್ರೀಯರು ಮಾಡುವ ಯಾವುದೇ ಕೆಲಸಗಳಲ್ಲಿ ಅವರು ಒಳ್ಳೆಯ ಪ್ರಗತಿ ಕಾಣಬಹುದು.

ಪರಿಹಾರ :-ನಾಗ ಕ್ಷೇತ್ರಗಳಿಗೆ ಕನ್ಯಾ ರಾಶಿಯವರು ಭೇಟಿ ಮಾಡಬೇಕು. ನಾಗದೇವರ ಪೂಜೆ ಮಾಡಬೇಕು, ನಾಗದೇವರ ಕಟ್ಟೆಗೆ ನಮಸ್ಕಾರ ಮಾಡಬೇಕು. ಕುಲದೇವರ ಆರಾಧನೆಯನ್ನು ಮಾಡಬೇಕು. ಪಶು – ಪಕ್ಷಿ ಪ್ರಾಣಿಗಳಿಗೆ ಆಹಾರ ಹಾಗೂ ನೀರನ್ನು ನೀಡುವುದು.ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: