WhatsApp Group Join Now
Telegram Group Join Now

ಮನೆಗೆ ಬಡತನ ಬರಲು ಹಲವು ಕಾರಣಗಳಿವೆ ಕೆಲವೊಮ್ಮೆ ಮನೆಯ ಸದಸ್ಯರ ವರ್ತನೆ ವಿಚಾರಗಳಿಂದಲೆ ಆ ಮನೆಗೆ ಬಡತನ ಪ್ರಾರಂಭವಾಗುತ್ತದೆ ಹಾಗಾದರೆ ಮನೆಯ ಸದಸ್ಯರು ಯಾವೆಲ್ಲ ಕೆಲಸಗಳನ್ನು ಮಾಡಬಾರದು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮುರಿದ ಬಾಚಣಿಕೆಯಿಂದ ಮಹಿಳೆಯರು ತಲೆ ಬಾಚುವುದರಿಂದ ಮನೆಯಲ್ಲಿ ಬಡತನ ಬರುತ್ತದೆ, ಮಹಿಳೆಯರು ಅಡುಗೆ ಮಾಡುವಾಗ ಪಾತ್ರೆ ಶಬ್ಧವಾಗುವುದು ಸಹಜ ಆದರೆ ನಾಜೂಕಿನಿಂದ ಅಡುಗೆ ಮಾಡಬೇಕು ಪಾತ್ರೆ ಶಬ್ಧ ಕಡಿಮೆ ಮಾಡಬೇಕು ಅತಿಯಾದ ಪಾತ್ರೆ ಶಬ್ಧದಿಂದ ಬಡತನ ಕಾಣಿಸುತ್ತದೆ. ಮನೆಯಲ್ಲಿರುವ ಗಾಜಿನ ವಸ್ತುಗಳು ಒಡೆದರೆ ಅದನ್ನು ಮನೆಯ ಹೊರಗೆ ಹಾಕಬೇಕು ಮನೆಯೊಳಗೆ ಇಟ್ಟುಕೊಳ್ಳುವುದರಿಂದಲೂ ಬಡತನ ಬರುತ್ತದೆ. ಹಿರಿಯರು ಬೆಳಿಗ್ಗೆ ಬೇಗ ಏಳಬೇಕು ಎಂದು ಹೇಳುತ್ತಾರೆ ಮನೆಯ ಸದಸ್ಯರು ಸೂರ್ಯೋದಯದ ನಂತರವೂ ಮಲಗಿಕೊಂಡಿದ್ದರೆ ಆ ಮನೆಗೆ ಬಡತನ ಬರುತ್ತದೆ. ಮನೆಯ ಬಾತ್ರೂಮ್ ಬಾಗಿಲನ್ನು ತೆಗೆದಿಡಬಾರದು ಯಾವಾಗಲೂ ಬಾತ್ರೂಮ್ ಬಾಗಿಲನ್ನು ತೆಗೆದಿದ್ದರೆ ಆ ಮನೆಗೆ ಬಡತನ ಬರುತ್ತದೆ.

ಮನೆಯಲ್ಲಿ ಯಾರೂ ಕೂಡ ಯಾವುದೆ ಕಾರಣಕ್ಕೂ ಕತ್ತಲೆಯಲ್ಲಿ ಊಟ ಮಾಡಬಾರದು ಸಣ್ಣ ಬೆಳಕನ್ನಾದರೂ ಇಟ್ಟುಕೊಂಡೆ ಊಟ ಮಾಡಬೇಕು ಹಾಗೂ ಮನೆಯ ಬಾಗಿಲ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದಾಗಲಿ ನಿಂತುಕೊಳ್ಳುವುದಾಗಲಿ ಮಾಡಬಾರದು ಇದರಿಂದ ಬಡತನ ಬರುತ್ತದೆ. ಮನೆಯ ಅಂಗಳದಲ್ಲಿ ಸ್ನಾನ ಮಾಡುವುದು ಅಥವಾ ರಂಗೋಲಿ ಹಾಕದೆ ಇರುವುದು ರಾತ್ರಿ ಸಮಯದಲ್ಲಿ ಮನೆಯ ಕಸ ಗುಡಿಸಿ ಹೊರಗೆ ಹಾಕುವುದರಿಂದ ಬಡತನ ಕಾಣಿಸುತ್ತದೆ. ಮನೆಯ ಸದಸ್ಯರು ಯಾವಾಗಲೂ ಹಲ್ಲಿನಿಂದ ಉಗುರು ಕಚ್ಚುತ್ತಿರಬಾರದು. ಮನೆಯ ಸದಸ್ಯರು ಹರಿದಿರುವ ಬಟ್ಟೆಯನ್ನು ಧರಿಸಬಾರದು ಇದರಿಂದ ದಾರಿದ್ರ್ಯ ಕಾಣಿಸಿಕೊಳ್ಳುತ್ತದೆ. ಮಹಿಳೆಯರು ರೊಟ್ಟಿ ಸುಡುವ ಹಂಚನ್ನು ರೊಟ್ಟಿ ಸುಟ್ಟ ನಂತರ ಉಲ್ಟಾ ಇಡಬಾರದು. ಮನೆಯ ಸದಸ್ಯರು ಒಡೆದ ಕನ್ನಡಿಯನ್ನು ಬಳಸಬಾರದು ಅದರಲ್ಲಿ ಮುಖ ನೋಡಿಕೊಳ್ಳಬಾರದು ಹಾಗೂ ಕಾರಣವಿಲ್ಲದೆ ಸುಮ್ಮನೆ ನಗಬಾರದು ಇದರಿಂದ ಮನೆಗೆ ಬಡತನ ಬಡಿಯುತ್ತದೆ. ಮನೆಯಲ್ಲಿ ದೇವರ ಪೂಜೆ ಮಾಡದೆ ಇರುವುದು ದೇವರ ಮುಂದೆ ದೀಪ ಹಚ್ಚದೆ ಇರುವುದರಿಂದ ಆ ಮನೆಗೆ ಒಳ್ಳೆಯದಾಗುವುದಿಲ್ಲ. ಪ್ರತಿದಿನ ಹೊತ್ತು ಮುಳುಗಿದ ಮೇಲೆ ಮನೆಯಲ್ಲಿ ಬೆಳಕಿರಬೇಕು ಮನೆಯನ್ನು ಕತ್ತಲೆಯಲ್ಲಿ ಇಟ್ಟರೆ ಆ ಮನೆಗೆ ಒಳ್ಳೆಯದಲ್ಲ.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಇದ್ದರೆ ಹಾಗೂ ಹಬ್ಬ ಹರಿದಿನಗಳನ್ನು ಆಚರಿಸದಿದ್ದರೆ ಆ ಮನೆಗೆ ಲಕ್ಷ್ಮೀದೇವಿ ಒಲಿಯುವುದಿಲ್ಲ. ಮನೆಯ ಸದಸ್ಯರು ಮಾತನಾಡುವಾಗ ಕೆಟ್ಟ ಪದಗಳನ್ನು ಬಳಸಬಾರದು, ಮನೆಯ ಮುಂದೆ ಉಲ್ಟಾ ಚಪ್ಪಲಿ ಇಡಬಾರದು. ಮನೆಯಲ್ಲಿ ಪ್ರತಿದಿನ ಮಾಂಸಹಾರ ಆಹಾರವನ್ನು ಸೇವಿಸಬಾರದು, ಮನೆಯಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡು ಕಾಲನ್ನು ಅಲುಗಾಡಿಸುತ್ತಿರಬಾರದು ಮಂಗಳವಾರ ಮತ್ತು ಶುಕ್ರವಾರ ಮನೆಯ ಹೆಣ್ಣುಮಕ್ಕಳು ಕಣ್ಣೀರು ಹಾಕಬಾರದು. ಮೊಸರು ಹುಣಸೆ ಹಣ್ಣು ಉಪ್ಪನ್ನು ಮುಸ್ಸಂಜೆ ವೇಳೆಯಲ್ಲಿ ಬೇರೆಯವರಿಗೆ ಕೊಡಬಾರದು ಇದರಿಂದ ಬಡತನ ಬರುತ್ತದೆ ಮನೆಗೆ ಅತಿಥಿಗಳು ಬಂದರೆ ಬೇಸರ ಮಾಡಿಕೊಳ್ಳುವುದು ಅವರಿಗೆ ಅಪಮಾನಿಸಿದರೆ ಒಳ್ಳೆಯದಾಗುವುದಿಲ್ಲ ಮನೆಯಲ್ಲಿ ಎಷ್ಟೆ ಹಣವಿದ್ದರೂ ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಹಣ ಉಳಿತಾಯವಾಗುವುದಿಲ್ಲ. ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜಗಳ ಮಾಡಬಾರದು, ಮನೆಯ ಹಿರಿಯರನ್ನು ಗೌರವಿಸಬೇಕು ಹಾಗೂ ಅವರಿಗೆ ಏಕವಚನದಿಂದ ಮಾತನಾಡಿಸಬಾರದು.

ಮನೆಯಲ್ಲಿ ಗಂಡ ಹೆಂಡತಿ ಸದಾ ಜಗಳವಾಡುತ್ತಿರಬಾರದು, ಮನೆಯ ಹೆಂಗಸರು ಇಬ್ಬರ ಮಧ್ಯ ತಂದು ಇಡುವ ಕೆಲಸವನ್ನು ಮಾಡಬಾರದು. ಮನೆಯ ಮಹಿಳೆಯರು ಸದಾ ಕೋಪದಲ್ಲಿ ಇರಬಾರದು ಹಾಗೆಯೆ ಗಂಡಸರು ಕೆಲಸ ಮಾಡದೆ ಎಣ್ಣೆ ಹೊಡೆಯುತ್ತಾ ಕೂರಬಾರದು. ಮನೆಯ ಹೆಂಗಸರು ಚಾಡಿ ಹೇಳುತ್ತಾ ಹೊರಗೆ ಕೂರಬಾರದು ಈ ಮೇಲಿನ ಎಲ್ಲಾ ಗುಣಗಳನ್ನು ಸುಧಾರಿಸಿಕೊಂಡರೆ ಮನೆಯಲ್ಲಿ ಹಣದ ಉಳಿತಾಯವಾಗುತ್ತದೆ ಹಾಗೂ ಸಂತೋಷದ ಜೀವನವನ್ನು ಅನುಭವಿಸುತ್ತಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: