WhatsApp Group Join Now
Telegram Group Join Now

ಹೆಣ್ಣು ದುರ್ಬಲಳಲ್ಲ ಸಬಲಳು ಆದರೆ ಕೆಲವು ಗಂಡಸರು ಇಂದಿಗೂ ಹೆಣ್ಣನ್ನು ದುರ್ಬಲಳೆಂದೆ ದೂಷಿಸುತ್ತಾರೆ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು ತನ್ನ ಸೌಂದರ್ಯದಿಂದ ಯಾರನ್ನ ಬೇಕಾದರೂ ಗೆಲ್ಲುತ್ತಾಳೆ ಅಂತಹ ಹೆಣ್ಣಿನ ಸೌಂದರ್ಯದಿಂದ ಶುರುವಾದ ಪ್ರೇಮ ಕಥೆಯೊಂದನ್ನು ಈ ಲೇಖನದಲ್ಲಿ ನೋಡೋಣ

ಭಗವಂತ ಹೆಣ್ಣಿಗೆ ಎಲ್ಲಾ ರೀತಿಯ ಗುಣಗಳನ್ನು ದಯಪಾಲಿಸಿದ್ದಾನೆ ಹೆಣ್ಣು ಮನಸ್ಸು ಮಾಡಿದರೆ ಕೇವಲ ತನ್ನ ವಿನಯ ಹಾಗೂ ಸೌಂದರ್ಯದಿಂದ ಭೂಮಿಯನ್ನು ಆಳಬಹುದು ಮತ್ತು ಗೆಲ್ಲಬಹುದು. ಈಗಲೂ ಕೆಲವು ಗಂಡಸರು ಹೆಣ್ಣನ್ನು ದುರ್ಬಲ ಎಂದು ಕರೆಯುತ್ತಾರೆ. ಹೆಣ್ಣು ತನ್ನ ಸೌಂದರ್ಯದಿಂದ ಗಂಡಸನ್ನು ದುರ್ಬಲ ಮಾಡುವಷ್ಟು ಶಕ್ತಿಯನ್ನು ಹೊಂದಿದ್ದಾಳೆ.

ಶತಶತಮಾನದಿಂದಲೂ ಹೆಣ್ಣಿನ ಸೌಂದರ್ಯಕ್ಕೆ ಸೋಲದೆ ಇರುವ ಗಂಡಸಿಲ್ಲ ಒಂದು ವೇಳೆ ಹೆಣ್ಣಿನ ಸೌಂದರ್ಯಕ್ಕೆ ಸೋಲದ ಗಂಡಸನ್ನು ಬೇರೆ ರೀತಿಯಲ್ಲಿಯೆ ನೋಡುತ್ತಾರೆ. ಗಂಡಸು ಎಷ್ಟೆ ಬಲಶಾಲಿಯಾಗಿದ್ದರು ಹೆಣ್ಣಿನ ಸೌಂದರ್ಯದ ಮುಂದೆ ಅವನ ಆಟ ನಡೆಯುವುದಿಲ್ಲ. ಹೆಣ್ಣಿನ ಸೌಂದರ್ಯದಿಂದಾಗಿ ಎಷ್ಟೊ ರಾಜರು ಋಷಿಮುನಿಗಳು ತಮ್ಮ ಸರ್ವಸ್ವವನ್ನೆ ಕಳೆದುಕೊಂಡ ಉದಾಹರಣೆಗಳನ್ನ ಇತಿಹಾಸದಲ್ಲಿ ನೋಡಬಹುದು.

ವಿಶ್ವಾಮಿತ್ರ ಹಾಗೂ ಅಪ್ಸರ ಮೇನಕೆಯ ಪ್ರೇಮ ಕಥೆ ಪುರಾಣದ ಪ್ರಮುಖ ಪ್ರೇಮ ಕಥೆಗಳಲ್ಲಿ ಒಂದಾಗಿದೆ. ವಿಶ್ವಾಮಿತ್ರ ಮಹಾನ್ ಮಹರ್ಷಿ ಆಗಿದ್ದರು, ಅವರು ಹಲವು ಸಮಯದಿಂದ ದಟ್ಟ ಅರಣ್ಯದಲ್ಲಿ ಘೋರ ತಪಸ್ಸನ್ನು ಮಾಡುತ್ತಿದ್ದರು ಅರಣ್ಯದಲ್ಲಿರುವ ಘೋರ ಪ್ರಾಣಿಗಳಿಗೂ ಅವರು ಹೆದರುತ್ತಿರಲಿಲ್ಲ ಅವರು ಮಳೆ, ಗಾಳಿ, ಗುಡುಗು ಇದ್ಯಾವುದಕ್ಕೂ ಹೆದರದೆ ತಪಸ್ಸಿನಲ್ಲಿ ತಲ್ಲೀನರಾಗಿದ್ದರು. ಲೋಕ ಸಂಚಾರ ಮಾಡುವ ನಾರದರಿಗೆ ಭೂಮಿಯನ್ನು ಸ್ವರ್ಗ ಮಾಡುವ ವಿಶ್ವಾಮಿತ್ರ ಋಷಿಗಳ ತಪಸ್ಸಿನ ಉದ್ದೇಶ ತಿಳಿದಿರುತ್ತದೆ.

ನಾರದರು ಸ್ವರ್ಗದ ಅಧಿಪತಿ ಇಂದ್ರನಿಗೆ ವಿಷಯ ತಿಳಿಸುತ್ತಾರೆ ಆಗ ಇಂದ್ರನಿಗೆ ಚಿಂತೆ ಉಂಟಾಗುತ್ತದೆ. ಯಾವ ಕಾರಣಕ್ಕೂ ತಮ್ಮ ಸ್ವರ್ಗಕ್ಕಿಂತ ಇನ್ನೊಂದು ಲೋಕ ಹುಟ್ಟಬಾರದು ಎಂಬುದು ಇಂದ್ರನ ಉದ್ದೇಶವಾಗಿತ್ತು. ಇಂದ್ರನು ವಿಶ್ವಾಮಿತ್ರರ ತಪಸ್ಸನ್ನು ಭಂಗಪಡಿಸಲು ಯೋಜನೆ ಮಾಡುತ್ತಾರೆ ಅದರಂತೆ ಸ್ವರ್ಗದ ಅತ್ಯಂತ ಸುಂದರ ಅಪ್ಸರೆ ಮೇನಕೆಯನ್ನು ಕರೆಯುತ್ತಾನೆ ಹಾಗೂ ವಿಶ್ವಾಮಿತ್ರರ ತಪಸ್ಸನ್ನು ಭಂಗಪಡಿಸಲು ಆಜ್ಞೆ ಮಾಡುತ್ತಾನೆ ಆದರೆ ಇಂದ್ರನ ದುರಾಸೆಯನ್ನು ತಿಳಿದ ಮೇನಕೆ ಒಪ್ಪುವುದಿಲ್ಲ ದೇವಲೋಕದ ಉಳಿವಿಗಾಗಿ ಈ ಕೆಲಸವನ್ನು ಮಾಡಲೇಬೇಕೆಂಬ ಇಂದ್ರನ ಮಾತನ್ನು ಮೇನಕೆ ಒಪ್ಪಲೇಬೇಕಾಗುತ್ತದೆ.‌

ವಿಶ್ವಾಮಿತ್ರರ ಮನಸ್ಸು ಕಠೋರವಾಗಿದ್ದು ಅವರು ನೈಸರ್ಗಿಕ ವಿಕೋಪ, ಮೃಗ ಪ್ರಾಣಿಗಳಿಗೆ ಹೆದರಲಿಲ್ಲ ಇನ್ನೂ ಮಹಿಳೆಯ ಸೌಂದರ್ಯ ಅವರನ್ನು ಅಲುಗಾಡಿಸಲು ಆಗಲಿಲ್ಲ ಆಗ ಇಂದ್ರನಿಗೆ ತನ್ನ ಯೋಜನೆ ವಿಫಲವಾಗುವ ಸೂಚನೆ ಕಂಡು ಬರುತ್ತದೆ ಆಗ ಇಂದ್ರನು ಕಾಮದೇವನನ್ನು ಕರೆದು ವಿಶ್ವಾಮಿತ್ರನ ಮೇಲೆ ಕಾಮದ ಬಾಣಗಳನ್ನು ಬಿಡುವಂತೆ ಆಜ್ಞೆ ಮಾಡುತ್ತಾನೆ ಅದರಂತೆ ಕಾಮದೇವನ ಬಾಣದಿಂದ ವಿಶ್ವಮಿತ್ರರು ಕಣ್ಣು ತೆಗೆದು ನೋಡಿದಾಗ ಅತ್ಯಂತ ಸುಂದರ ಹೆಣ್ಣು ಮುಂದೆ ಇರುತ್ತಾಳೆ ಅವಳ ಸೌಂದರ್ಯಕ್ಕೆ ವಿಶ್ವಾಮಿತ್ರರು ಮಾರುಹೋಗುತ್ತಾರೆ ತಪಸ್ಸನ್ನು ಬಿಟ್ಟು ಅವರ ಹೃದಯದಲ್ಲಿ ಪ್ರೇಮ ಹುಟ್ಟುತ್ತದೆ ಹಾಗೆಯೆ ಮೇನಕೆಗೂ ವಿಶ್ವಾಮಿತ್ರರ ಬಗ್ಗೆ ಆಕರ್ಷಣೆಯಾಗುತ್ತದೆ

ತಾನು ಬಂದ ಉದ್ದೇಶವನ್ನು ವಿಶ್ವಾಮಿತ್ರರಿಗೆ ಹೇಳಿದರೆ ಅವರು ಕೋಪಗೊಳ್ಳುತ್ತಾರೆ ಎಂದು ಮೇನಕೆಯ ಮನಸ್ಸಿನಲ್ಲಿ ತಳಮಳ ಉಂಟಾಗುತ್ತದೆ‌ ಮೇಲಕ್ಕೆ ತಾನು ಇಲ್ಲಿಂದ ಹೋದ ತಕ್ಷಣ ಮತ್ತೆ ವಿಶ್ವಾಮಿತ್ರ ತಪಸ್ಸನ್ನ ಆಚರಿಸುವ ಸೂಚನೆ ಕಂಡುಬಂದಿತು ಹೀಗೆ ಯೋಚನೆಗಳ ನಂತರ ವಿಶ್ವಾಮಿತ್ರ ಹಾಗೂ ಮೇನಕ ಮದುವೆಯಾಗುತ್ತಾರೆ ವಿಶ್ವಮಿತ್ರರು ತಮ್ಮ ತಪಸ್ಸಿನ ಉದ್ದೇಶವನ್ನು ಪೂರ್ಣವಾಗಿ ಮರೆಯುತ್ತಾರೆ. ಹಲವು ವರ್ಷಗಳಿಂದ ಸಂಸಾರದಿಂದ ಒಂದು ಹೆಣ್ಣು ಮಗು ಜನನವಾಗುತ್ತದೆ.

ಒಂದು ದಿನ ಮೇನಕೆ ಹೆಣ್ಣು ಮಗುವಿನೊಂದಿಗೆ ಆಟವಾಡುತ್ತಿದ್ದಾಗ ಇಂದ್ರದೇವನು ಪ್ರತ್ಯಕ್ಷನಾಗಿ ನೀನು ಬಂದ ಉದ್ದೇಶ ಈಡೇರಿದೆ ಈಗಲೆ ನನ್ನ ಜೊತೆ ಸ್ವರ್ಗಕ್ಕೆ ಬರಬೇಕೆಂದು ಹೇಳುತ್ತಾನೆ ಆದರೆ ಮೇನಕೆ ತನ್ನ ಪತಿ ಹಾಗೂ ಪುತ್ರಿಯನ್ನು ಬಿಟ್ಟು ಬರಲು ಸಾಧ್ಯವಿಲ್ಲವೆಂದು ಇಂದ್ರನ ಬಳಿ ತನ್ನನ್ನು ಭೂಮಿಯಲ್ಲಿ ಬಿಡಲು ಹೇಳುತ್ತಾಳೆ ಆಗ ಇಂದ್ರನು ಕೋಪಗೊಂಡು ನನ್ನ ಜೊತೆ ಬರಲಿಲ್ಲವೆಂದರೆ ಶಿಲೆಯಾಗುತ್ತೀಯ ಎಂದು ಶಾಪಕೊಡಲು ಮುಂದಾಗುತ್ತಾನೆ

ಆಗ ಅಸಹಾಯಕಳಾದ ಮೇನಕೆ ವಿಶ್ವಾಮಿತ್ರರ ಬಳಿ ತಾನು ಬಂದ ಉದ್ದೇಶವನ್ನು ಹೇಳುತ್ತಾಳೆ ಆಗ ವಿಶ್ವಾಮಿತ್ರರಿಗೆ ಕೋಪ ಹಾಗೂ ದುಃಖ ಬರುತ್ತದೆ, ದಾರಿ ಇಲ್ಲದೆ ಮೇನಕೆ ತನ್ನ ಪತಿ ಹಾಗೂ ಪುತ್ರಿಯನ್ನು ಬಿಟ್ಟು ಇಂದ್ರನ ಜೊತೆ ಸ್ವರ್ಗಕ್ಕೆ ತೆರಳುತ್ತಾಳೆ ಇತ್ತ ವಿಶ್ವಾಮಿತ್ರರು ತಮ್ಮ ಪುತ್ರಿಯನ್ನು ಸ್ನೇಹಿತರ ಆಶ್ರಮದಲ್ಲಿ ಬೆಳೆಯಲು ಬಿಡುತ್ತಾರೆ ಆ ಮಗು ಬೆಳೆದು ಸುಂದರವಾದ ಕನ್ಯೆ ಆಗುತ್ತಾಳೆ, ಅವಳೇ ಶಕುಂತಲಾ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: