ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಶುಭ ಕಾರ್ಯದ ಸಮಯದಲ್ಲಿ, ಒಳ್ಳೆಯ ಕೆಲಸಕ್ಕೆ ಹೋಗುವಾಗ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಕೆಲವರ ಪಾದವನ್ನು ಕೆಲವು ಸ್ಥಳಗಳಲ್ಲಿ ಮುಟ್ಟಬಾರದು ಅದು ಅಶುಭ ಎಂದು ಈ ಲೇಖನದಲ್ಲಿ ನೋಡೋಣ

ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಿರಿಯರ ಪಾದ ಸ್ಪರ್ಶಿಸುವ ಶ್ರೇಷ್ಠ ಸಂಪ್ರದಾಯವಿದೆ ಹಾಗೆ ಮಾಡುವುದು ಇತರರಿಗೆ ಸೌಜನ್ಯ ಹಾಗೂ ಗೌರವ ತೋರಿಸಿದಂತಾಗುತ್ತದೆ ಆದರೆ ವೈದಿಕ ಗ್ರಂಥಗಳಲ್ಲಿ ಕೆಲವರ ಪಾದವನ್ನು ಮುಟ್ಟುವುದು ನಿಷಿದ್ಧ ಎನ್ನಲಾಗುತ್ತದೆ. ಕೆಲವರ ಪಾದ ಸ್ಪರ್ಶಿಸುವುದು ಪಾಪವಾಗುತ್ತದೆ ಹಾಗೂ ಅಶುಭ ಫಲಗಳನ್ನು ಅನುಭವಿಸಬೇಕಾಗುತ್ತದೆ. ಕೆಲವರ ಪಾದಗಳನ್ನು ಕೆಲವು ಸ್ಥಳದಲ್ಲಿ ಮುಟ್ಟಬಾರದು ಎಂದು ನಿಯಮವಿದೆ.

ದೇವಸ್ಥಾನಗಳಿಗೆ ಹೋದಾಗ ದೇವಸ್ಥಾನದಲ್ಲಿ ಯಾರ ಪಾದವನ್ನು ಮುಟ್ಟಬಾರದು. ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋದರೆ ಅಲ್ಲಿ ಹಿರಿಯರು ಅಥವಾ ಗಣ್ಯ ವ್ಯಕ್ತಿ ಕಂಡರೂ ಅವರ ಪಾದ ಸ್ಪರ್ಶಿಸಬಾರದು. ದೇವಸ್ಥಾನದಲ್ಲಿ ದೇವರಿಗಿಂತ ದೊಡ್ಡ ವ್ಯಕ್ತಿ ಇಲ್ಲ ಎಂದು ಹೇಳುತ್ತಾರೆ ಹೀಗಾಗಿ ದೇವಸ್ಥಾನಗಳಲ್ಲಿ ದೇವರ ಮುಂದೆ ಮಾನವನ ಪಾದವನ್ನು ಸ್ಪರ್ಶಿಸುವುದು ದೇವರಿಗೆ ಹಾಗೂ ದೇವಸ್ಥಾನಕ್ಕೆ ಅವಮಾನ ಮಾಡಿದಂತಾಗುತ್ತದೆ.

ಮನೆಯಲ್ಲಿ ಆಗಲಿ ಅಥವಾ ಇನ್ನೆಲ್ಲಿಯೆ ಆಗಲಿ ಮಲಗಿರುವವರ ಪಾದವನ್ನು ಮುಟ್ಟಬಾರದು. ಒಬ್ಬ ವ್ಯಕ್ತಿ ಮಲಗಿದ್ದರೆ ಅವನ ಪಾದವನ್ನು ಸ್ಪರ್ಶಿಸಬಾರದು ಒಂದು ವೇಳೆ ಮಲಗಿದವರ ಪಾದವನ್ನು ಸ್ಪರ್ಶಿಸಿದರೆ ಅವನ ಆಯಸ್ಸು ಕಡಿಮೆ ಆಗುತ್ತದೆ ಎಂದು ನಂಬಲಾಗಿದೆ. ವೈದಿಕ ಗ್ರಂಥಗಳ ಪ್ರಕಾರ ಮಲಗಿರುವ ವ್ಯಕ್ತಿಯನ್ನು ಸತ್ತ ಸ್ಥಿತಿಯಲ್ಲಿ ಮಾತ್ರ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸಬಹುದು ಆದರೆ ಬೇರೆಯವರ ಪಾದಗಳನ್ನು ಮುಟ್ಟಬಾರದು ಇದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಸ್ಮಶಾನದಿಂದ ಹಿಂದಿರುಗಿದ ವ್ಯಕ್ತಿಯ ಪಾದವನ್ನು ಮುಟ್ಟಬಾರದು ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮುಗಿಸಿಕೊಂಡು ಬಂದ ಹಿರಿಯರ ಪಾದಗಳನ್ನು ಸ್ಪರ್ಶಿಸಬಾರದು. ವಾಸ್ತವವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವ್ಯಕ್ತಿಯು ಅಶುದ್ಧನಾಗುತ್ತಾನೆ ಅವನ ಪಾದಗಳನ್ನು ಸ್ಪರ್ಶಿಸಬಾರದು. ಸ್ನಾನ ಮಾಡಿದ ನಂತರ ಅವರ ಪಾದಗಳನ್ನು ಸ್ಪರ್ಶಿಸಬಹುದು.

ಹೆಂಡತಿಯ ಪಾದಗಳನ್ನು ಮುಟ್ಟಬಾರದು ಪತ್ನಿ ಪತಿಯ ಪಾದವನ್ನು ಮುಟ್ಟಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೆಂಡತಿ ಗಂಡನ ಪಾದ ಸ್ಪರ್ಶಿಸಿದರೆ ಐಶ್ವರ್ಯ ಹೆಚ್ಚುತ್ತದೆ ಆದರೆ ಗಂಡ ಹೆಂಡತಿಯ ಪಾದವನ್ನು ಮುಟ್ಟಬಾರದು ಒಂದು ವೇಳೆ ಮುಟ್ಟಿದರೆ ಕುಟುಂಬದಲ್ಲಿ ಬಿಕ್ಕಟ್ಟಿನ ವಾತಾವರಣ ಕಂಡು ಬರುತ್ತದೆ. ಮಗಳ ಕಾಲನ್ನು ಮುಟ್ಟಬಾರದು ತಂದೆಯಾದವನು ಮಗಳು, ಸೊಸೆ, ಮೊಮ್ಮಗಳ ಕಾಲನ್ನು ಸ್ಪರ್ಶಿಸಬಾರದು ಅವರು ಭಾರತೀಯ ಸಂಸ್ಕೃತಿಯಲ್ಲಿ ಪೂಜಿಸುವ ಎಲ್ಲಾ ದೇವತೆಗಳ ಬಾಲರೂಪವಾಗಿದೆ ಒಂದು ವೇಳೆ ಮಗಳ ಪಾದವನ್ನು ಸ್ಪರ್ಶಿಸಿದರೆ ಪಾಪದ ಪಾಲುದಾರರಾಗಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By admin

Leave a Reply

Your email address will not be published. Required fields are marked *

error: Content is protected !!
Footer code: