ಮನುಷ್ಯನ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವುದು ಗ್ರಹಗಳು ಮಾತ್ರ ಅಲ್ಲದೆ ನಕ್ಷತ್ರಗಳು ಕೂಡ ಹೌದು. ಮಾನವನ ಗುಣ ಅವನು ಹುಟ್ಟಿದ ದಿನಾಂಕ, ದಿನ, ಸಮಯದ ಮೇಲೆ ನಿರ್ಧಾರ ಆಗುತ್ತದೆ. ಅದರ, ಅನುಸಾರ ರಾಶಿ ನಕ್ಷತ್ರ ಎಲ್ಲಾ ನಿರ್ಧಾರ ಆಗುತ್ತದೆ.
12 ರಾಶಿಗಳಿಗೂ ಸಮಯದ ಅನುಗುಣವಾಗಿ ವಿವಿಧ ನಕ್ಷತ್ರಗಳು ಇರುತ್ತವೆ. ಅವು ಮಾನವ ನಡೆಸುವ ಜೀವನದ ಮೇಲೆ ಪರಿಣಾಮ ಬೀರುತ್ತದೆ ಅದನ್ನು ಒಂದೊಂದಾಗಿ ತಿಳಿಯೋಣ ಬನ್ನಿ.
ರೋಹಿಣಿ ನಕ್ಷತ್ರ :- ಸುಖ ಸಂಸಾರ.
ಹಸ್ತ ನಕ್ಷತ್ರ :- ಅಖಂಡ ಅದೃಷ್ಟ.
ಅಶ್ವಿನಿ ನಕ್ಷತ್ರ :- ನಾಯಕತ್ವದ ಗುಣ ಇರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗುವರು.
ಭರಣಿ ನಕ್ಷತ್ರ :- ಸುಖವಂತರು.
ಕೃತಿಕಾ ನಕ್ಷತ್ರ :- ತೇಜವಂತರು.
ಮೃಗಶಿರಾ ನಕ್ಷತ್ರ :- ಅನ್ನೋನ್ಯವಾದ ಸುಖ ಸಂಸಾರ.
ಆರಿದ್ರಾ ನಕ್ಷತ್ರ :- ಪುತ್ರ ಸಂತಾನ ಭಾಗ್ಯ.
ಪುಷ್ಯ ನಕ್ಷತ್ರ :- ಕುಟುಂಬಕ್ಕೆ ವೇದನೆ.
ಆಶ್ಲೇಷ ನಕ್ಷತ್ರ :- ಸುಖಗಳು ಸಿಗುತ್ತವೆ.
ಪುನರ್ವಸು ನಕ್ಷತ್ರ :- ದುಃಖದಿಂದ ಕೂಡಿದ ಜೀವನ.
ಮಖ ನಕ್ಷತ್ರ :- ಗಂಡ ಹೆಂಡತಿ ದೂರವಾಗುವುದು.
ಪುಬ್ಬಾ ನಕ್ಷತ್ರ :- ಗಂಡು ಮಗುವಿನ ಸಂತಾನ ಆಗುವುದು.
ಪಾಲ್ಗುಣಿ ನಕ್ಷತ್ರ :- ಚೆನ್ನಾಗಿ ನೋಡಿಕೊಳ್ಳುವ ಮಗ.
ಚಿತ್ತ ನಕ್ಷತ್ರ :- ಚಿಕ್ಕ ಸಂಸಾರ.
ಸ್ವಾತಿ ನಕ್ಷತ್ರ :- ಗಂಡ ಹೆಂಡ್ತಿ ಹೆಚ್ಚು ಅನ್ನೋನ್ಯವಾಗಿ ಇರುವರು.
ವಿಶಾಖ ನಕ್ಷತ್ರ :- ನಾಲ್ವರು ಅಸೂಯೆ ಪಡುವರು ನಿಮ್ಮ ದಾಂಪತ್ಯ ನೋಡಿ.
ಅನುರಾಧ ನಕ್ಷತ್ರ :- ರೋಗದಿಂದ ತುಂಬಿರುತ್ತಾರೆ.
ಜ್ಯೇಷ್ಠ ನಕ್ಷತ್ರ :- ಹಣ ನಷ್ಟ, ಕೆಟ್ಟ ಆಲೋಚನೆಗಳು ಜಾಸ್ತಿ.
ಮೂಲ ನಕ್ಷತ್ರ :- ಐಶ್ವರ್ಯವಂತರು.
ಪೂರ್ವಷಾಡ ನಕ್ಷತ್ರ :- ಕುಟುಂಬಕ್ಕೆ ದುಃಖ.
ಉತ್ತರಾಷಡ ನಕ್ಷತ್ರ :- ಸಂತೋಷದ ಜೀವನ.
ರೇವತಿ ನಕ್ಷತ್ರ :- ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ.
ಶ್ರವಣ ನಕ್ಷತ್ರ :- ಶಿಕ್ಷಣ, ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿರುವರು.
ಶತಭಿಷಾ ನಕ್ಷತ್ರ :- ಸಿಟ್ಟಿನ ಸಭಾವದವರಾಗಿ ಇರುತ್ತಾರೆ.
ಧನಿಷ್ಠ ನಕ್ಷತ್ರ :- ಸುಂದರ ಹಾಗೂ ತೀಕ್ಷ ಬುದ್ಧಿವಂತರು.
ಉತ್ತರಭಾದ್ರಪದ ನಕ್ಷತ್ರ :- ಧಾರ್ಮಿಕವಾಗಿದ್ದು ನೇರ ಹಾಗೂ ಪ್ರೀತಿ, ವಿಶ್ವಾಸ ಹೊಂದಿರುವರು.
ಪೂರ್ವಭಾದ್ರಪದ ನಕ್ಷತ್ರ :- ಜೀವನದಲ್ಲಿ ಶಾಂತಿ, ಸಂಪತ್ತು ಮತ್ತು ಸಮೃದ್ಧಿಯನ್ನು ಹೊಂದುವರು. ನಕ್ಷತ್ರದ ಅನುಸಾರ ಈ ರೀತಿಯ ಗುಣಗಳನ್ನು ಹೊಂದಿರುವರು ಎಂದು ಜ್ಯೋತಿಷ್ಯದಲ್ಲಿ ಹೇಳುವರು.