WhatsApp Group Join Now
Telegram Group Join Now

ಏಕಾದಶಿ ಪ್ರತಿ ಶುಕ್ಲ ಪಕ್ಷದ ಹಾಗೂ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಭಗವಂತ ಮಹಾ ವಿಷ್ಣುವಿಗೆ ಪ್ರಿಯವಾದ ದಿನ ಎಂದು ಏಕಾದಶಿಯನ್ನು ಪರಿಗಣಿಸಲಾಗುತ್ತದೆ. ವಿಶೇಷವಾದ ದಿನ ಉಪವಾಸ ಮಾಡಿ ಮಹಾ ವಿಷ್ಣುವಿಗೆ ಪೂಜೆ ಸಲ್ಲಿಸಿದರೆ ಅದರಿಂದ, ಹೆಚ್ಚು ಒಳ್ಳೆಯ ಫಲಗಳು ದೊರಕುತ್ತದೆ.

ಈ ದಿನ ಉಪವಾಸ ವ್ರತ ಮಾಡುವುದರಿಂದ ಆತ್ಮ ಮತ್ತು ಮನಸ್ಸು ಶುದ್ದವಾಗುತ್ತದೆ. ಆಷಾಡ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ಹೆಚ್ಚಿನ ವಿಶೇಷತೆಯನ್ನು ಹೊಂದಿದೆ. ಈ ಏಕಾದಶಿಯನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ, ಹರಿ ಶಯನಿ ಏಕಾದಶಿ, ದೇವಶಯನಿ ಏಕಾದಶಿ, ಮಹಾ ಶಯನಿ ಏಕಾದಶಿ, ದೇವ ಕೋಡಿ ಏಕಾದಶಿ, ಮಹಾ ಏಕಾದಶಿ, ಪದ್ಮ ಏಕಾದಶಿ, ಆಷಾಢ ಏಕಾದಶಿ, ವಾರ್ಕರಿ ಏಕಾದಶಿ ಎನ್ನುವ ಹೆಸರು ಸಹ ಇದೆ.

ಇಂದು ಪ್ರಥಮ ಏಕಾದಶಿಯ ಆಚರಣೆ ಮಾಡಲಾಗುತ್ತದೆ, ಈ ದಿನ ವಿಷ್ಣುಭಕ್ತರು ಚಾತುರ್ಮಾಸ ವ್ರತವನ್ನು ಆರಂಭಿಸುತ್ತಾರೆ. ಈ ದಿನ ವೈಷ್ಣವರು ತಪ್ತಮುದ್ರ ಧಾರಣೆಯನ್ನು ಮಾಡಿಸಿಕೊಳ್ಳುವರು. ಪಂಡರಪುರ ಯಾತ್ರೆ ಕೂಡ ಈ ದಿನ ಪಂಡರಪುರವನ್ನು ತಲುಪುತ್ತದೆ. ಶಯನಿ ಏಕಾದಶಿಯನ್ನು ಮಹಾಏಕಾದಶಿ ಎಂದು ಕರೆಯಲಾಗುತ್ತದೆ. ಮಹಾವಿಷ್ಣುವಿನ ಅನುಯಾಯಿಗಳಿಗೆ ಇದು ಹೆಚ್ಚು ಪವಿತ್ರವಾದ ದಿನ. ಈ ದಿನ ಮಹಾವಿಷ್ಣು ದೇವರು ಕ್ಷೀರಸಾಗರದಲ್ಲಿ ಶೇಷನಾಗರ ಮೇಲೆ ಮಲಗಿ ಯೋಗ ನಿದ್ರೆಗೆ ಜಾರುವರು.

ಮಹ ಎಂದರೆ ಭಗವಂತ ವಿಷ್ಣು, ಶಯನಿ ಎಂದರೆ ಮಲಗಿರುವುದು ವಿಷ್ಣು ದೇವರು ಯೋಗ ನಿದ್ರೆಗೆ ಜಾರುವ ಕಾರಣ ಈ ದಿನವನ್ನು ಮಹಾ ಶಯನಿ ಏಕಾದಶಿ ಅಥವಾ ಹರಿ ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಮಹಾವಿಷ್ಣು ದೇವರು ಕಾರ್ತಿಕ ಮಾಸದಲ್ಲಿ ಬರುವ ಪ್ರಬೋಧಿನಿ ಏಕಾದಶಿಯ ದಿನ ಯೋಗ ನಿದ್ರೆಯಿಂದ ಜಾಗೃತರಾಗುತ್ತಾರೆ. ಮಹಾ ವಿಷ್ಣು ಅವರು ಯೋಗ ನಿದ್ರೆಗೆ ಜಾರಿದ ಈ ನಾಲ್ಕು ಮಾಸಗಳನ್ನು ( ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ ) ಚಾತುರ್ಮಾಸ ಏಕಾದಶಿ ಎಂದು ಕರೆಯಲಾಗುತ್ತದೆ.

ಆಷಾಢ ಮಾಸದ ಸಮಯದಲ್ಲಿ ಎಲ್ಲಾ ದೇವತೆಗಳ ತೇಜಸ್ಸು ಒಂದಾಗಿ ಇರುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ದಯ ಪಾಲಿಸುವರು ಮಹಾ ವಿಷ್ಣು ದೇವರು ಈ ನಾಲ್ಕು ಮಾಸಗಳಲ್ಲಿ ನಿದ್ರೆಗೆ ಜಾರುವ ಕಾರಣ, ಯಾವ ಶುಭಕಾರ್ಯಗಳನ್ನು ಮಾಡುವುದಿಲ್ಲ ಅದರಲ್ಲೂ ಮದುವೆ ಮತ್ತು ಉಪನಯನ ಕಾರ್ಯಕ್ರಮಗಳನ್ನು ಈ ಸಮಯದಲ್ಲಿ ಮಾಡುವುದಿಲ್ಲ.

ನಾಲ್ಕು ತಿಂಗಳು ಮಹಾ ವಿಷ್ಣುದೇವರು ಏತಕ್ಕೆ ಯೋಗ ನಿದ್ರೆಗೆ ಜಾರಿದರು ಎಂದು ತಿಳಿಯೋಣ :- ಮಹಾ ವಿಷ್ಣು ದೇವರು ವಾಮನ ಅವತಾರದಲ್ಲಿ ಮೂರನೇ ಪಾದವನ್ನು ಬಲಿ ಚಕ್ರವರ್ತಿಯ ಮೇಲೆ ಇಟ್ಟು ಆತನನ್ನು ಪಾತಾಳಕ್ಕೆ ತಳ್ಳಿದ ನಂತರ, ಮಹಾ ವಿಷ್ಣುವಿನ ಬಳಿ ಬಲಿ ಚಕ್ರವರ್ತಿ ಪಾತಾಳ ಲೋಕದಲ್ಲಿ ತನ್ನ ಜೊತೆ ಇರಬೇಕು ಎನ್ನುವ ವರವನ್ನು ಪಡೆದುಕೊಂಡಿರುತ್ತಾನೆ. ಆದ್ದರಿಂ,ದ ವಿಷ್ಣು ದೇವರು ಅವನ ಜೊತೆ ಪಾತಾಳ ಲೋಕಕ್ಕೆ ಹೋಗುವರು.

ವಿಷ್ಣು ದೇವರನ್ನು ಪಾತಾಳ ಲೋಕದಿಂದ ಪಾರು ಮಾಡಲು ಲಕ್ಷ್ಮೀ ದೇವಿಯು ಬಲಿಚಕ್ರವರ್ತಿಯ ಕೈಗೆ ರಕ್ಷಾ ಬಂಧನವನ್ನು ಕಟ್ಟಿ ಅವನನ್ನು ತಮ್ಮ ಸಹೋದರನಾಗಿ ಮಾಡಿಕೊಳ್ಳುವರು. ನಂತರ ಲಕ್ಷ್ಮಿ ದೇವಿಯ ಬಳಿ ಚಕ್ರವರ್ತಿ ಯಾವ ಕೊಡುಗೆ ಬೇಕು ಎಂದು ಕೇಳಿದಾಗ ಲಕ್ಷ್ಮಿ ದೇವಿ ಮಹಾ ವಿಷ್ಣುವನ್ನು ಪಾತಾಳ ಲೋಕದಿಂದ ಪಾರು ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಬಲಿ ಚಕ್ರವರ್ತಿ ತಂಗಿಯ ಮಾತಿಗೆ ಸಮ್ಮತಿ ನೀಡಿ ಮಹಾ ವಿಷ್ಣುವನ್ನು ಪಾತಾಳ ಲೋಕದಿಂದ ಪಾರು ಮಾಡುವರು. ಪಾತಾಳ ಲೋಕದಿಂದ ಹಿಂದಿರುಗುವಾಗ ಬಲಿಚಕ್ರವರ್ತಿಯ ಬಳಿ ಮಹಾವಿಷ್ಣು ದೇವರು. ನಿನ್ನ ಜೊತೆ ಪ್ರತಿ ವರ್ಷ ನಾಲ್ಕು ಮಾತುಗಳ ಕಾಲ ಪಾತಾಳ ಲೋಕದಲ್ಲಿ ವಾಸ ಮಾಡುವುದಾಗಿ ಮಾತು ನೀಡುವರು.

ಮತ್ತೊಂದು ಪುರಾಣದ ಪ್ರಕಾರ ಮಹಾವಿಷ್ಣುದೇವರು
ಶಂಕಚೂಡ ಎಂಬ ರಾಕ್ಷಸನ ಜೊತೆ ಸುಧೀರ್ಘ ಯುದ್ಧ ಮಾಡಿ ಅಸುರನನ್ನು ಸಂಹಾರ ಮಾಡುವರು, ಯುದ್ಧದಿಂದ ಸಂಪೂರ್ಣ ದಣಿದಿದ್ದ ಮಹಾ ವಿಷ್ಣು ದೇವರು ಲೋಕದ ಜವಾಬ್ದಾರಿಯನ್ನು ಮಹಾದೇವನ ಬಳಿ ವಹಿಸಿ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ಯೋಗ ನಿದ್ರೆಗೆ ಜಾರುವರು. ಆದ್ದರಿಂದ, ನಾಲ್ಕು ಮಾಸಗಳ ಕಾಲ ಮಹಾದೇವ ಲೋಕ ಪಾಲನೆಯ ಜವಾಬ್ದಾರಿಯನ್ನು ನಿರ್ವಹಿಸುವರು. ಅದರಿಂದ, ಆಷಾಡ ಮಾಸದಲ್ಲಿ ಶಿವನನ್ನು ಪೂಜೆ ಮಾಡುವರು.

ದೇವಶಯನಿ ಏಕಾದಶಿಯನ್ನು ಆಚರಣೆ ಮಾಡುವ ವಿಧಾನ :-
ಏಕಾದಶಿಯ ಹಿಂದಿನ ದಿನ ಅಂದರೆ ದಶಮಿಯ ದಿನ ಒಂದು ಹೊತ್ತು ಮಧ್ಯಾಹ್ನದ ಸಮಯ ಮಾತ್ರ ಊಟ ಮಾಡಬೇಕು. ರಾತ್ರಿ ಸಮಯದಲ್ಲಿ ಊಟದ ಬದಲಿಗೆ ಫಲಹಾರ ಸೇವನೆ ಮಾಡಬೇಕು. ದೇವಶಯನಿ ಏಕಾದಶಿಯ ದಿನ ಕಟ್ಟುನಿಟ್ಟಿನ ಉಪವಾಸ ವ್ರತ ಪಾಲನೆ ಮಾಡಿ ಮಹಾ ವಿಷ್ಣು ದೇವರ ಆರಾಧನೆ ಮಾಡಬೇಕು, ಮಹಾ ವಿಷ್ಣು ಮತ್ತು ಲಕ್ಷ್ಮಿ ದೇವರಿಗೆ ಧೂಪ ದೀಪ ಸಲ್ಲಿಕೆ ಮಾಡಿ ಪೂಜೆ ಮಾಡಬೇಕು. ಆ ದಿನ ವಿಷ್ಣು ಸಹಸ್ರನಾಮ ವಿಷ್ಣು ಅಷ್ಟೋತ್ತರ ಪಠಣೆ ಮಾಡುವುದು ಹೆಚ್ಚು ಶ್ರೇಷ್ಠ. ಶುಭಾಶಯಗಳು ಏಕಾದಶಿಯ ದಿನ ಹರಿ ಭಜನೆ ಮಾಡುತ್ತಾ ಜಾಗರಣೆ ಮಾಡಬೇಕು. ದ್ವಾದಶಿಯ ಮುಂಜಾನೆ ದೇವರ ಪೂಜೆ ಮಾಡಿ ಉಪವಾಸವನ್ನು ಕೊನೆಗೊಳಿಸಬೇಕು.

ಶಯನಿ ಏಕಾದಶಿಯ ದಿನ ವಿಠಲರು ಭಕ್ತ ಪುಂಡರಿಕನನ್ನು ಭೇಟಿಯಾಗಲು ಪಂಡರಪುರಕ್ಕೆ ಬಂದಿದ್ದು. ಆದ್ದರಿಂದ, ವಾರಕರಿ ಪಂಥದವರು ನೂರಾರು ಮೈಲಿ ಪಾದಯಾತ್ರೆ ಮಾಡಿ ಪಂಡರಪುರಕ್ಕೆ ಪ್ರಥಮ ಏಕಾದಶಿಯ ದಿನ ಹೋಗಿ ಬರುವರು. ಪಂಡರಪುರ ಮಹಾ ವಿಷ್ಣು ದೇವರ ಇನ್ನೊಂದು ರೂಪವಾದ ವಿಠಲನ ರೂಪದಲ್ಲಿ ಇದೆ. ಭಕ್ತರು ದೇವಾ ಶೈನಿ ಏಕಾದಶಿಯ ದಿನ ಚಂದ್ರ ಬಾನು ನದಿಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುವರು.

ತಪ್ತ ಮುದ್ರಾ ಧಾರಣೆ :-
ಪ್ರಥಮ ಏಕಾದಶಿಯ ದಿನದಂದು ಎಲ್ಲಾ ಯತಿವರೆಯರು ತಪ್ತ ಮುದ್ರಾ ಧಾರಣೆಯನ್ನು ಮಾಡುವರು. ಈ ದಿನ ಶಂಖ ಹಾಗೂ ಚಕ್ರದ ಮುದ್ರೆಯನ್ನು ಭಕ್ತರ ದೇಹದಲ್ಲಿ ನಿಗದಿಸಿರುವ ಭಾಗಕ್ಕೆ ಮುದ್ರೆ ಮಾಡಲಾಗುತ್ತದೆ. ಈ ಆಚರಣೆ ಮಾಡಿವ ಕಾರಣ ಆತ್ಮ ಮತ್ತು ದೇಹ ಎರಡು  ಶುದ್ಧವಾಗುತ್ತದೆ. ತಪ್ತಮುದ್ರಾ ಧಾರಣೆ ಪಾಪಗಳನ್ನು ಸುಡುತ್ತದೆ. ಎಲ್ಲ ರೀತಿಯ ದುಷ್ಟರಿಂದ ದೂರ ಮಾಡುತ್ತದೆ.

ಪ್ರಥಮ ಏಕಾದಶಿ ಆಚರಣೆ ಮಾಡುವುದರಿಂದ ದೊರಕುವ ಫಲಗಳು :-
ಪ್ರಥಮ ಏಕಾದಶಿಯ ಮಹತ್ವವನ್ನು ಪದ್ಮ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ಶ್ರೀ ಕೃಷ್ಣ ಪರಮಾತ್ಮ ಯುಧಿಷ್ಠಿರನಿಗೆ ಪ್ರಥಮ ಏಕಾದಶಿಯ ಆಚರಣೆ ಕುರಿತ ಹೇಳಿ ಅದರಿಂದ, ದೊರಕುವ ಫಲಗಳ ಬಗ್ಗೆ ತಿಳಿಸಿದ್ದಾರೆ. ಯಾರು ಪ್ರಥಮ ಏಕಾದಶಿಯ ದಿನ ಉಪವಾಸ ವ್ರತ ಆಚರಣೆ ಮಾಡುವರೋ ಅವರ ಪಾಪಗಳನ್ನು ನಾನು ಸುಟ್ಟು ಬಿಡುತ್ತೇನೆ ಮತ್ತು ಅಂತವರ ಹೃದಯದಲ್ಲಿ ವಾಸ ಮಾಡುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಭೋದನೆ ಮಾಡಿದ್ದಾರೆ.

ಹರಿ ಶಯನಿ ಏಕಾದಶಿಯ ದಿನ ಬಲಿಚಕ್ರವರ್ತಿಯ  ಜೊತೆ ಒಂದು ರೂಪದಲ್ಲಿ ಇದ್ದರೇ, ಮತ್ತೊಂದು ಕ್ಷೀರಸಾಗರದಲ್ಲಿ ಶೇಷ ನಾಗನ ಮೇಲೆ ಇರುತ್ತದೆ ಎಂದು ಭಗವಂತ ತಿಳಿಸಿದ್ದಾರೆ. ಶಂಕರ್ ಚಕ್ರ  ಹಿಡಿದಿರುವ ಮಹಾ ವಿಷ್ಣುವಿನ ಪೂಜೆ ಮಾಡಿ ಏಕಾದಶಿಯ ದಿನ ಉಪವಾಸ ಮಾಡಿ ಜೊತೆಗೆ ಜಾಗರಣೆ ಮಾಡಿ ಪೂಜೆ ಮಾಡಬೇಕು. ಆ ರೀತಿಯ ಭಕ್ತರ ಪಾಪವನ್ನು ಲೆಕ್ಕ ಮಾಡಲು ಭ್ರಮನಿಗೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ದೇವಶಯನಿ ಏಕಾದಶಿಯ ದಿನ ಕಮಲ ಪುಷ್ಪದಿಂದ ಮಹಾ ವಿಷ್ಣುವಿನ ಪೂಜೆ ಮಾಡುವುದರಿಂದ ಹೆಚ್ಚಿನ ಮಂಗಳಕರ ಫಲಗಳು ಲಭಿಸುತ್ತದೆ. ಜಾಗರಣೆ ಮಾಡಿ ಪೂಜೆ ಮಾಡುವುದರಿಂದ ಸಾವಿರಾರು ವರ್ಷಗಳ ತಪಸ್ಸಿನ ಫಲ ಸಿಗುತ್ತದೆ ಎನ್ನುವ ಮಾತುಗಳು ಇದೆ. ಮಹಾಸತಿ ಸಕ್ಕುಬಾಯಿ ಏಕಾದಶಿಯ ದಿನ ವ್ರತ ಮಾಡಿ ಮೋಕ್ಷವನ್ನು ಸಿದ್ಧಿಸಿ ಕೊಂಡಿದ್ದರು ಎನ್ನುವ ಉಲ್ಲೇಖ ಸಹ ಇದೆ.  ಪ್ರಥಮ ಏಕಾದಶಿಯ ದಿನ ತುಪ್ಪದ ದೀಪ ಬೆಳಗಿ ಮಹಾ ವಿಷ್ಣುವಿನ ಪೂಜೆ ಮಾಡುವುದರಿಂದ ಎಲ್ಲ ರೀತಿಯ ಕಷ್ಟ ನಿವಾರಣೆ ಆಗುತ್ತದೆ.

ದೇವಶಯ ಏಕಾದಶಿಯ ದಿನ ಪಠಣೆ ಮಾಡಬೇಕಾಗಿರುವ ಮಂತ್ರ :-
ಸಪ್ತೇ ತ್ವಯಿ ಜಗನ್ನಾಥ ಜಮಸ್ತುಪ್ತಂ ಭವೇದಿದಂ|
ವಿಬುದ್ಧೇ ತ್ವಯಿ ಬುದ್ಧಂ ಚ ಜಗಸ್ತರ್ವ ಚರಾಚರಂ||

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: