WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ ಕೆಲವು ಕನಸುಗಳಿಗೆ ಅರ್ಥವಿದ್ದರೆ ಕೆಲವು ಕನಸುಗಳಿಗೆ ಅರ್ಥವಿರುವುದಿಲ್ಲ. ಕನಸಿನ ಅರ್ಥಗಳನ್ನು ಸ್ವಪ್ನ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ವಪ್ನಶಾಸ್ತ್ರವು ಒಂದು ಪ್ರಮುಖ ಭಾಗವಾಗಿದೆ. ಸ್ವಪ್ನಶಾಸ್ತ್ರದ ಪ್ರಕಾರ ಕನಸುಗಳ ಅರ್ಥವನ್ನು ಈ ಲೇಖನದ ಮೂಲಕ ನೋಡೋಣ

ಕನಸಿನಲ್ಲಿ ಕೆಲವು ವಿಷಯಗಳು ಬಂದರೆ ಶುಭ ಸುದ್ದಿ ಕಾಯುತ್ತಿದೆ ಎಂಬ ನಂಬಿಕೆ ಇದೆ, ಕನಸು ಕಾಣುವುದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ ಪ್ರತಿಯೊಬ್ಬ ವ್ಯಕ್ತಿ ರಾತ್ರಿ ಹಾಗೂ ಮುಂಜಾವಿನಲ್ಲಿ ಕನಸು ಕಾಣುತ್ತಾನೆ. ರಾತ್ರಿ ಕಂಡ ಕೆಲವು ಕನಸುಗಳು ಬೆಳಿಗ್ಗೆ ಮರೆತು ಹೋಗುತ್ತದೆ ಇನ್ನು ಕೆಲವು ಕನಸುಗಳು ದಿನವೆಲ್ಲ ಕಾಡುತ್ತಿರುತ್ತವೆ, ಕೆಲವು ಕನಸುಗಳು ನಮಗೆ ಭಯ ಹುಟ್ಟಿಸುತ್ತದೆ ಇನ್ನೂ ಕೆಲವು ಕನಸುಗಳು ಮನಸ್ಸಿಗೆ ಹಿತ ನೀಡುತ್ತದೆ ನಾವು ಕಾಣುವ ಕನಸಿಗೆ ನಾನಾ ಅರ್ಥ ಇರುತ್ತದೆ ಎಂದು ನಂಬಲಾಗುತ್ತದೆ.

ನಾವು ಕಾಣುವ ಪ್ರತಿ ಕನಸು ಸ್ವಪ್ನ ಶಾಸ್ತ್ರದಲ್ಲಿ ತನ್ನದೆ ಆದ ಮಹತ್ವವಿದೆ ಕನಸು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಪುರುಷರು ತಮ್ಮ ಕನಸಿನಲ್ಲಿ ಸುಂದರವಾದ ಯುವತಿಯರು ಕಂಡರೆ ಭವಿಷ್ಯದಲ್ಲಿ ಬದಲಾವಣೆಗಳು ಸಂಭವಿಸುತ್ತದೆ ಎಂದು ಅರ್ಥ. ಸ್ವಪ್ನಶಾಸ್ತ್ರದ ಪ್ರಕಾರ ಪದೆ ಪದೆ ಸುಂದರವಾದ ಯುವತಿ ಅಥವಾ ಯುವತಿಯರು ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಆತ್ಮೀಯ ಯುವತಿ ನಿಮ್ಮ ಬಗ್ಗೆ ಯೋಚಿಸುತ್ತಿದ್ದಾಳೆ ಎಂದರ್ಥವಾಗಿದೆ. ಹೀಗೆ ಸುಂದರ ಯುವತಿ ಕನಸಿನಲ್ಲಿ ಕಾಣಿಸಿಕೊಂಡರೆ ತಮ್ಮ ಜೀವನಕ್ಕೆ ಸುಂದರವಾದ ಯುವತಿ ಪ್ರವೇಶಿಸುತ್ತಾಳೆ ಎಂದು ಅರ್ಥ. ನಿಮ್ಮ ಬಗ್ಗೆ ಒಲವನ್ನು ಹೊಂದಿರುವ ಯುವತಿಯೊಬ್ಬಳು ಪ್ರೀತಿಯನ್ನು ಹೇಳಲಾಗದೆ ಚಡಪಡಿಸುತ್ತಿದ್ದರೆ ನಿಮ್ಮ ಕನಸಿನಲ್ಲಿ ಸುಂದರ ಯುವತಿ ಬರುತ್ತಾಳೆ.

ಕೆಲವು ಕನಸು ಮಂಗಳಕರವಾಗಿರುತ್ತದೆ ಕನಸಿನಲ್ಲಿ ಜೇನು ಹುಳುಗಳನ್ನು ನೋಡಿದರೆ ಶುಭ ಸೂಚಕವಾಗಿದೆ ಆದರೆ ಧನಾಗಮನವಾಗುತ್ತದೆ ಎಂದು ಅರ್ಥ. ಮರವನ್ನು ಏರುತ್ತಿರುವ ಕನಸು ಕಂಡರೆ ಏಳಿಗೆಯಾಗುತ್ತಾರೆ ಎಂದು ಅರ್ಥ ಉದ್ಯೋಗದಲ್ಲಿ ಪ್ರಮೋಷನ್ ಪಡೆಯಬಹುದು. ಕನಸಿನಲ್ಲಿ ದೇವರ ದರ್ಶನ ಪೂಜಾ ಸ್ಥಳಗಳು ಕಂಡರೆ ಮಂಗಳಕರ ಎಂಬ ನಂಬಿಕೆ ಇದೆ, ದೇವರ ಆಶೀರ್ವಾದವನ್ನು ಪಡೆಯಲಿದ್ದಾರೆ ಎಂದು ಅರ್ಥ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

ಕನಸಿನಲ್ಲಿ ಸ್ತ್ರೀ ನೃತ್ಯ ಮಾಡುತ್ತಿರುವಂತೆ ಕಂಡರೆ ಮಂಗಳಕರ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಹಾಗೂ ಧನಾಗಮನವಾಗುತ್ತದೆ. ಬಿಲದ ಬಳಿ ಹಾವು ಇರುವಂತೆ ಕನಸು ಕಂಡರೆ ಶುಭ ಧನಾಗಮನವಾಗುತ್ತದೆ. ಅಜೀರ್ಣ ಮುಂತಾದ ರೋಗಬಾಧೆಯಿಂದ ಕನಸು ಕಂಡರೆ ಅರ್ಥ ಕಲ್ಪಿಸಿಕೊಳ್ಳಬಾರದು. ಕನಸಿನಲ್ಲಿ ಮೆಚ್ಚಿನ ದೈವ ಮುತ್ತೈದೆ ನದಿ ಬಿಳಿ ವಸ್ತುಗಳು ತುಳಸಿ ಗಿಡ ಪುಣ್ಯ ಸ್ಥಳಗಳು ಕಂಡರೆ ಶುಭ ಫಲ ಸಿಗುತ್ತದೆ. ಕನಸಿನಲ್ಲಿ ಬೆಂಕಿಯ ಜ್ವಾಲೆ ಕಂಡು ಬಂದರೆ ಭೋಗ ಸಂಪತ್ತು ಲಭಿಸುತ್ತದೆ ಎಂದು ಅರ್ಥ.

ಕನಸಿನಲ್ಲಿ ಅನ್ನ ಕಂಡರೆ ಕೈಗೊಂಡ ಕಾರ್ಯ ನೆರವೇರುತ್ತದೆ, ಸತ್ತವರು ಬದುಕಿ ಬಂದ ಕನಸು ಕಂಡರೆ ಮರಣಭಯ ಉಂಟಾಗುತ್ತದೆ ಕನಸಿನಲ್ಲಿ ಹಾವು ಕಂಡರೆ ಅಪಮೃತ್ಯು ಮನಸ್ಸಿನಲ್ಲಿ ಲೈಂಗಿಕ ಬಯಕೆಗಳಿದ್ದಾಗ ಕನಸಿನಲ್ಲಿ ಹಾವು ಕಾಣಿಸುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಮಾವಿನ ಹಣ್ಣು ಬಾಳೆಹಣ್ಣು ಕನಸಿನಲ್ಲಿ ಕಂಡರೆ ಸಂತಾನ ಪ್ರಾಪ್ತಿ ಆಗುತ್ತದೆ ಭೋಜನ ಮಾಡಿದಂತೆ ಕನಸು ಕಂಡರೆ ರೋಗ ಭಯ. ಕನಸಿನಲ್ಲಿ ಮಲ ಕಂಡರೆ ಧನಪ್ರಾಪ್ತಿ, ಕನಸಿನಲ್ಲಿ ಮಳೆ ಬಂದರೆ ಪ್ರಯಾಣ ಹಾರಿಕೊಂಡು ಹೋದಂತೆ ಕಂಡರೆ ಸ್ಥಾನ ಪಲ್ಲಟ ಕೆಂಪು ಇಲ್ಲವೆ ಕಪ್ಪು ಬಣ್ಣದ ವಸ್ತುಗಳು ಕಂಡರೆ ಕೇಡು, ಕನಸಿನಲ್ಲಿ ಶೀತ ನೆಗಡಿಯಾಗಿದ್ದರೆ ಮನೆಗೆ ಅತಿಥಿಗಳು ಬರುತ್ತಾರೆ. ಕನಸಿನಲ್ಲಿ ಸಂಗೀತ ಕೇಳುತ್ತಿದ್ದರೆ ಸಾಲ ಮಾಡುವ ಪ್ರಸಂಗ ಒದಗುತ್ತದೆ, ಜಗಳ ಮಾಡುತ್ತಿರುವಂತೆ ಕಂಡರೆ ತೊಂದರೆ, ದೇವರ ಪೂಜೆ ಮಾಡುತ್ತಿದ್ದಂತೆ ಕಂಡರೆ ಸಾಲ ಪರಿಹಾರವಾಗುತ್ತದೆ,

ವಿಧವೆ ಬೆತ್ತಲೆ ಇದ್ದವರು ಕನಸಿನಲ್ಲಿ ಬಂದರೆ ದುಃಖ, ಹೆಂಡ ಕಂಡರೆ ಶುಭ ಸೂಚಕ ಹಲ್ಲು ಬಿದ್ದಂತೆ ಕನಸು ಕಂಡರೆ ವ್ಯಸನ, ಕನಸಿನಲ್ಲಿ ಹೆಣ ಕಂಡರೆ ಅದರಲ್ಲೂ ತಾನೆ ಸತ್ತಂತೆ ಕಂಡರೆ ದೀರ್ಘಾಯುಷಿ, ಸತ್ತವರು ಬಂದು ಅಪ್ಪಿದರೆ ಸಾವು, ಕನಸಿನಲ್ಲಿ ಹೆಣ್ಣು ಕಂಡರೆ ಶುಭ. ರಾತ್ರಿ 9 ಗಂಟೆಯಿಂದ 12 ಗಂಟೆಯ ಒಳಗೆ ಬಿದ್ದ ಕನಸುಗಳು ಒಂದು ತಿಂಗಳಲ್ಲಿ ಫಲ ಕಂಡು ಬರುತ್ತದೆ 12 ಗಂಟೆಯಿಂದ 3 ಗಂಟೆಯವರೆಗೆ ಕನಸು ಕಂಡರೆ ಒಂದು ವಾರದಲ್ಲಿ ಫಲ ಸಿಗುತ್ತದೆ 3 ಗಂಟೆಯಿಂದ 6 ಗಂಟೆ ಒಳಗೆ ಕಂಡ ಕನಸುಗಳಿಗೆ ಮೂರು ದಿನದಲ್ಲಿ ಫಲ ಸಿಗುತ್ತದೆ, ಸೂರ್ಯೋದಯದಲ್ಲಿ ಕಂಡುಬಂದ ಕನಸುಗಳಿಗೆ ಅದೆ ದಿನದಲ್ಲಿ ಫಲ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: