WhatsApp Group Join Now
Telegram Group Join Now

Diwali Festival Time Dhanalakshmi Kalasa: ಈ ಲೇಖನದಲ್ಲಿ ದೀಪಾವಳಿ ಹಬ್ಬದಲ್ಲಿ ಕಳಸವನ್ನು ಯಾವ ರೀತಿಯಾಗಿ ಪ್ರತಿಷ್ಠಾಪನೆ ಮಾಡಬೇಕು ಎಂದು ಇಲ್ಲಿ ನಾವು ತಿಳಿಸಿಕೊಡುತ್ತೇವೆ. ದೀಪಾವಳಿಯಂದು ಲಕ್ಷ್ಮಿ ಗೆ ಪೂಜೆ ಮಾಡುವುದರಿಂದ ಲಕ್ಷ್ಮಿಗೆ ಇಷ್ಟ ವಾದ ವಸ್ತುವನ್ನು ಬಳಸುವುದು ಶ್ರೇಷ್ಠ.

ಲಕ್ಷ್ಮಿ ಅನುಗ್ರಹವನ್ನು ಹೆಚ್ಚಾಗಿ ಪಡೆಯಬೇಕು ಎಂದರೆ ರಂಗೋಲಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಅದರ ಮೇಲೆ ಕಳಸ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ರಂಗೋಲಿಯ ಮೇಲೆ ಒಂದು ಪ್ಲೇಟಿನಲ್ಲಿ 3 ಪಾವ್ ಅಕ್ಕಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಸ್ತಿಕ್ ಹಾಗೂ ಅಷ್ಟು ದಳ ರಂಗೋಲಿಯನ್ನು ಹಾಕಬೇಕಾಗುತ್ತದೆ. ಅಕ್ಕಿ ಮೇಲೆ ರಂಗೋಲಿ ಹಾಕಿದ ನಂತರ ಎರಡು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಅದರ ಮೇಲೆ ಶ್ರೀಂ ಎನ್ನುವ ಬೀಜಾಕ್ಷರಿ ಮಂತ್ರವನ್ನು ಬರೆಯಬೇಕು. ಅದರ ಮೇಲೆ ಅಕ್ಷತೆ ಹಾಕಿ ಅದರ ಮೇಲೆ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು. ಕಳಸದಲ್ಲಿರುವ ನೀರು ಮನೆಯ ಬಾವಿಯದಾದರೆ ಒಳ್ಳೆಯದು,ಆ ಕಳಸಕ್ಕೆ ಅರಿಶಿನ ಕುಂಕುಮ ಹಚ್ಚಿ ನಂತರ ಕಂಕಣವನ್ನು ಕಟ್ಟಬೇಕು.

ಕಳಸದ ಒಳಗೆ ಸ್ವಲ್ಪ ಗಂಗಾಜಲ, ಅರಿಶಿಣ ಕುಂಕುಮ ಹಾಗೂ ಹಸುವಿನ ಗಂಜಲವನ್ನು ಹಾಕಬೇಕು ಅದರ ನಂತರ ಲಕ್ಷ್ಮಿ ಅನುಗ್ರಹವನ್ನು ಪಡೆಯಲು ಪಂಚ ಕರ್ಪೂರ, ಎರಡು ಅಡಿಕೆಯನ್ನು ಹಾಕಬೇಕು ಮತ್ತು ಎರಡು ಏಲಕ್ಕಿಯನ್ನು ಹಾಕಬೇಕು ಜೊತೆಯಲ್ಲಿ ಒಂದು ಬೆಳ್ಳಿ ನಾಣ್ಯವನ್ನು ಕಳಸಕ್ಕೆ ಹಾಕಬೇಕು. ನಂತರ ಸ್ವಲ್ಪ ಅಕ್ಷತೆ ಮತ್ತು ಒಂದು ಕೆಂಪು ಹೂವು ಹಾಗೂ ಗರಿಕೆಯನ್ನು ಕಳಸಕ್ಕೆ ಹಾಕಿ. ನಂತರ 5 ಮಾವಿನ ಎಲೆ ಅಥವಾ ವೀಳ್ಯದೆಲೆಯನ್ನು ಹಾಕಿ ಅದರ ಮೇಲೆ ಒಂದು ಕಾಯಿಗೆ ಅರಿಶಿನ ಹಚ್ಚಿ ಕಳಸದ ಗಿಂಡಿ ಮೇಲೆ ಇಡಬೇಕು.

ಅರಿಶಿನ ಕೊಂಬಲ್ಲಿ ಐದು ತುದಿ ಬರುವ ಕೊಂಬನ್ನು ತೆಗೆದುಕೊಂಡು ಅದಕ್ಕೆ ಅಂಗನೂಲಿನಿಂದ ದಾರವನ್ನು ತಯಾರಿಸಿಕೊಳ್ಳಿ ಅದರ ನಂತರ ಮಾಂಗಲ್ಯ ದೇವಿಗೆ ಹಾಕಿ. ಮುಖ ಪದ್ಮಾವನ್ನು ಹಾಕುವ ಪದ್ಧತಿಯನ್ನು ಅನುಸರಿಸುತ್ತಿಲ್ಲವೆಂದರೆ ಕಾಯಿಗೆ ನೀವು ಕಣ್ಣು, ಮೂಗು ಬಾಯಿಯ ಆಕಾರವನ್ನು ಕೊಟ್ಟು ಆ ಕಾಯಿಯನ್ನು ಲಕ್ಷ್ಮಿ ಎಂದು ಭಾವಿಸಿ ಅದಕ್ಕೆ ಪೂಜೆ ಮಾಡಬಹುದು.

ಅದರ ನಂತರ ಕಳಸಕ್ಕೆ ಅಲಂಕಾರ ಮಾಡಿ ಮತ್ತು ನಿಮ್ಮ ಮನೆಯಲ್ಲಿ ಸೀರೆ ಉಡಿಸುವ ಪದ್ಧತಿ ಇದ್ದರೆ ಸೀರೆ ಉಡಿಸಿ ಇಲ್ಲವಾದರೆ ಬ್ಲೌಸ್ ಪೀಸ್ ಇಡಬಹುದು. ಎರಡು ನಾಣ್ಯವನ್ನು ತೆಗೆದುಕೊಳ್ಳಬೇಕು ಒಂದನ್ನು ಕಳಸದೊಳಗೆ ಹಾಕಬೇಕು ಇನ್ನೊಂದನ್ನು ದೇವಿಯ ಮುಂದೆ ಇಡಬೇಕು. 108 ಕವಡೆ ಹಾಗೂ 108 ಹಸಿರು ಬಳೆಯನ್ನು ಇಡಬಹುದು. ದೇವಿಯ ಮುಂದೆ ಲಕ್ಷ್ಮಿ ಮತ್ತು ಗಣೇಶ್ ನ ಸಣ್ಣ ಮೂರ್ತಿಯನ್ನು ಇಡಿ. ದೇವಿಯ ಪಕ್ಕದಲ್ಲಿ ಒಂದು ಬಾಗಿನವನ್ನು ತಯಾರಿಸಿ ಇಡಿ. ಹಣ್ಣು ಹಂಪಲಗಳನ್ನು ಇಟ್ಟು ದೇವರಿಗೆ ಪೂಜೆ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: