ರಾಶಿ ಚಕ್ರ, ಚಿಹ್ನೆ, ಜಾತಕ ಮತ್ತು ಜನ್ಮ ದಿನಾಂಕದ ಪ್ರಕಾರ ಜನರ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ವಾರದಲ್ಲಿ ಪ್ರತಿದಿನವೂ ತನ್ನದೆ ಆದ ವಿಭಿನ್ನ ಶಕ್ತಿಯನ್ನು ಹೊಂದಿರುತ್ತದೆ ಒಂದೊಂದು ದಿನದಲ್ಲಿ ಹುಟ್ಟಿದ ಮಗು ವಿಭಿನ್ನ ರೀತಿಯ ವ್ಯಕ್ತಿತ್ವ ಗುಣ ಹಾಗೂ ಪ್ರತಿಫಲವನ್ನು ಪಡೆಯುತ್ತವೆ. ಹಾಗಾದರೆ ಯಾವ ದಿನ ಹುಟ್ಟಿದವರು ಅದೃಷ್ಟವಂತರಾಗಿರುತ್ತಾರೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರು ಹುಟ್ಟಿದ ದಿನದ ಆಧಾರದ ಮೇಲೆ ಅವರ ಬಗ್ಗೆ ತಿಳಿದುಕೊಳ್ಳಬಹುದು. ವಾರದ ಮೊದಲ ದಿನ ಸೋಮವಾರದಂದು ಜನಿಸಿದವರು ಬುದ್ಧಿವಂತರು ಹಾಗೂ ಶಾಂತ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ಅವರ ಮಾತು ಮಧುರವಾಗಿರುತ್ತದೆ ಮನ ಮುಟ್ಟುವಂತಿರುತ್ತದೆ. ಈ ದಿನ ಜನಿಸಿದವರು ಸ್ಥಿರ ಸ್ವಭಾವವನ್ನು ಹೊಂದಿರುತ್ತಾರೆ ಸಂತೋಷ ಅಥವಾ ದುಃಖವಾಗಿದ್ದರೂ ಎಲ್ಲಾ ಸಂದರ್ಭಗಳಲ್ಲಿ ಒಂದೇ ಆಗಿರುತ್ತಾರೆ. ಇವರು ಹಣದ ದೃಷ್ಟಿಯಿಂದಲೂ ಅದೃಷ್ಟವಂತರಾಗಿರುತ್ತಾರೆ. ಇವರಿಗೆ ಸರ್ಕಾರ ಹಾಗೂ ಸಮಾಜದಿಂದ ಗೌರವ ಸಿಗುತ್ತದೆ. ಚಂದ್ರನೊಂದಿಗಿನ ಸಂಪರ್ಕದಿಂದಾಗಿ ಇವರ ಮನಸ್ಸು ಚಂಚಲವಾಗಿರುತ್ತದೆ ಮತ್ತು ಇವರ ಆಲೋಚನೆಗಳು ನಿರಂತರವಾಗಿ ಬದಲಾಗುತ್ತಿರುತ್ತದೆ. ಇವರು ಕಲಾಭಿಮಾನಿಗಳು ಧೈರ್ಯಶಾಲಿಗಳು ಆಗಿರುತ್ತಾರೆ.

ಇವರು ಬಹಳ ತೀಕ್ಷ್ಣವಾದ ಸ್ಮರಣೆಯನ್ನು ಹೊಂದಿರುತ್ತಾರೆ ಆದರೆ ತಾಳ್ಮೆ ಕಡಿಮೆ. ಮಂಗಳವಾರದಂದು ಜನಿಸಿದವರು ಕೋಪಿಷ್ಟರು, ಧೈರ್ಯಶಾಲಿಗಳು, ಶಿಸ್ತು ಬದ್ಧರು ಶಕ್ತಿವಂತರಾಗಿರುತ್ತಾರೆ ಇವರು ಹೊಸ ಆಲೋಚನೆಗಳನ್ನು ಬೆಂಬಲಿಸುತ್ತಾರೆ. ಈ ದಿನದಂದು ಜನಿಸಿದವರ ಮೇಲೆ ಮಂಗಳನ ವಿಶೇಷ ಪ್ರಭಾವ ಇರುವುದರಿಂದ ಇವರು ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾರೆ ಹಾಗೂ ಯಾವಾಗಲೂ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಾರೆ. ಇವರ ವೈವಾಹಿಕ ಜೀವನದಲ್ಲಿ ವೈರುಧ್ಯದ ಸಂದರ್ಭಗಳು ಕಾಲಕಾಲಕ್ಕೆ ಬರುತ್ತದೆ ಈ ದಿನದಂದು ಜನಿಸಿದವರು ತಮ್ಮ ಅತಿಯಾದ ಕೋಪದಿಂದ ಸುತ್ತಮುತ್ತಲಿನವರೊಂದಿಗೆ ಹೊಂದಿಕೊಳ್ಳುವುದಿಲ್ಲ.

ಬುಧವಾರವನ್ನು ಗಣೇಶನ ದಿನವೆಂದು ಪರಿಗಣಿಸಲಾಗಿದೆ ಬುಧವಾರದಂದು ಜನಿಸಿದವರು ಬುದ್ಧಿವಂತರು ಮತ್ತು ಸಂಭಾಷಣೆಯಲ್ಲಿ ನಿಷ್ಣಾತರಾಗಿರುತ್ತಾರೆ. ಇವರು ತಮ್ಮ ಕುಟುಂಬದವರಿಗಾಗಿ ನಿಷ್ಠೆಯನ್ನು ಹೊಂದಿರುತ್ತಾರೆ ಹಾಗೂ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಈ ದಿನದಂದು ಜನಿಸಿದವರು ಅದೃಷ್ಟವಂತರು ಹೀಗಾಗಿ ಇವರು ಸಮಸ್ಯೆಗಳಿಂದ ಸುಲಭವಾಗಿ ಹೊರ ಬರುತ್ತಾರೆ. ಗುರುವಾರದಂದು ಜನಿಸಿದವರು ಮಹತ್ವಕಾಂಕ್ಷೆಯುಳ್ಳವರು ಮತ್ತು ಗಂಭೀರ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಯಾವುದೆ ಕಷ್ಟಕರ ಸಮಸ್ಯೆಯನ್ನು ತಮ್ಮ ಬುದ್ಧಿವಂತಿಕೆಯಿಂದ ಮತ್ತು ಧೈರ್ಯದಿಂದ ಎದುರಿಸುತ್ತಾರೆ

ಇವರ ಧೈರ್ಯ ಮತ್ತು ತರ್ಕದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ, ತಮ್ಮ ಆಲೋಚನೆ ಹಾಗೂ ಭಾವನೆಯನ್ನು ಇತರರ ಮುಂದೆ ಉತ್ತಮವಾಗಿ ಪ್ರಸ್ತುತಪಡಿಸುತ್ತಾರೆ ಅದಕ್ಕಾಗಿ ಜನರು ಇವರ ಪ್ರಭಾವಕ್ಕೆ ಒಳಗಾಗುತ್ತಾರೆ. ಇವರು ತಮ್ಮ ಸ್ನೇಹಿತರೊಂದಿಗೆ ಉತ್ತಮವಾಗಿರುತ್ತಾರೆ ಈ ದಿನದಂದು ಜನಿಸಿದವರ ಸ್ನೇಹಿತರು ಒಳ್ಳೆಯವರಾಗಿರುತ್ತಾರೆ ಮತ್ತು ಇವರ ಬಗ್ಗೆ ಶ್ರದ್ಧೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಏಳನೇ, 12ನೆ, 13ನೆ, 16ನೆ ಮತ್ತು 30ನೆ ವಯಸ್ಸಿನಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಶುಕ್ರವಾರದಂದು ಜನಿಸಿದವರ ಮಾತಿನಲ್ಲಿ ಮಾಧುರ್ಯ ಹಾಗೂ ಸರಳತೆ ಇರುತ್ತದೆ. ಇವರು ವಾದ ಮಾಡಲು ಹೋಗುವುದಿಲ್ಲ ಈ ದಿನದಲ್ಲಿ ಜನಿಸಿದವರು ಮನರಂಜನೆಗಾಗಿ ಹೆಚ್ಚು ಖರ್ಚು ಮಾಡುತ್ತಾರೆ ಇದರಿಂದ ಇವರ ಆರ್ಥಿಕ ಸಮತೋಲನ ತೊಂದರೆಗೆ ಒಳಗಾಗುತ್ತದೆ. ಈ ದಿನದಂದು ಜನಿಸಿದವರು ಐಶ್ವರ್ಯದಿಂದ ಕೂಡಿದ ಜೀವನವನ್ನು ಇಷ್ಟಪಡುತ್ತಾರೆ. ಇವರು ಇನ್ನೊಬ್ಬರನ್ನು ನೋಡಿ ಅಸೂಯೆ ಪಡುವುದು ಹೆಚ್ಚು. ಇವರ ವೈವಾಹಿಕ ಜೀವನ ಯಶಸ್ವಿಯಾಗಿ ಸಾಗುತ್ತಿರುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಯ ದಿನ ಈ ದಿನದಂದು ಜನಿಸಿದವರು ಉತ್ಸಾಹ ಭರಿತ ಸೌಮ್ಯ ಸ್ವಭಾವದವರಾಗಿರುತ್ತಾರೆ. ಇವರು ಎಂತಹ ಪರಿಸ್ಥಿತಿಯೊಂದಿಗೂ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ದಿನದಂದು ಜನಿಸಿದವರು ಲಕ್ಷ್ಮಿ ದೇವಿ ಕೃಪೆಯಿಂದಾಗಿ ಸಾಮಾನ್ಯವಾಗಿ ಎಲ್ಲಾ ಭೌತಿಕ ಸುಖವನ್ನು ಪಡೆಯುತ್ತಾರೆ.

ಇವರು ಯಾವಾಗಲೂ ಬೇರೆಯವರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಇವರು ಸಾಹಿತ್ಯ ಕಲೆ ಸಂಗೀತದ ಅಭಿಮಾನಿಗಳಾಗಿರುತ್ತಾರೆ. ಇವರು 20 ಮತ್ತು 24ನೆ ವಯಸ್ಸಿನಲ್ಲಿ ಕಷ್ಟವನ್ನು ಅನುಭವಿಸಬೇಕಾಗಬಹುದು. ಶನಿವಾರ ಜನಿಸಿದವರು ಸ್ನೇಹ ಬೆಳೆಸುವಾಗ ಜಾಗರೂಕರಾಗಿರಬೇಕು. ಇವರು ಕುಟುಂಬದವರಿಂದ ಹಾಗೂ ಸಂಬಂಧಿಕರಿಂದ ಸ್ವಲ್ಪ ದೂರ ಇರುತ್ತಾರೆ. ಈ ದಿನದಂದು ಜನಿಸಿದವರು ಎಷ್ಟೆ ತೊಂದರೆಯನ್ನು ಅನುಭವಿಸುತ್ತಿದ್ದರೂ ತಮ್ಮ ಲವಲವಿಕೆ ಸ್ವಭಾವದಲ್ಲಿ ವಿಚಲಿತರಾಗುವುದಿಲ್ಲ.

ಈ ದಿನದಂದು ಜನಿಸಿದವರು ಉತ್ತಮ ಮೈಬಣ್ಣ ಕೌಶಲ್ಯಗಳಲ್ಲಿ ಪರಿಣಿತರು ಆದರೆ ಕೋಪದ ಸ್ವಭಾವವನ್ನು ಹೊಂದಿರುತ್ತಾರೆ ಇವರು ಬೇಗನೆ ಜನರೊಂದಿಗೆ ಸಂಘರ್ಷ ಮಾಡುತ್ತಾರೆ, ಇವರು ತಮ್ಮ ದೃಢ ಸಂಕಲ್ಪದಲ್ಲಿ ನಿಷ್ಠೆಯನ್ನು ಹೊಂದಿರುತ್ತಾರೆ. ಇವರು ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗಿದ್ದರೂ ಕೊನೆಯಲ್ಲಿ ಜಯಶಾಲಿಗಳಾಗಿ ಹೊರಹೊಮ್ಮುತ್ತಾರೆ. ಇವರು ಜೀವನದಲ್ಲಿ ಬಹಳ ಜಾಗರೂಕರಾಗಿರುತ್ತಾರೆ ಇದರಿಂದ ಕೆಲವೊಮ್ಮೆ ಸೋಮಾರಿಗಳಾಗುತ್ತಾರೆ. ಇವರು ಕೆಲವೆ ಸ್ನೇಹಿತರನ್ನು ಹೊಂದಿರುತ್ತಾರೆ ಹಾಗೂ ಇವರ ಬಗ್ಗೆ ನಿಷ್ಠೆಯನ್ನು ಹೊಂದಿರುತ್ತಾರೆ. ಇವರು 20, 25 ಹಾಗೂ 45ನೆ ವಯಸ್ಸಿನಲ್ಲಿ ದುಃಖ ಪಡುತ್ತಾರೆ.

ಭಾನುವಾರ ಸೂರ್ಯದೇವನಿಗೆ ಸಂಬಂಧಿಸಿದೆ ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದಾನೆ. ಸಿಂಹವು ಸ್ವಾತಂತ್ರ್ಯವನ್ನು ಇಷ್ಟಪಡುತ್ತದೆ. ಭಾನುವಾರ ಜನಿಸಿದವರು ಇನ್ನೊಬ್ಬರ ಅಧಿಕಾರದ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಇವರು ಸಾಮಾನ್ಯವಾಗಿ ಅದೃಷ್ಟವಂತರಾಗಿರುತ್ತಾರೆ. ಇವರು ಕಡಿಮೆ ಮಾತನಾಡುತ್ತಾರೆ ಕಲೆ ಶಿಕ್ಷಣ ಕ್ಷೇತ್ರದಲ್ಲಿ ಗೌರವ ಪಡೆಯುತ್ತಾರೆ. ಇವರಿಗೆ ಧರ್ಮದ ಬಗ್ಗೆ ಆಸಕ್ತಿ ಇರುತ್ತದೆ ಹಾಗೂ ಕುಟುಂಬದ ಸದಸ್ಯರನ್ನು, ಸ್ನೇಹಿತರನ್ನು ಸಂಬಂಧಿಕರನ್ನು ಖುಷಿ ಪಡಿಸಲು ಪ್ರಯತ್ನಿಸುತ್ತಾರೆ.

ಇವರಿಗೆ ನಾಯಕತ್ವ ಜವಾಬ್ದಾರಿಯನ್ನು ವಹಿಸಿದರೆ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ. ಇವರು ದೀರ್ಘಕಾಲದವರೆಗೆ ಬದುಕುತ್ತಾರೆ ಹಾಗೂ ಇವರ ಮಾತಿಗೆ ಬಹಳಷ್ಟು ಜನರು ಪ್ರಭಾವಿತರಾಗುತ್ತಾರೆ. ಇವರು ಕಲೆ ಸಾಹಿತ್ಯ ಶಿಕ್ಷಣ ಸಮಾಲೋಚನೆ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇವರು 20 ರಿಂದ 22ನೆ ವಯಸ್ಸಿನಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ನೀವು ಯಾವ ವಾರದಲ್ಲಿ ಜನಿಸಿದ್ದೀರಾ ಎಂದು ನಮಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By

Leave a Reply

Your email address will not be published. Required fields are marked *

error: Content is protected !!
Footer code: