ರಾಮಾಯಣದಲ್ಲಿ ಆಂಜನೇಯನ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ ರಾಮನಿಗೂ ರಾವಣನಿಗೂ ಯುದ್ಧ ನಡೆಯುತ್ತಿದ್ದಾಗ ಲಕ್ಷ್ಮಣನಿಗೆ ಗಂಭೀರವಾಗಿ ಗಾಯವಾಗುತ್ತದೆ ಆಗ ಆಂಜನೇಯನು ಲಕ್ಷ್ಮಣ ಗುಣಮುಖವಾಗಬೇಕೆಂದು ಸಂಜೀವಿನಿ ಬೆಟ್ಟವನ್ನೇ ಹೊತ್ತು ತರುತ್ತಾನೆ. ಆಂಜನೇಯನಿಗೆ ಪವನ ಪುತ್ರ ಎಂದು ಕೂಡ ಕರೆಯುತ್ತಾರೆ ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಸಾಕು ರಕ್ಷಣೆಗೆ ಬರುತ್ತಾನೆ.
ಆಂಜನೇಯನನ್ನು ಒಲಿಸಿಕೊಳ್ಳಲು ಸರಳವಾದ ಉಪಾಯವಿದೆ ಉದ್ಯೋಗದಲ್ಲಿ ಸಮಸ್ಯೆ ಆಗುತ್ತಿದ್ದರೆ ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದರೆ ಕಲ್ಯಾಣ ಭಾಗ್ಯ ಕೂಡಿ ಬರುತ್ತಿಲ್ಲವಾದರೆ ಸಂತಾನ ಭಾಗ್ಯ ಇಲ್ಲವೆಂದು ಕೊರಗಿದ್ದರೆ ಆಂಜನೇಯನ ಕೃಪಕಟಾಕ್ಷದಿಂದ ಪರಿಹಾರವಾಗುತ್ತದೆ. ಹಾಗಾದರೆ ಆಂಜನೇಯನ ಒಲಿಸಿಕೊಳ್ಳುವ ಉಪಾಯಗಳನ್ನು ಈ ಲೇಖನದಲ್ಲಿ ನೋಡೋಣ
ಪವನ ತನಯ ಸಂಕಟ ಹರಣ ಮಂಗಳಮೂರ್ತಿ ರೂಪ ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರಭೂಪ್ ಸಿಯಾವರ ರಾಮಚಂದ್ರ ಕಿ ಜೈ ಪವನ ಸುತ ಹನುಮಾನ ಕಿ ಜೈ ಬೋಲೊ ಭಾಯಿ ಸಬ್ ಸಂತನ ಕಿ ಜೈ ಹನುಮಾನ್ ಚಾಲೀಸ್ ನ ಕೊನೆಯಲ್ಲಿ ಬರುವ ದೋಹದ ಸಾಲುಗಳಿವು ಹನುಮಾನ್ ಚಾಲೀಸಾವನ್ನು ಪ್ರತಿನಿತ್ಯ ಪಠಿಸಿದರೆ ಸಾಕು ಪವನಪುತ್ರ ಹನುಮನು ನಮ್ಮ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಕೊಡುತ್ತಾನೆ.
ಹನುಮಂತನಿಗೆ ಹನುಮ ಎಂದು ಕರೆಯಲು ಒಂದು ಕಾರಣವಿದೆ ಹನುಮಂತ ಎಂದರೆ ಸಂಸ್ಕೃತದಲ್ಲಿ ಅಕ್ಷರಶಃ ವಿರೂಪಗೊಂಡ ದವಡೆ ಎಂದು ಅರ್ಥ ಹನು ಎಂದರೆ ದವಡೆ ಮಂತ ಎಂದರೆ ವಿರೂಪ ಹನುಮಂತನು ಬಾಲ್ಯದಲ್ಲಿ ಸೂರ್ಯನನ್ನು ಹಣ್ಣೆಂದು ಭಾವಿಸಿ ತಿನ್ನಲು ಹೋಗುತ್ತಾನೆ ಆಗ ಇಂದ್ರನು ಇದನ್ನು ತಪ್ಪಿಸಲು ತನ್ನ ವಜ್ರಾಯಧವನ್ನು ಹನುಮಂತನ ಮೇಲೆ ಎಸೆಯುತ್ತಾನೆ ವಜ್ರಾಯುಧ ಘಾತಕ್ಕೊಳಗಾದ ಹನುಮಂತನು ಭೂಮಿಯ ಮೇಲೆ ಬೀಳುತ್ತಾನೆ ವಜ್ರಾಯುಧ ಆಘಾತದಿಂದ ಹನುಮಂತನ ದವಡೆ ಶಾಶ್ವತವಾಗಿ ವಿರೂಪಗೊಳ್ಳುತ್ತದೆ ಈ ಕಾರಣದಿಂದ ಈತನಿಗೆ ಹನುಮ ಎಂಬ ಹೆಸರು ಬಂತು.
ಯಾವುದೆ ದೇವಸ್ಥಾನಕ್ಕೆ ಹೋದರೂ ಅಲ್ಲಿ ಹಣ್ಣು ಕಾಯಿ ಮಾಡಿಸುವುದನ್ನು ನೋಡಿರುತ್ತೀರಾ ಬಹಳ ಕಡಿಮೆ ಜನ ಹನುಮಂತನಿಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಹನುಮಂತನ ದೇವಸ್ಥಾನಕ್ಕೆ ಹೋಗುವಾಗ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಿ ಹನುಮಂತನಿಗೆ ಅರ್ಪಿಸಿ ಜೊತೆಗೆ ಸಿಂಧೂರವನ್ನು ಹಚ್ಚಿ ಸಾಧ್ಯವಾದಲ್ಲಿ ಕೆಂಪು ದಾರವನ್ನು ಕಟ್ಟಬೇಕು ಹೀಗೆ ಕನಿಷ್ಠ 11 ಮಂಗಳವಾರ ಮಾಡುವುದರಿಂದ ಯಾವ ಭೂತ ಪಿಶಾಚಿ ನಕಾರಾತ್ಮಕ ಶಕ್ತಿ ನಮ್ಮ ಹತ್ತಿರ ಸುಳಿಯುವುದಿಲ್ಲ.
ಆಂಜನೇಯನ ದೇವಸ್ಥಾನದಲ್ಲಿ ತೆಂಗಿನಕಾಯಿ ಒಂದನ್ನು ಪೂಜೆ ಮಾಡಿಸಿಕೊಂಡು ಬಂದು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಅದರೊಂದಿಗೆ ಸ್ವಲ್ಪ ಸಾಸಿವೆಯನ್ನು ಇಟ್ಟು ಗಂಟು ಕಟ್ಟಿ ಅದನ್ನು ಮನೆಯ ಹೆಬ್ಬಾಗಿಲಿಗೆ ಕಟ್ಟಬೇಕು ಇದರಿಂದ ಯಾರಾದರೂ ಮನೆ ಮೇಲೆ ಮಾಟಾ ಮಂತ್ರ ಮಾಡಿದರೆ ಅದು ಅಲ್ಲಿಯೇ ತನ್ನ ಶಕ್ತಿಯನ್ನು ಕಳೆದುಕೊಂಡು ಬಿಡುತ್ತದೆ. ಆಂಜನೇಯ ದೇವಸ್ಥಾನದಲ್ಲಿ ಬೆಲ್ಲ ಹಾಗೂ ಹುರಿಗಡಲೆಯ ಪ್ರಸಾದವನ್ನು ಕೊಡುತ್ತಾರೆ ಮಂಗಳ ದೋಷ ಇರುವವರು ಆಂಜನೇಯನಿಗೆ ಬೆಲ್ಲದ ಪ್ರಸಾದವನ್ನು ಪ್ರತಿ ಮಂಗಳವಾರ ಮತ್ತು ಶನಿವಾರ ಅರ್ಪಿಸಬೇಕು ಇದರಿಂದ ಆಂಜನೇಯನು ಬೇಗ ಸಂತುಷ್ಟನಾಗುತ್ತಾನೆ.
ಶನಿವಾರದಂದು ಏಲಕ್ಕಿ ಲವಂಗ ಹಾಗೂ ಅಡಿಕೆಯನ್ನು ಆಂಜನೇಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಆಂಜನೇಯ ಸ್ವಾಮಿ ನೈವೇದ್ಯಕ್ಕೆ ಇಡಬೇಕು ಹೀಗೆ ಮಾಡುವುದರಿಂದ ಶನಿ ಗ್ರಹದ ದುಷ್ಪರಿಣಾಮ ಕಡಿಮೆಯಾಗುತ್ತದೆ ಜೊತೆಗೆ ಎಣ್ಣೆಯ ದೀಪದಲ್ಲಿ ಲವಂಗ ಹಾಕಿ ಆಂಜನೇಯ ಸ್ವಾಮಿಗೆ ಆರತಿಯನ್ನು ಮಾಡಿದರೆ ಧನ ಲಾಭವಾಗುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ. ಆಂಜನೇಯನ ಆರಾಧನೆಗೆ ಶ್ರೇಷ್ಠ ದಿನವಾದ ಮಂಗಳವಾರದಂದು ಸೂರ್ಯೋದಯಕ್ಕಿಂತ ಮುಂಚೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ನಂತರ ಅರಳಿಮರದಿಂದ 11 ಎಲೆಗಳನ್ನು ಕಿತ್ತುಕೊಂಡು ಅವುಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಎಲೆಯ ಮೇಲೆ ಕುಂಕುಮ ಹಾಗೂ ಶ್ರೀಗಂಧದಿಂದ ಶ್ರೀರಾಮ ಎಂದು ಬರೆದು ಎಲೆಗಳಿಂದ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಬೇಕು ಇದರಿಂದ ಹಣಕಾಸಿನ ಸಮಾಸ್ಯೆ ಅತಿ ಶೀಘ್ರದಲ್ಲಿ ನಿವಾರಣೆಯಾಗುತ್ತದೆ.
ಮಂಗಳವಾರ ಸಂಜೆ ಸಮಯದಲ್ಲಿ ತುಳಸಿ ಎಲೆಯನ್ನು ಹಾಕಿದ ರವೆ ಅಥವಾ ಬೂಂದಿಯ ಲಡ್ಡುಗಳನ್ನು ಆಂಜನೇಯನಿಗೆ ಅರ್ಪಿಸಬೇಕು ಆಂಜನೇಯನಿಗೆ ಲಡ್ಡುಗಳೆಂದರೆ ಬಹಳ ಪ್ರೀತಿ ಹೀಗೆ ಮಾಡುವುದರಿಂದ ನಮ್ಮ ಮೇಲೆ ಕೆಂಗಣ್ಣು ಇಟ್ಟಿರುವ ಗ್ರಹಗಳು ಶಾಂತವಾಗುತ್ತದೆ. ಬೆಳಗ್ಗೆ ಎದ್ದು ಸ್ನಾನಾದಿ ಕೆಲಸಗಳನ್ನು ಮುಗಿಸಿ ಆಂಜನೇಯನ ದೇವಸ್ಥಾನಕ್ಕೆ ಹೋಗಿ ವಿಧಿ ವಿಧಾನದ ಪ್ರಕಾರ ಪೂಜೆಯನ್ನು ಮಾಡಿದ ನಂತರ ವೀಳ್ಯದೆಲೆಯನ್ನು ಹನುಮನಿಗೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ಉದ್ಯೋಗ ಸಿಗುತ್ತಿಲ್ಲ ಸಂತಾನ ಸಮಸ್ಯೆ ಕಲ್ಯಾಣ ಭಾಗ್ಯ ಸಮಸ್ಯೆ ಎಲ್ಲಾ ಸಮಸ್ಯೆಗಳಿಗೆ ಹನುಮನು ಪರಿಹಾರ ನೀಡುತ್ತಾನೆ. ಯಾವುದಾದರೂ ಒಂದು ಕೆಲಸ ಈಡೇರದೆ ಹಾಗೆಯೆ ಉಳಿದುಕೊಂಡಿದ್ದರೆ ಮಂಗಳವಾರದಂದು ಆಂಜನೇಯ ದೇವಸ್ಥಾನಕ್ಕೆ ಹೋಗಿ ಸಿಹಿಪಾನವನ್ನು ಅರ್ಪಿಸಬೇಕು ಇದರಿಂದ ಆ ಕೆಲಸ ಈಡೇರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493