ಅಡುಗೆ ಮನೆ ಮನೆಯವರ ಹೊಟ್ಟೆ ತುಂಬಿಸುವ ಪ್ರಮುಖ ಸ್ಥಳವಾಗಿದೆ. ಇಡಿ ಮನೆಗೆ ಸಕಾರಾತ್ಮಕ ಶಕ್ತಿ ಹೋಗುವ ಸ್ಥಳ ಇದೆ ಆಗಿರುತ್ತದೆ ಇಂತಹ ಅಡುಗೆ ಮನೆಯಲ್ಲಿ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯದ ಸ್ಥಿತಿಯಲ್ಲಿ ಸಮಸ್ಯೆ ಬರುತ್ತದೆ ಹಾಗಾದರೆ ಅಡುಗೆ ಮನೆಯಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಾವುವು ಹಾಗೂ ಅದಕ್ಕೆ ಪರಿಹಾರವೇನು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ
ಅಡುಗೆ ಮನೆಯಲ್ಲಿ ಮಾಡುವ ಸಣ್ಣ ತಪ್ಪಿನಿಂದ ಮನೆಯ ಹಣಕಾಸು ವ್ಯವಸ್ಥೆಯಲ್ಲಿ ಕೊರತೆ ಆಗುತ್ತದೆ, ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾಡುವ ತಪ್ಪಿನಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಒಲೆಯ ಮೇಲೆ ಖಾಲಿ ಪಾತ್ರೆಯನ್ನು ಇಡಬಾರದು ಒಂದು ವೇಳೆ ಹಾಗೆ ಇಟ್ಟರೆ ಹಣಕಾಸಿನ ಸಮಸ್ಯೆ ಬರುತ್ತದೆ, ಖರ್ಚು ಹೆಚ್ಚಾಗುತ್ತದೆ ಈ ಕಾರಣದಿಂದ ಮನೆಯಲ್ಲಿ ಜಗಳ, ಮನಸ್ತಾಪ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಊಟದ ನಂತರ ಪಾತ್ರೆಗಳನ್ನ ತೊಳೆದು ಬಿಡಬೇಕು ಸಿಂಕ್ ನಲ್ಲಿ ಹಾಗೆಯೆ ಹೆಚ್ಚು ಹೊತ್ತು ಪಾತ್ರೆಗಳನ್ನು ಬಿಡಬಾರದು ಒಂದು ವೇಳೆ ಹೀಗೆ ಮಾಡಿದರೆ ಮನೆಯಲ್ಲಿ ಆರ್ಥಿಕ ನಷ್ಟವಾಗುತ್ತದೆ ಇದು ಸಾಲಕ್ಕೆ ಕಾರಣ ಆಗುತ್ತದೆ. ಒಲೆಯ ಮೇಲೆ ಹೆಂಚನ್ನು ಇಟ್ಟ ತಕ್ಷಣ ರೊಟ್ಟಿ ಅಥವಾ ಚಪಾತಿಯನ್ನು ಬೇಯಿಸುತ್ತಾರೆ ಆದರೆ ಹಾಗೆ ಮಾಡಬಾರದು ಒಲೆಯ ಮೇಲೆ ಹೆಂಚನ್ನು ಇಟ್ಟ ತಕ್ಷಣ ಹೆಂಚಿಗೆ ಸ್ವಲ್ಪ ನೀರನ್ನು ಚುಮುಕಿಸಬೇಕು ಆಗ ಅನ್ನಪೂರ್ಣೇಶ್ವರಿಯ ಆಶೀರ್ವಾದ ಪಡೆದಂತಾಗುತ್ತದೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ.
ಕೆಲವರು ಅಡುಗೆ ಮನೆಯಲ್ಲಿ ಕಸದ ತೊಟ್ಟಿಯನ್ನು ಇಟ್ಟು ಕಸವನ್ನು ಸಂಗ್ರಹಿಸುತ್ತಾ ಇರುತ್ತಾರೆ ಹೀಗೆ ಮಾಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಡುಗೆ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಲೆ ಹಚ್ಚುವ ಮೊದಲು ಒಲೆಗೆ ನಮಸ್ಕಾರ ಮಾಡಿ ಅಡುಗೆ ಪ್ರಾರಂಭಿಸುವುದು ಮಂಗಳಕರ. ಒಲೆಯ ಮೇಲೆ ಅಡುಗೆ ಬೇಯಲು ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿರುತ್ತಾರೆ ಹೀಗೆ ಮಾಡುವುದರಿಂದ ಮನೆಯ ಆರ್ಥಿಕ ಸ್ಥಿತಿ ಕೆಡುತ್ತದೆ. ಬಹಳ ವರ್ಷಗಳಿಂದ ಒಂದೆ ಹೆಂಚನ್ನು ಬಳಸಬಾರದು, ಹೆಂಚನ್ನು ಉಲ್ಟಾ ಇಡಬಾರದು ಮನೆಯಲ್ಲಿ ಸೂತಕದ ವಾತಾವರಣ ಇದ್ದಾಗ ಮಾತ್ರ ಹೆಂಚನ್ನು ಉಲ್ಟಾ ಇಡುತ್ತಾರೆ, ರೊಟ್ಟಿ ಬಯಸಿದ ನಂತರ ಹೆಂಚನ್ನು ತಕ್ಷಣ ತೊಳೆಯಲು ಹಾಕುವುದು ಅಥವಾ ತಣ್ಣಗಾಗಲಿ ಎಂದು ನೀರನ್ನು ಹಾಕುವುದನ್ನು ಮಾಡಬಾರದು ಇದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.
ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕನ್ನಡಿ ಅಥವಾ ಅಲಂಕಾರಿಕ ವಸ್ತುಗಳು ಇರಬಾರದು ಇದು ಅಶುಭ. ಅಡುಗೆ ಮನೆಯಲ್ಲಿ ಒಡೆದ ಪಾತ್ರೆಗಳನ್ನು ಇಡಬಾರದು ಇದು ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಅಡುಗೆ ಮನೆಯಲ್ಲಿ ಔಷಧಿಗಳನ್ನು ಇಡಬಾರದು ಇದು ಅನಗತ್ಯ ಖರ್ಚಿಗೆ ದಾರಿಯಾಗುತ್ತದೆ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೇವಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾತ್ರವಲ್ಲದೆ ಸುರಕ್ಷತೆ ದೃಷ್ಟಿಯಿಂದಲೂ ಪೆಟ್ರೋಲ್, ದಿನಪತ್ರಿಕೆ, ಜಿರಳೆ ಸ್ಪ್ರೇ, ಪರ್ಫ್ಯೂಮ್ ಗಳನ್ನು ಇಡಬಾರದು. ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ಮೊದಲು ಸ್ವಲ್ಪ ಭಾಗವನ್ನು ಹಸುವಿಗೆ ಎರಡನೆ ಸ್ವಲ್ಪ ಭಾಗವನ್ನು ನಾಯಿಗೆ ತಿನ್ನಲು ಕೊಡಬೇಕು ಇದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ. ಮನೆಯಲ್ಲಿ ಅಡುಗೆಮನೆ ಹಾಗೂ ಬಾತ್ ರೂಮ್ ಅಕ್ಕಪಕ್ಕ ಇರಬಾರದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು