ಕಷ್ಟ ಇದೆ ಯಾರಾದರೂ ಸಹಾಯ ಮಾಡಿ ಎಂದು ಕೇಳಿದಾಗ ನಮ್ಮ ಹತ್ತಿರ ಇರುವ ಹಣವನ್ನು ಕೊಡುವುದು ಮನುಷ್ಯನ ಧರ್ಮ ಕೆಲವು ಸ್ವಾರ್ಥಿಗಳು ತಾವು ಪಡೆದುಕೊಂಡ ಸಹಾಯವನ್ನು ಮರೆಯುವುದಲ್ಲದೆ ಅವರಿಗೆ ಹಿಂಸೆ ಕೊಡುತ್ತಾರೆ. ಬಾಯಿ ಬಿಟ್ಟು ಕೊಟ್ಟ ಹಣವನ್ನು ವಾಪಸ್ ಕೇಳಿದರೆ ಹಣ ಕೊಡದೆ ಓಡಾಡುತ್ತಿರುತ್ತಾರೆ. ಸುಲಭವಾಗಿ ಅವರೆ ಬಂದು ಹಣ ವಾಪಸ್ ಕೊಡುವಂತೆ ಮಾಡುವ ದಾರಿಯನ್ನು ಈ ಲೇಖನದಲ್ಲಿ ನೋಡೋಣ
ಎಲ್ಲರಿಗೂ ತಿಳಿದಿರುವ ಹಾಗೆ ಹಿಂದೂ ಧರ್ಮದಲ್ಲಿ ಕೆಲವು ಗಿಡಮರಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ ಗಿಡಗಳು ದೇವರ ಪ್ರತಿರೂಪ ಎಂದು ನಂಬಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಗಿಡಮರಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಕಷ್ಟ ಬಂದಾಗ ಹರಕೆ ಕಟ್ಟಿಕೊಂಡು ಅದೆಷ್ಟೊ ಮರಗಳನ್ನು ಸುತ್ತುತ್ತಾರೆ ಇದರಿಂದ ಕಷ್ಟಗಳು ದೂರವಾಗುವುದಲ್ಲದೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ತುಳಸಿ ಗಿಡ, ಆಲದ ಮರ, ಅರಳಿ ಮರ ಸೇರಿದಂತೆ ಅನೇಕ ಗಿಡಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಎಕ್ಕದ ಗಿಡದ ಬಗ್ಗೆ ಪುರಾಣಗಳಲ್ಲಿ ಹೇಳಲಾಗಿದೆ ಅಲ್ಲದೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಎಕ್ಕದ ಗಿಡದಲ್ಲಿ ಬೇರೆ ಬೇರೆ ಜಾತಿಗಳಿವೆ ಅವುಗಳಲ್ಲಿ ಬಿಳಿ ಎಕ್ಕದ ಗಿಡ ಧಾರ್ಮಿಕವಾಗಿ ಬಹಳ ಪವಿತ್ರತೆಯನ್ನು ಪಡೆದಿದೆ. ಬಿಳಿ ಎಕ್ಕದ ಗಿಡದ ಎಲೆ ಆಲದ ಮರದ ಎಲೆಗಿಂತ ದಪ್ಪವಾಗಿರುತ್ತದೆ, ಎಲೆಗಳು ಹಣ್ಣಾಗಿ ಉದುರುವ ಸಮಯದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಿಳಿ ಎಕ್ಕದ ಹೂವುಗಳು ಚಿಕ್ಕ ಚಿಕ್ಕದಾಗಿದ್ದು ಗೊಂಚಲಿನ ರೀತಿಯಲ್ಲಿ ಕಂಡು ಬರುತ್ತದೆ, ಈ ಗಿಡದ ಹಣ್ಣುಗಳು ಮಾವಿನ ಹಣ್ಣಿನ ಆಕಾರದಲ್ಲಿ ಇರುತ್ತದೆ.
ಎಕ್ಕದ ಗಿಡದ ರಂಬೆ ಕೊಂಬೆ ಎಲೆ ಹೂವುಗಳನ್ನು ಮುರಿದಾಗ ಬಿಳಿ ಬಣ್ಣದ ರಸ ಬರುತ್ತದೆ, ಈ ರಸ ಅತ್ಯಂತ ವಿಷಕಾರಿಯಾಗಿದ್ದು ಮನುಷ್ಯನ ಕಣ್ಣು ಮೂಗು ಚರ್ಮಕ್ಕೆ ತಾಗಿದರೆ ಸುಟ್ಟಂತಾಗುತ್ತದೆ. ಎಕ್ಕದ ಗಿಡದ ಬೇರಿನಿಂದ ಮಾಡಿದ ಗಣೇಶನ ಮೂರ್ತಿ ಅತ್ಯಂತ ಶುಭ. ಎರಡು ಅಥವಾ ಮೂರು ವರ್ಷದ ಹಳೆಯ ಎಕ್ಕದ ಗಿಡದ ಬೇರಿನಿಂದ ಗಣೇಶನ ವಿಗ್ರಹ ಮಾಡಿಸಿ ಪೀಠದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಸಕಲ ಸುಖ ಪ್ರಾಪ್ತಿಯಾಗುತ್ತದೆ. ಅಮಾವಾಸ್ಯೆ ದಿನದಂದು ಮಧ್ಯಾಹ್ನ 12 ಗಂಟೆಯೊಳಗೆ ಬಿಳಿ ಎಕ್ಕದ ಗಿಡದ ಹತ್ತಿರ ಒಂದು ತಂಬಿಗೆ ನೀರು ಹಾಗೂ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕು.
ಗಿಡಕ್ಕೆ ನೀರನ್ನು ಚುಮುಕಿಸಿ ಹೂವನ್ನು ಮುಡಿಸಬೇಕು ನಂತರ ಗಿಡದ ಬೇರಿಗೆ ನೀರು ಹಾಕಿ ಅರಿಶಿಣ ಕುಂಕುಮ ಹಚ್ಚಬೇಕು ಅಗರ ಬತ್ತಿಯಿಂದ ಪೂಜೆ ಮಾಡಬೇಕು. ಯಾವುದೆ ಕಾರಣಕ್ಕೂ ಹನ್ನೆರಡು ಗಂಟೆ ನಂತರ ಎಕ್ಕದ ಗಿಡದ ಹತ್ತಿರ ಹೋಗಬಾರದು. ಪೂಜೆ ಮಾಡಲು ಹೋಗುವ ಮುನ್ನ ಸಾಲ ಪಡೆದವರು ಆದಷ್ಟು ಬೇಗ ಹಣವನ್ನ ವಾಪಸ್ ಕೊಡಬೇಕೆಂದು ಸಂಕಲ್ಪ ಮಾಡಿಕೊಂಡೆ ಹೋಗಬೇಕು.
ಪೂಜೆ ಮುಗಿಸಿ ಮನೆಗೆ ಬರುವಾಗ ಬೆರಳಿನಷ್ಟು ದೊಡ್ಡ ಎಕ್ಕದ ಗಿಡದ ಕಡ್ಡಿ ಮೂರು ಎಲೆ ಹೂವನ್ನು ಮನೆಗೆ ತೆಗೆದುಕೊಂಡು ಬರಬೇಕು ಅದನ್ನು ಸ್ವಚ್ಛ ನೀರಿನಿಂದ ತೊಳೆದು ಹಳದಿ ಅಥವಾ ಕೆಂಪು ಬಣ್ಣದ ದಾರದಲ್ಲಿ ಕಟ್ಟಬೇಕು ಅದಕ್ಕೆ ಅರಿಶಿಣ ಕುಂಕುಮ ಹಾಕಿ ಆರತಿ ಬಟ್ಟಲಿನಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಇಡಬೇಕು ದೇವರ ಮನೆಯಲ್ಲಿ ಇಟ್ಟು ನಂತರ ಪ್ರತಿದಿನ ಪೂಜೆ ಮಾಡಬೇಕು ಪೂಜೆ ಮಾಡುವಾಗ ಸಮಸ್ಯೆಯನ್ನು ಹೇಳಿಕೊಂಡರೆ ಅದು ಈಡೇರುತ್ತದೆ.
ಪೂಜೆ ಮಾಡುವಾಗ ಓಂ ಅರ್ಥರೂಪಾಯೈ ಅರ್ಕಾಯಯೈ ನಮಃ ಎಂಬ ಮಂತ್ರವನ್ನು 21 ಬಾರಿ ಪಠಿಸಬೇಕು ಹೀಗೆ ಮಾಡುವುದರಿಂದ ಕೊಟ್ಟ ಹಣ ವಾಪಸ್ ಬರುತ್ತದೆ ಹಾಗೂ ಸಾಲದಿಂದ ಮುಕ್ತಿ ಪಡೆಯುತ್ತಾರೆ. ಬಿಳಿ ಎಕ್ಕದ ಗಿಡದ ಎಲೆಯ ಮೇಲೆ ಎಕ್ಕದ ಸಸ್ಯದ ರಸವನ್ನು ಬಳಸಿ ಶತ್ರುವಿನ ಹೆಸರನ್ನು ಬರೆದು ಅದನ್ನು ಮಣ್ಣಿನೊಳಗೆ ಹೂತಿಡಬೇಕು ಅಥವಾ ಹರಿಯುವ ನದಿಯಲ್ಲಿ ಬಿಡಬೇಕು ಹೀಗೆ ಮಾಡುವುದರಿಂದ ಶತ್ರುಗಳು ನಿಮಗೆ ಕಾಟ ಕೊಡುವುದಿಲ್ಲ. ಪ್ರಯಾಣ ಮಾಡುವಾಗ ಎಕ್ಕದ ಗಿಡದ ಬೇರನ್ನು ಬಳಿ ಇಟ್ಟುಕೊಂಡರೆ ಅಪಘಾತ ಸಂಭವಿಸುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493