ಪ್ರತಿಯೊಬ್ಬರು ಲಕ್ಷ್ಮೀ ದೇವಿ ಮನೆಯಲ್ಲಿ ಇರಬೇಕೆಂದು ಆಸೆ ಪಡುತ್ತಾಳೆ, ಲಕ್ಷ್ಮೀ ದೇವಿ ಮನೆಯಲ್ಲಿದ್ದರೆ ಅಷ್ಟೈಶ್ವರ್ಯ ಕೂಡ ಮನೆಯಲ್ಲಿರುತ್ತದೆ ಎಂದು ನಂಬುತ್ತಾರೆ. ಮನೆಗೆ ಬರುವ ಸೂಚನೆ ಹೇಗಿರುತ್ತದೆ ಲಕ್ಷ್ಮೀ ದೇವಿಯನ್ನು ಒಲಿಸುವ ವಿಧಾನ ಯಾವುದು ಮುಂತಾದ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ
ಲಕ್ಷ್ಮೀ ದೇವಿ ಕೆಲವು ಮನೆಯಲ್ಲಿದ್ದರೆ ಇನ್ನೂ ಕೆಲವು ಮನೆಯಲ್ಲಿ ಇರುವುದಿಲ್ಲ. ಲಕ್ಷ್ಮೀ ಕೆಲವು ವಸ್ತುಗಳಲ್ಲಿ ನೆಲೆಸುತ್ತಾಳೆ. ಅರಿಶಿಣ, ಕುಂಕುಮ, ಚಿನ್ನ ರತ್ನ ಶುಚಿಯಾದ ಬಿಳಿಯ ಬಟ್ಟೆಗಳು, ಬೆಳ್ಳಿ ತಾಮ್ರ, ಹಿತ್ತಾಳೆ ಕಳಶ, ಹಸುವಿನ ಸಗಣಿ, ಹಸುವಿನ ಕೊಂಬಿನ ಮಧ್ಯ ಭಾಗ, ಹಸುವಿನ ಹಿಂಭಾಗ, ಶುಭ್ರವಾದ ಪೂಜಾ ಮಂದಿರ, ಪವಿತ್ರವಾದ ಮನಸಿನ ಮನುಷ್ಯ ಅಂದರೆ ಯೋಗಿಗಳು, ಒಳ್ಳೆಯ ರಾಜ, ಸದಾಚಾರ ಪಾಲಿಸುವ ಬ್ರಾಹ್ಮಣ, ಶುಚಿಯಾಗಿರುವ ಜಾಗದಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ.
ಲಕ್ಷ್ಮೀ ದೇವಿ ಕೇವಲ ನಾವು ಬಳಸುವ ಹಣ ಮಾತ್ರ ಅಲ್ಲ ಆರೋಗ್ಯ, ಸಂತೋಷ, ನೆಮ್ಮದಿ ತಾಯಿ ಲಕ್ಷ್ಮೀ ಆಗಿರುತ್ತಾಳೆ. ತಾಯಿ ಲಕ್ಷ್ಮೀ ದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕು ಎಂದರೆ ಶಾಸ್ತ್ರಗಳಲ್ಲಿ ರಂಗೋಲಿ ಎಂದರೆ ಲಕ್ಷ್ಮೀ ದೇವಿಗೆ ಬಹಳ ಇಷ್ಟ ಹೀಗಾಗಿ ಬೆಳಗ್ಗೆ ಎದ್ದು ಮನೆ ಬಾಗಿಲು ತೊಳೆದು ರಂಗೋಲಿ ಹಾಕಬೇಕು ನಂತರ ಹೊಸ್ತಿಲಿಗೆ ಅರಿಶಿಣ, ಕುಂಕುಮ ಹಚ್ಚಬೇಕು ಎಂದು ಹೇಳಿದೆ. ಮನೆಯ ಸದಸ್ಯರು ಮನೆಯಲ್ಲಿ ಕೆಟ್ಟ ಮಾತನಾಡುವುದು ಇತರರನ್ನು ಬೈಯುವುದು ಮಾಡಬಾರದು, ಮನೆಯಲ್ಲಿ ಹೆಣ್ಣುಮಕ್ಕಳು ಸಂತೋಷವಾಗಿಲ್ಲ ಎಂದರೆ ಆ ಮನೆಗೆ ಲಕ್ಷ್ಮೀ ದೇವಿ ಕಾಲಿಡುವುದಿಲ್ಲ.
ಸುಳ್ಳು ಹೇಳುವುದು, ಸಂಜೆ ಸಮಯದಲ್ಲಿ ಮಲಗುವವರು, ಸಂಜೆ ಸಮಯದಲ್ಲಿ ಊಟ ಮಾಡುವವರು ಸೊಂಬೇರಿಗಳು ಎಲ್ಲಿರುತ್ತಾರೆಯೊ ಅಲ್ಲಿ ಲಕ್ಷ್ಮೀ ದೇವಿ ಇರುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ತಪ್ಪದೆ ದೇವರಿಗೆ ದೀಪ ಹಚ್ಚಬೇಕು. ಶುಕ್ರವಾರದ ದಿನ ತಪ್ಪದೆ ಹೊಸ್ತಿಲಿಗೆ ದೀಪ ಹಚ್ಚಬೇಕು. ಅತಿಯಾಗಿ ಮಾತನಾಡುವವರು, ಗುರುಗಳನ್ನು, ಹಿರಿಯರನ್ನು ಬೈಯುವವರು, ಜೂಜಾಟ ಆಡುವವರು ಅತಿಯಾಗಿ ನಿದ್ರಿಸುವವರು, ಶುಭ್ರತೆ ಇಲ್ಲದವರ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ.
ಶಂಖದ ಧ್ವನಿ ಕೇಳಿಸದ ಜಾಗದಲ್ಲಿ ತುಳಸಿಯನ್ನು ಪೂಜಿಸದ, ದೇವರನ್ನು ಪೂಜಿಸದ ಜಾಗದಲ್ಲಿ ಅತಿಥಿಗಳಿಗೆ ಸತ್ಕಾರ ಮಾಡದ ಜಾಗದಲ್ಲಿ ತಾಯಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ. ನಾಣ್ಯ, ಅನ್ನ ಹಾಗೂ ಎಳ್ಳನ್ನು ತಾತ್ಸಾರ ಮಾಡಿ ಎಲ್ಲೆಂದರಲ್ಲಿ ಚೆಲ್ಲಿದರೆ ಅವರ ಮನೆಯಲ್ಲಿ ತಾಯಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ. ಭಕ್ತರನ್ನು ನಿಂದಿಸುವ ಜಾಗಗಳಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ.
ಲಕ್ಷ್ಮೀ ದೇವಿ ಮನೆಯಲ್ಲಿದ್ದರೆ ಸಂಜೆ ಸಮಯದಲ್ಲಿ ಗೆಜ್ಜೆ ಶಬ್ಧ ಕೇಳಿಸುತ್ತದೆ ಹಾಗೂ ಸಾಂಬ್ರಾಣಿ ಸುವಾಸನೆ ಬರುತ್ತದೆ ಆಗ ದೇವರಿಗೆ ಗಂಧದ ಕಡ್ಡಿ ಹಚ್ಚಿ ದೇವರಿಗೆ ಕೈ ಮುಗಿಯಬೇಕು. ಹಸು ಮನೆಯ ಬಾಗಿಲ ಮುಂದೆ ಆಗಾಗ ಬಂದು ಕೂಗುತ್ತಿದ್ದರೆ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂದು ಅರ್ಥ ಮನೆಗೆ ಬಂದ ಹಸುವಿಗೆ ಏನಾದರೂ ತಿನ್ನಲು ಕೊಡಬೇಕು ಇದರಿಂದ ತಾಯಿ ಲಕ್ಷ್ಮೀ ದೇವಿಗೆ ಸಂತೋಷವಾಗುತ್ತದೆ.
ಮನೆಯಲ್ಲಿ ಹೆಂಗಸರಿಗೆ ಎಡ ಕಣ್ಣು, ಹೆಂಗಸರಿಗೆ ಬಲ ಕಣ್ಣು ಅದುರುತ್ತಿದ್ದರೆ ಮುಂದೆ ಒಳ್ಳೆಯದಾಗುವ ಸೂಚನೆಯಾಗಿದೆ. ಪಕ್ಕದ ಮನೆಯವರು ಯಾವಾಗಲೂ ಜಗಳ ಆಡುತ್ತಿದ್ದು ಇದ್ದಕಿದ್ದ ಹಾಗೆ ಸ್ನೇಹಿತರಾಗಿದ್ದರೆ ಮನೆಯಲ್ಲಿ ಲಕ್ಷ್ಮೀ ದೇವಿ ಇರುತ್ತಾಳೆ ಎಂದು ಅರ್ಥ ಲಕ್ಷ್ಮೀ ದೇವಿ ಇದ್ದರೆ ಶತ್ರು ಕಾಟ ಇರುವುದಿಲ್ಲ. ಮನೆಯಲ್ಲಿ ಹಬ್ಬದ ದಿನಗಳಲ್ಲಿ ಕರೆಯದೆ ಇದ್ದರೂ ಮುತ್ತೈದೆಯರು ಮನೆಗೆ ಬಂದರೆ ಅದರಲ್ಲೂ ಅವರ ಹೆಸರು ಲಕ್ಷ್ಮೀ, ಗಾಯತ್ರಿ ದೇವಿಯರ ಹೆಸರು ಆಗಿದ್ದರೆ ಅವರಿಗೆ ಅರಿಶಿಣ ಕುಂಕುಮ ಹಚ್ಚಿ ಕಳುಹಿಸಬೇಕು.
ಪ್ರತಿದಿನ ಸಂಜೆ ಕೋಗಿಲೆ ಕೂಗು ನಮಗೆ ಕೇಳಿಸಿದರೆ ಲಕ್ಷ್ಮೀದೇವಿ ಮನೆಗೆ ಬರುವ ಸೂಚನೆ ಎಂದು ಅರ್ಥ, ಮಾವಿನ ಮರದ ಮೇಲೆ ಕೋಗಿಲೆ ಕುಳಿತಿರುವುದು ಕಂಡರೆ ಕೈ ಹಾಕಿದ ಕೆಲಸ ಯಶಸ್ವಿಯಾಗುತ್ತದೆ ಲಕ್ಷ್ಮಿ ದೇವಿ ಆಶೀರ್ವಾದ ಮಾಡಿದಳು ಎಂದು ಅರ್ಥ. ಮನೆ ಸ್ವಚ್ಛ ಮಾಡುವಾಗ ಗೂಬೆ ಕಾಣಿಸಿದರೆ ತಾಯಿ ಲಕ್ಷ್ಮೀ ದೇವಿ ಮನೆಗೆ ಬರುವ ಸೂಚನೆ. ಮನೆ ಶುಚಿಯಾಗಿದ್ದರೆ ಲಕ್ಷ್ಮೀದೇವಿಗೆ ಇಷ್ಟವಾಗುತ್ತದೆ. ಬೆಳಗ್ಗೆ ಶಂಖದ ದ್ವನಿ ಕೇಳಿಸಿದರೂ ಕೂಡ ಲಕ್ಷ್ಮೀ ದೇವಿ ಬರುವ ಸೂಚನೆಯಾಗಿದೆ.
ಬೆಳಗ್ಗೆ ಮನೆ ಬಾಗಿಲು ತೆಗೆದಾಗ ಯಾರಾದರೂ ಕಬ್ಬು ಹೊತ್ತುಕೊಂಡು ಹೋಗುವುದನ್ನು ನೋಡಿದರೆ ಒಳ್ಳೆಯ ಸೂಚನೆಯಾಗಿದೆ. ಮನೆಯ ಹೊರಗೆ ಹಾವು ಕಾಣಿಸಿದರೆ ಶುಭ ಮನೆಯ ಒಳಗೆ ಹಾವು ಕಾಣಿಸಿದರೆ ಮನೆಯ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬ ಸೂಚನೆಯಾಗಿದೆ. ಮನೆಯಲ್ಲಿ ಆಗಾಗ ಕಪ್ಪು ಇರುವೆ ಕಾಣಿಸಿಕೊಳ್ಳುತ್ತಿದ್ದರೆ ಹಾಗೂ ಇರುವೆ ಅಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡರೆ ಲಕ್ಷ್ಮೀ ದೇವಿ ಬರುವ ಸೂಚನೆಯಾಗಿದೆ. ಕೆಂಪು ಇರುವೆ ಕಾಣಿಸಿಕೊಂಡರೆ ಸಾಲಕ್ಕೆ ಒಳಗಾಗುತ್ತಾರೆ ಎಂಬ ಸೂಚನೆಯಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು