ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎನುತ್ತಾರೆ. ಗುರುವಿನಿಂದ ಅಸಾಧ್ಯವಾದುದು ಯಾವುದೂ ಇಲ್ಲ. ಗುರು ಬಲ ಇಲ್ಲದೆ ಇದ್ದಾಗ ನಮ್ಮ ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬರುತ್ತವೆ ಅದಕ್ಕೆ ಗುರು ಬಲವನ್ನು ಹೆಚ್ಚಿಸಿಕೊಳ್ಳಬೇಕು ಇದಕ್ಕಾಗಿ ಕೆಲವು ಉಪಾಯಗಳನ್ನು ಮಾಡಬೇಕಾಗುತ್ತದೆ. ಹಾಗಾದರೆ ಗುರು ಬಲ ಹೆಚ್ಚಿಸಿಕೊಳ್ಳುವ ಉಪಾಯವನ್ನು ಈ ಲೇಖನದಲ್ಲಿ ನೋಡೋಣ
ಜೀವನದಲ್ಲಿ ಅನೇಕ ಸಮಸ್ಯೆಗಳು ಕಷ್ಟಗಳು ನಿವಾರಣೆ ಮಾಡಿಕೊಳ್ಳಬೇಕಾದರೆ ಗುರುವಾರದಂದು ಈ ಕೆಲಸ ಮಾಡಬೇಕಾಗುತ್ತದೆ. ದೇವರ ಪೂಜೆ ಮಾಡುವುದು ಕಡಿಮೆ ಆಗಿದ್ದರೆ ಅಥವಾ ಪೂಜೆ ಮಾಡುವುದಿಲ್ಲ ಎಂದಾದರೆ ಈ ಉಪಾಯವನ್ನು ಮಾಡಿಕೊಂಡರೆ ಕಷ್ಟಗಳು ನಿವಾರಣೆಯಾಗುತ್ತದೆ. ಗುರುವಾರದ ದಿನ ಈ ಕೆಲಸ ಮಾಡಿದರೆ ಗುರು ಗ್ರಹಕ್ಕೆ ಸಂಬಂಧಿಸಿದ, ಗುರು ಪತಿ ಮತ್ತು ಪುತ್ರ ಕಾರಕ ಗ್ರಹ ಎನ್ನುತ್ತಾರೆ. ಗಂಡ ಹೆಂಡತಿಯ ಸಂಬಂಧ ಹಾಳಾಗಿದ್ದರೆ ಪ್ರೀತಿ ಕಡಿಮೆ ಆಗಿದ್ದರೆ ಗುರು ಗ್ರಹದ ಬಲ ಇದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಮಹಿಳೆಯರು ಗುರುವಾರದ ದಿನ ತಲೆ ಸ್ನಾನ ಮಾಡಬಾರದು ಒಂದು ವೇಳೆ ಹೀಗೆ ಮಾಡಿದರೆ ಗಂಡನೊಂದಿಗೆ ಇರುವ ಸಂಬಂಧ ಶಕ್ತಿಶಾಲಿಯಾಗಿರುವುದಿಲ್ಲ.
ಗುರುವಾರದ ದಿನ ಕೆಲವು ಕೆಲಸ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ ಹೀಗಾಗಿ ಗುರುವಾರವನ್ನು ಮುಖ್ಯವಾದ ದಿನ ಎಂದು ಕರೆಯುತ್ತಾರೆ. ಗುರುವಾರದ ದಿನ ಭಗವಂತ ವಿಷ್ಣುವಿನ ಪೂಜೆ ನಡೆಯುತ್ತದೆ ಹಾಗೂ ಬ್ರಹಸ್ಪತಿ ಪೂಜೆ ನಡೆಯುತ್ತದೆ. ಗುರು ಗ್ರಹ ಬುದ್ಧಿವಂತಿಕೆ ಹಾಗೂ ಜ್ಞಾನ ಕಾರಕ ಆಗಿರುತ್ತಾನೆ ಗುರುವಿನ ಅನುಗ್ರಹ ಇದ್ದರೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ. ಈಗಿನ ಪ್ರಪಂಚದಲ್ಲಿ ಜ್ಞಾನ ಹಾಗೂ ಬುದ್ಧಿ ಬೇಕು ಬುದ್ಧಿ ಇಲ್ಲವೆಂದರೆ ಪಶುಗೆ ಸಮಾನ ಎಂದು ಹೇಳುತ್ತಾರೆ.
ಮನೆಯಲ್ಲಿ ಬೇಡ ಎಂದು ಕೂಡಿಹಾಕಿರುವ ವಸ್ತುಗಳನ್ನು ಗುರುವಾರದ ದಿನ ಮಾರಾಟ ಮಾಡಬಾರದು ಒಂದು ವೇಳೆ ಗುರುವಾರ ಮಾರಾಟ ಮಾಡಿದರೆ ಪೂಜೆ ಶ್ರಮ ಹಾಳಾಗುತ್ತದೆ. ಗುರುವಾರದ ದಿನ ನೆಲವನ್ನು ಸಗಣಿಯಿಂದ ಸಾರಿಸಬಾರದು ಮನೆಯನ್ನು ಸ್ವಚ್ಛ ಮಾಡಬಾರದು ಗುರುವಾರದ ದಿನ ವ್ರತ ಮಾಡುವವರು ದೇವರ ಮುಂದಿನ ಜಾಗವನ್ನು ನೀರಿನಿಂದ ಸ್ವಚ್ಛಗೊಳಿಸಬಹುದು. ಗುರುವಾರದ ದಿನ ಬಟ್ಟೆ ತೊಳೆಯಬಾರದು.
ಗುರು ಗ್ರಹ ದುರ್ಬಲವಾಗಿದ್ದರೆ ದಾಂಪತ್ಯ ಜೀವನ ಚೆನ್ನಾಗಿರುವುದಿಲ್ಲ ಗಂಡ ಹೆಂಡತಿ ಯಾವಾಗಲೂ ಡಲ್ ಆಗಿದ್ದರೆ ಒಂದು ಚಿಟಿಕೆ ಅರಿಶಿಣವನ್ನು ನೀರಲ್ಲಿ ಹಾಕಿ ಸ್ನಾನ ಮಾಡಬೇಕು. ಹೆಣ್ಣಿನ ಮದುವೆ ವಿಳಂಬವಾಗುತ್ತಿದ್ದರೆ ಅವರು ಗುರುವಾರದ ದಿನ ಅರಿಶಿಣ ಹಾಕಿದ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಮದುವೆಯಾದವರು ಗುರುವಾರದ ದಿನ ತಲೆ ಸ್ನಾನ ಮಾಡಬಾರದು. ಹಣಕಾಸಿನ ತೊಂದರೆ ಇದ್ದರೆ ಅಥವಾ ಇನ್ನಿತರ ಯಾವುದೆ ಸಮಸ್ಯೆ ಇದ್ದರೆ ಪ್ರತಿ ಗುರುವಾರದಂದು ವಿಷ್ಣು ದೇವಾಲಯಕ್ಕೆ ಹೋಗಿ ಅಥವಾ ಮನೆಯ ದೇವರ ಕೋಣೆಯಲ್ಲಿ ಚನ್ನಂಗಿ ಬೇಳೆ ಬೆಲ್ಲ ಹಾಗೂ ತುಳಸಿ ಎಲೆಯನ್ನು ಸೇರಿಸಿ ಭಗವಂತ ವಿಷ್ಣುವಿಗೆ ಅರ್ಪಿಸಬೇಕು ಹಾಗೂ ವಿಷ್ಣು ಸಹಸ್ರನಾಮವನ್ನು ಪಠಣ ಮಾಡಬೇಕು ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ವಿಷ್ಣು ಸಹಸ್ರನಾಮವನ್ನು ಪ್ರತಿದಿನ ಪಠಿಸಬೇಕು ಇಲ್ಲವಾದರೆ ಗುರುವಾರದ ದಿನ ತಪ್ಪದೆ ಪಠಿಸಬೇಕು. ವಿಷ್ಣು ಸಹಸ್ರನಾಮವನ್ನು ಕೇಳಿದರೂ ಪುಣ್ಯ ಲಭಿಸುತ್ತದೆ.
ಮನೆಯಲ್ಲಿ ರೋಗಗಳು ಕಾಣಿಸಿಕೊಂಡರೆ, ಮನೆಯ ಸದಸ್ಯರಲ್ಲಿ ಜಗಳ ಕಂಡುಬಂದರೆ ಮನೆಯ ಸದಸ್ಯರಲ್ಲಿ ಕೆಲವರು ಮನೆಯವರನ್ನು ಸಂತೋಷವಾಗಿ ಇಡುತ್ತಾರೆ ಇನ್ನೂ ಕೆಲವರು ಮನಸ್ತಾಪವನ್ನು ಹುಟ್ಟುಹಾಕುತ್ತಾರೆ. ಹೊಸ ಮನೆಯನ್ನು ಕಟ್ಟಿ ಅಲ್ಲಿಗೆ ಹೋದ ನಂತರ ಮನಸಿಗೆ ನೆಮ್ಮದಿ ಇಲ್ಲವಾದರೆ ಗುರುವಾರದ ದಿನ ಅರಿಶಿಣ ಹಾಗೂ ಗಂಗಾಜಲವನ್ನು ಸೇರಿಸಿ ಮನೆಯ ದೇವರ ಕೋಣೆಯಿಂದ ಎಲ್ಲಾ ಕೋಣೆಗಳಿಗೆ ಗರಿಕೆ ಹುಲ್ಲು ಇದ್ದರೆ ಅದರ ಸಹಾಯದಿಂದ ಸಿಂಪಡಿಸಿ ಇದರಿಂದ ಗುರು ಶಕ್ತಿಶಾಲಿಯಾಗುತ್ತದೆ ಆದಾಯ ಹೆಚ್ಚಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದಾಗ ಗಂಡ ಹೆಂಡತಿಯ ನಡುವೆ ಜಗಳ ಬರುತ್ತದೆ ಅರಿಶಿಣಕ್ಕೆ ಗುರು ಬಲವನ್ನು ಹೆಚ್ಚಿಸುವ ಶಕ್ತಿ ಇದೆ ಹೀಗಾಗಿ ಅರಿಶಿಣವನ್ನು ಬಳಸಿ ಗುರು ಬಲವನ್ನು ಹೆಚ್ಚಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು