ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ತುಳಸಿ ಗಿಡಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ತುಳಸಿ ಗಿಡದ ಬಗ್ಗೆ ಕೆಲವು ರಹಸ್ಯ ಹಾಗೂ ಮುಖ್ಯವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ತುಳಸಿಗಿಡವನ್ನು ಪೂಜಿಸುವುದು ನಮ್ಮ ಹಿಂದೂ ಧರ್ಮದ ಸಂಪ್ರದಾಯವಾಗಿದೆ. ತುಳಸಿಗಿಡ ಮನೆಯಲ್ಲಿದ್ದರೆ ಒಂದು ತಪ್ಪನ್ನು ಮಾಡಲೆಬಾರದು ಒಂದು ವೇಳೆ ಮಾಡಿದರೆ ಮನೆಯಲ್ಲಿ ಹಣ ನಿಲ್ಲುವುದಿಲ್ಲ. ವಿಷ್ಣು ದೇವರ ಆಶೀರ್ವಾದ ನಮ್ಮ ಮೇಲೆ ಇದ್ದರೆ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತದೆ. ತುಳಸಿ ಗಿಡವನ್ನು ಒಂದು ಗಿಡ ಎಂದು ಯಾರೂ ಭಾವಿಸುವುದಿಲ್ಲ ಗಿಡವನ್ನು ದೇವಿ ಸ್ವರೂಪ ಎಂದು ಭಾವಿಸಿ ಪೂಜೆ ಮಾಡುತ್ತಾರೆ.
ಪ್ರಾಚೀನ ಕಾಲದಿಂದಲೂ ತುಳಸಿಗಿಡವನ್ನು ದೇವಿ ಸ್ವರೂಪ ಎಂದು ಭಾವಿಸಲಾಗುತ್ತದೆ. ಮನೆ ಇದೆ ಎಂದರೆ ಒಂದು ತುಳಸಿ ಗಿಡ ಇರಲೆಬೇಕು ಆಗಲೆ ಆ ಮನೆಗೆ ಒಂದು ಕಳೆ ಬರುತ್ತದೆ. ಮನೆಯಲ್ಲಿ ಇರುವ ತುಳಸಿಗಿಡವನ್ನು ಜಾಗರೂಕತೆಯಿಂದ ನೋಡಿಕೊಂಡರೆ ದೇವಾನುದೇವತೆಗಳ ಕೃಪೆ ದೊರೆಯುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಹಾಗೂ ಸುಖದ ವಾತಾವರಣ ಕಂಡುಬರುತ್ತದೆ, ಹಣದ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ, ಕುಟುಂಬದ ಸದಸ್ಯರ ಆಯಸ್ಸು ಹೆಚ್ಚುತ್ತದೆ.
ಏಕಾದಶಿ, ಭಾನುವಾರ, ಸೂರ್ಯ ಹಾಗೂ ಚಂದ್ರ ಗ್ರಹಣ ಹಾಗೂ ರಾತ್ರಿಯ ಸಮಯದಂದು ತುಳಸಿ ದಳವನ್ನು ಕೀಳಬಾರದು. ತುಳಸಿ ಎಲೆಯ ಉಪಯೋಗವಿದ್ದರೆ ಮಾತ್ರ ತುಳಸಿ ಎಲೆಯನ್ನು ಕೀಳಬಹುದು. ಅನಾವಶ್ಯಕ ತುಳಸಿ ಎಲೆಯನ್ನು ಕಿತ್ತು ಎಸೆದರೆ ತುಳಸಿ ಗಿಡಕ್ಕೆ ಅವಮಾನ ಮಾಡಿದಂತಾಗುತ್ತದೆ. ಪ್ರತಿದಿನ ಸಾಯಂಕಾಲ ತುಳಸಿ ಮುಂದೆ ದೀಪವನ್ನು ಹಚ್ಚಬೇಕು ಹೀಗೆ ದೀಪ ಹಚ್ಚಿದರೆ ಮನೆಗೆ ಲಕ್ಷ್ಮೀ ಕೃಪೆ ಸಿಗಲಿದೆ. ತುಳಸಿ ಗಿಡವನ್ನು ಭಕ್ತಿ ಭಾವದಿಂದ ಪೂಜಿಸಿದರೆ ಮನೆಯಲ್ಲಿ ಸುಖ ಸಂತೋಷ ಕಂಡುಬರುತ್ತದೆ.
ತುಳಸಿ ಗಿಡದ ಪೂಜೆಯಿಂದ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗುತ್ತದೆ. ಮನೆಯಲ್ಲಿ ಯಾವ ಕಾರಣಕ್ಕೂ ಒಣಗಿದ ತುಳಸಿ ಗಿಡವನ್ನು ಇಟ್ಟುಕೊಳ್ಳಬಾರದು ಒಂದು ವೇಳೆ ಒಣಗಿದ ತುಳಸಿ ಗಿಡ ಇದ್ದರೆ ಅದನ್ನು ನದಿ ಅಥವಾ ಕೆರೆಗೆ ಹಾಕಬೇಕು. ಒಣಗಿದ ತುಳಸಿ ಗಿಡ ಮನೆಯಲ್ಲಿ ಇದ್ದರೆ ಅದು ಅಶುಭ ಮನೆಯ ಸದಸ್ಯರಿಗೆ ತೊಂದರೆಯಾಗುತ್ತದೆ. ಒಣಗಿದ ತುಳಸಿ ಗಿಡ ಇದ್ದ ಜಾಗದಲ್ಲಿ ಇನ್ನೊಂದು ತುಳಸಿ ಗಿಡವನ್ನು ನೆಡಬೇಕು.
ತುಳಸಿ ಗಿಡದಲ್ಲಿ ಔಷಧೀಯ ಗುಣಗಳಿವೆ ಆಯುರ್ವೇದ ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಸಂಜೀವಿನಿ ಸಮಾನ ನೋಡಲಾಗುತ್ತದೆ. ತುಳಸಿಗಿಡದಲ್ಲಿ ಎಷ್ಟೊ ರೋಗಗಳನ್ನು ನಿವಾರಿಸುವ ಗುಣವಿದೆ. ಗಾಳಿಯಲ್ಲಿ ಹರಡುವ ಕ್ರಿಮಿ ಕೀಟಗಳು ತುಳಸಿ ಗಿಡದ ಸುಗಂಧದಿಂದ ಸಾಯುತ್ತವೆ. ಪ್ರತಿದಿನ ತುಳಸಿ ಗಿಡದ ಒಂದು ಎಲೆಯನ್ನು ಸೇವಿಸುವುದರಿಂದ ಆರೋಗ್ಯಕರ ಲಾಭವಾಗಲಿದ್ದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತುಳಸಿ ದಳ ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚು ಸೇವಿಸಬಾರದು ನಿಯಮಿತವಾಗಿ ಸೇವಿಸಬೇಕು. ಪ್ರತಿದಿನ ಮನೆಯ ಹೆಣ್ಣುಮಕ್ಕಳು ತುಳಸಿ ಪೂಜೆ ಮಾಡಿ ನೀರನ್ನು ಹಾಕಿದರೆ ಮನೆಗೆ ಶುಭವಾಗುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ ತಪ್ಪದೆ ಈ ಎಲ್ಲಾ ವಿಷಯಗಳನ್ನು ಪಾಲಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು