ಯಾವ ದೇವರು ಗ್ರಹಗಳಿಗೆ ಹೆದರದವರು ಶನಿ ದೇವನಿಗೆ ಹೆದರಲೇಬೇಕು ಶನಿ ದೇವರ ಮಹಿಮೆ ಅಂತದ್ದು. ಶನಿ ದೇವರ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಗ್ರಹಗಳಲ್ಲಿ ಶನಿ ಗ್ರಹಕ್ಕೆ ವಿಶೇಷವಾದ ಸ್ಥಾನವನ್ನು ಕೊಡಲಾಗಿದೆ. ಶನಿ ಆಯುಷ್ಯ ಹಾಗೂ ದುಃಖ ಚಿಂತೆ, ವಿರಹ, ವೇದನೆ, ಮಾನಸಿಕ ಒತ್ತಡ ವೈರಾಗ್ಯವನ್ನು ಕೊಡುತ್ತಾನೆ. ತಾಮಸ ಗುಣಗಳು ಅಂದರೆ ದುರ್ಗುಣ ಬಂದರೆ ಅದು ಶನೀಶ್ವರನ ಪ್ರಭಾವವಾಗಿದೆ. ನಮ್ಮ ಜನ್ಮ ಜಾತಕದಲ್ಲಿ ಶನಿ ಕೆಟ್ಟ ಸ್ಥಾನದಲ್ಲಿ ಇದ್ದು ದೃಷ್ಟಿ ಹಾಕಿದಾಗ ನಮಗೆ ಶುಭ ಫಲ ಸಿಗುವುದಿಲ್ಲ. ಪಂಚಮ ಶನಿ, ಅಷ್ಟಮ ಶನಿ, ಸಾಡೆಸಾತ್ ಹೀಗೆ ನಾನಾ ರೀತಿಯ ಶನಿ ಜೀವನದಲ್ಲಿ ಬರುತ್ತದೆ. ನಮ್ಮ ಹಿಂದಿನ ಜನ್ಮದ ಕರ್ಮದ ಫಲವಾಗಿ ಶನಿ ನಮಗೆ ಕಾಟ ಕೊಡುತ್ತಾನೆ.
ಹಿಂದಿನ ಜನ್ಮದಲ್ಲಿ ಒಳ್ಳೆಯದನ್ನು ಮಾಡಿದ್ದರೆ ಪುಣ್ಯ ಮಾಡಿದ್ದರೆ ಈ ಜನ್ಮದಲ್ಲಿ ಶನಿ ಒಳ್ಳೆಯದನ್ನು ಮಾಡುತ್ತಾನೆ ಆದರೆ ನಾವು ತಪ್ಪು ಮಾಡಿದ್ದರೆ ನಮ್ಮ ಪಾಪಕ್ಕೆ ಪ್ರಾಯಶ್ಚಿತ ಮಾಡುವುದು ಒಳ್ಳೆಯದು ಶನೀಶ್ವರ ನಿಧಾನಗತಿಯಲ್ಲಿ ಸಂಚಾರ ಮಾಡುತ್ತಾನೆ. ಪ್ರತಿ ದಿನ ಎಲ್ಲರೂ ಶನಿದೇವನ ಜಪ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ. ತಿಲದಾನ ಅಂದರೆ ಎಳ್ಳನ್ನು ದಾನ ಮಾಡುವುದು, ಕಬ್ಬಿನ ದಾನ ಮಾಡಿದರೆ ಶನಿ ದೇವನಿಗೆ ಇಷ್ಟವಾಗುತ್ತದೆ ಇದರಿಂದ ಒಳ್ಳೆಯದಾಗುತ್ತದೆ.
ದೇವರ ಪೂಜೆಯನ್ನು ಬಿಡುವುದು, ದಾನ ಧರ್ಮವನ್ನು ಬಿಡುವುದರಿಂದ, ಕೋಪ ಮಾಡಿಕೊಳ್ಳುವುದು ತೀರ್ಥಯಾತ್ರೆಯನ್ನು ಬಿಡುವುದರಿಂದ ನಮಗೆ ಶ್ರೇಯಸ್ಸು ಲಭಿಸುವುದಿಲ್ಲ. ಶನಿ ನಮ್ಮ ಬಳಿ ಬರುತ್ತಿದ್ದಂತೆ ದೇವತಾ ಕಾರ್ಯದಲ್ಲಿ ತೊಡಗಬೇಕು, ವಿಷ್ಣು ಪೂಜೆಯನ್ನು ಮಾಡಬೇಕು, ವಿಷ್ಣು ಜಪವನ್ನು ಮಾಡಬೇಕು. ಶನೀಶ್ವರನ ಕಷ್ಟ ಬರುವ ಸೂಚನೆ ಇದ್ದರೆ ದೇವರ ಪೂಜೆಯನ್ನು ಬಿಡುತ್ತೇವೆ ಹಾಗೆ ಮಾಡದೆ ದೇವರ ದ್ಯಾನ, ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ.
ಶನಿದೇವನು ಆಶೀರ್ವಾದ ಮಾಡಿದರೆ ರಾಜನಂತೆ ಜೀವನ ಮಾಡಬಹುದು. ಪ್ರತಿದಿನ ಮನೆ ದೇವರಿಗೆ ದೀಪವನ್ನು ಹಚ್ಚಿ ಶನಿ ಮಂತ್ರವನ್ನು ಜಪಿಸಬೇಕು ಇದರಿಂದ ಶನಿಯ ಅನುಗ್ರಹ ದೊರೆಯುತ್ತದೆ. ಶನೀಶ್ವರ ದೇವಾಲಯ ಅಥವಾ ಆಂಜನೇಯನ ದೇವಸ್ಥಾನಕ್ಕೆ ಹೋಗಿ ತೈಲಾಭಿಷೇಕ ಮಾಡಿಸಿದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಶನಿ ದೇವರ ಆಶೀರ್ವಾದ ಪಡೆಯಿರಿ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513