ಮನೆ ನಿರ್ಮಿಸುತ್ತಿದ್ದೀರಾ ಮನೆಯ ಬಾಗಿಲನ್ನು ಯಾವ ರೀತಿ ನಿರ್ಮಿಸಬೇಕು, ಯಾವ ದಿಕ್ಕಿಗೆ ಬಾಗಿಲನ್ನು ಇಡಬೇಕು ಎನ್ನುವುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ಮನೆ ನಿರ್ಮಿಸುವಾಗ ವಾಸ್ತು ಪ್ರಕಾರ ನಿರ್ಮಿಸಬೇಕು. ಮನೆಯ ಮುಂಬಾಗಿಲನ್ನು ಪೂರ್ವ, ಉತ್ತರ, ದಕ್ಷಿಣ ದಿಕ್ಕಿಗೆ ಇಡಬೇಕು. ಮನೆ ಕಟ್ಟುವ ಯಜಮಾನನ ರಾಶಿ ಯಾವುದು ಎಂಬುದರ ಮೇಲೆ ಮನೆಯ ಹೆಬ್ಬಾಗಿಲನ್ನು ನಿರ್ಮಿಸಬೇಕು. ಮೇಷ, ಸಿಂಹ, ಧನಸ್ಸು ರಾಶಿಯವರಿಗೆ ಉತ್ತರ ದಿಕ್ಕಿಗೆ ಶ್ರೇಷ್ಠವಾಗಿದೆ. ವೃಷಭ ರಾಶಿ, ತುಲಾ, ಕುಂಭ ರಾಶಿಯವರಿಗೆ ಪಶ್ಚಿಮ ದಿಕ್ಕು ಮತ್ತು ಮಿಥುನ ರಾಶಿ, ಮಕರ ರಾಶಿ, ಕನ್ಯಾ ರಾಶಿಯವರಿಗೆ ದಕ್ಷಿಣ ದಿಕ್ಕು ಶ್ರೇಷ್ಠವಾಗಿದೆ. ಕಟಕ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿಯವರಿಗೆ ಪೂರ್ವ ದಿಕ್ಕಿಗೆ ಹೆಬ್ಬಾಗಿಲನ್ನು ಇಡುವುದು ಸೂಕ್ತವಾಗಿದೆ.
ಹೆಬ್ಬಾಗಿಲನ್ನು ಯಾವಾಗಲೂ ವಿಶೇಷ ಕಟ್ಟಿಗೆಯಲ್ಲಿ ಅಲಂಕಾರ, ನಕ್ಷೆ, ಸುಳಿವುಗಳಿಂದ ಕೂಡಿ ದೊಡ್ಡದಾಗಿ, ಗಟ್ಟಿಯಾಗಿ, ಬಲವಲ್ಲದಾಗಿರಬೇಕು. ಸೋಮವಾರ, ಬುಧವಾರ, ಗುರುವಾರ, ಶುಕ್ರವಾರದಂದು ಶುಭ ವೇಳೆಯಲ್ಲಿ ಹೆಬ್ಬಾಗಿಲಿನ ಹೊಸ್ತಿಲಿನ ಕೆಳಗೆ ಪಂಚಲೋಹ ಹಾಗೂ ಪಂಚರತ್ನ ಅಕ್ಷತೆಗಳನ್ನು ಹಾಕಿ ಹಾಲು ಮತ್ತು ನೀರನ್ನು ಹಾಕಿ ಹೆಬ್ಬಾಗಿಲಿಗೆ ಪೂಜಿಸಬೇಕು.
ಮನೆಗೆ ಹೆಬ್ಬಾಗಿಲು ಬಹಳ ಮುಖ್ಯವಾಗಿದೆ. ಹೆಬ್ಬಾಗಿಲನ್ನು ನೋಡಿದರೆ ಇಷ್ವವಾಗುವಂತಿದ್ದರೆ ಆ ಮನೆಯಲ್ಲಿ ಏನೊ ಸಂತೋಷ, ನೆಮ್ಮದಿ ಇರುತ್ತದೆ. ಮನೆಯ ಮುಂಬಾಗಿಲನ್ನು ಸುಂದರವಾಗಿ ಕೆತ್ತಿಸಬೇಕು ಮುಂಬಾಗಿಲು ಸುಂದರವಾಗಿದ್ದರೆ ಮನೆಗೆ ಒಂದು ರೀತಿಯ ವಿಶೇಷ ಕಳೆ ಬರುತ್ತದೆ. ಮನೆ ಎಂದಮೇಲೆ ಬಾಗಿಲು ಬಹಳ ಮುಖ್ಯವಾಗಿದೆ. ಮನೆಗೆ ಯಾವ ರಾಶಿಯವರು ಯಾವ ದಿಕ್ಕಿಗೆ ಬಾಗಿಲನ್ನು ಇಡಬೇಕೊ ಅದೆ ದಿಕ್ಕಿಗೆ ಬಾಗಿಲನ್ನು ಇಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಮನೆಗೆ ಯಾವ ರೀತಿಯ ಮುಂಬಾಗಿಲು ಇದೆ ಎನ್ನುವುದನ್ನು ನಮಗೆ ತಿಳಿಸಿ.