Kukke Subramanya temple: ಸಾಮಾನ್ಯವಾಗಿ ನಾಗರಾಜ ಸರ್ಪ ದೇವರ ಬಗ್ಗೆ ಎಲ್ಲರಲ್ಲೂ ಒಂದು ಭಯವಿರುತ್ತದೆ ಮನೆಗೆ ಸರ್ಪದೋಷವಿದೆ ಎಂದರೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದರೆ ನಿವಾರಣೆಯಾಗುತ್ತದೆ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಹೌದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವಿಶೇಷತೆ ಹಾಗೂ ಅಲ್ಲಿನ ನಿಗೂಢ ರಹಸ್ಯವನ್ನು ಈ ಲೇಖನದಲ್ಲಿ ನೋಡೋಣ
ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಮುಗಿಲು ಮುಟ್ಟುವ ಪರ್ವತ ಶ್ರೇಣಿಗಳು ಅವುಗಳ ನಡುವಿನಲ್ಲಿ ತೆಂಗು ಅಡಿಕೆ ತೋಟಗಳು ಜುಳು ಜುಳು ಹರಿಯುವ ಕುಮಾರಧಾರಾ ನದಿ. ದೇಗುಲದಿಂದ ಅಲೆ ಅಲೆಯಾಗಿ ಹೊರಹೊಮ್ಮುವ ಘಂಟೆಯ ನಿನಾದ ಇದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದಿನನಿತ್ಯ ಕಂಡುಬರುವ ವಾತಾವರಣ. ಇಂತಹ ರಮಣೀಯ ಕ್ಷೇತ್ರದಲ್ಲಿ ನಿಗೂಢ ರಹಸ್ಯ ಗುಹೆ ಇದೆ ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ದಾರಿಯಲ್ಲಿದೆ ಇದನ್ನೆ ಬಿಲದ್ವಾರ ಗುಹೆ ಎಂದು ಕರೆಯಲಾಗುತ್ತದೆ.
ದಂತ ಕಥೆಗಳ ಪ್ರಕಾರ ನಾಗಗಳ ರಾಜನಾದ ವಾಸಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಈ ಗುಹೆಯಲ್ಲಿ ಅವಿತು ಕುಳಿತುಕೊಂಡಿದ್ದನು ಎಂಬ ನಂಬಿಕೆ ಇದೆ. ಬಿಲದ್ವಾರ ಗುಹೆಯು ನೈಸರ್ಗಿಕವಾಗಿ ರೂಪುಗೊಂಡಿದ್ದು ಪ್ರವೇಶ ಹಾಗೂ ನಿರ್ಗಮನ ದ್ವಾರವನ್ನು ಹೊಂದಿದೆ ಈ ಗುಹೆ 10 ಮೀಟರ್ ಉದ್ದ ಹಾಗೂ 30 ಅಡಿ ಆಳವಿದೆ. ಈ ಗುಹೆಯ ಸುತ್ತಲೂ ಸುಂದರ ಉದ್ಯಾನವನವಿದೆ ವಾಸುಕಿಯ ದರ್ಶನ ಪಡೆಯಲು ಇಲ್ಲಿಗೆ ಸಾವಿರಾರು ಭಕ್ತಾದಿಗಳು ಬರುತ್ತಾರೆ.
ಹಿಂದೆ ಋಷಿಕಶ್ಯಪ ಮಹಾ ಮುನಿಗಳಿಗೆ 13 ಜನ ಪತ್ನಿಯರಿದ್ದರು ಅವರೆಲ್ಲರೂ ದಕ್ಷನ ಮಕ್ಕಳು ಅವರಲ್ಲಿ ಕದ್ರು ಮತ್ತು ವಿನುತ ಎಂಬುವವರಿದ್ದರು ಒಂದು ದಿನ ಕದ್ರು ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ ಈ ಕೆಲಸಕ್ಕೆ ಕದ್ರು ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ. ವಿನುತಾಳ ಮಗನಾದ ಗರುಡನಿಗೆ ಈ ವಿಷಯ ತಿಳಿದು ಕೋಪಗೊಂಡು ಅನೇಕ ಸರ್ಪಗಳನ್ನು ಕುಕ್ಕಿ ಕುಕ್ಕಿ ಸಾಯಿಸಲು ಪ್ರಾರಂಭಿಸುತ್ತಾನೆ ಆಗ ಭಯಗೊಂಡು ಶೇಷನಾಗನು ಪಾತಾಳಕ್ಕೆ ಸೇರಿಕೊಂಡರೆ ಅನಂತನು ವೈಕುಂಠಕ್ಕೆ ಹೋಗುತ್ತಾನೆ ಇತರ ನಾಗಗಳು ಶಿವನ ಕೊರಳು ಕೈ ಕಾಲುಗಳನ್ನು ಸುತ್ತಿಕೊಳ್ಳುತ್ತವೆ.
Kukke Subramanya temple
ಕಾಳಿ ಎಂಬ ಹಾವು ನಂದಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ ವಾಸುಕಿ ಎಂಬ ಮಹಾ ಸರ್ಪವು ಭಯದಿಂದ ಕರ್ನಾಟಕದ ತುಳುನಾಡಿನ ಕಡೆ ಓಡಿ ಬರುತ್ತದೆ ಸಹ್ಯಾದ್ರಿ ತಪ್ಪಲಿನಲ್ಲಿರುವ ಧಾರಾ ನದಿಯ ಬಳಿ ಇರುವ ಬಿಲದ್ವಾರ ಗುಹೆಯಲ್ಲಿ ಅಡಗಿ ಕೊಳ್ಳುತ್ತದೆ ಈ ವಿಷಯ ತಿಳಿದ ಗರುಡನಿಗೂ ಸರ್ಪನಿಗೂ ಘನ ಘೋರ ಯುದ್ಧವಾಗುತ್ತದೆ ಯುದ್ಧದ ವಿಷಯ ತಿಳಿದ ಅವರ ಅಪ್ಪನಾದ ಕಶ್ಯಪ ಯುದ್ಧವನ್ನು ನಿಲ್ಲಿಸುತ್ತಾನೆ ಹಾಗೂ ವಾಸುಕಿಯಿಂದ ಕೆಲವು ಲೋಕ ಕಲ್ಯಾಣ ಕಾರ್ಯಗಳು ನಡೆಯಬೇಕಿದೆ ಎಂದು ಗರುಡನಿಗೆ ತಿಳಿಸುತ್ತಾನೆ.
ವಾಸುಕಿಯು ತನ್ನ ತಂದೆಯ ಬಳಿ ಪ್ರಾಣ ಭಯವನ್ನು ಹೋಗಲಾಡಿಸಲು ಕೇಳುತ್ತಾನೆ ಆಗ ಕಶ್ಯಪನು ಶಿವನ ತಪಸ್ಸು ಮಾಡುವಂತೆ ಹೇಳುತ್ತಾನೆ ವಾಸುಕಿ ಶಿವನ ತಪಸ್ಸನ್ನು ಮಾಡಿ ಒಲಿಸಿಕೊಂಡು ತನ್ನ ಪ್ರಾಣ ಭಯವನ್ನು ಹೋಗಲಾಡಿಸುವಂತೆ ಕೇಳುತ್ತಾನೆ ಆಗ ಶಿವನು ವಾಸುಕಿ ಚಿಂತಿಸಬೇಡ ಸರ್ಪಗಳ ರಕ್ಷಣೆಗಾಗಿ ಸುಬ್ರಹ್ಮಣ್ಯ ತನ್ನ ಮಗನಾಗಿ ಜನಿಸುತ್ತಾನೆ ನೀನು ಇಲ್ಲಿಯೆ ಇರು ಎಂದು ಹೇಳುತ್ತಾನೆ. ಹಲವು ವರ್ಷಗಳ ನಂತರ ಸುಬ್ರಹ್ಮಣ್ಯ ತಾರಕಾಸುರನನ್ನು ಕೊಂದು ರಕ್ತಸಿಕ್ತ ಆಯುಧವನ್ನು ಧಾರಾ ನದಿಗೆ ತಂದು ತೊಳೆಯುತ್ತಾನೆ ಅಲ್ಲಿಂದ ಆ ನದಿಯು ಕುಮಾರಧಾರ ಎಂಬ ಹೆಸರನ್ನು ಪಡೆಯುತ್ತದೆ. ಚಂಪಾ ಸೃಷ್ಟಿಯ ಉತ್ತಮ ದಿನದಂದು ಕುಮಾರಧಾರ ತಟದಲ್ಲಿ ಸುಬ್ರಹ್ಮಣ್ಯ ಹಾಗೂ ಇಂದ್ರನ ಮಗಳಾದ ದೇವಸೇನೆಯ ವಿವಾಹವಾಗುತ್ತದೆ.
ನಂತರ ಸುಬ್ರಹ್ಮಣ್ಯನು ಕುಕ್ಕೆಯಲ್ಲಿ ಬಂದು ನೆಲೆಸುತ್ತಾನೆ ಸುಬ್ರಹ್ಮಣ್ಯನು ಭೂಮಿಗೆ ಬರಲು ಕಾರಣನಾದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ನಾಗಬ್ರಹ್ಮನೆಂಬ ಹೆಸರಿನಲ್ಲಿ ಪೂಜಿಸಲಿ ಎಂದು ದೇವಾನುದೇವತೆಗಳು ವಾಸುಕಿಯನ್ನು ಹರಸುತ್ತಾರೆ. ಬಿಲದ್ವಾರದಿಂದ ಕಾಶಿಗೆ ಸುರಂಗ ಮಾರ್ಗವಿದೆ ಎಂದು ನಂಬಲಾಗಿದೆ ಆದರೆ ನೈಸರ್ಗಿಕ ವಿಕೋಪಗಳಿಂದ ಅದು ಮುಚ್ಚಿ ಹೋಗಿದೆ ಹಾಗೆಯೆ ಈಗಲೂ ಇಲ್ಲಿ ಹಾವುಗಳಿವೆ ಎಂದು ನಂಬುತ್ತಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವವರು ತಪ್ಪದೆ ಬಿಲದ್ವಾರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ದೇವರು ಹರಸಲಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು