WhatsApp Group Join Now
Telegram Group Join Now

Bhoo varaha swamy: ಸೈಟು ಮನೆ ಆಸ್ತಿಯನ್ನು ಖರೀದಿಸಬೇಕು ಎಂಬುದು ಎಲ್ಲರ ಹಂಬಲ. ಅದಕ್ಕಾಗಿ ದೇವರ ಕೃಪೆ ಬೇಕಾಗುತ್ತದೆ ಹಲವು ಭಾರಿ ನಮ್ಮ ಗ್ರಹಗತಿಗಳು ಕೂಡ ಕಾರಣವಾಗುತ್ತವೆ. ಕೆಲವರು ತುಂಬಾ ಹಣ ಗಳಿಸುತ್ತಾರೆ ಆದರೆ ಆ ಹಣ ಕೈಯಲ್ಲೇ ನಿಲ್ಲೋದಿಲ್ಲ ಇದರಿಂದ ಅವರು ಯಾವ ಆಸ್ತಿಯನ್ನಾಗಲಿ ಸ್ವಂತ ಮನೆಯನ್ನಾಗಲಿ ಖರೀದಿಸಲು ಸಾಧ್ಯವಿಲ್ಲ ಇದಕ್ಕೆಲ್ಲ ಒಂದು ಒಳ್ಳೆಯ ಪರಿಹಾರ ಎಂದರೆ ಭೂ ವರಾಹ ಸ್ವಾಮಿ. ( Bhoo varaha swamy) ಹೆಸರೇ ಹೇಳುವಂತೆ ಭೂವರಾಹ ಸ್ವಾಮಿಯನ್ನು ಆರಾಧಿಸುವುದರಿಂದ ಆಸ್ತಿ ಖರೀದಿ ಯೋಗ ಸ್ವಂತ ಮನೆ ಯೋಗ ಪ್ರಾಪ್ತಿಯಾಗುತ್ತದೆ.

ಭೂಮಿಯ ಮೇಲಿರುವ ಎಲ್ಲಾ ಜೀವಿ ಜಂತುಗಳಿಗೆ ದೇವರ ಕೃಪೆ ಬೇಕು ದೇವರ ಆಶೀರ್ವಾದ ಇಲ್ಲದೆ ಭೂಮಿಯ ಮೇಲಿನ ಒಂದು ಹುಲ್ಲು ಕಡ್ಡಿಯೂ ಕೂಡ ಅಲ್ಲಾಡುವುದಿಲ್ಲ. ಸಣ್ಣ ಕೆಲಸದಿಂದ ಹಿಡಿದು ದೊಡ್ಡ ದೊಡ್ಡ ಕೆಲಸ ಕೈಗೂಡುವುದಕ್ಕೆ ದೇವರ ಮೊರೆ ಹೋಗಬೇಕು. ಹಣಕಾಸಿನ ತೊಂದರೆಯಾದರೆ ಭೂ ವರಾಹ ಸ್ವಾಮಿಯನ್ನು ಆರಾಧಿಸುವುದರಿಂದ ನಮಗೆ ವಾಹನ ಯೋಗ ಆಸ್ತಿ ಖರೀದಿ ಯೋಗ ಸ್ವಂತ ಮನೆ ಯೋಗ ಹೀಗೆ ಐಷಾರಾಮಿ ಯೋಗಗಳು ಪ್ರಾಪ್ತಿಯಾಗುತ್ತವೆ. ಕಲಿಯುಗದ ದೇವರು ಭೂ ವರಾಹ ಸ್ವಾಮಿ ಸಾಕ್ಷಾತ್ ವಿಷ್ಣುವಿನ ಅವತಾರವಾಗಿದ್ದಾನೆ.

ಇದೊಂದು ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರವನ್ನು ಕಂಡುಕೊಳ್ಳಬಹುದು ನಿಮ್ಮ ಮನೆಯು ಅರ್ಧಕ್ಕೆ ನಿಂತಿದ್ದರೆ ಅಥವಾ ನೀವು ಆಸ್ತಿಯನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಹಾಗೂ ಕೆಲವರು ಸಾಲವನ್ನು ಕೊಟ್ಟು ವಾಪಸ್ ಬರದೆ ತಡಕಾಡುತ್ತಿರುತ್ತಾರೆ ಅಂತಹವರೆಲ್ಲರಿಗೂ ಕೂಡ ಭೂ ವರಾಹ ಸ್ವಾಮಿಯ ಇದೊಂದು ಮಂತ್ರವನ್ನು ಪಠಿಸುವುದರಿಂದ ಎಲ್ಲವೂ ಪರಿಹಾರವಾಗುತ್ತದೆ.

ಪ್ರಳಯ ಕಾಲದಲ್ಲಿ ಹಿರಣ್ಯ ಶುಕ್ಲಾ ಎಂಬ ರಾಕ್ಷಸನು ಭೂಮಿಯನ್ನು ಸುತ್ತಿ ಸಮುದ್ರಕ್ಕೆ ಎಸೆಯುತ್ತೇನೆ ಎಂದು ಹೊರಡುತ್ತಾನೆ ಅಷ್ಟರಲ್ಲಿ ಸಾಕ್ಷಾತ್ ಮಹಾವಿಷ್ಣು ಭೂ ವರಾಹ ರೂಪವನ್ನು ತಾಳಿ ತನ್ನ ಕೋರೆ ಹಲ್ಲುಗಳಿಂದ ಆ ರಾಕ್ಷಸನನ್ನು ಮೇಲಕ್ಕೆತ್ತಿ ಎಸೆಯುತ್ತಾನೆ ಭೂಮಿಯನ್ನು ಕಾಪಾಡುತ್ತಾನೆ ಅದರಿಂದಾಗಿ ವಿಷ್ಣುವಿನ ಅವತಾರವಾದ ಭೂ ವರಾಹ ಸ್ವಾಮಿಯನ್ನು ಆರಾಧಿಸುತ್ತೇವೆ. ಎಲ್ಲರಿಗೂ ಭೂಮಿಯಲ್ಲಿ ನೆಲೆಯನ್ನು ನಿರ್ಮಿಸಿ ಕೊಡುವವನು ಭೂ ವರಾಹ ಸ್ವಾಮಿ. ಸ್ವಾಮಿಯ ಮಂತ್ರವನ್ನು ಪಠಿಸುವುದರಿಂದ ಭೂಮಿಯಲ್ಲಿ ನಾಲ್ಕು ಅಂಗುಲ ಜಾಗ ದೊರೆಯುತ್ತದೆ ಅಂದರೆ ಸ್ವಂತ ಸೂರನು ನಿರ್ಮಿಸಿಕೊಳ್ಳಬಹುದು. ಹಾಗಾದರೆ ಆ ಮಂತ್ರ ಯಾವುದೆಂದು ತಿಳಿಯೋಣ. ” ಓಂ ನಮೋ ಭಗವತಯೇ ವಾರಾಹ ರೂಪಾಯೇ ಭೂರ್ಭುವಂ ಸ್ವಃ ಭೂಪತಯೇ ಭೂ ಪತಿತ್ವಂ ಮೇ ದೇಹಿ ದಾಪಯ ಸ್ವಾಹಃ”l ಈ ಮಂತ್ರವನ್ನು ದಿನನಿತ್ಯ ಮುಸ್ಸಂಜೆಯ ಸಮಯದಲ್ಲಿ ಕನಿಷ್ಠ 21 ಬಾರಿ ಪಠಿಸುವುದರಿಂದ ಖಂಡಿತವಾಗಲೂ ಒಂದು ವರ್ಷದ ಒಳಗಡೆ ನಿಮಗೆ ಸ್ವಂತ ಮನೆಯ ನಿರ್ಮಾಣವಾಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: