WhatsApp Group Join Now
Telegram Group Join Now

ಪ್ರಿಯ ಓದುಗರೇ ಜ್ಯೋತಿಷ್ಯ ಶಾಸ್ತ್ರವು ತನ್ನದೆಯಾದ ಶ್ರೇಷ್ಠತೆ, ಪ್ರಾಮುಖ್ಯತೆ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಜ್ಯೋತಿಷ್ಯ ಎಂಬ ಪದದಲ್ಲಿ ಜ್ಯೋತಿ ಎಂದರೆ ಬೆಳಕು ಹಾಗೂ ಷ್ಯಾ ಎಂದರೆ ಶಾಸ್ತ್ರ ಎಂದು ಹೇಳಬಹುದು. ಮನುಷ್ಯ ಹುಟ್ಟಿದಾಗಿನಿಂದಲೂ ಗ್ರಹ ಮತ್ತು ನಕ್ಷತ್ರಗಳ ಪ್ರಭಾವಕ್ಕೆ ಒಳಪಟ್ಟಿರುತ್ತಾನೆ. ಈ ಕಾರಣಕ್ಕಾಗಿಯೇ ಆಕಾಶಕಾಯಗಳಾದ ಗ್ರಹಗಳ ಹಾಗೂ ನಕ್ಷತ್ರಗಳ ಬೆಳಕು, ಚಲನೆ, ಆಕರ್ಷಣೆ ಇವುಗಳಿಂದ ಮಾನವನ ಮೇಲಾಗುವ ಪರಿಣಾಮಗಳು ಮತ್ತು ಅವುಗಳಿಗೆ ಪರಿಹಾರ ಸೂಚಿಸುವುದೇ ಈ ಜ್ಯೋತಿಷ್ಯ ಶಾಸ್ತ್ರದ ಪ್ರಮುಖ ಉದ್ದೇಶ.

ಮಾನವನು ಬೇರೆ ಬೇರೆ ಸಂಧರ್ಭಗಳಲ್ಲಿ ಜ್ಯೋತಿಷ್ಯವನ್ನು ಅವಲಂಬಿಸಿರುತ್ತೇವೆ.
ಇಂದಿನ ಈ ಲೇಖನದಲ್ಲಿ ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಸಿಗುವ ಫಲಾಫಲಗಳೇನು? ಎಂದು ತಿಳಿಯೋಣ.

ಮೀನ ರಾಶಿಗೆ ಏಪ್ರಿಲ್ ತಿಂಗಳ ಗ್ರಹಸ್ಥಿತಿಗಳ ಬಗ್ಗೆ ನೋಡುವುದಾದರೆ ಸೂರ್ಯ ಗ್ರಹವು 14.04.2023ರಂದು ಮೀನ ರಾಶಿಯಿಂದ ಮೇಷ ರಾಶಿ ಪ್ರವೇಶ ಪಡೆಯುತ್ತಿದೆ, ಹಾಗೆಯೇ ಬುಧ ಗ್ರಹವು 31-03-23ರಂದು ಮೀನ ರಾಶಿಯಿಂದ ಮೇಷ ರಾಶಿಗೆ, ಗುರು ಗ್ರಹವು 21.04.23ರಂದು ಮೀನ ರಾಶಿಯಿಂದ ಮೇಷ ರಾಶಿಗೆ, ಶುಕ್ರ ಗ್ರಹವು 06.04.23ರಂದು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಪಡೆಯುದನ್ನು ಗಮನಿಸಬಹುದು.

ಅದೇ ರೀತಿ ಮೀನ ರಾಶಿಯವರಿಗೆ 4ನೇ ಮನೆಯಲ್ಲಿ ಕುಜ ಗ್ರಹ, ಅಷ್ಟಮದಲ್ಲಿ ಕೇತು, ವೆಯದಲ್ಲಿ ಶನಿ ಇರುವುದು ಕಾಣಬಹುದು.ಈ ಗ್ರಹ ಸ್ಥಿತಿಗೆ ನಾವು ಫಲಾಫಲವನ್ನು ಮೀನ ರಾಶಿಯವರಿಗೆ ನೋಡುವುದಾದರೆ, ರಾಷ್ಯಾಧಿಪತಿ 2ನೇ ಮನೆಯಲ್ಲಿರುವುದು ಮೀನ ರಾಶಿಯವರಿಗೆ ಅದ್ಭುತವಾದ ಧನ ಯೋಗ ತಂದುಕೊಡುವುದು. 2ನೇ ಮನೆಯಲ್ಲಿ ಸೂರ್ಯ ಇರುವುದರಿಂದ ಸರ್ಕಾರದಿಂದ ಧನ ಲಾಭ ಸಿಗುವ ಸಂಭವವಿದೆ ( ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಹಾಕಿ ಧನ ಸಹಾಯಕ್ಕೆ ಕಾಯುವವರಿಗೆ) 6ನೇ ಅಧಿಪತಿ 2ನೇ ಮನೆಗೆ ಬಂದಿರುವುದರಿಂದ ವಿಶೇಷವಾಗಿ ಸೇವಾ ಕ್ಷೇತ್ರದವರಿಗೆ ಧನ ಲಾಭ ಸಿಗುವ ಸಾಧ್ಯತೆ. ಧನಕಾರಕ ಗುರು 2ನೇ ಮನೆಯಲ್ಲಿರುವುದರಿಂದ ಮೀನ ರಾಶಿಯವರಿಗೆ ಕುಟುಂಬಕ್ಕೆ ಕ್ಷೇಮ ಹಾಗೂ ಕುಟುಂಬದಿಂದ ಧನ ಲಾಭವಾಗುವ ಸಾಧ್ಯತೆಯಿದೆ.

ಸಪ್ತಾಮಾಧಿಪತಿ 2ನೇ ಮನೆಯಲ್ಲಿರುವುದರಿಂದ ಮೀನ ರಾಶಿಯವರಿಗೆ ವ್ಯವಹಾರ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅದ್ಭುತವಾಗಿ ವ್ಯಾಪಾರವಾಗಿ ಲಾಭ ಸಿಗುವುದು, ಪತಿ, ಪತ್ನಿಯರಿಗೆ ಸರ್ಕಾರದಿಂದ ಧನ ಲಾಭವಾಗಿವ ಸಾಧ್ಯತೆಯನ್ನು ಕಾಣಬಹುದು.

ಶುಕ್ರ ಗ್ರಹವು ರಾಶ್ಯಾಧಿಪತಿಯಾಗಿ 3ನೇ ಮನೆಯಲ್ಲಿರುವುದರಿಂದ, ಪ್ರಯಾಣ ವಿಷಯದಲ್ಲಿ 2ನೇ ಅಧಿಪತಿಯಾಗಿ 4ನೇ ಮನೆಯಲ್ಲಿದ್ದಾನೆ. ಆದ್ದರಿಂದ ಮೀನರಾಶಿಯವರು ಪ್ರಯಾಣದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ. ಹಾಗೆಯೇ ಮೀನ ರಾಶಿಯಲ್ಲಿ 4ನೇ ಮನೆಯಲ್ಲಿ ಕುಜ ಇರುವುದರಿಂದ ತಾಯಿಗೆ ಶಸ್ತ್ರ ಚಿಕಿತ್ಸೆ ಆಗುವ ಸಾಧ್ಯತೆಯಿದೆ. ವಾಹನಗಳನ್ನು ಕೊಳ್ಳುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಸೈಟ್, ಭೂಮಿ, ಮನೆ ಮುಂತಾದವುಗಳನ್ನು ಖರೀದಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ.

ಹಾಗೆಯೇ, ಅಷ್ಟಮದಲ್ಲಿ ಕೇತು ಇರುವುದರಿಂದ ಸ್ವಲ್ಪ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಶನಿ ಮೆಯದಲ್ಲಿ ಇರುವುದರಿಂದ ಸ್ವಲ್ಪ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಆದರೆ ಗುರು 2ನೇ ಮನೆಯಲ್ಲಿರುವುದರಿಂದ ಇದರಿಂದ ಅಷ್ಟೇನು ತೊಂದರೆಯಾಗುವುದಿಲ್ಲ. ಆದರೆ ಎಚ್ಚರಿಕೆ ಇರಲಿ.

ಇದಕ್ಕೆ ಪರಿಹಾರಗಳು : ಶನಿಯ ಆರಾಧನೆ, ಹನುಮಾನ್ ಚಾಲಿಸ ಪಠಿಸುವುದು, ಪ್ರತೀ ಶನಿವಾರ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುವುದು, ಇದರ ಜೊತೆಗೆ ಕೇತುವಿನ ಆರಾಧನೆ ಮಾಡುವುದು ಓಂ ಕೇತುವೇ ನಮಃ ಎಂದು 108 ಬಾರಿ ಪಠಿಸುವುದು, ವಿಗಣೇಶ್ವರನ ಆರಾಧನೆ ಮಾಡುವುದು, ನಾಗನ ಆರಾಧನೆ ಅಥವಾ ಕ್ಷೀರಾಭಿಷೇಕವನ್ನು ಮಾಡುವುದರಿಂದ ಮೀನ ರಾಶಿಯವರಿಗೆ ಏನಾದರೂ ಅಪಾಯವಿದಲ್ಲಿ ಅದರ ಪರಿಣಾಮ ತಗ್ಗಿಸಬಹುದಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: