ಮನೆಯಲ್ಲಿ ವಾಸ್ತು ದೋಷವಿದ್ದಾಗ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ. ಅಷ್ಟೇ ಅಲ್ಲದೆ ಮನೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ವಾಸ್ತು ದೋಷ ಇದ್ದರೆ ಮನೆಯಲ್ಲಿ ಕಲಹ, ಆರ್ಥಿಕ ಸಮಸ್ಯೆ, ಭಿನ್ನಾಭಿಪ್ರಾಯ, ಆರೋಗ್ಯ ಸಮಸ್ಯೆ ಹೀಗೆ ಅನೇಕ ವಿಧದ ಸಮಸ್ಯೆಗಳು ಉತ್ಪನ್ನವಾಗುತ್ತವೆ.
ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಮನೆಯ ವಾಸ್ತು ದೋಷವನ್ನು ನಿವಾರಿಸಲು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಅನೇಕ ಉಪಾಯಗಳನ್ನು ತಿಳಿಸಿದ್ದಾರೆ. ಮನೆಯಲ್ಲಿ ಈ ವಸ್ತುಗಳನ್ನು ಇಡುವುದರಿಂದ ಮನೆಯ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ನೆಗೆಟಿವಿಟಿ ದೂರವಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ವಸ್ತುಗಳ ಬಗ್ಗೆ ತಿಳಿಯೋಣ.
ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೆಮ್ಮದಿಯು ನೆಲೆಸಿರಲು ಪಾರದರ್ಶಕ ಶಿವಲಿಂಗವನ್ನು ಇಟ್ಟುಕೊಳ್ಳುವುದು ಶುಭವೆಂದು ಹೇಳಲಾಗುತ್ತದೆ. ಮನೆಯ ದೇವರ ಕೋಣೆಯಲ್ಲಿ ಈ ಶಿವಲಿಂಗವನ್ನು ಇಟ್ಟುಕೊಳ್ಳುವುದರಿಂದ ಶಿವನ ಕೃಪೆ ಸದಾ ನೆಲೆಸಿರುತ್ತದೆ. ಅಷ್ಟೇ ಅಲ್ಲದೆ ಈ ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನ ಲಾಭವಾಗುವುದಲ್ಲದೆ ಗೌರವ ಮತ್ತು ಪ್ರತಿಷ್ಟೆ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಮನೆಯ ಒಳಗೆ ಮತ್ತು ಹೊರಗೆ ನೆಡಬಹುದಾದ ಗಿಡಗಳನ್ನು ಹೆಚ್ಚೆಚ್ಚು ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.
ಅಷ್ಟೇ ಅಲ್ಲದೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪೂಜಿಸುವ ತುಳಸಿ ಗಿಡವು ಮನೆಗೆ ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ನೀಡುವುದಲ್ಲದೆ, ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಹಾಗಾಗಿ ಮನೆಯ ಅಂಗಳದಲ್ಲಿ ತುಳಸಿಯನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯ ಒಳಗೇ ಬೆಳೆಯಬಹುದಾದ ಗಿಡಗಳನ್ನು ಹೆಚ್ಚು ಬೆಳಿಸಿದರೆ ಮನೆಯಲ್ಲಿ ಸಮೃದ್ಧ ವಾತಾವರಣ ಮತ್ತು ಪಾಸಿಟಿವಿಟಿ ನೆಲೆಸಿರುತ್ತದೆ. ಮನೆಯ ಒಳಗೆ ಅಥವಾ ಅಕ್ಕ ಪಕ್ಕದಲ್ಲಿ ಕೊಳಕು ಮತ್ತು ಕೆಟ್ಟ ವಾಸನೆ ಇದ್ದರೆ ನಕಾರಾತ್ಮಕ ಶಕ್ತಿಯ ಹರಿವು ಬಹುಬೇಗ ಹೆಚ್ಚುತ್ತದೆ.
ಹಾಗಾಗಿ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಲು ಮನೆಯಲ್ಲಿ ಸುಗಂಧವನ್ನು ಬೀರುವ ಅಗರಬತ್ತಿ, ಧೂಪ ಮುಂತಾದ ಸಕಾರಾತ್ಮಕತೆಯನ್ನು ಹೆಚ್ಚುವಂತೆ ಮಾಡುವ ವಸ್ತುಗಳನ್ನು ಬಳಸುವುದು ಉತ್ತಮ. ಹಾಗಾಗಿ ಮನೆಯಲ್ಲಿ ಕೊಳಕು ಅಥವಾ ಕಸ ಹೆಚ್ಚು ಸಂಗ್ರಹವಾಗಿದ್ದರೆ ಅದನ್ನು ಬೇಗ ಸ್ವಚ್ಛಗೊಳಿಸಿ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರೀ ಯಂತ್ರಕ್ಕೆ ವಿಶೇಷವಾದ ಮಹತ್ವವಿದೆ. ಹಾಗಾಗಿ ಮನೆಯಲ್ಲಿ ಸ್ಪಟಿಕದ ಶ್ರೀಯಂತ್ರವನ್ನು ಇಟ್ಟಕೊಳ್ಳುವುದು ಶುಭವೆಂದು ಹೇಳಲಾಗುತ್ತದೆ.
ಇದರಿಂದ ಸುತ್ತಮುತ್ತಲಿನ ನಕಾರಾತ್ಮಕತೆ ದೂರವಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಹಣವಿಡುವ ಜಾಗದಲ್ಲಿ ಈ ಶ್ರೀಯಂತ್ರವನ್ನು ಇಡುವುದರಿಂದ ಧನಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಶ್ರೀಯಂತ್ರ ಅತ್ಯಂತ ಹೆಚ್ಚು ಪ್ರಭಾವವನ್ನು ಹೊಂದಿರುವ ಯಂತ್ರವಾಗಿದ್ದು, ಇದರಿಂದ ಸಕಲ ಸಮಸ್ಯೆಗಳು ದೂರವಾಗುತ್ತವೆ. ಅರ್ಧಕ್ಕೆ ನಿಂತ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ.
ಮನೆಯ ಎಲ್ಲ ಕೋಣೆಗಳಲ್ಲಿ ಸುಗಂಧಿತ ಹಾಗೂ ತಾಜಾ ಹೂವುಗಳನ್ನು ಇಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಇದರಿಂದ ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಆಗುವುದಲ್ಲದೇ, ನೆಮ್ಮದಿ ಹೆಚ್ಚುತ್ತದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಲಾಫಿಂಗ್ ಬುದ್ದನ ವಿಗ್ರಹವನ್ನು ಇಡುವುದರಿಂದ ಖುಷಿ ಮತ್ತು ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುವಲ್ಲಿ ಧ್ವನಿಯ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಗಂಟೆ, ಜಾಗಟೆ, ವಾದ್ಯಗಳು, ಶಂಖನಾದಗಳಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಹೆಚ್ಚುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದ ಬಳಿ ವಿಂಡ್ ಚೈಮ್ಸ್ ಇಡುವುದರಿಂದ ಸಹ ಪಾಸಿಟಿವಿಟಿ ಹೆಚ್ಚುತ್ತದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513