ಹನ್ನೆರಡು ರಾಶಿ ಚಕ್ರಗಳಲ್ಲಿ ಮೊದಲ ರಾಶಿ ಚಕ್ರವೇ ಮೇಷ ರಾಶಿ . ಮಂಗಳ ಗ್ರಹವು ತಿಂಗಳ ದ್ವಿತೀಯಾರ್ಧ ಅಂದರೆ 16 ರಂದು ಧನು ರಾಶಿಗೆ ಪ್ರವೇಶಿಸುತ್ತದೆ. ಆರ್ಥಿಕ ದೃಷ್ಟಿಯಿಂದ ಮಂಗಳ ಗ್ರಹದ ಪರಿಣಾಮವು ನಿಮಗೆ ಅನುಕೂಲಕರ ಫಲಿತಾಂಶವನ್ನು ನೀಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಈ ಸಂಚಾರದ ಪರಿಣಾಮವೂವು ಮೇಷ ರಾಶಿ ಚಕ್ರದ ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕತೂಯನ್ನು ತರುತ್ತದೆ. ಈ ರಾಶಿಯವರು ಕೋಪಿಷ್ಠರು ಹಾಗೂ ಮೊಂಡು ಸ್ವಭಾವದವರು. ತಾವು ಹೇಳಿದ್ದೆ ನೆಡೆಯಬೇಕು ಎನ್ನುವ ಹಠ ಇವರಲ್ಲಿರುತ್ತದೆ. ಇದನ್ನು ಹೊರತುಪಡಿಸಿ ಇವರಲ್ಲಿರುವ ಕೆಲವೊಂದು ಗುಣಗಳು ಇತರರು ಇವರನ್ನು ಪ್ರೀತಿಸುವಂತೆ, ಇಷ್ಟ ಪಡುವಂತೆ ಮಾಡುತ್ತದೆ.
ಮೊದಲನೇಯದಾಗಿ ನಂಬಿಕೆ ಎನ್ನುವುದು ಇವರ ಅತ್ಯುತ್ತಮ ಗುಣ, ಇದೆ ಕೆಟ್ಟ ಗುಣಲಕ್ಷಣವೆಂದರೆ ತಪ್ಪಾಗದು. ಯಾಕೆಂದರೆ ಬಹುತೇಕರು ಇವರ ಅತಿಯಾದ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವುದೇ ಹೆಚ್ಚು ಇದಕ್ಕೆ ಇವರು ಅವಕಾಶವನ್ನು ಮಾಡಿಕೊಡುತ್ತಾರೆ. ನೋಡಲು ಕಟುವಾಗಿ ಕಾಣಸಿದರೂ ಕೂಡ ಇವರು ಮೋಸಕ್ಕೆ ಹಗರಣಕ್ಕೆ ಸಿಲುಕಿಕೊಳ್ಳುತ್ತಾರೆ.
ನೀರಸ, ನಿಧಾನಗತಿಯ ಜನರು ಹಾಗೂ ಬೋರು ಹೊಡೆಸುವ ಉದ್ಯೋಗಗಳನ್ನು ದ್ವೇಷಿಸುವವರು ಮೇಷ ರಾಶಿಯವರು. ಮೇಷ ರಾಶಿಯವರು ಈ ಗುಣವು ಅವರಿಗೆ ನೋವುಂಟು ಮಾಡಿದರೂ, ಸತ್ಯವೆಂದರೆ ಈ ರಾಶಿಯವರು ನಿಧಾನಗತಿಯ ಜನರು ಹಾಗೂ ಚಟುವಟಿಕೆಗಳನ್ನು ದ್ವೇಷಿಸುತ್ತಾರೆ. ನೀವು ಅವರನ್ನು ಚನ್ನಾಗಿ ತಿಳಿದುಕೊಂಡಿದ್ದು ಅವರಿಂದ ಸಹಾಯವನ್ನು ಕೇಳಿದರೆ, ಖಂಡಿತವಾಗಿಯೂ ನೀವು ನಿರೀಕ್ಷಿರದ ವೇಗದಲ್ಲಿ ಪ್ರತಿಕ್ರಿಯೆಯನ್ನೂ ನೀಡುತ್ತಾರೆ. ಇವರು ಒಮ್ಮೆ ಪ್ರೀತಿಯನ್ನು ಕಂಡುಕೊಂಡರೆ ಅಂತರಂಗದಿಂದ ಪ್ರೀತಿಗೆ ಬದ್ಧರಾಗಿರುತ್ತಾರೆ. ನಿಮ್ಮ ಕಡೆಯಿಂದಲೂ ಸಿಗುವ ಪ್ರೀತಿ ಬೆಂಬಲ ಮತ್ತು ಬದ್ಧತೆಯೇ ಮೇಷ ರಾಶಿಯವರು ನಿಮ್ಮತ್ತ ತಿರುಗುವಂತೆ ಮಾಡುತ್ತದೆ.