WhatsApp Group Join Now
Telegram Group Join Now

ಪ್ರತೀಕ್ಷಾ ಬ್ಯಾನರ್ಜಿ ಹಿಂದಿಯ ಸುಪ್ರಸಿದ್ಧ ಧಾರಾವಾಹಿ ಆದಂತಹ ಬಾಲಿಕಾವಧು ಎಂಬ ದಾರವಾಹಿಯಲ್ಲಿ ಆನಂದಿ ಎಂಬ ಪಾತ್ರದಿಂದ ಎಲ್ಲರ ಮೆಚ್ಚುಗೆಯನ್ನು ಜನಪ್ರಿಯತೆಯನ್ನು ಸಾಧಿಸಿದ ಇವರನ್ನು ಜನರು ಮಾಧ್ಯಮಗಳು ಆನಂದಿ ಎಂದು ಗುರುತಿಸುತ್ತಿದ್ದರು ಈಕೆಯ ಆಪ್ತರು ಕೂಡ ಅದೇ ಹೆಸರಿನಿಂದ ಕರೆಯುತ್ತಿದ್ದರು. ಧಾರಾವಾಹಿಯಲ್ಲಿ ಅವರ ನಟನೆ ಆ ರೀತಿಯಾಗಿತ್ತು ನೋಡುವುದಕ್ಕೆ ಸುರದ್ರೂಪಿ ಆಗಿದ್ದ ಪ್ರತಿಭಾವಂತ ಳಾಗಿದ್ದ ಪ್ರತೀಕ್ಷಾ ಸಾವು ಬಾಲಿವುಡ್ ಅಂಗಳದಲ್ಲಿ ಶಾಕಿಂಗ್ ನ್ಯೂಸ್ ಆಗಿ ಹರಿದಾಡಿತ್ತು ಮಧ್ಯಮಗಳಲ್ಲಿ ಈಕೆಯದು ಆತ್ಮಹತ್ಯೆ ಎಂದು ವರದಿಯಾಗಿತ್ತು ಸಹಜ ಸುಂದರಿಯು ಪ್ರತಿಭಾನ್ವಿತ ನಟಿಯಾಗಿದ್ದಂತಹ ಪ್ರತೀಕ್ಷಾ ಇಷ್ಟು ಬೇಗ ಸಾವಿನ ಕದ ವನ್ನ ಕಟ್ಟಿದ್ದು ಯಾಕೆ ಅಂತಹ ಕಷ್ಟ ಆಕಿಗೆ ಏನಿತ್ತು ಅಥವಾ ಈ ಸಾವಿನ ಹಿಂದೆ ದೂರು ಯಾರದ್ದಾದರೂ ಕೈವಾಡವಿದೆ ಎಂಬ ಮುಂತಾದ ಪ್ರಶ್ನೆಗಳು ಹುಟ್ಟಿಕೊಂಡವು.

ಮೂಲತಹ ಬೆಂಗಾಳಿ ಕುಟುಂಬದವರಾದ ಇವರು ಸಾವಿರ ಓಂಬೈನೂರಾ ತೊಂಬತ್ತೊಂದರಲ್ಲಿ ಬಿಹಾರದಲ್ಲಿ ಜನಿಸಿದರು ಅವರ ವೃತ್ತಿ ಜೀವನದ ಮಹತ್ವದ ಮೈಲಿಗಲ್ಲು ಎಂದರೆ ಅದು ಎರಡು ಸಾವಿರದ ಹತ್ತರ ಇಸವಿಯಲ್ಲಿ ಸೆಟ್ಟೇರಿದ ಹಿಂದಿಯ ಬಾಲಿಕಾವಧು ಎಂಬ ಕೌಟುಂಬಿಕ ಧಾರಾವಾಹಿಯ ಮೂಲಕ ಪ್ರತೀಕ್ಷಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೆ ಬಂದರು. ಆಕೆಯ ತಂದೆ ಶಂಕರ್ ಬ್ಯಾನರ್ಜಿ ಒಂದು ಚಿಕ್ಕ ಎನ್ ಜಿ ಒ ನಡೆಸುತ್ತಿದ್ದರು ಅವರದು ಮಧ್ಯಮ ವರ್ಗದ ಕುಟುಂಬ. ಪ್ರತೀಕ್ಷಾ ಪಡೆದ ಖ್ಯಾತಿಯಿಂದಾಗಿ ಇವರ ಕುಟುಂಬವು ಬಾಲಿವುಡ್ ಕುಟುಂಬ ಎಂಬ ಹೆಸರಿಗೆ ಸೇರಿತು ಈ ಧಾರಾಾಹಿಯಿಂದ ಪ್ರತೀಕ್ಷಾ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದರು ತನ್ನ ಸಿದಾ ಸಾದ ಹಾಗೂ ಸರಳ ನಡವಳಿಕೆಯಿಂದಾಗಿ ಪ್ರತೀಕ್ಷಾಳನ್ನು ಜನರು ಬಹುವಾಗಿ ಇಷ್ಟಪಟ್ಟರು. ಎಲ್ಲವೂ ಸುಗಮವಾಗಿತ್ತು ಎನ್ನುವ ಹೊತ್ತಿಗೆ ಎರಡು ಸಾವಿರದ ಹದಿಮೂರುರಲ್ಲಿ ಆಕೆಯ ಬದುಕಿನಲ್ಲಿ ವಿಲಕ್ಷಣ ಸೈಕೋ ಒಬ್ಬನ ಆಗಮನವಾಯಿತು.

ಆತನ ಹೆಸರು ರಾಹುಲ್ ರಾಜ್ ಸಿಂಗ್ ಈತ ಕೂಡ ಒಬ್ಬ ಮೊಡೆಲ್ ಹಾಗೂ ನಟ ಆಗಿದ್ದವನು. ಯಾವುದೋ ಒಂದು ಬರ್ತಡೇ ಫಂಕ್ಷನಲ್ಲಿ ಇವನಿಗೆ ಪ್ರತೀಕ್ಷಾ ಭೇಟಿಯಾಗುತ್ತದೆ. ಈ ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ ಆನಂದಿ ಪಾತ್ರದ ಮೂಲಕ ಪ್ರತೀಕ್ಷಾ ಎಲ್ಲರ ನೆಚ್ಚಿನ ನಟಿಯಾಗಿದ್ದರೆ ರಾಹುಲ್ ಅವಳ ಸೌಂದರ್ಯಕ್ಕೆ ಮರುಳಾಗಿದ್ದ. ಪ್ರತೀಕ್ಷಾ ಅವನನ್ನ ವಿಪರೀತವಾಗಿ ಹಚ್ಚಿಕೊಂಡಿದ್ದಳು ತನಗೆ ರಾಹುಲ್ ಗಿಂತ ಸೂಕ್ತ ಸಂಗಾತಿ ಬೇರೆ ಯಾರು ಇಲ್ಲ ಎಂದು ನಂಬಿಕೊಂಡಿದ್ದಳು. ಮುಂಬೈನಲ್ಲಿ ಪ್ಲಾಟ್ ಒಂದನ್ನು ಖರೀದಿಸಿ ಅಲ್ಲಿ ಆಗಾಗ ರಾಹುಲ್ ಅನ್ನು ಭೇಟಿಯಾಗುತ್ತಿದ್ದಳು. ಪ್ರತೀಕ್ಷಾ ಆ ಫ್ಲ್ಯಾಟನ್ನು ತನ್ನ ಹಾಗೂ ರಾಹುಲ್ ನ ವಿಶ್ರಾಂತಿ ಸ್ಥಳವನ್ನಾಗಿ ಮಾಡಿಕೊಂಡಿದ್ದಳು ರಾಹುಲ್ ತಾವಿಬ್ಬರು ಮದುವೆಯಾಗೋಣ ತಮ್ಮದೇ ಸುಂದರ ಕುಟುಂಬವನ್ನು ರಚಿಸಿ ಕೊಳ್ಳೋಣ ಎಂಬ ಮಾತುಗಳಿಂದ ಆಕೆಯನ್ನು ನಂಬಿಸಿ ನಿಧಾನವಾಗಿ ಆಕೆಯ ಹಣಕಾಸಿನ ವಿಷಯಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಿಕೊಂಡ.

ಅವನ ಮೇಲಿನ ಅಂದಾಭಿಮಾನದಿಂದಾಗಿ ಪ್ರತೀಕ್ಷಾ ಎಲ್ಲವನ್ನೂ ಕೂಡ ಒಪ್ಪಿಸಿದ್ದಳು ಈ ವಿಚಾರ ಆಕೆಯ ತಾಯಿಯ ಗಮನಕ್ಕೆ ಬಂದು ಆ ಕುರಿತು ಪ್ರತೀಕ್ಷಾಳನ್ನು ಹಲವಾರು ಬಾರಿ ಎಚ್ಚರಿಸಿದ್ದರು. ಆದರೆ ಪ್ರತೀಕ್ಷಾ ಕೇಳಿರಲಿಲ್ಲ. ಪ್ರತೀಕ್ಷಾ ಸತತ ಮೂರು ವರ್ಷ ಕಷ್ಟಪಟ್ಟು ಕಿರುತೆರೆಯಲ್ಲಿ ದುಡಿದ ಹಣವನ್ನೆಲ್ಲಾ ರಾಹುಲ್ ಒಬ್ಬನೇ ಕಬಳಿಸಿದ್ದ. ಇಷ್ಟೇ ಅಲ್ಲ ಆತನ ತಾಯಿಯೂ ಕೂಡ ವ್ಯಾಪಾರವನ್ನು ಶುರು ಮಾಡುವುದಾಗಿ ಪ್ರತೀಕ್ಷಾ ಬಳಿ ಐವತ್ತು ಲಕ್ಷ ರೂಪಾಯಿ ಹಣವನ್ನು ಪಡೆದಿರುವ ಸಂಗತಿ ತದನಂತರ ಬೆಳಕಿಗೆ ಬಂದಿತ್ತು. ಪ್ರತೀಕ್ಷಾ ಬಳಿ ಇರುವ ಹಣವೆಲ್ಲ ಖರ್ಚಾಗಿ ತನ್ನ ಸ್ವಂತ ಖರ್ಚಿಗೆ ಹಣವನ್ನೂ ರಾಹುಲ್ ಬಳಿ ಬೇಡುವಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಳು.

ತನ್ನ ಹಣವನ್ನು ತನಗೆ ಹಿಂದಿರುಗಿಸುವಂತೆ ರಾಹುಲನನ್ನು ಕೇಳಿದಾಗ ಆತ ಪ್ರೀತಿ-ಪ್ರೇಮದಿಂದ ಅವಳ ಬಾಯಿ ಮುಚ್ಚಿಸುತ್ತಿದ್ದ. ನಂತರ ಹಣದ ವಿಷಯವಾಗಿ ಅವರಿಬ್ಬರ ನಡುವೆ ಮನಸ್ತಾಪಗಳು ಘರ್ಷಣೆ ಜೋರಾದವು. ಈ ಸಮಯದಲ್ಲಿಯೇ ಗಾಯದ ಮೇಲೆ ಬರೆ ಎಳೆದಂತೆ ರಾಹುಲ್ ಗೆ ಹಳೆಯ ಪ್ರಿಯತಮೆ ಇರುವ ಸತ್ಯಸಂಗತಿ ಪ್ರತೀಕ್ಷಾಗೆ ತಿಳಿಯಿತು ಅವಳು ಬೇರೆ ಯಾರು ಅಲ್ಲ ಬಾಲಿವುಡ್ ನ ಮಾಡೆಲ್ ಸಹನಟಿ ಆಗಿರುವಂತಹ ಸಲೋನಿ ಶರ್ಮಾ. ಅವರಿಬ್ಬರೂ ಪ್ರೀತಿಸುತ್ತಿದ್ದ ವಿಷಯದ ಕುರಿತಾದ ಸಣ್ಣ ಸುಳಿವು ಕೂಡಾ ಪ್ರತೀಕ್ಷಾಗೆ ಮೊದಲು ಸಿಕ್ಕಿರಲಿಲ್ಲ. ಆ ಕುರಿತು ರಾಹುಲ್ ನನ್ನ ಪ್ರಶ್ನಿಸಬೇಕು ಎನ್ನುವ ಮೊದಲೇ ರಾಹುಲ್ ಮಾಧ್ಯಮದ ಎದುರು ತನ್ನ ಮತ್ತು ಪ್ರತೀಕ್ಷಾ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದ. ತನ್ನ ಹೇಳಿಕೆಯಲ್ಲಿ ತನ್ನ ಹಳೆಯ ಪ್ರೇಯಸಿಯನ್ನು ಸಮರ್ಥಿಸಿಕೊಂಡಿದ್ದ.

ರಾಹುಲ್ ತನ್ನನ್ನು ಅವನ ಸ್ವಾರ್ಥಕ್ಕೆ ದಾಳವಾಗಿ ಬೆಳೆಸಿಕೊಂಡಿದ್ದ ಎಂಬುದನ್ನು ತಿಳಿದ ಪ್ರತೀಕ್ಷಾ ಹೃದಯ ನುಚ್ಚುನೂರಾಯಿತು ಅವಳು ಮನೋ ಖಿನ್ನತೆಗೆ ಒಳಗಾದಳು. ತನ್ನ ಫ್ಲ್ಯಾಟಿಗೆ ಹೋಗಿ ರಾಹುಲ್ ಗೆ ಕರೆ ಮಾಡಿ ಇದು ತನ್ನ ಕೊನೆಯ ಕರೆ ಎಂದು ಹೇಳಿ ನೀನು ನನ್ನನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡೆ ನಾನು ನಿನಗಾಗಿ ಸರ್ವಸ್ವವನ್ನು ಕಳೆದುಕೊಂಡೆ ಇದೀಗ ನಿನ್ನ ಪ್ರೀತಿಯನ್ನು ಕೂಡ. ನನಗೆ ಈ ಜಗತ್ತೇ ಬೇಡ ನಾನು ಎಲ್ಲರಿಂದ ದೂರವಾಗುತ್ತಿದ್ದೇನೆ ನಮ್ಮಿಂದ ಜಗತ್ತಿಗೆ ಬರಬೇಕಿದ್ದಂತಹ ಮುಗ್ದ ಜೀವವನ್ನು ಕೂಡ ನಾನು ಈಗಾಗಲೇ ಬಲಿ ಕೊಟ್ಟಿದ್ದೇನೆ ನಮ್ಮಂತಹ ನಯವಂಚಕರ ಪೋಷಕರ ಮಗುವಾಗಿ ಅದು ಬೆಳೆಯುವುದು ಬೇಡ ನಿನಗೆ ಒಂದು ದೊಡ್ಡ ನಮಸ್ಕಾರ ಎಂದು ಹೇಳಿ ಪ್ರತೀಕ್ಷಾ ಸಾವಿಗೆ ಸಿದ್ಧವಾಗಿದ್ದರು. ಇತ್ತ ಅವಳ ಮಾತುಗಳಿಂದ ಗಾಬರಿಯಾದ ರಾಹುಲ್ ಆತುರದಿಂದ ಅನಾಹುತ ಮಾಡಿಕೊಳ್ಳಬೇಡ ನಾನು ಈಗಲೇ ಅಲ್ಲಿಗೆ ಬರುತ್ತೇನೆ ಎಂದು ಹೇಳಿ ಲಗುಬಗೆಯಿಂದ ಅವಳಿದ್ದ ಸ್ಥಳಕ್ಕೆ ಹೋಗುತ್ತಾನೆ.

ಆದರೆ ಎಲ್ಲಾ ಮೂಲಗಳಿಂದ ಬರವಸೆಯ ಕಳೆದುಕೊಂಡಿದ್ದ ಪ್ರತೀಕ್ಷಾ ನೇಣಿಗೆ ಶರಣಾಗಿದ್ದಳು. ಮಗಳೇ ಸಾವಿನ ಸುದ್ದಿಯನ್ನು ಕೇಳಿದ ಪೋಷಕರು ಆತಂಕಕ್ಕೆ ಒಳಗಾಗಿದ್ದರೂ ಇದಕ್ಕೆಲ್ಲ ರಾಹುಲ ಕಾರಣ ಎಂದು ದೂರಿದರು. ಬಾಳಿ ಬದುಕಬೇಕಾಗಿದ್ದ ಬಾಲಿವುಡ್ ನ ಉಜ್ವಲ ಭವಿಷ್ಯವನ್ನು ಹೊಂದಿದ್ದ ಉದಯೋನ್ಮುಖ ನಟಿ ಪ್ರತೀಕ್ಷಾ ಎರಡು ಸಾವಿರದ ಹದಿನಾರರಲ್ಲಿ ಸಾವನ್ನಪ್ಪಿದ್ದು ದುಃಖದ ಸಂಗತಿ ಆಕೆ ತನ್ನ ಸಂಗಾತಿಯ ಆಯ್ಕೆಯಲ್ಲಿ ಎಡವಿದ್ದಳು. ದುಡ್ಡಿನ ವ್ಯಾಮೋಹಕ್ಕೆ ಒಳಗಾದ ರಾಹುಲ್ ಅವಳ ಪ್ರೀತಿಗೆ ಮೋಸ ಮಾಡಿದ್ದ. ಇದಿಷ್ಟು ಪ್ರತೀಕ್ಷಾ ಬ್ಯಾನರ್ಜಿ ಸಾವಿನ ಕುರಿತಾದ ಮಾಹಿತಿಯಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: