ರೈಲು ಇದೊಂದು ಜನರು ಮತ್ತು ಸರಕುಸೇವೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ವಾಹನವಾಗಿದೆ. ನಮ್ಮ ಕರ್ನಾಟಕದಲ್ಲಿ ಮೊದಲ ರೈಲು ಎಂದರೆ ಅದು ಮೈಸೂರಿನಿಂದ ಜೋಲಾರಪೇಟೆ ಆಗಿತ್ತು. ಹಾಗೆಯೇ ನಮ್ಮ ದೇಶದಲ್ಲಿ ಮೊದಲ ರೈಲು ಎಂದರೆ ಅದು ಮುಂಬೈಯಿಂದ ಠಾಣಾವರೆಗೆ ಆಗಿತ್ತು. ನಂತರದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಅಭಿವೃದ್ಧಿ ಶುರುವಾಯಿತು. ಆದ್ದರಿಂದ ನಾವು ಇಲ್ಲಿ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನಮ್ಮ ದೇಶದ ರೈಲ್ವೆಗೆ ಸುಮಾರು 168ವರ್ಷಗಳ ಹಿಂದಿನ ಇತಿಹಾಸ ಇದೆ ಎಂದು ಹೇಳಬಹುದು. ಈಗ ದೇಶವು ಸುಮಾರು 65,000ಕಿಲೋಮೀಟರ್ ಉದ್ದದಷ್ಟು ರೈಲ್ವೆ ಹಳಿಯನ್ನು ಹೊಂದಿದೆ. ಆದ್ದರಿಂದ ಇಡೀ ಪ್ರಪಂಚದಲ್ಲಿ 4ನೆಯ ಸ್ಥಾನವನ್ನು ಪಡೆದಿದೆ. ಲಕ್ಷಾಂತರ ಜನರು ತಮ್ಮ ಉದ್ಯೋಗಕ್ಕಾಗಿ ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಯಾವುದೇ ದುಬಾರಿ ಖರ್ಚಿಲ್ಲದೆ ಬಹಳ ಸುಲಭವಾಗಿ ಹೋಗಬಹುದಾದ ವಾಹನ ಎಂದರೆ ಅದು ರೈಲು ಮಾತ್ರ. ರೈಲ್ವೆಯಲ್ಲಿ ಜನರು ಹೆಚ್ಚಾದಾಗ ಬಿಸಿ ವಾತಾವರಣ ಉಂಟಾಗುತ್ತದೆ. ಆಗ ಆ ಬಿಸಿ ಗಾಳಿಯನ್ನು ರೂಫ್ ವೆಂಟಿಲೇಟರ್ ಹೊರ ಹಾಕುತ್ತದೆ.
ಇವುಗಳಿಗೆ ಸ್ವಲ್ಪ ಜಾಗ ಬಿಟ್ಟು ಅಲ್ಯೂಮಿನಿಯಂ ಪ್ಲೇಟ್ ನ್ನು ಮುಚ್ಚಿಡುತ್ತಾರೆ. ಹಾಗೆಯೇ ರೈಲ್ವೆಯಲ್ಲಿ ಬಳಸುವ ಫ್ಯಾನ್ ಮತ್ತು ಲೈಟ್ ಗಳನ್ನು ಮನೆಯಲ್ಲಿ ಬಳಕೆ ಮಾಡಲು ಆಗುವುದಿಲ್ಲ. ಏಕೆಂದರೆ 110ವೋಲ್ಟ್ ಡಿಸಿ ಕರೆಂಟಿನಿಂದ ಮಾತ್ರ ಕೆಲಸ ಮಾಡುತ್ತವೆ. ರೈಲ್ವೆಯ ಅಡಿಯಲ್ಲಿ ಇರುವ ಬ್ಯಾಟರಿಗಳು ಫ್ಯಾನ್ ಮತ್ತು ಲೈಟ್ ಗೆ ಕರೆಂಟನ್ನು ನೀಡುತ್ತವೆ. ಮನೆಯಲ್ಲಿ 220ವೋಲ್ಟ್ ಎಸಿ ಕರೆಂಟ್ ಬೇಕಾಗುತ್ತದೆ. ಬೋಗಿಯ ಕೆಳಗೆ ಇರುವ ಬ್ಯಾಟರಿ ಸಾಮರ್ಥ್ಯ ಚೆಕ್ ಮಾಡಲು ಬ್ಯಾಟರಿ ಸ್ಟ್ರೇನ್ಗ್ತ್ ಇಂಡಿಕೇಟರ್ ನ್ನು ಬಳಸಲಾಗುತ್ತದೆ. ಹಸಿರು ಬಣ್ಣ ಇದ್ದರೆ ಬ್ಯಾಟರಿ ಪೂರ್ತಿಯಾಗಿ ಇದೆ ಎಂದು ಅರ್ಥ.
ಭೋಗಿಗಳ ಹಿಂದೆ ಸೈಡ್ ಫಿಲ್ಲಿಂಗ್ ಮತ್ತು ಲಿಫ್ಟ್ ಹಿಯರ್ ಎಂದು ಬರೆದಿರುತ್ತದೆ. ಭೋಗಿಗಳನ್ನು ರಿಪೇರಿ ಮಾಡುವಾಗ ಲಿಫ್ಟ್ ಹಿಯರ್ ಎಂದು ಇದ್ದಲ್ಲಿ ಎತ್ತುತ್ತಾರೆ. ಸೈಡ್ ಫಿಲ್ಲಿಂಗ್ ಎಂದರೆ ನೀರು ತುಂಬಲು ಇರುವ ವ್ಯವಸ್ಥೆಯಾಗಿದೆ. ಜನರಲ್ ಭೋಗಿಗಳಿಗೆ 3 ಬಾಗಿಲು ಇರುತ್ತದೆ. ಸೆಂಟರ್ ಭಫರ್ ಕ್ಲಫ್ಪಿಂಗ್ ಇದು ರೈಲ್ವೆ ಅಪಘಾತವಾದರೂ ಬೋಗಿಗಳು ಕಳಚಿಕೊಳ್ಳಲು ಬಿಡುವುದಿಲ್ಲ. ಬೋಗಿಗಳಿಗೆ ಹಳದಿ ಬಣ್ಣದ ಪಟ್ಟಿ ಇದ್ದರೆ ಸೆಂಟರ್ ಭಫರ್ ಕ್ಲಫ್ಪಿಂಗ್ ಇದೆ ಎಂದು ಅರ್ಥ. ಹಾಗೆಯೇ ಭೋಗಿಗಳಿಗೆ ನಂಬರ್ ಇರುತ್ತದೆ. 5 ನಂಬರ್ಗಳಲ್ಲಿ ಮೊದಲ ಎರಡು ನಂಬರ್ ರೈಲು ಯಾವಾಗ ಶುರುವಾಯಿತು ಎಂದು ಕೊನೆಯ ಮೂರು ನಂಬರ್ ಅದು ಯಾವ ಟೈಪ್ ಕೋಚ್ ಎಂದು ತಿಳಿಸುತ್ತದೆ.