WhatsApp Group Join Now
Telegram Group Join Now

ಒಂದು ಕಾಲದಲ್ಲಿ ಪ್ರತಿಯೊಬ್ಬರೂ ಬಳಸುವ ಮೊಬೈಲ್ ಎಂದರೆ ಅದು ನೋಕಿಯಾ ಆಗಿತ್ತು. ಮೊದಲನೆಯದಾಗಿ ಬೆಳಕಿಗೆ ಬಂದ ಮೊಬೈಲ್ ಕಂಪನಿಯನ್ನು ನೊಕಿಯಾ. 1865 ರಲ್ಲಿ ಫ್ರೆಡ್ರಿಕ್ ಎನ್ನುವ ವ್ಯಕ್ತಿಯು ನೋಕಿಯಾ ಅನ್ವರ್ಥ ಎಂಬ ನದಿಯ ಪಕ್ಕದಲ್ಲಿ ಒಂದು ಪೇಪರ್ ಮಿಲ್ ಅನ್ನು ಸ್ಥಾಪನೆ ಮಾಡುತ್ತಾರೆ. ಆ ನದಿಯ ಹೆಸರನ್ನು ಅಂದರೆ ನೋಕಿಯಾ ಪೇಪರ್ ಮಿಲ್ ಎಂದು ಇಡುತ್ತಾರೆ. ಆನಂತರ ಎರಡು ವರ್ಷಗಳಲ್ಲಿ ಇದು ನೋಕಿಯಾ ಕಾರ್ಪೊರೇಷನ್ ಆಗಿ ಬದಲಾಗುತ್ತದೆ. ಕೆಲವು ವರ್ಷಗಳ ನಂತರ ನೋಕಿಯಾ ಕಂಪನಿಯವರ ವ್ಯಾಪಾರವನ್ನು ವಿಸ್ತರಿಸುತ್ತದೆ. ಟಿವಿ, ರಬ್ಬರ್,ಹೀಗೆ ಅನೇಕ ವಸ್ತುಗಳನ್ನು ತಯಾರಿಸುತ್ತದೆ. ಆದ್ದರಿಂದ ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

1987 ರಲ್ಲಿ ನೋಕಿಯಾ ಕಂಪನಿ  ತನ್ನ  ಮೊಟ್ಟಮೊದಲ ಮೊಬೈಲ್ ಫೋನ್ ಅನ್ನು ರಿಲೀಸ್ ಮಾಡುತ್ತದೆ. 1992ರಲ್ಲಿ ನೋಕಿಯಾ ಸಂಬಂಧಪಟ್ಟ ಎಲ್ಲಾ ವ್ಯಾಪಾರಗಳನ್ನು ನಿಲ್ಲಿಸಿ ಕೇವಲ ಮೊಬೈಲ್ ವ್ಯಾಪಾರವನ್ನು ಮಾತ್ರ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ನಿರ್ಧಾರದಿಂದ ನೋಕಿಯಾ ಕಂಪನಿಗೆ ಒಳ್ಳೆಯ ಲಾಭಗಳು ಬರುತ್ತದೆ. ಅದರಂತೆ 2007ರ ಹೊತ್ತಿಗೆ ನೋಕಿಯಾ ಪ್ರಪಂಚದಲ್ಲಿ ಅತಿ ದೊಡ್ಡ ಮೊಬೈಲ್ ಕಂಪನಿಯಾಗಿ ಹೊರಹೊಮ್ಮುತ್ತದೆ. ನೋಕಿಯಾ ಒಂದು ಬಹುರಾಷ್ಟ್ರೀಯ ಸಂಪರ್ಕ ಕಾರ್ಪೊರೇಶನ್ ಆಗಿದ್ದು ಇದರ ಪ್ರಧಾನ ಕಚೇರಿಯು ಫಿನ್‌ಲಂಡಿನ ರಾಜಧಾನಿಯಾದ ಹೆಲ್ಸಿಂಕಿಯ ನೆರೆಯಲ್ಲಿರುವ ಕೀಲನೀಮೀ, ಎಸ್ಪೂನಲ್ಲಿದೆ.

ನೋಕಿಯಾವು ಮೊಬೈಲ್ ಸಾಧನಗಳನ್ನು ತಯಾರಿಸುವುದು ಮತ್ತು ಇಂಟರ್ನೆಟ್ ಹಾಗೂ ಸಂಪರ್ಕ ಉದ್ಯಮಗಳನ್ನು ತಳುಕು ಹಾಕಿರುವುದು ಮಾತ್ರವಲ್ಲದೆ 120 ದೇಶಗಳ 128,445 ಜನರಷ್ಟು ಸಿಬ್ಬಂದಿವರ್ಗವನ್ನು ಹೊಂದಿದ್ದು 150ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಮಾರುಕಟ್ಟೆ ಹೊಂದಿರುವುದಲ್ಲದೆ 200ನೇ ಇಸ್ವಿಯ ಅಂತ್ಯಕ್ಕೆ 17,340 ಶತಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ್ದ ನೋಕಿಯಾ, ನಂತರದ 15 ವರ್ಷಗಳಲ್ಲಿ ಮಾರುಕಟ್ಟೆ ಮೌಲ್ಯ ಕಂಡಿತ್ತು. 2007ರ ವೇಳೆಗೆ ರು.1,800 ಶತಕೋಟಿಗೆ ಮುಟ್ಟಿತ್ತು.ನೋಕಿಯಾ ಕಂಪನಿಯ ಅವನತಿಗೆ ಮುಖ್ಯ ಕಾರಣಗಳೆಂದರೆ ಬೇರೆ ಕಂಪನಿಯ ಮೊಬೈಲ್ ಗಳು ಆಂಡ್ರಾಯ್ಡ್ ಓಎಸ್ ಮೊಬೈಲ್ ಗಳನ್ನು ರಿಲೀಸ್ ಮಾಡುತ್ತದೆ.

ಹೆಚ್ಚು ಸಾಫ್ಟ್ವೇರ್ ಬಗ್ಗೆ ಯೋಚಿಸಿ ಸಾಫ್ಟ್ವೇರ್ ಅನ್ನು ಡೆವಲಪ್ ಮಾಡುತ್ತದೆ. ಆದರೆ ನೋಕಿಯಾ ಕಂಪನಿಯು ಹೆಚ್ಚು ಹಾರ್ಡ್ವೇರ್ ಬಗ್ಗೆ ಯೋಚಿಸಿ ತಪ್ಪನ್ನು ಮಾಡುತ್ತದೆ. ಆಂಡ್ರಾಯ್ಡ್ ಬಯಸಿರುವ ಮೊಬೈಲನ್ನು ನೋಕಿಯಾ ಕಂಪನಿಯು ರಿಲೀಸ್ ಮಾಡುವುದಿಲ್ಲ. ಜೊತೆಗೆ ಇತರ ಕಂಪನಿಗಳು ಡ್ಯುಯಲ್ ಸಿಮ್ ಮೊಬೈಲ್‌ಗಳನ್ನು ಮಾರುಕಟ್ಟೆಗೆ ತಂದರೂ, ನೋಕಿಯಾ ಮಾತ್ರ ಡ್ಯುಯಲ್ ಸಿಮ್ ಹ್ಯಾಂಡ್‌ಸೆಟ್‌ಗಳ ತಯಾರಿಕೆಗೆ ಒಪ್ಪಲಿಲ್ಲ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿಲ್ಲ. ಸ್ಮಾರ್ಟ್ ಫೋನ್‌ಗಳಿಗೆ ವೆಬ್ ಬ್ರೌಸಿಂಗ್ ಅಳವಡಿಸಿಕೊಳ್ಳುವ ಬಗ್ಗೆ ತಲೆಕೆಡಿಸಿಕೊಳ್ಳದಿದ್ದು, ಇವುಗಳು ನೋಕಿಯಾ ಕಂಪನಿಯ ಅವನತಿಗೆ ಮುಖ್ಯ ಕಾರಣವಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: