ವೃಶ್ಚಿಕ ರಾಶಿಗೆ ಯೋಗ ಕೊಡುವಂತಹ ಮೂರು ಗ್ರಹಗಳು ಯಾವುದೆಂದರೆ ರಾಶಿ ಅಧಿಪತಿ ಮಂಗಳ ಗ್ರಹ, ಪೂರ್ವ ಪುಣ್ಯಾಧಿಪತಿ ಧನಸ್ತಾನಾಧಿಪತಿ ಗುರುಗ್ರಹ, ಭಾಗ್ಯದಿಪತಿ ಚಂದ್ರ ಗ್ರಹ . ರಾಶಿಯಾಧಿಪತಿ ಮಂಗಳ ಗ್ರಹ ಸಪ್ತಮ ಸ್ಥಾನದಲ್ಲಿ ಏಳನೇ ಮನೆಯಲ್ಲಿ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿರುವುದು ವಕ್ರಗತಿಯಲ್ಲಿ ಒಳ್ಳೆಯದೇ.
ಗುರು ಗ್ರಹ ಐದನೇ ಮನೆಯಲ್ಲಿ ಸ್ವಸ್ತಾನದಲ್ಲಿರುವಂಥದ್ದು ತುಂಬಾ ಒಳ್ಳೆಯದು . 9ನೇ ಅಧಿಪತಿ 6ನೇ ಮನೆಯಲ್ಲಿ ರಾಹು ಜೊತೆ ಸಂಬಂಧಪಟ್ಟಿದ್ದಾನೆ ಅದು ಸ್ವಲ್ಪ ದೌರ್ಬಲ್ಯದ ವಿಷಯ . 6ನೇ ಮನೆಯಲ್ಲಿ ರಾಹು ಮತ್ತು 12ನೇ ಮನೆಯಲ್ಲಿ ಕೇತು ಇರುವುದರಿಂದ ಒಳ್ಳೆಯದಾಗುತ್ತದೆ ಶತ್ರು ಸಂಹಾರಗಳು ಆಗುತ್ತದೆ.
ಶುಕ್ರ , ಶನಿ ಯೋಗ ಕೊಡುವಂತಹ ಗ್ರಹ ಅಲ್ಲ ಅವರು ಮೂರನೇ ಮನೆಯಲ್ಲಿದ್ದಾರೆ.ಬುಧ ಮತ್ತೆ ಸೂರ್ಯ ಎರಡನೇ ಮನೆಯಲ್ಲಿದ್ದಾರೆ. ಓದೋ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆಯದಾಗುತ್ತದೆ, ಒಳ್ಳೆಯ ಕಾಲೇಜಿನಲ್ಲಿ ಸೀಟ್ ಸಿಗುತ್ತದೆ, ವಿದ್ಯಾಭ್ಯಾಸಕ್ಕಾಗಿ ಫಾರೆನ್ಗೆ ಹೋಗುವ ಸಾಧ್ಯತೆಗಳಿವೆ,ಗೋರ್ಮೆಂಟ್ ಕೆಲಸ ಮಾಡುವಂತವರಿಗೆ ತುಂಬಾ ಒಳ್ಳೆಯದಾಗುತ್ತದೆ ಹಾಗೆ ಪ್ರೈವೇಟ್ ಕೆಲಸ ಮಾಡೋರಿಗೂ ಕೂಡ ಅನುಕೂಲಕರವಾಗಿರುತ್ತದೆ.
ಸ್ವಂತ ವ್ಯವಹಾರ ಮಾಡುವಂತವರಿಗೆ ಎಲ್ಲಾರಿಗಿಂತ ಹೆಚ್ಚು ಲಾಭ ದೊರಕುತ್ತದೆ,ಮೆಡಿಕಲ್ ರಿಲೇಟೆಡ್ ಇರುವಂತಹ ಅಥವಾ ಭೂಮಿ ವ್ಯಾಪಾರ ಮಾಡುವಂತವರಿಗೆ ಕಾಂಟ್ರಾಕ್ಟರ್ಗಳಿಗೆ ಒಳ್ಳೆಯದಾಗುತ್ತದೆ. ಕಾರ್ಖಾನೆ, ಟ್ರಾನ್ಸ್ಪೋರ್ಟ್ ಸೆಕ್ಟರ್ ಗಳಲ್ಲು ಕೂಡ ಒಳ್ಳೆಯದಾಗುತ್ತದೆ.
ಮನೆ ಕಟ್ಟಬೇಕೆಂದುಕೊಂಡವರು ಸೈಟ್ ತೆಗೆದುಕೊಂಡು ಅಥವಾ ಜಮೀನು ಖರೀದಿಸಲು ತುಂಬಾ ಒಳ್ಳೆಯ ಸಮಯ. ಗುರುಬಲ ಜಾಸ್ತಿ ಇರುವುದರಿಂದ ಮದುವೆ ಯೋಗ ಕೂಡ ಚೆನ್ನಾಗಿದೆ, ಸಂತಾನ ಭಾಗ್ಯ ಕೂಡ ಇದೆ.
ಅಪಘಾತ ಸಂಭವಿಸುವ ಸಾಧ್ಯತೆ ಜಾಸ್ತಿಯಾಗಿದೆ.ನಿದ್ದೆ ಕಡಿಮೆ, ಊಟ ಕಡಿಮೆ ಮಾಡುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳಿವೆ. ಷಣ್ಮುಖನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಅಭಿಷೇಕ ಮಾಡಿ ,ಆದಷ್ಟು ದೇವಸ್ಥಾನಕ್ಕೆ ಹೋಗುವುದರಿಂದ ಒಳ್ಳೆಯದಾಗುತ್ತದೆ.ಅನಾಥಾಶ್ರಮದಲ್ಲಿರುವಂತಹ ನಿಮ್ಮ ವಯಸ್ಕರ ಅಥವಾ ನಿಮಗಿಂತ ದೊಡ್ಡವರಿಗೆ ಏನು ಅವಶ್ಯಕತೆ ಇದೆ ಎಂದು ತಿಳಿದು ಅದನ್ನು ಕೊಡುವ ಪ್ರಯತ್ನ ಮಾಡಿ. ಷಣ್ಮುಖ ನ ಮಂತ್ರವನ್ನು ಜಪಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.