WhatsApp Group Join Now
Telegram Group Join Now

ಯುಗಾದಿ ಹಬ್ಬದಷ್ಟೆ ಪವಿತ್ರವಾದ ಹಬ್ಬ ರಥ ಸಪ್ತಮಿಯಾಗಿದೆ ಸೂರ್ಯ ಹುಟ್ಟಿದ ದಿನವನ್ನು ರಥಸಪ್ತಮಿ ಎಂದು ಕರೆಯಲಾಗುತ್ತದೆ ತುಂಬಾ ಪಾವಿತ್ರ್ಯತೆಯನ್ನು ಹೊಂದಿದ ಹಬ್ಬ ಇದಾಗಿದೆ ಪ್ರತಿದಿನ ಒಂದು ದಿನ ತಪ್ಲಿಸದೆ ಬೆಳಕನ್ನು ನೀಡುವ ಸೂರ್ಯ ದೇವರನ್ನು ಆರಾಧನೆ ಮಾಡುವ ದಿನವಾಗಿದೆ ಸೂರ್ಯನ ಪೂಜೆ ಹಾಗೆಯೇ ಎಕ್ಕದ ಎಲೆಯ ಪೂಜೆ ಸಹ ಬಹಳ ಒಳ್ಳೆಯ ಫಲವನ್ನು ನೀಡುತ್ತದೆ

ಹಿಂದೂ ಧರ್ಮದಲ್ಲಿ ಆಚರಣೆ ಮಾಡುವ ಹಬ್ಬಗಳಲ್ಲಿ ಇದು ಒಂದು ವರಸ್ರಥ ಸಪ್ತಮಿ ದಿನದಂದು ಸೂರ್ಯನ ಕಡೆಗೆ ಭೂಮಿಯ ಒಲವು ಹೆಚ್ಚಾಗುತ್ತದೆ. ಅನೇಕ ದೇವರಲ್ಲಿ ಒಬ್ಬರಾದ ಸೂರ್ಯ ದೇವರನ್ನು ವರ್ಷದಲ್ಲಿ ಒಂದು ದಿನವಾದರೂ ಆರಾಧನೆ ಮಾಡುವ ದಿನ ಇದಾಗಿದೆ ಸೂರ್ಯ ದೇವರನ್ನು ಆರಾಧನೆ ಮಾಡುವ ಮೂಲಕ ಜೀವನದ ಅನೇಕ ಸಂಕಷ್ಟಗಳಿಂದ ದೂರ ಆಗಬಹುದು

ಹಾಗೆಯೇ ಪ್ರತಿದಿನ ಸೂರ್ಯ ದೇವರನ್ನು ನಮಸ್ಕಾರ ಮಾಡುವುದರಿಂದ ಆರೋಗ್ಯ ಹಾಗೂ ಆಯಸ್ಸು ವೃದ್ಧಿ ಆಗುತ್ತದೆ ಹೀಗಾಗಿ ಸೂರ್ಯ ದೇವರಿಗೆ ಬೆಳಿಗ್ಗೆ ನಮಸ್ಕಾರ ಮಾಡುವುದು ಬಹಳ ಹಿಂದಿನ ಕಾಲದಿಂದಲೂ ಸಹ ನಮ್ಮ ಪೂರ್ವಜರು ರೂಢಿಸಿಕೊಂಡು ಸೂರ್ಯ ದೇವರನ್ನು ಪ್ರತಿದಿನ ಆರಾಧನೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ರಥ ಸಪ್ತಮಿ ಹಾಗೂ ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ರಥಸಪ್ತಮಿ ಬಹಳ ವಿಶೇಷವಾದ ದಿನವಾಗಿದೆ ಯುಗಾದಿ ಹಬ್ಬದಷ್ಟೆ ಪವಿತ್ರವಾದ ಹಬ್ಬವಾಗಿದೆ ಹಾಗೆಯೇ ಈ ದಿನ ಎಕ್ಕದ ಎಲೆಯನ್ನು ತಲೆಯಲ್ಲಿ ಇಟ್ಟುಕೊಂಡು ಸ್ನಾನ ಮಾಡಬೇಕು ಇದರಿಂದ ಆರೋಗ್ಯ ವೃದ್ಧಿ ಆಗುತ್ತದೆ ಹಾಗೂ ದೇಹದಲ್ಲಿ ಸೌಂದರ್ಯ ಹೆಚ್ಚಾಗುತ್ತದೆ ಹಾಗೆಯೇ ನಮಗೆ ಇರುವ ದಾರಿದ್ರತೆ ದೂರ ಆಗುತ್ತದೆ ರಥಸಪ್ತಮಿ ಎಂದರೆ ಸೂರ್ಯ ಜಯಂತಿ ಆಗಿದೆ ಸೂರ್ಯ ಹುಟ್ಟಿದ ದಿನವನ್ನು ಸೂರ್ಯ ಜಯಂತಿ ಅಥವಾ ರಥ ಸಪ್ತಮಿ ಎಂದು ಕರೆಯುತ್ತಾರೆ

ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥದ ಮೇಲೆ ಸಂಚಾರ ಮಾಡುತ್ತಾನೆ ಈ ವಿಶೇಷ ದಿನವನ್ನು ರಥಸಪ್ತಮಿ ಎಂದು ಕರೆಯುತ್ತಾರೆ .ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯ ದಿನವನ್ನು ಸಹ ರಥ ಸಪ್ತಮಿ ಎಂದು ಕರೆಯುತ್ತಾರೆ ಯುಗಾದಿ ದಿನ ಹೊಸ ವರ್ಷ ಆರಂಭ ಆಗುತ್ತದೆ ಎನ್ನುವ ವಿಶೇಷತೆ ಇರುತ್ತದೆಯೇ ಹಾಗೆಯೇ ರಥಸಪ್ತಮಿ ಸಹ ತುಂಬಾ ವಿಶೇಷತೆಯನ್ನು ಪಡೆದಿದೆ ಈ ದಿನದಂದು ಸೂರ್ಯನ ಪೂಜೆ ಹಾಗೆಯೇ ಎಕ್ಕದ ಎಲೆಯ ಪೂಜೆ ಸಹ ಬಹಳ ಒಳ್ಳೆಯ ಫಲವನ್ನು ನೀಡುತ್ತದೆ

ಪ್ರತಿದಿನ ಬಂದು ಜಗತ್ತನ್ನು ಬೆಳಗುವ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವ ದಿನ ರಥ ಸಪ್ತಮಿಯಾಗಿದೆ ಎಷ್ಟೋ ಸಮಸ್ಯೆಗಳಿಗೆ ಸೂರ್ಯ ನಮಸ್ಕಾರ ಪರಿಹಾರವನ್ನು ನೀಡುತ್ತದೆ ಬೆಳಿಗ್ಗೆ ಎದ್ದು ಸ್ನಾನ ಮಾಡು ಸೂರ್ಯ ದೇವನಿಗೆ ನಮಸ್ಕಾರವನ್ನು ಮಾಡಬೇಕು ಇದರಿಂದ ಇಡೀ ದಿನ ನಮ್ಮ ಮನಸ್ಸು ದೇಹ ಚುರುಕಿನಿಂದ ಇರುತ್ತದೆ ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ಭವಿಷ್ಯ ಚೆನ್ನಾಗಿ ಇರುತ್ತದೆ.

ಎರಡು ಸಾವಿರದ ಇಪ್ಪತ್ಮೂರು ಜನವರಿ ಇಪ್ಪತ್ತೆಂಟು ಶನಿ ವಾರ ಬಂದಿದೆ ತಿಥಿ ಪ್ರಕಾರ ಜನವರು ಇಪ್ಪತ್ತೇಳು ಬೆಳಿಗ್ಗೆ ಒಂಬತ್ತು ಹತ್ತಕ್ಕೆ ಆರಂಭ ಆಗುತ್ತದೆ ಈ ಸಪ್ತಮಿ ಕೊನೆ ಗೊಳ್ಳುವುದು ಜನವರಿ ಇಪ್ಪತ್ತೆಂಟು ಬೆಳಿಗ್ಗೆ ಎಂಟು ಗಂಟೆ ನಲವತ್ಮೂರು ನಿಮಿಷಕ್ಕೆ ಕೊನೆಗೊಳ್ಳುತ್ತದೆ ಆದರೆ ಸೂರ್ಯೋದಯದ ಒಳಗೆ ಪೂಜೆಯನ್ನು ಮಾಡಬೇಕು ಹಾಗೆಯೇ ಸ್ನಾನ ಮಾಡಿ ಶನಿವಾರ ದಿನ ರಥಸಪ್ತಮಿಯನ್ನು ಮಾಡಬೇಕು ರಥಸಪ್ತಮಿ ದಿನ ಎಕ್ಕದ ಎಲೆಯ ಸ್ನಾನ ಬಹಳ ವಿಶೇಷತೆಯನ್ನು ಹೊಂದಿದೆ.

ರಥಸಪ್ತಮಿಯ ದಿನ ಬ್ರಾಂಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಬೇಕು ಒಬ್ಬರಿಗೆ ಏಳು ಎಲೆ ಬೇಕಾಗುತ್ತದೆ ಒಬ್ಬರು ಬಳಸಿದ ಎಲೆಯನ್ನು ಇನ್ನೊಬ್ಬರು ಬಳಸಬಾರದು ಬೆಳಿಗ್ಗೆ ಸ್ನಾನ ಮಾಡುವಾಗ ಪೂರ್ವಾಭಿಮುಖವಾಗಿ ಕೂತುಕೊಂಡು ಮೊದಲು ಎಲೆಯ ತುದಿ ಮುಂದೆ ಇರಬೇಕು ತುದಿ ಮುಂದೆ ಇರುವ ಹಾಗೆ ಎಲೆಯನ್ನು ತಲೆಯ ಮೇಲೆ ಇಡಬೇಕು ಹಾಗೆಯೇ ಎರಡು ಎಲೆಯನ್ನು ಬುಜದ ಮೇಲೆ ಇಟ್ಟುಕೊಳ್ಳಬೇಕು ಇನ್ನೆರಡು ಎಲೆಯನ್ನು ಕಾಲು ಮಂಡಿಯ ಮೇಲೆ ಇಡಬೇಕು ಅಮ್ಮ ಅಥವಾ ಹೆಂಡತಿಯ ಕೈ ಅಲ್ಲಿ ಒಂದು ಸಣ್ಣ ಚಮಚ ದಷ್ಟು ತಲೆಯ ಮೇಲೆ ಇರುವ ಎಕ್ಕದ ಎಲೆಯ ಮೇಲೆ ಹಾಕಬೇಕು .

ಹಾಗೆಯೇ ಅವರ ಕೈ ಅಲ್ಲಿ ಬೆಚ್ಚಗಿರುವ ನೀರನ್ನು ಮೂರು ಚಂಬಷ್ಟು ನೀರನ್ನು ಎಲೆಯ ಸಮೇತ ಹಾಕಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಸಕಲ ದೋಷಗಳು ನಿವಾರಣೆ ಆಗುತ್ತದೆ ಆರೋಗ್ಯದಲ್ಲಿ ವೃದ್ಧಿ ಕಂಡು ಬರುತ್ತದೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಎಕ್ಕದ ಎಲೆಯ ಸ್ನಾನ ಮಾಡುವುದರಿಂದ ನಿವಾರಣೆ ಆಗುತ್ತದೆ ಪ್ರತಿಯೊಬ್ಬರಿಗೂ ಸಹ ಬೇರೆ ಬೇರೆ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಬೇಕು ನಂತರ ಮನೆಯಲ್ಲಿ ಗಣೇಶನ ಪೂಜೆ ಮಾಡಬೇಕು

ನಂತರ ಮನೆ ದೇವರಿಗೆ ಪೂಜೆ ಸಲ್ಲಿಸಬೇಕು ನಂತರದಲ್ಲಿ ಸೂರ್ಯನಿಗೆ ಪ್ರಿಯವಾದ ಪಾಯಸವನ್ನು ಮಾಡಬೇಕು .ಪಾಯಸದಲ್ಲಿ ರವೆ ಹಾಗೆ ಅಕ್ಕಿ ಗೋಧಿಯನ್ನು ಬಳಸಬಹುದಾಗಿದೆ ನಂತರದಲ್ಲಿ ಮನೆ ದೇವರಿಗೆ ನೈವೇದ್ಯ ಮಾಡಬೇಕು ನಂತರ ಹಣ್ಣು ಕಡ್ಡಿ ಕರ್ಪೂರ ಪೂಜಾ ಸಾಮಗ್ರಿಯನ್ನು ತೆಗೆದುಕೊಂಡು ಮನೆಯ ಟೆರೆಸ್ ಅಥವಾ ಹೊರಗೆ ತುಳಸಿ ಕಟ್ಟೆಯ ಮುಂದೆ ನಿಂತುಕೊಂಡು ಸೂರ್ಯ ದೇವರನ್ನು ನೋಡಿ ಅರಿಶಿಣ ಕುಂಕುಮ ಹಾಕು ತರ ಮಾಡಬೇಕು

ನಂತರ ಗಂಧ ಕಡ್ಡಿಯಿಂದ ಪೂಜೆ ಮಾಡಬೇಕು ನಂತರ ಆರತಿ ಮಾಡಬೇಕು ನಂತರ ನೈವೇದ್ಯ ಮಾಡಬೇಕು ನಿಂತಲ್ಲಿಯೇ ಪ್ರದಕ್ಷಿಣೆಯನ್ನು ಹಾಕಬೇಕು ಕೋರಿಕೆಯನ್ನು ಸೂರ್ಯ ದೇವರ ಹತ್ತಿರ ಹೇಳಿ ಪ್ರಾಥನೆ ಮಾಡಬೇಕು ಸಾಧ್ಯ ಆದರೆ ಸೂರ್ಯ ದೇವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ರಥದ ದರ್ಶನ ಮಾಡುವುದರಿಂದ ಸಹ ಸಕಲ ಪಾಪಗಳು ನಿವಾರಣೆ ಆಗುತ್ತದೆ ಬಡವರಿಗೆ ಆಹಾರ ಧಾನ್ಯವನ್ನು ವಿತರಣೆ ಮಾಡಬೇಕು ಹೀಗೆ ಸೂರ್ಯ ದೇವರ ಕೃಪೆಗೆ ಒಳಗಾಗಿ ಜೀವನದ ಕಷ್ಟಗಳಿಂದ ದೂರ ಆಗಬಹುದು .

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: